ಜನಪ್ರಿಯ ಟಾಟಾ ಕಾರುಗಳ ಬೆಲೆ ಏರಿಕೆ: ಇಲ್ಲಿದೆ ಮಾಹಿತಿ

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಟಾಟಾ ಮೋಟಾರ್ಸ್ ತಯಾರಿಸುವ ಕಾರುಗಳನ್ನು ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿಸುತ್ತಾರೆ. ಇದೀಗ, ಕಂಪನಿಯ ಜನಪ್ರಿಯ ಹಾಗೂ ಅಗ್ಗದ ಮಾದರಿಗಳಾದ ಪಂಚ್, ಆಲ್ಟ್ರೋಜ್, ಟಿಯಾಗೊ ಹಾಗೂ ಟಿಗೂರ್ ಕಾರುಗಳ ಬೆಲೆ ಹೆಚ್ಚಳವಾಗಿದ್ದು, ಹೆಚ್ಚಿನ ಮಾಹಿತಿ ತಿಳಿಯೋಣ.

ಇತ್ತೀಚೆಗೆ, ಟಾಟಾ ಮೋಟಾರ್ಸ್ ತನ್ನಕಾರುಗಳ ಎಂಜಿನ್ ಅನ್ನು ದೇಶದಲ್ಲಿ ಮುಂಬರಲಿರುವ BS6 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿತ್ತು. ಅಲ್ಲದೆ, ತನ್ನ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್‌ಗಳಲ್ಲಿ ಐಡಲ್ ಸ್ಟಾರ್ಟ್/ಸ್ಟಾಪ್ ಬಟನ್ ವೈಶಿಷ್ಟ್ಯವನ್ನು ಸೇರಿಸುವುದಾಗಿ ಘೋಷಣೆ ಮಾಡಿತ್ತು. ಈ ಕಾರಣಕ್ಕೆ ತನ್ನ ಕಾರುಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಎಮಿಷನ್ ಅನುಗುಣವಾಗಿ ಎಂಜಿನ್ ಅಭಿವೃದ್ಧಿಪಡಿಸಬೇಕಾದರೆ, ಉತ್ಪಾದನಾ ವೆಚ್ಚ ಜಾಸ್ತಿ ಇರಲಿದ್ದು, ಅದರಲ್ಲಿ ಕೊಂಚ ಭಾಗವನ್ನು ಗ್ರಾಹಕರಿಗೆ ವರ್ಗಾಯಿಸಲಾಗಿದೆ.

ಜನಪ್ರಿಯ ಟಾಟಾ ಪಂಚ್, ಆಲ್ಟ್ರೋಜ್, ಟಿಯಾಗೊ, ಟಿಗೂರ್ ಕಾರುಗಳ ಬೆಲೆ ಏರಿಕೆ: ಇಲ್ಲಿದೆ ಮಾಹಿತಿ

ಟಾಟಾ ಪಂಚ್:
ಮೊದಲಿಗೆ ಟಾಟಾದ ಜನಪ್ರಿಯ ಮಾದರಿಯಾದ ಪಂಚ್ ಬಗ್ಗೆ ಹೇಳುವುದಾದರೆ, ಇದು ರೂ.5.99 ಲಕ್ಷದಿಂದ ರೂ.9.54 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದ್ದು, ಬರೋಬ್ಬರಿ ರೂ.10,000 ದರ ಹೆಚ್ಚಳವನ್ನು ಪಡೆದುಕೊಂಡಿದೆ. ಪಂಚ್ ಕಾರಿನ ಆರಂಭಿಕ ರೂಪಾಂತರವಾದ ಪ್ಯೂರ್ ಬೆಲೆಯನ್ನು ರೂ.3,000 ಏರಿಕೆ ಮಾಡಲಾಗಿದೆ. ಉಳಿದ ಎಲ್ಲ ರೂಪಾಂತರಗಳ ದರವನ್ನು ರೂ.10,000 ಹೆಚ್ಚಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಟಾಟಾ, ಪಂಚ್ ಕಾರಿನ ಕಾಜಿರಂಗ ಆವೃತ್ತಿಯನ್ನು ಮಾರಾಟದಿಂದ ಸ್ಥಗಿತಗೊಳಿಸಿದೆ.

ಇಂದೊಂದು ಪುಟ್ಟ ಎಸ್‌ಯುವಿಯಾಗಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 86 PS ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 5 ಸ್ವೀಡ್ ಮ್ಯಾನುವಲ್ ಹಾಗೂ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. 18.97 Kmpl ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ ಸ್ಕ್ರೀನ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಹಾಗೂ ಹರ್ಮನ್ ಸೌಂಡ್ ಸಿಸ್ಟಮ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ಯೂಯೆಲ್ ಏರ್ ಬಾಗ್ಸ್ ಅನ್ನು ಪಡೆದುಕೊಂಡಿದೆ.

ಟಾಟಾ ಆಲ್ಟ್ರೋಜ್:
ಭಾರತದಲ್ಲಿ ಟಾಟಾ ಮೋಟಾರ್ಸ್ ಮಾರಾಟ ಮಾಡುವ ಮತ್ತೊಂದು ಕಾರು, ಆಲ್ಟ್ರೋಜ್ ಬೆಲೆಯನ್ನು ಕೂಡ ಏರಿಕೆ ಮಾಡಿದೆ. ಪೆಟ್ರೋಲ್ ಆವೃತ್ತಿಗಳ ಬೆಲೆಯನ್ನು ರೂ.10,000 ಹೆಚ್ಚಳ ಮಾಡಲಾಗಿದೆ. ಅದೇ ರೀತಿಯಲ್ಲಿ ಡಿಸೇಲ್ ಆವೃತ್ತಿಗಳ ಬೆಲೆಯನ್ನು ಗರಿಷ್ಠ ಪ್ರಮಾಣದಲ್ಲಿ ಏರಿಕೆ ಮಾಡಿದ್ದು, ರೂ.15,000 ಹೆಚ್ಚಳವಾಗಿದೆ. ಟರ್ಬೊ ಪೆಟ್ರೋಲ್ ಆವೃತ್ತಿಗಳ ಬೆಲೆಯು ರೂ.5,000ದಿಂದ ರೂ.15,000 ಏರಿಕೆಯಾಗಿದ್ದು, ಈ ಕಾರು ರೂ.6.45 ದಿಂದ ರೂ.10.40 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಲಿದೆ.

ಟಾಟಾ ಆಲ್ಟ್ರೋಜ್ ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ನೋಡುವುದಾದರೆ, ಇದು 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 86 PS ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 110 PS ಪವರ್ 140 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 1.5-ಲೀಟರ್ ಡೀಸೆಲ್ ಎಂಜಿನ್ 90 PS ಗರಿಷ್ಠ ಪವರ್ ಹಾಗೂ 200 Nm ಪೀಕ್ ಉತ್ಪಾದಿಸಲಿದ್ದು, 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿದೆ.

ಟಾಟಾ ಟಿಯಾಗೊ, ಟಿಗೂರ್:
ಇತ್ತೀಚೆಗೆ ಟಿಯಾಗೊ ಕಾರಿಗೆ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ವೈಶಿಷ್ಟ್ಯವನ್ನು ಪರಿಚಯಿಸಲಾಯಿತು. ಸದ್ಯ, ಈ ರೂಪಾಂತರಗಳ ಬೆಲೆಯನ್ನು ರೂ. 9,000 ದಿಂದ ರೂ.15,000ರವರೆಗೆ ಹೆಚ್ಚಳ ಮಾಡಲಾಗಿದ್ದು, ವಿವಿಧ ರೂಪಾಂತಗಳಿಗೆ ಅನುಗುಣವಾಗಿ ಟಿಗೂರ್ ಸೆಡಾನ್ ಬೆಲೆಯನ್ನು ರೂ.10,000ದಿಂದ ರೂ.15,000 ಏರಿಕೆ ಮಾಡಲಾಗಿದೆ. ಇಷ್ಟೇಅಲ್ಲದೆ, ಟಾಟಾ ಮೋಟಾರ್ಸ್ ಮುಂಬರುವ ದಿನಗಳಲ್ಲಿ ಪಂಚ್, ಆಲ್ಟ್ರೋಜ್ CNG ಆವೃತ್ತಿಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ.

ದೇಶೀಯ ಮಾರುಕಟ್ಟೆಯಲ್ಲಿ ಟಿಯಾಗೊ ಕಾರು ರೂ.5.53 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆತರೆ, ಟಿಗೂರ್ ಸೆಡಾನ್ ರೂ.6.20 ಲಕ್ಷದಿಂದ ರೂ. 8.90 ಲಕ್ಷ ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಒಟ್ಟಾರೆಯಾಗಿ ತನ್ನ ವಿವಿಧ ಎಂಟ್ರಿ ಲೆವೆಲ್ ಮಾದರಿಗಳನ್ನು ನವೀಕರಿಸಿದ ಹಿನ್ನೆಲೆ, ಟಾಟಾ ಮೋಟಾರ್ಸ್ ಈ ಬೆಲೆ ಏರಿಕೆ ಮಾಡಿದೆ ಎಂದು ಹೇಳಲಾಗಿದೆ. ಇದು ಟಾಟಾದ ಅನೇಕ ಗ್ರಾಹಕರ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ವಿವಿಧ ಕಂಪನಿಗಳು ಕೂಡ ತಮ್ಮ ಕಾರುಗಳನ್ನು ಬೆಲೆಯನ್ನು ಹೆಚ್ಚಳ ಮಾಡಬಹುದು.

Article Published On: Saturday, February 18, 2023, 15:10 [IST]
English summary
Tata punch altroz tiago tigor prices increased details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+