Tata Motors: ಬಹುದೊಡ್ಡ ಎತ್ತರಕ್ಕೆ ಏರಿದ ಟಾಟಾ.. ಅದರ ಓಟಕ್ಕೆ ಬ್ರೇಕ್ ಹಾಕೋಕೆ ಆಗೋದೇ ಇಲ್ಲ

ಭಾರತದಲ್ಲಿ ಟಾಟಾ ಮೋಟಾರ್ಸ್ (Tata Motors) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿದೆ. ಇದೀಗ, ಏಪ್ರಿಲ್ ತಿಂಗಳ ಮಾರಾಟ ವರದಿ ಪ್ರಕಟವಾಗಿದ್ದು, ಒಟ್ಟು ಸೇಲ್‌ನಲ್ಲಿ ಕೊಂಚ ಹಿನ್ನೆಡೆ ಅನುಭವಿಸಿದ್ದರೂ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಬಹುದೊಡ್ಡ ಎತ್ತರಕ್ಕೆ ಏರಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಟಾಟಾ ಕಂಪನಿ, ಕಳೆದ ತಿಂಗಳು (ಏಪ್ರಿಲ್ 2023) ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 68,514 (ಪ್ರಯಾಣಿಕ, ವಾಣಿಜ್ಯ) ಯುನಿಟ್ ವಾಹನಗಳನ್ನು ಸೇಲ್ ಮಾಡಿ, 2022ರ ಏಪ್ರಿಲ್ ಗೆ (71,467 ಯುನಿಟ್) ಹೋಲಿಸಿದರೆ 4% ಹಿನ್ನೆಡೆ ಅನುಭವಿಸಿದೆ. ಆದರೆ, ಎಲೆಕ್ಟ್ರಿಕ್ ವಾಹನ (ಇವಿ) ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ದೊಡ್ಡ ಮಟ್ಟದಲ್ಲಿ ಪ್ರಗತಿ ಸಾಧಿಸಿದ್ದು, 179% ಬೆಳವಣಿಗೆ ಸಾಧಿಸಿದೆ. 2023ರ ಏಪ್ರಿಲ್ ತಿಂಗಳಲ್ಲಿ ಬರೋಬ್ಬರಿ 6,516 ಯುನಿಟ್ ಸೇಲ್ ಮಾಡಿದೆ.

Tata Motors: ಬಹುದೊಡ್ಡ ಎತ್ತರಕ್ಕೆ ಏರಿದ ಟಾಟಾ.. ಅದರ ಓಟಕ್ಕೆ ಬ್ರೇಕ್ ಹಾಕೋಕೆ ಆಗೋದೇ ಇಲ್ಲ!

ಅದೇ 2022ರ ಏಪ್ರಿಲ್ ನಲ್ಲಿ ಕೇವಲ 2,333 ಯುನಿಟ್ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿತ್ತು. ಮಾರ್ಚ್ (2023) ತಿಂಗಳಲ್ಲೂ 6,506 ಯುನಿಟ್ ಸೇಲ್ ಮಾಡಿದೆ. ಟಾಟಾ ಕಂಪನಿ, ಈ ಮಟ್ಟಿಗೆ ಎಲೆಕ್ಟ್ರಿಕ್ ವಾಹನಗಳನ್ನು ಮಾರಲು ಕಾರಣ, ಜನಪ್ರಿಯ ಟಿಯಾಗೊ ಇವಿ, ನೆಕ್ಸಾನ್ ಪ್ರೈಮ್ ಹಾಗೂ ನೆಕ್ಸಾನ್ ಮ್ಯಾಕ್ಸ್ ಇವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿರುವುದು.

ಟಾಟಾದ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಒಂದಷ್ಟು ವಿವರವನ್ನು ನೋಡುವುದಾದರೆ, ಅತ್ಯಂತ ಕೈಗೆಟುಕುವ ಬೆಲೆಯ ಟಿಯಾಗೊ ಇವಿ, ರೂ.8.69 - 11.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಎರಡು ಬ್ಯಾಟರಿ ಆಯ್ಕೆಯನ್ನು ಹೊಂದಿದ್ದು, 24kWh ಬ್ಯಾಟರಿ ಪ್ಯಾಕ್ ಪಡೆದಿರುವ ಕಾರು, 315 km, 19.2kWh ಬ್ಯಾಟರಿ ಪ್ಯಾಕ್ ಹೊಂದಿರುವ ಟಿಯಾಗೊ ಇವಿ ಸಂಪೂರ್ಣ ಚಾರ್ಜಿನಲ್ಲಿ 250 km ರೇಂಜ್ ನೀಡಲಿದೆ.

ಡಿಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ ಕೇವಲ 57 ನಿಮಿಷದಲ್ಲಿ ಈ ಕಾರಿನ ಬ್ಯಾಟರಿ ಶೇಕಡ 10 ರಿಂದ 80% ಚಾರ್ಜ್ ಆಗುತ್ತದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ ಪ್ಲೇ, ಆಟೋ ಎಸಿ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಡುಯಲ್ ಫ್ರಂಟ್ ಏರ್‌ಬ್ಯಾಗ್ಸ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ABS, EBD ಹಾಗೂ ರೇರ್ ವ್ಯೂ ಕ್ಯಾಮೆರಾವನ್ನು ಪಡೆದಿದೆ.

ಭಾರತದ ಮಾರುಕಟ್ಟೆಯಲ್ಲಿ ಟಾಟಾ, ನೆಕ್ಸಾನ್ ಪ್ರೈಮ್ ಹಾಗೂ ನೆಕ್ಸಾನ್ ಮ್ಯಾಕ್ಸ್ ಇವಿಗಳನ್ನು ಮಾರಾಟ ಮಾಡುತ್ತದೆ. ನೆಕ್ಸಾನ್ ಪ್ರೈಮ್ ರೂ.14.49 ಲಕ್ಷದಿಂದ ರೂ.17.19 ಲಕ್ಷ, ನೆಕ್ಸಾನ್ ಮ್ಯಾಕ್ಸ್ ರೂ.16.49 - 19.54 ಲಕ್ಷ ಬೆಲೆಯಲ್ಲಿ ಸಿಗಲಿದೆ. ನೆಕ್ಸಾನ್ ಪ್ರೈಮ್ 30.2kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 312 km ರೇಂಜ್, ನೆಕ್ಸಾನ್ ಮ್ಯಾಕ್ಸ್ 40.5 kWh ಬ್ಯಾಟರಿ ಪ್ಯಾಕ್ ಪಡೆದಿದ್ದು, 453 km ರೇಂಜ್ ನೀಡಲಿದೆ.

ಇನ್ನುಳಿದಂತೆ, ಟಾಟಾ ಮೋಟಾರ್ಸ್ ಭಾರತದ ಮಾರುಕಟ್ಟೆಯಲ್ಲಿ 2023ರ ಏಪ್ರಿಲ್ ತಿಂಗಳಲ್ಲಿ 47,007 ಯುನಿಟ್ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ ಶೇಕಡ 13% ಪ್ರಗತಿ ಸಾಧಿಸಿದೆ. 2022ರ ಏಪ್ರಿಲ್ ನಲ್ಲಿ 41,587 ವಾಹನಗಳನ್ನು ಸೇಲ್ ಮಾಡಿತ್ತು. ಕಂಪನಿಯು ವಾಣಿಜ್ಯ ವಾಹನ ಮಾರಾಟದಲ್ಲಿ ಭಾರೀ ಹಿನ್ನೆಡೆ ಅನುಭವಿಸಿದ್ದು, ಕಳೆದ ತಿಂಗಳು 22,492 ಯುನಿಟ್ (2022ರ ಏಪ್ರಿಲ್ ನಲ್ಲಿ 30,838 ಯುನಿಟ್) ಸೇಲ್ ಮಾಡಿ, 27% ಕುಸಿತ ಕಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, May 2, 2023, 11:15 [IST]
English summary
Tata recorded highest electric vehicles sales in april 2023 datails
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+