Tata: ಬೈಕ್‌ನಂತೆ ಮೈಲೇಜ್ ನೀಡುವ ಹೊಸ ಟಾಟಾ ಪಂಚ್ ಕಾರು ರಸ್ತೆಯಲ್ಲಿ ಕಂಡುಬಂತು.. ಇಷ್ಟರಲ್ಲೇ ಬಿಡುಗಡೆ!
ದೇಶೀಯ ಮಾರುಕಟ್ಟೆಯಲ್ಲಿ ಸಣ್ಣ ಎಸ್‌ಯುವಿಗಳು ಭಾರೀ ಪ್ರಮಾಣದಲ್ಲಿ ಜನಪ್ರಿಯತೆ ಗಳಿಸುತ್ತಿದ್ದು, ಪ್ರಮುಖ ಕಾರು ತಯಾರಕ ಟಾಟಾ (Tata) ಕೆಲವೇ ತಿಂಗಳಲ್ಲಿ ಸಿಎನ್‌ಜಿ ಚಾಲಿತ 'ಪಂಚ್' ಮೆಕ್ರೋ ಎಸ್‌ಯುವಿ ಬಿಡುಗಡೆ ಮಾಡಲು ಸಿದ್ದತೆ ನಡೆಸುತ್ತದೆ. ಆ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ ಬನ್ನಿ.
ಭಾರತದಲ್ಲಿ ಟಾಟಾ ಮೋಟಾರ್ಸ್ ತನ್ನ ಸಿಎನ್‌ಜಿ ವಿಭಾಗವನ್ನು ಬಲಪಡಿಸುವಲ್ಲಿ ಕಾರ್ಯ ಪ್ರವೃತವಾಗಿದ್ದು, ಅದರ ಭಾಗವಾಗಿ ಮುಂಬರುವ ದಿನಗಳಲ್ಲಿ ಪಂಚ್ ಐಸಿಎನ್‌ಜಿ ಕಾರನ್ನು ಲಾಂಚ್ ಮಾಡಲಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಿಎನ್‌ಜಿ ಚಾಲಿತ ಪಂಚ್ ಎಸ್‌ಯುವಿ, ಮುಂಬೈ ಹಾಗೂ ಪುಣೆ ರಾಷ್ಟ್ರಿಯ ಹೆದ್ದಾರಿಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡು ಬಂದಿದೆ.

ಕಳೆದ ಜನವರಿಯಲ್ಲಿ ನಡೆದ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಟಾಟಾ ಕಂಪನಿ, ಈ ಕಾಂಪ್ಯಾಕ್ಟ್ ಎಸ್‌ಯುವಿ ಪಂಚ್ iCNGಯನ್ನು ಆಲ್ಟ್ರಾಜ್ ಸಿಎನ್‌ಜಿಯೊಂದಿಗೆ ಪ್ರದರ್ಶನ ಮಾಡಿತ್ತು. ಅಲ್ಲದೆ, 'ಪಂಚ್' ಟಾಟಾ ಮೋಟಾರ್ಸ್‌ನಿಂದ ಫ್ಯಾಕ್ಟರಿ ಫಿಟ್ಡ್ ಸಿಎನ್‌ಜಿ ಕಿಟ್ ಅನ್ನು ಪಡೆಯುತ್ತಿರುವ ನಾಲ್ಕನೇ ಕಾರಾಗಿದೆ. ರಸ್ತೆಯಲ್ಲಿ ಟೆಸ್ಟ್ ನಡೆಸುವ ಈ ಪಂಚ್ ಕಾರಿನ ಟೈಲ್ ಗೇಟ್‌ನಲ್ಲಿದ್ದ iCNG ಬ್ಯಾಡ್ಜ್ ಅನ್ನು ಟೇಪ್‌ನಿಂದ ಮುಚ್ಚಲಾಗಿತ್ತು.
ಆದರೆ, ಸ್ಪೇರ್ ವೀಲ್ ಇಟ್ಟಿರುವ ಜಾಗವನ್ನು ನೋಡಿದಾಗ ಇದು, ಸಿಎನ್‌ಜಿ ಕಾರು ಎಂದು ಸುಲಭವಾಗಿ ತಿಳಿಯುತ್ತದೆ. ಈ ಪಂಚ್ ಕಾರು ಸಹ ಆಲ್ಟ್ರಾಜ್ iCNG ಕಾರಿನಂತೆ ಡುಯಲ್ ಸಿಲಿಂಡರ್ ಸೆಟಪ್ ಹೊಂದಿರಲಿದ್ದು, ಇದು ದೇಶೀಯ ಮಾರುಕಟ್ಟೆಯಲ್ಲಿ ಅತ್ಯಂತ ಸುರಕ್ಷಿತ ಸಿಎನ್‌ಜಿ ಚಾಲಿತ ಕಾರಾಗಿರಲಿದೆ. ಮಲ್ಟಿ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿರುವ ನೀರಿಕ್ಷೆಯಿದೆ.
ಸಿಎನ್‌ಜಿ ಚಾಲಿತ ಟಾಟಾ ಪಂಚ್, 1.2 ಲೀಟರ್ 3 ಸಿಲಿಂಡರ್ ಎಂಜಿನ್ ಪಡೆದಿರಲಿದ್ದು, 86 hp ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಜೊತೆಗೆ 5 ಸ್ವೀಡ್ MT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗುವ ಸಾಧ್ಯತೆಯಿದೆ. ಪ್ರಸ್ತುತ ಮೆಕ್ರೋ ಎಸ್‌ಯುವಿಯ ಸಿಎನ್‌ಜಿ ವಿಭಾಗದಲ್ಲಿ ಟಾಟಾ ಪಂಚ್ ಕಾರಿಗೆ ಯಾವುದೇ ನೇರ ಪ್ರತಿಸ್ಪರ್ಧಿ ಇಲ್ಲ ಎಂದು ಹೇಳಬಹುದು.
ಟಾಟಾ, ಸಿಎನ್‌ಜಿ ಚಾಲಿತ ಪಂಚ್ ಕಾರನ್ನು ರೂ.10 ಲಕ್ಷ ಬೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದೆ ಎಂದು ಅಂದಾಜಿಲಾಗಿದೆ. ಆದರೆ, ಕಂಪನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ಕಾರು, ಸಿಎನ್‌ಜಿ ಇಂಧನದಿಂದ ಸಹಾಯದಿಂದ ಚಲಿಸುವುದರಿಂದ ಗರಿಷ್ಠ ಮೈಲೇಜ್ ನೀಡುತ್ತದೆಯಂತೆ. ಅದು ಕೂಡ 30 kmpl ಮೈಲೇಜ್ ಇರಬಹುದು. ಆದರೆ, ಪಂಚ್ ಸಿಎನ್‌ಜಿ ಅನಾವರಗೊಂಡ ಮೇಲೆಯೇ ಖಚಿತ ವಿವರ ದೊರೆಯುತ್ತದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಪಂಚ್, ರೂ.6 - 9.52 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಇದರ 1.2 ಲೀಟರ್ ಎಂಜಿನ್ 88 PS ಗರಿಷ್ಠ ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, 5-ಸ್ವೀಡ್ ಮ್ಯಾನುವಲ್, 5-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.
ಈ ಕಾರು, 18.8 - 20.09 kmpl ಮೈಲೇಜ್ ನೀಡಲಿದೆ. 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಆಟೋ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು, ಕೆಲವೇ ತಿಂಗಳಲ್ಲಿ ಟಾಟಾ ಪಂಚ್ ಸಿಎನ್‌ಜಿ ಕಾರು ಬಿಡುಗಡೆಯಾಗಲಿದ್ದು, ಆ ಬಳಿಕ ಇದೇ
ಪಂಚ್ ಎಲೆಕ್ಟ್ರಿಕ್ ರೂಪದಲ್ಲಿ ಅಬ್ಬರಿಸಲು ಬರಲಿದೆ.
Image Courtesy: Sagar Sahasrabuddhe/Facebook


Click it and Unblock the Notifications