Tata Punch EV: ಅಗ್ಗದ ಬೆಲೆಯ ಪಂಚ್ ಇವಿ ಶೀಘ್ರದಲ್ಲೇ ಅನಾವರಣ: ಬಿಡುಗಡೆ ದಿನಾಂಕ ಬಹಿರಂಗ
ಭಾರತದಲ್ಲಿ ಗ್ರಾಹಕರ ಉತ್ತಮ ಪ್ರತಿಕ್ರಿಯೆಯಿಂದಾಗಿ ತನ್ನ ಎಲೆಕ್ಟ್ರಿಕ್ ಕಾರು ವಿಭಾಗವನ್ನು ವಿಸ್ತರಿಸಲು ಹೊರಟಿರುವ ಟಾಟಾ ಮೋಟಾರ್ಸ್, ಇದೀಗ ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಆದ ಪಂಚ್ ಎಲೆಕ್ಟ್ರಿಕ್ ಆವೃತ್ತಿಯನ್ನು ಪರಿಚಯಿಸಲು ಸಜ್ಜಾಗಿದೆ. ಮೂಲಗಳ ಪ್ರಕಾರ, ಅತಿ ಶೀಘ್ರದಲ್ಲೇ ಪಾದಾರ್ಪಣೆ ಮಾಡಲಿದ್ದು ಬಿಡುಗಡೆ ದಿನಾಂಕವೀಗ ಬಹಿರಂಗವಾಗಿದೆ.
ಟಾಟಾ ಮೋಟಾರ್ಸ್‌ನ ಮೀಸಲಾದ EV ವಿಭಾಗದಲ್ಲಿ ತನ್ನ ಮುಂದಿನ ಎಲೆಕ್ಟ್ರಿಕ್ ಕಾರನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ನಮ್ಮ ಮೂಲಗಳ ಪ್ರಕಾರ, Tata Punch EV 2024 ರ ಜನವರಿಯ ಕೊನೆಯ ವಾರದಲ್ಲಿ ಕಂಪನಿಯು ದೇಶದಲ್ಲಿ ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ. ಇದು ಕೇವಲ ಪರಿಚಿತ ಮೂಲಗಳ ಹೇಳಿಕೆಯಾಗಿದೆ.

Tata Punch EV ಯ ಅಧಿಕೃತ ಬಿಡುಗಡೆ ದಿನಾಂಕದ ಕುರಿತು ಯಾವುದೇ ವಿವರಗಳನ್ನು ಟಾಟಾ ಮೋಟಾರ್ಸ್ ಇನ್ನೂ ದೃಢೀಕರಿಸಿಲ್ಲ ಎಂಬುದನ್ನು ಗಮನಿಸಬೇಕು. ಪಂಚ್ EV ಮಾರುಕಟ್ಟೆಯಲ್ಲಿ ಸಿಟ್ರನ್ eC3 ನ ನೇರ ಪ್ರತಿಸ್ಪರ್ಧಿಯಾಗಲಿದೆ. ಬಹುಶಃ ಇದು ದೇಶದಲ್ಲಿ ಅತ್ಯಂತ ಕೈಗೆಟುಕುವ ಸಂಪೂರ್ಣ ಎಲೆಕ್ಟ್ರಿಕ್ SUV ಆಗಬಹುದು ಎಂದು ಹೇಳಲಾಗುತ್ತಿದೆ.
ಸದ್ಯ ಸಿಟ್ರನ್ eC3 ಬೆಲೆಯು ರೂ. 11.61 ಲಕ್ಷದಿಂದ ಪ್ರಾರಂಭವಾಗಿ ರೂ. 12.79 ಲಕ್ಷದವರೆಗೆ ಇದೆ (ಎರಡೂ ಎಕ್ಸ್ ಶೋ ರೂಂ ಬೆಲೆಗಳು). ಟಾಟಾ ಪಂಚ್ ಇದಕ್ಕಿಂತ ಕಡಿಮೆ ಬೆಲೆಗೆ ಅಂದರೆ ರೂ.11 ಲಕ್ಷದೊಳಗೆ ಬಿಡುಗಡೆಯಾಗುವ ನಿರೀಕ್ಷೆಗಳಿವೆ. Tata Punch EV ಕಾರಿನ ವಿಶೇಷತೆಗಳು ಇನ್ನೂ ಲಭ್ಯವಾಗಿಲ್ಲ.

ಸದ್ಯಕ್ಕಿರುವ ಮಾಹಿತಿಯ ಪ್ರಕಾರ, Tiago EV ಮತ್ತು Tigor EV ಯಲ್ಲಿ ಕಂಡುಬರುವ 24kWh ಯುನಿಟ್‌ಗೆ ಹೋಲಿಸಿದರೆ ಇದು ಸ್ವಲ್ಪ ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರಲಿದೆ ಎನ್ನಲಾಗುತ್ತಿದೆ. ಹಾಗೆಯೇ, ಪಂಚ್ ಇವಿಯಲ್ಲಿ ಕಂಡುಬಂದಿರುವ ಪ್ರಮುಖ ಬದಲಾವಣೆ ಎಂದರೆ, ಚಾರ್ಜಿಂಗ್ ಸಾಕೆಟ್ ಅನ್ನು ಮುಂಭಾಗದಲ್ಲಿ ನೀಡಲಾಗಿದೆ. ಜೊತೆಗೆ ಅಲಾಯ್ ವೀಲ್ಸ್ ಹೊಂದಿರುವ ನೀರಿಕ್ಷೆಯಿದೆ.
ಎಲ್‌ಇಡಿ ಹೆಡ್‌ಲೈಟ್‌ಗಳು, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, Arcade.ev ಅಪ್ಲಿಕೇಶನ್ ಸೂಟ್ ಸೇರಿದಂತೆ ಟಾಟಾ ಪಂಚ್ EV ICE ಪಂಚ್‌ನಲ್ಲಿ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯುವ ನಿರೀಕ್ಷೆಯಿದೆ. ಹೊಸ ನೆಕ್ಸಾನ್ ಮತ್ತು ನೆಕ್ಸಾನ್ EV ನಲ್ಲಿ ಕಂಡುಬರುವಂತೆ ಪ್ರಕಾಶಿತ ಟಾಟಾ ಮೋಟಾರ್ಸ್ ಲೋಗೋದೊಂದಿಗೆ ಸ್ಪೋಕ್ ಸ್ಟೀರಿಂಗ್ ವೀಲ್ ನೀಡುವ ಸಾಧ್ಯೆತೆಯಿದೆ.

ಇದರೊಟ್ಟಿಗೆ, ಕ್ಯಾಬಿನ್ ಒಳಭಾಗದಲ್ಲಿ ಅದ್ಬುತ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದ್ದು, ನವೀಕರಿಸಿದ ನೆಕ್ಸಾನ್ ಕಾರಿನಂತೆ 10.25 - ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಪಡೆಡಿರುವ ನೀರಿಕ್ಷೆಯಿದೆ. ಇದರೊಂದಿಗೆ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಹೊಸದಾದ ಟೂ - ಸ್ಪೋಕ್ ಸ್ಟೀರಿಂಗ್ ವೀಲ್ ಸೇರಿದಂತೆ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ.
ಪಂಚ್ ಇವಿ ಬೆಲೆ ಬಗ್ಗೆ ಟಾಟಾ ಕಂಪನಿ ಎಲ್ಲಿಯೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೂ, ಇಂಧನ ಚಾಲಿತ ಕಾರಿಗೆ ಹೋಲಿಸಿದರೆ, ಕೊಂಚ ಅಧಿಕ ದರ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ವೇಗದ ಚಾರ್ಜಿಂಗ್ ಸಾಮರ್ಥ್ಯಗಳೊಂದಿಗೆ ಸುಮಾರು 350 ಕಿ.ಮೀ ARAI ಪ್ರಮಾಣೀಕೃತ ರೇಂಜ್ ಅನ್ನು ನಿರೀಕ್ಷಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications