Tata Nexon: ಐತಿಹಾಸಿಕ ಮೈಲಿಗಲ್ಲನ್ನು ನಿರ್ಮಿಸಿದ ಟಾಟಾ ನೆಕ್ಸಾನ್‌: ಅಧಿಕೃತ ಘೋಷಣೆ

ಭಾರತದಲ್ಲಿ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ ಜನಪ್ರಿಯತೆ ಗಳಿಸಿದೆ. ಅದರ ಬಹು ಬೇಡಿಕೆಯ ಕಾಂಪ್ಯಾಕ್ಟ್ ಎಸ್‌ಯುವಿ 'ನೆಕ್ಸಾನ್‌' ಮಾರಾಟದಲ್ಲಿ (5 ಲಕ್ಷ ಯುನಿಟ್) ಐತಿಹಾಸಿಕ ಮೈಲಿಗಲ್ಲನ್ನು ನಿರ್ಮಾಣ ಮಾಡಿದೆ. ಆ ಬಗ್ಗೆ ಸ್ವತಃ ಕಂಪನಿಯೇ ಅಧಿಕೃತ ಘೋಷಣೆ ಮಾಡಿದೆ. ಇಲ್ಲಿದೆ ವಿವರ.

ಈ ಕ್ಷಣವನ್ನು ಸಂಭ್ರಮಿಸಲು ಟಾಟಾ ಮೋಟಾರ್ಸ್, ಪುಣೆಯ ರಂಜನ್‌ಗಾಂವ್ ನಲ್ಲಿರುವ ತಯಾರಿಕ ಘಟಕದಲ್ಲಿ ನೆಕ್ಸಾನ್‌ ಎಸ್‌ಯುವಿಯ 5,00,000ನೇ ಉತ್ಪಾದನಾ ಯುನಿಟ್ ಅನ್ನು ಪ್ರದರ್ಶಿಸಿತು. ಐದು ಆಸನ ಆಯ್ಕೆಯೊಂದಿರುವ ಟಾಟಾ ನೆಕ್ಸಾನ್‌ ಎಸ್‌ಯುವಿಯನ್ನು 2017ರಲ್ಲಿ ಭಾರತ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಕೇವಲ ಐದೂವರೆ ವರ್ಷಗಳಲ್ಲಿ ಕಂಪನಿಯು ಈ ಮಟ್ಟದ ದೊಡ್ಡ ಸಾಧನೆ ಮಾಡಿದೆ. ಇದರಲ್ಲಿ ಮತ್ತೊಂದು ವಿಶೇಷತೆಯೆಂದರೆ, ಕಳೆದ ಏಳು ತಿಂಗಳಲ್ಲಿ 1 ಲಕ್ಷ ಯುನಿಟ್ ನೆಕ್ಸಾನ್‌ ಎಸ್‌ಯುವಿ ಉತ್ಪಾದಿಸಲಾಗಿದೆ.

Tata Nexon: ಐತಿಹಾಸಿಕ ಮೈಲಿಗಲ್ಲನ್ನು ನಿರ್ಮಿಸಿದ ಟಾಟಾ ನೆಕ್ಸಾನ್‌: ಅಧಿಕೃತ ಘೋಷಣೆ

ಟಾಟಾ ಕಂಪನಿ ಮಾರಾಟ ಮಾಡುವ ಪ್ರಮುಖ ಎಸ್‌ಯುವಿ ಪಟ್ಟಿಯಲ್ಲಿ 'ನೆಕ್ಸಾನ್‌' ಸ್ಥಾನ ಪಡೆದಿದ್ದು, 2020ರ ಆರಂಭದಲ್ಲಿ ಇದು ಫೇಸ್‌ಲಿಫ್ಟ್ ರೂಪದದಲ್ಲಿ ಭಾರತದ ಗ್ರಾಹಕರಿಗೆ ಖರೀದಿಗೆ ಲಭ್ಯವಾಯಿತು. ಸದ್ಯ, ಟಾಟಾ ನೆಕ್ಸಾನ್‌ ಎಂಟ್ರಿ ಲೆವೆಲ್ ಮಾದರಿ ರೂ.7.80 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದ್ದರೆ, ಟಾಪ್ ಎಂಡ್ ಮಾದರಿ ರೂ.14.35 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ.

ಟಾಟಾ ನೆಕ್ಸಾನ್‌ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದರ 1.2 ಲೀಟರ್ ಥ್ರೀ ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ 120 PS ಪವರ್, 170 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1.5 ಲೀಟರ್ ಫೋರ್ ಸಿಲಿಂಡರ್ ಡಿಸೇಲ್ ಎಂಜಿನ್ 115 PS ಪವರ್, 260 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 6 ಸ್ವೀಡ್ ಮ್ಯಾನುವಲ್/ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಈ ಕಾರು, ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡುವುದಾದರೆ, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೂಲ್ಡ್ ಗ್ಲೋವ್‌ಬಾಕ್ಸ್, ಕ್ರೂಸ್ ಕಂಟ್ರೋಲ್ ಮತ್ತು ರೈನ್ ಸೆನ್ಸಿಂಗ್ ವೈಪರ್‌ ಅನ್ನು ಪಡೆದಿದೆ. ಟಾಪ್ ಎಂಡ್ ಮಾದರಿ, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಆಟೋ ಡಿಮ್ಮಿಂಗ್ IRVM, ಏರ್ ಪ್ಯೂರಿಫೈಯರ್, 8 ಸ್ವೀಕರ್ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ.

ಟಾಟಾ ನೆಕ್ಸಾನ್‌ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮ ಕಾರೆಂದು ಹೆಸರುವಾಸಿಯಾಗಿದೆ. 2018ರಲ್ಲಿ ಗ್ಲೋಬಲ್‌ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ವಯಸ್ಕರ ರಕ್ಷಣೆಯಲ್ಲಿ 17ಕ್ಕೆ 16.06 ಅಂಕ ಗಳಿಸುವ ಮೂಲಕ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 25ಕ್ಕೆ 17 ಅಂಕ ಪಡೆದ 3 ಸ್ಟಾರ್ ಗಳಿಸಿದೆ. ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ನೆಕ್ಸಾನ್ ನವೀಕರಿಸಿದ ಆವೃತ್ತಿ ಕೆಲವೇ ತಿಂಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಈ ಕಾರು, ಪವರ್ ಫುಲ್ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಸಿಗಬಹುದು. ಜೊತೆಗೆ ದೊಡ್ಡದಾದ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗೂ ಆಕರ್ಷಕ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಹೊಂದಿರಲಿದೆ. ಇದಿಷ್ಟೇ ಅಲ್ಲದೆ, ನೆಕ್ಸಾನ್ ಎಲೆಕ್ಟ್ರಿಕ್ ಆವೃತ್ತಿ ರೂ.14.49 ಲಕ್ಷದಿಂದ 17.19 ಲಕ್ಷ ಬೆಲೆಯಲ್ಲಿ ಸಿಗಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 312 ಕಿ.ಮೀ.ರೇಂಜ್ ನೀಡಲಿದೆ.

ಟಾಟಾ ಮೋಟಾರ್ಸ್, ನೆಕ್ಸಾನ್‌ ಮಾರಾಟದಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ನಿರ್ಮಾಣ ಮಾಡಿರುವುದು ದೊಡ್ಡ ಮಟ್ಟದ ದಾಖಲೆಯೇ ಸರಿ. ಇದನ್ನು ಗಮನಿಸಿದಾಗ ಈ ಎಸ್‌ಯುವಿ ಬೇಡಿಕೆ ಎಷ್ಟಿದೆ ಎಂಬುದು ತಿಳಿಯುತ್ತಿದೆ. ನೆಕ್ಸಾನ್‌, ಕಿಯಾ ಸೊನೆಟ್, ಮಹೀಂದ್ರಾ XUV300, ರೆನಾಲ್ಟ್ ಕಿಗರ್, ಮಾರುತಿ ಸುಜುಕಿ ಬ್ರೆಝಾ, ನಿಸ್ಸಾನ್ ಮ್ಯಾಗ್ನೆಟ್ ಹಾಗೂ ಹುಂಡೈ ವೆನ್ಯೂಗೆ ಪ್ರತಿಸ್ಪರ್ಧಿಯಾಗಿದೆ.

Article Published On: Wednesday, April 12, 2023, 8:30 [IST]
English summary
Tata nexon suv reached five lakh sales details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+