ಹ್ಯುಂಡೈ ಎಕ್ಸ್‌ಟರ್‌ಗೆ ಪಂಚ್ ಕೊಡಲು ಸಜ್ಜಾದ ಟಾಟಾ ಪಂಚ್: ಹ್ಯುಂಡೈಗೆ ನಡುಕ ಶುರು

ಭಾರತೀಯ ವಾಹನ ತಯಾರಕರು ಸಬ್ 4 ಮೀಟರ್ ಎಸ್‍ಯುವಿ ಜಾಗದ ಕೆಳಗೆ ಹೊಸ ಎಸ್‍ಯುವಿ ವಿಭಾಗವನ್ನು ರಚಿಸಿದ್ದಾರೆ. ಇದು ಟಾಟಾ ಪಂಚ್ ಅಭೂತಪೂರ್ವ ಪ್ರಾಬಲ್ಯವನ್ನು ಹೊಂದಿರುವ ವಿಭಾಗವಾಗಿದೆ. ಪಂಚ್ ಕಳೆದ ತಿಂಗಳು ಮಾರಾಟವಾದ 11K ಯುನಿಟ್‌ಗಳೊಂದಿಗೆ ಪ್ರಮುಖ ವಾಹನವಾಗಿದೆ. ಇದು ದೇಶದಲ್ಲಿ 8 ನೇ ಅತಿ ಹೆಚ್ಚು ಮಾರಾಟವಾದ ವಾಹನವಾಗಿದೆ .

ಇತ್ತೀಚೆಗೆ ಹೊಸ ಹ್ಯುಂಡೈ ಎಕ್ಸ್‌ಟರ್‌ ಬಿಡುಗಡೆಗೊಂಡಿದ್ದು, ಇದು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಮೂಡಿಸಿದೆ. ಈ ಹೊಸ ಟಾಟಾ ಪಂಚ್ (Tata Punch) ಸನ್‌ರೂಫ್ ಮತ್ತು ಸಿಎನ್‌ಜಿ ಪವರ್‌ಟ್ರೇನ್‌ನ ವೈಶಿಷ್ಟ್ಯ-ಪ್ಯಾಕ್ಡ್ ಅನುಭವ ಮತ್ತು ನವೀನತೆಯನ್ನು ನೀಡುವುದರಿಂದ ಹುಂಡೈ ಎಕ್ಸ್‌ಟರ್‌ಗೆ ಸೆಡ್ಡು ಹೊಡೆಯಲು ಸಜ್ಜಾಗುತ್ತಿದೆ. ಇದೀಗ ಟಾಟಾ ಅದರೊಂದಿಗೆ ಪಂಚ್ ಸಿಎನ್‌ಜಿ ಮತ್ತು ಸನ್‌ರೂಫ್ ಅನ್ನು ಬಿಡುಗಡೆ ಮಾಡುವ ಮೂಲಕ ತನ್ನ ವಿಭಾಗದಲ್ಲಿ ಪಂಚ್‌ನ ಸಿಂಹಪಾಲು ಭದ್ರಪಡಿಸಲು ಸಿದ್ಧತೆ ನಡೆಸುತ್ತಿದೆ.

Tata Punch

ದೀರ್ಘಕಾಲದವರೆಗೆ, ಟಾಟಾ ಮೋಟಾರ್ಸ್ ತನ್ನ ವಾಹನಗಳಿಗೆ ಅಗತ್ಯವಿದ್ದಾಗ ಸನ್‌ರೂಫ್ ಮತ್ತು ಸಿಎನ್‌ಜಿ ನೀಡುವ ತಂತ್ರವನ್ನು ಜಾರಿಗೆ ತಂದಿದೆ. ಈ ತಂತ್ರವು ಬ್ರ್ಯಾಂಡ್‌ಗೆ ಅದ್ಭುತಗಳನ್ನು ಮಾಡಿದೆ ಮತ್ತು ಮಾರಾಟದ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ನಾವು ಟಾಟಾ Altroz ಕಾರನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಕಳೆದ ತಿಂಗಳು ಕಾರು 7,250 ಯುನಿಟ್‌ಗಳನ್ನು ಮಾರಾಟವಾಗಿವೆ. ಇದು CNG ಮತ್ತು ಸನ್‌ರೂಫ್ ಹೊಂದಿದ ರೂಪಾಂತರಗಳ ಬಿಡುಡೆಯಿಂದ ದಾಖಲೆ ಮಟ್ಟದ ಮಾರಾಟ ಕಂಡಿದೆ.

ಟಾಟಾ ಪಂಚ್ CNG ರೂಪಾಂತರಗಳು ಈಗ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿದೆ ಎಂದು ವರದಿಗಳಾಗಿದೆ. ಟಾಟಾ ಮೋಟಾರ್ಸ್ ಆಲ್ಟ್ರೋಜ್ ಕಾರಿನಲ್ಲಿರುವಂತೆ ಟ್ವಿನ ಸಿಲಿಂಡರ್ ವಿನ್ಯಾಸವನ್ನು ಹೊಂದಿದೆ.ಸಿಂಗಲ್-ಸಿಲಿಂಡರ್ ಲೇಔಟ್‌ಗೆ ಹೋಲಿಸಿದರೆ ಇದು ಅಚ್ಚುಕಟ್ಟಾಗಿ ಕಾಣುತ್ತದೆ. ಅದೇ 1.2 ಲೀಟರ್ ನ್ಯಾಚುರಲ್ ಆಸ್ಪರರ್ಡ್ 3-ಸಿಲಿಂಡರ್ ಎಂಜಿನ್ CNG ಕಿಟ್‌ನೊಂದಿಗೆ ಹೊಂದಿದೆ. ಇದೇ ರೀತಿಯ ಸೆಟಪ್ Altroz ​​ನಲ್ಲಿಯೂ ಇದೆ.

Tata Punch

ಪೆಟ್ರೋಲ್ ಮಾದರಿಯಲ್ಲಿ 87 bhp ಪವರ್ ಮತ್ತು 115 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು CNG ಯೊಂದಿಗೆ, ಇದು 72 bhp ಪವರ್ ಮತ್ತು 102 Nm ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಸೋರಿಕೆಯಾದ ಮಾಹಿತಿಯ ಪ್ರಕಾರ, ಟಾಟಾ ಬಹುತೇಕ ಎಲ್ಲಾ ರೂಪಾಂತರಗಳೊಂದಿಗೆ CNG ಆಯ್ಕೆಯನ್ನು ನೀಡಲಿದೆ.

ಪ್ಯೂರ್ ರಿದಮ್ ಟ್ರಿಮ್, ಪ್ಯೂರ್, ಅಡ್ವೆಂಚರ್, ಅಡ್ವೆಂಚರ್ ರಿದಮ್, ಅಕಾಂಪ್ಲಿಶ್ಡ್ ಅಂಡ್ ಅಕಾಂಪ್ಲಿಶ್ಡ್ ಡ್ಯಾಝಲ್ ಹೊರತುಪಡಿಸಿ. ಇದೇ ಮಾದರಿಯನ್ನು Altroz ​​ಟಾಪ್-ಸ್ಪೆಕ್ ಟ್ರಿಮ್‌ನೊಂದಿಗೆ ಗಮನಿಸಲಾಗಿದೆ. ಟಾಟಾ ಪಂಚ್ ಕ್ಯಾಮೊ ಆವೃತ್ತಿಯಲ್ಲಿ ಸಿಎನ್‌ಜಿಯನ್ನು ನೀಡುತ್ತಿಲ್ಲ. ಸನ್‌ರೂಫ್ ಅನ್ನು ಇಷ್ಟಪಡುವ ಜನರಿಗಾಗಿ, ಟಾಟಾ ಅದನ್ನು ಅಕಂಪ್ಲಿಶ್ ಡ್ಯಾಝಲ್ ಟ್ರಿಮ್ ಮತ್ತು ಅದಕ್ಕಿಂತ ಹೆಚ್ಚಿನದನ್ನು ನೀಡುತ್ತಿದೆ.

ಪೆಟ್ರೋಲ್ ಮಾತ್ರ ಮತ್ತು ಪೆಟ್ರೋಲ್+ಸಿಎನ್‌ಜಿ ದ್ವಿ-ಇಂಧನ ರೂಪಾಂತರಗಳು ಅಕಾಂಪ್ಲಿಶ್ಡ್ ಡ್ಯಾಝಲ್‌ನ ಮೇಲಿನ ಎಲ್ಲಾ ರೂಪಾಂತರಗಳೊಂದಿಗೆ ಸನ್‌ರೂಫ್ ಅನ್ನು ಪಡೆಯುತ್ತವೆ. ಸದ್ಯಕ್ಕೆ, ಹ್ಯುಂಡೈ ಎಕ್ಸ್‌ಟರ್ ಮಾತ್ರ ಸನ್‌ರೂಫ್ ಅನ್ನು ನೀಡುತ್ತದೆ. ಟಾಟಾದ ವೇರಿಯಂಟ್ ರಿಜಿಗ್ ತಂತ್ರಗಳು ಅದನ್ನು ಉತ್ತಮ ಸ್ಥಾನದೊಂದಿಗೆ ಹ್ಯುಂಡೈಗೆ ದೊಡ್ಡ ಸವಾಲು ಆಗುತ್ತದೆ.

ಟಾಟಾ ಪಂಚ್ ಮಾದರಿಯ ಹೊರಭಾಗವು ನೋಡಲು ಅತ್ಯಾಕರ್ಷಕವಾಗಿದೆ. ಬರೋಬ್ಬರಿ 30 ರೂಪಾಂತರಗಳಲ್ಲಿ ಲಭ್ಯವಾಗಲಿದೆ. 366 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಹೊಂದಿದ್ದು, ವೈಶಿಷ್ಟಗಳ ವಿಚಾರಕ್ಕೆ ಬರುವುದಾದರೆ 7 ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸರ್, ಆಟೋ ಏರ್ ಕಂಡೀಷನ್, ಆಟೋಮೆಟಿಕ್ ಹೆಡ್‌ಲೈಟ್ಸ್ ಮತ್ತು ಕ್ರೂಸ್ ಕಂಟ್ರೋಲ್‌ ಸೇರಿದಂತೆ ಭರಪೂರ ವೈಶಿಷ್ಟ್ಯಗಳನ್ನು ಪಡೆದಿದೆ.

ಸುರಕ್ಷತೆಯ ದೃಷ್ಟಿಯಿಂದ, ಈ ಟಾಟಾ ಪಂಚ್ ಎಸ್‌ಯುವಿ ಅತ್ಯುತ್ತಮವಾಗಿದ್ದು, ಗ್ಲೋಬಲ್ NCAPಯಿಂದ ಒಳ್ಳೆಯ ರೇಟಿಂಗ್ ಪಡೆಯಲು ಯಶಸ್ವಿಯಾಗಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ ಒಟ್ಟು 17ಕ್ಕೆ 16.45 ಅಂಕಗಳನ್ನು ಪಡೆಯುವ ಮೂಲಕ 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಆದರೆ, ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 40.89 ಅಂಕಗಳನ್ನು ಗಳಿಸುವ ಮೂಲಕ ಗ್ಲೋಬಲ್ NCAPಯಿಂದ 4 ಸ್ಟಾರ್ ರೇಟಿಂಗ್ ಗಳಿಸಿದೆ.

Article Published On: Wednesday, July 26, 2023, 13:44 [IST]
English summary
Tata punch could come with cng option and sunroof details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+