Tata: 26 ಕಿ.ಮೀ ಮೈಲೇಜ್‌ನ ಟಾಟಾದ ಈ ಕಾರಿಗೆ ಭಾರೀ ಬೇಡಿಕೆ, 6 ಲಕ್ಷ ಆರಂಭಿಕ ಬೆಲೆ

ಭಾರತದ ಮಾರುಕಟ್ಟೆಯಲ್ಲಿ ಟಾಟಾ ಪಂಚ್ ಬಹುಬೇಡಿಕೆಯ ಕಾರಾಗಿದ್ದು, ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ಮೈಕ್ರೋ ಎಸ್‌ಯುವಿ ಪ್ಯೂರ್, ಅಡ್ವೆಂಚರ್ ಸೇರಿದಂತೆ 4 ರೂಪಾಂತರಗಳೊಂದಿಗೆ ಸಿಗಲಿದ್ದು, ರೂ.6 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. ಈ ನವೆಂಬರ್‌ನ ಕಾಯುವಿಕೆ ಅವಧಿ ಕುರಿತು ಇಲ್ಲಿದೆ ಮಾಹಿತಿ.

ಟಾಟಾ ಪಂಚ್ (Tata Punch) ಪೆಟ್ರೋಲ್ ರೂಪಾಂತರಗಳನ್ನು ಇವತ್ತು ಬುಕ್ಕಿಂಗ್ ಮಾಡಿದರೆ, 4 ವಾರಗಳಲ್ಲಿ ವಿತರಣೆಯಾಗಲಿದೆ. ಅದೇ ರೀತಿಯಲ್ಲಿ ಗರಿಷ್ಠ ಮೈಲೇಜ್‌ ನೀಡುವ ಸಿಎನ್‌ಜಿ ವೇರಿಯೆಂಟ್, 3 - 12 ವಾರಗಳು ಕಾಯುವಿಕೆ ಅವಧಿಯನ್ನು ಹೊಂದಿದೆ. ಡಿಲೆವರಿಗೆ ತಗುಲುವ ಈ ಸಮಯ ರಾಜ್ಯದಿಂದ ರಾಜ್ಯಕ್ಕೆ, ಡೀಲರ್‌ಶಿಪ್, ಸ್ಟಾಕ್ ಲಭ್ಯತೆ ಆಧರಿಸಿ, ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂ ಸಂಪರ್ಕಿಸಿರಿ.

Tata: 26 ಕಿ.ಮೀ ಮೈಲೇಜ್‌ನ ಟಾಟಾದ ಈ ಕಾರಿಗೆ ಭಾರೀ ಬೇಡಿಕೆ, 6 ಲಕ್ಷ ಆರಂಭಿಕ ಬೆಲೆ

ಟಾಟಾ ಪಂಚ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ. 1.2 - ಲೀಟರ್ ಪೆಟ್ರೋಲ್ ಎಂಜಿನ್, 88 PS ಗರಿಷ್ಠ ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸಿವ ಸಾಮರ್ಥ್ಯವನ್ನು ಒಳಗೊಂಡಿದೆ. 5 - ಸ್ವೀಡ್ ಮ್ಯಾನುವಲ್/ 5 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.

ಸಿಎನ್‌ಜಿ ರೂಪಾಂತರ ಕೂಡ 1.2 - ಲೀಟರ್ ಎಂಜಿನ್ ಪಡೆದಿದೆ. ಆದರೆ, ಕೊಂಚ ಕಡಿಮೆ ಪವರ್ ಹೊರಹಾಕುತ್ತದೆ. ಇದು, 73.5 PS ಗರಿಷ್ಠ ಪವರ್ ಮತ್ತು 103 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಕೇವಲ 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಗೆ ಲಭ್ಯವಿದೆ.

Tata: 26 ಕಿ.ಮೀ ಮೈಲೇಜ್‌ನ ಟಾಟಾದ ಈ ಕಾರಿಗೆ ಭಾರೀ ಬೇಡಿಕೆ, 6 ಲಕ್ಷ ಆರಂಭಿಕ ಬೆಲೆ

ಈ ಟಾಟಾ ಪಂಚ್ ಕಾರಿನಲ್ಲಿ 5 ಜನರು ಆರಾಮದಾಯವಾಗಿ ಪ್ರಯಾಣಿಸಬಹುದಾಗಿದ್ದು, ಕ್ಯಾಲಿಪ್ಸೊ ರೆಡ್, ಅಟಾಮಿಕ್ ಆರೆಂಜ್, ಡೇಟಾನಾ ಗ್ರೇ ಸೇರಿದಂತೆ 8 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಮೈಲೇಜ್ ವಿಷಯಕ್ಕೆ ಬರುವುದಾದರೆ, ಪೆಟ್ರೋಲ್ ರೂಪಾಂತರ 18.8 kmpl ರಿಂದ 20.09 kmpl, ಸಿಎನ್‌ಜಿ ವೇರಿಯೆಂಟ್ 26.99 km/kg ಇಂಧನ ದಕ್ಷತೆಯನ್ನು ಹೊಂದಿದೆ.

ಟಾಟಾ ಪಂಚ್ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ, ಕನೆಕ್ಟ್ದ್ ಕಾರ್ ಟೆಕ್, 7 - ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 7 - ಇಂಚಿನ ಸೆಮಿ - ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಆಟೋ ಕ್ಲೇಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ. ಜೊತೆಗೆ 366 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಪಡೆದಿದೆ.

ಸುರಕ್ಷತೆಯ ದೃಷ್ಟಿಯಿಂದಲೂ ಈ ಕಾರು, ಅತ್ಯುತ್ತಮವಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ ) ರೇರ್ ಡಿಫಾಗರ್‌, ರೇರ್ ಪಾರ್ಕಿಂಗ್ ಸೆನ್ಸರ್‌, ರೇರ್ ವ್ಯೂ ಕ್ಯಾಮೆರಾ ಮತ್ತು ISOFIX ಆಂಕರ್‌ನ್ನು ಒಳಗೊಂಡಿದೆ. ಹುಂಡೈ ಎಕ್ಸ್‌ಟರ್ ಮತ್ತು ಮಾರುತಿ ಸುಜುಕಿ ಇಗ್ನಿಸ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಇನ್ನು, ಟಾಟಾ ಕಂಪನಿಯು ಪಂಚ್ ಎಸ್‌ಯುವಿಯನ್ನು ಎಲೆಕ್ಟ್ರಿಕ್ ರೂಪದಲ್ಲಿಯೂ ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ. ರೂ.12 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಇದರಲ್ಲಿ ಶಕ್ತಿಯುತ ಬ್ಯಾಟರಿ ಬಳಕೆ ಮಾಡುವ ಸಾಧ್ಯತೆಯಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 500 km ರೇಂಜ್ ನೀಡಬಹುದು ಎಂದು ಹೇಳಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, November 25, 2023, 10:20 [IST]
English summary
Tata punch suv waiting period november revealed 26 km mileage 6 lakh price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+