ಸುರಕ್ಷತೆಯಲ್ಲಿ ಟಾಟಾಗೆ ಸರಿಸಾಟಿ ಇಲ್ಲ: ಹೊಸ ಅಪ್ಡೇಟ್ ಪಡೆಯಲಿದೆ ಟಾಟಾ ಪಂಚ್

ದೇಶದ ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಟಾಟಾ (Tata) ಜನಪ್ರಿಯತೆ ಗಳಿಸಿದೆ. ಕಂಪನಿಯು ಟಾಟಾ ಪಂಚ್ (Tata Punch) ಮೂಲಕ ಮೆಕ್ರೋ ಎಸ್‌ಯುವಿ ವಿಭಾಗವನ್ನು ಪ್ರವೇಶಿಸಿತು. ಈ ಪಂಚ್ ಕಾರು, ಬಿಡುಗಡೆಯಾಗಿ ಎರಡು ವರ್ಷ ಕಳೆದರೂ ಅದರ ಖ್ಯಾತಿ ಒಂದಿಷ್ಟು ಕಡಿಮೆಯಾಗಿಲ್ಲ. ಇದಕ್ಕಾಗಿ ಈಗಲೂ ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿದೆ.

ಟಾಟಾ ಪಂಚ್ ಭಾರತ್ ಎನ್‌ಸಿಎಪಿ ಸುರಕ್ಷತಾ ರೇಟಿಂಗ್ ಸಿಸ್ಟಮ್ ಅಡಿಯಲ್ಲಿ ಕ್ರ್ಯಾಶ್ ಟೆಸ್ಟಿಂಗ್‌ಗೆ ಒಳಗಾಗುವ ಮೊದಲ ಕಾರುಗಳಲ್ಲಿ ಒಂದಾಗಲಿದೆ. ಕಟ್ಟುನಿಟ್ಟಾದ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಟಾಟಾ ಪಂಚ್ ಎಸ್‍ಯುವಿಯು ಆರು ಏರ್‌ಬ್ಯಾಗ್‌ಗಳನ್ನು ಪಡೆಯಲಿದೆ. ಇನ್ನು ಈ ಮಾದರಿಯ ಎದುರಾಳಿ ಹ್ಯುಂಡೈ ಎಕ್ಸ್‌ಟರ್ ಮಾದರಿಯಲ್ಲಿ ಈಗಾಗಲೇ ಆರು ಏರ್‌ಬ್ಯಾಗ್‌ಗಳನ್ನು ಹೊಂದಿವೆ.

Tata Punch

ಟಾಟಾ ಕಂಪನಿಯು ಪಂಚ್ ಎಸ್‍ಯುವಿಗೆ 'ಫೀಲ್ ಗುಡ್' ಫೀಚರ್ಸ್ ಅನ್ನು ಸೇರಿಸಲು ನಿರ್ಧರಿಸಿದೆ. ಈ ಹೊಸ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಟಾಪ್-ಸ್ಪೆಕ್ ಕ್ರಿಯೇಟಿವ್ ಟ್ರಿಮ್ ವರೆಗೆ ಟಾಟಾ ಪಂಚ್ ಸ್ಟ್ಯಾಂಡರ್ಡ್ ಸಲಕರಣೆಗಳ ಭಾಗವಾಗಿರುತ್ತದೆ. ಈ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ 4-ಇಂಚಿನ ಯುನಿಟ್ ಆಗಿದೆ. ಟಾಟಾ ಪಂಚ್‌ನ ಟಾಪ್-ಸ್ಪೆಕ್ ಕ್ರಿಯೇಟಿವ್ ಟ್ರಿಮ್ ಹೆಚ್ಚು ಸುಧಾರಿತ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ.

ಈ ಇನ್ಸ್ಟ್ರುಮೆಂಟ್ ಕ್ಲಸ್ಟರ್ TFT ತಂತ್ರಜ್ಞಾನವನ್ನು ಸಹ ಹೊಂದಿದೆ ಮತ್ತು ಕಡಿಮೆ ಟ್ರಿಮ್ ಹಂತಗಳಲ್ಲಿ ನೀಡಲಾದ 4-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಿಂತ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ. ಮೊದಲಿಗೆ ಪೆಟ್ರೋಲ್ ರೂಪಾಂತರದ ಬಗ್ಗೆ ಮಾತನಾಡೋಣ. ಇದು 1.2-ಲೀಟರ್, 3-ಸಿಲಿಂಡರ್, ಪೆಟ್ರೋಲ್ ಎಂಜಿನ್‌ ಹೊಂದಿದ್ದು, 85 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ, 5-ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದೆ.

Tata Punch

ಈ ಕಾರು, ವಿನ್ಯಾಸದ ದೃಷ್ಟಿಯಿಂದ ಸಾಕಷ್ಟು ಅತ್ಯಾಧುನಿಕವಾಗಿದ್ದು, ಮುಂಭಾಗ, ಸಿಗ್ನೇಚರ್ ಗ್ರಿಲ್ ಆಕರ್ಷಕ ಹೆಡ್‌ಲೈಟ್ ಹಾಗೂ ಫಾಗ್ ಲೈಟ್ ಹೊಂದಿದೆ. ಈ ಕಾರು, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದ್ದು, ಸುರಕ್ಷತೆಯ ದೃಷ್ಟಿಯಿಂದ ಪಂಚ್ ಖರೀದಿದಾರರಿಗೆ ಉತ್ತಮ ಆಯ್ಕೆಯಾಗುತ್ತದೆ.

ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೆನ್ಸರ್‌, ರೇರ್ ವ್ಯೂ ಕ್ಯಾಮೆರಾ ಒಳಗೊಂಡಂತೆ ಹಲವು ಸೇಫ್ಟಿ ಫೀಚರ್ಸ್ ಹೊಂದಿದೆ ಇನ್ನು, ಫೋರ್-ಸ್ಪೋಕ್ 16 ಇಂಚಿನ ಅಲಾಯ್ ವೀಲ್ಸ್, ಟರ್ನ್ ಇಂಡಿಕೇಟರ್ ಪಡೆದಿದೆ. ಮೈಲೇಜ್ ವಿಷಯವಾಗಿ ಹೇಳುವುದಾದರೆ, ರೂಪಾಂತರಗಳಿಗೆ ಅನುಗುಣವಾಗಿ, 18.8 - 20.09 kmpl ಇಂಧನ ದಕ್ಷತೆ ಹೊಂದಿದೆ.

Tata Punch

ಟಾಟಾ ಪಂಚ್ ಸಿಎನ್‌ಜಿ ಆವೃತ್ತಿ ಬಗ್ಗೆ ಹೇಳುವುದಾದರೆ, ಇದು, 1.2 ಲೀಟರ್, 3-ಸಿಲಿಂಡರ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿಗೆ ಹೋಲಿಸಿದರೆ, ಕೊಂಚ ಕಡಿಮೆ 74 bhp ಪವರ್ ಹಾಗೂ 95 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಗ್ರಾಹಕರಿಗೆ ಸಿಗಲಿದ್ದು, ಯಾವ ಬೈಕಿಗೂ ಕಮ್ಮಿ ಇಲ್ಲದಂತಹ ಮೈಲೇಜ್ ನೀಡಲಿದ್ದು, 26.9 km/kg ಮೈಲೇಜ್ ಅನ್ನು ನೀಡುತ್ತದೆ.

ಟಾಟಾ ಕಂಪನಿ ಎಲೆಕ್ಟ್ರಿಕ್ ರೂಪದಲ್ಲಿಯೂ ಪಂಚ್ ಕಾರನ್ನು ಬಿಡುಗಡೆಗೊಳಿಸಲು ತಯಾರಿ ನಡೆಸಿದ್ದು, ಈಗಾಗಲೇ ಹಲವು ಬಾರಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದೆ. ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದ್ದು, ದೊಡ್ಡದಾದ ಬ್ಯಾಟರಿ ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿರಲಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 350 km ರೇಂಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ರೂ.12 ಲಕ್ಷ ಬೆಲೆಗೆ ಸಿಗಬಹುದು.

ಮುಂಬರಲಿರುವ ಟಾಟಾ ಪಂಚ್ ಇವಿ, ಟಿಗೂರ್ ಇವಿ ಹಾಗೂ ಟಿಯಾಗೊ ಇವಿಯಂತೆ 26 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿರಲಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 300 km ರೇಂಜ್ ನೀಡುವ ಸಾಮರ್ಥ್ಯ ಹೊಂದಿರಬಹುದು. ಜೊತೆಯಲ್ಲಿ 7.2 kW ಎಸಿ ಚಾರ್ಜರ್ ಹಾಗೂ ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಖರೀದಿಗೆ ದೊರೆಯಬಹುದು ಎಂದು ಹೇಳಲಾಗುತ್ತಿದೆ.

Article Published On: Wednesday, December 13, 2023, 18:52 [IST]
English summary
Tata punch safety upgrade to six airbags details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+