ಟಾಟಾ ಪಂಚ್ ಅಬ್ಬರ: 15 ತಿಂಗಳಲ್ಲೇ ಅಪರೂಪದ ದಾಖಲೆ

ಭಾರತದ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ನ 'ಪಂಚ್' ಕಾರು ಬಿಡುಗಡೆ ಆದಾಗಿನಿಂದಲೂ ಮಾರಾಟದಲ್ಲಿ ಪ್ರಗತಿಯನ್ನು ಕಂಡಿದೆ. ಉತ್ತಮ ಬುಕಿಂಗ್‌ಗಳನ್ನು ಪಡೆಯುತ್ತಿದ್ದು, ಕಂಪನಿಯು ಕಳೆದ 15 ತಿಂಗಳಲ್ಲಿ 1,50,000 ಕ್ಕೂ ಹೆಚ್ಚು ಪಂಚ್ ಎಸ್‌ಯುವಿಗಳನ್ನು ಮಾರಾಟ ಮಾಡಿ, ದಾಖಲೆ ನಿರ್ಮಿಸಿದೆ. ಅದರ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

2021 ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಟಾಟಾ ಪಂಚ್, ಎರಡನೇ ಅತಿ ಹೆಚ್ಚು ಮಾರಾಟವಾಗುವ ವಾಹನವಾಗಿದೆ. (ಮೊದಲ ಸ್ಥಾನ: ಟಾಟಾ ನೆಕ್ಸನ್). ಡಿಸೆಂಬರ್ 2022 ರವರೆಗೆ ಕಂಪನಿಯು 1,52,466 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಇದರರ್ಥ ಟಾಟಾ ಮೋಟಾರ್ಸ್, ಪ್ರತಿ ತಿಂಗಳು ಪಂಚ್ ಎಸ್‌ಯುವಿಯ ಕನಿಷ್ಠ 10,164 ಯುನಿಟ್‌ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇದು ನಿಜಕ್ಕೂ ಕಂಪನಿಗೆ ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಭಾರತದಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಟಾಟಾ ಕಾರುಗಳು ಮಾರಾಟದಲ್ಲಿ ಒಳ್ಳೆಯ ಸಾಧನೆಯನ್ನು ಮಾಡಿವೆ. ಟಾಟಾ ಪಂಚ್, ಜನವರಿ 2022ರಲ್ಲಿ 10,027 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಆರಂಭದಲ್ಲಿ ಪಂಚ್ ಮಾರಾಟ ಅಷ್ಟೊಂದು ಚೆನ್ನಾಗಿರಲಿಲ್ಲ. ಕ್ರಮೇಣ ಮಾರಾಟ ಸುಸ್ಥಿತಿಗೆ ಬಂದಿತು. ಅದರ ಬಳಿಕ, ಟಾಟಾ ಪಂಚ್ ಎಸ್‌ಯುವಿ ಮಾರಾಟವು ಮಾರ್ಚ್ 2022ರಿಂದ ಕನಿಷ್ಠ 10,000 ಯುನಿಟ್‌ಗಳಿಗಿಂತ ಕಡಿಮೆಯೇ ಆಗಿಲ್ಲ. ಸೆಪ್ಟೆಂಬರ್ 2022ರಲ್ಲಿ ಅತ್ಯಧಿಕ 12,251 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.

ಟಾಟಾ ಪಂಚ್ ಎಸ್‌ಯುವಿ, 1.2-ಲೀಟರ್, ಮೂರು-ಸಿಲಿಂಡರ್, ರೆವೊಟ್ರಾನ್ ಪೆಟ್ರೋಲ್ ಎಂಜಿನ್‌ ಹೊಂದಿದೆ. ಇದು 6,000 rpm ನಲ್ಲಿ 85 bhp ಗರಿಷ್ಠ ಪವರ್ ಮತ್ತು 3,300 rpm ನಲ್ಲಿ 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಕಾರ್ಯಕ್ಷಮತೆಯ ಆಧಾರದ ಮೇಲೆ ಪಂಚ್ ಅತ್ಯುತ್ತಮ ಕಾರು ಎಂದು ಹೇಳಬಹುದು. ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತದೆ.

ಟಾಟಾ ಪಂಚ್ ಅದ್ಭುತ ಡಿಸೈನ್ ಹೊಂದಿದೆ. ಈ ಎಸ್‌ಯುವಿಯಲ್ಲಿ ಸಿಗ್ನೇಚರ್ ಗ್ರಿಲ್ ಅನ್ನು ಕಾಣಬಹುದು. ಎರಡು ಬದಿಯಲ್ಲಿ ಹೆಡ್‌ಲೈಟ್ ಇದ್ದು, ಅದರ ಕೆಳಗೆ ಫಾಗ್ ಲೈಟ್ ಹಾಕಲಾಗಿದೆ. ಟಾಟಾ ಪಂಚ್ ಸೈಡ್ ಪ್ರೊಫೈಲ್ ಫೋರ್ - ಸ್ಪೋಕ್ 16 ಇಂಚಿನ ಅಲಾಯ್ ವೀಲ್ಸ್, ORVMಗಳಲ್ಲಿ ಟರ್ನ್ ಇಂಡಿಕೇಟರ್ ಮತ್ತು ಡ್ಯುಯಲ್ ಟೋನ್ ಹೊರಭಾಗವನ್ನು ಹೊಂದಿದೆ. ಇದರ ಲುಕ್ ಗ್ರಾಹಕರನ್ನು ಆಕರ್ಷಿಸಲಿದ್ದು, ಈವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ.

ಟಾಟಾ ಪಂಚ್ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಐಆರ್‌ಎ ಕನೆಕ್ಟೆಡ್ ಕಾರ್ ತಂತ್ರಜ್ಞಾನವನ್ನು ಪಡೆದಿದೆ. ಅಲ್ಲದೆ, ಆಟೋಮೆಟಿಕ್ ಎಸಿ ಮತ್ತು ಕೂಲ್ಡ್ ಗ್ಲೋವ್ ಬಾಕ್ಸ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತಾ ದೃಷ್ಟಿಯಿಂದ ಟಾಟಾ ಪಂಚ್ ಅತ್ಯತ್ತಮ ಕಾರು ಎಂದು ಹೇಳಬಹುದು. ಇದು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.

ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಟಾಟಾ ಪಂಚ್ i CNG ಕಾರನ್ನು ಅನಾವರಣ ಮಾಡಲಾಯಿತು. ಪಂಚ್ i CNG 1,199 ಸಿಸಿ ನ್ಯಾಚುರಲ್ ಆಸ್ಪಿರೇಟೆಡ್ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 86 PS ಗರಿಷ್ಠ ಪವರ್ ಮತ್ತು 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. CNG ಆವೃತ್ತಿಯು 73.5 PS ಪವರ್ ಮತ್ತು 95 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, ಇದು ಐದು-ಸ್ವೀಡ್ ಮ್ಯಾನುವಲ್ ಯುನಿಟ್‌ನೊಂದಿಗೆ ಖರೀದಿಗೆ ಲಭ್ಯವಿರಲಿದೆ.

ಈ ಪಂಚ್ i CNG ಪ್ರೊಜೆಕ್ಟರ್ ಹೆಡ್‌ಲೈಟ್ಸ್, ಕಾರ್ನರಿಂಗ್ ಲೈಟ್‌ಗಳೊಂದಿಗೆ ಫಾಗ್ ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ವೈ-ಆಕಾರದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಒಳಗೊಂಡಿವೆ. ಇದು ಏಳು-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್ ಅನ್ನು ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿ ದೊರೆಯುವ ಇಂಧನ ಚಾಲಿತ ಪಂಚ್ ಕಾರಿಗಿಂತ 50,000-70,000 ರೂ. ಹೆಚ್ಚು ದುಬಾರಿ ಇರಬಹುದು. ಪಂಚ್ ಕಾರಿನ ದರ ರೂ.6 ಲಕ್ಷದಿಂದ ರೂ 9.54 ಲಕ್ಷ ಇದೆ.

Most Read Articles

Kannada
English summary
Tata punch sold 150000 units in 15 months details kannada
Story first published: Wednesday, January 18, 2023, 17:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X