Tata.ev: ಎಲೆಕ್ಟ್ರಿಕ್ ವಾಹನ ಮಾರಾಟ ಕ್ರಾಂತಿಗೆ ಮುಂದಾದ ಟಾಟಾ, ಹೊಸ ಇವಿ ಬ್ರ್ಯಾಂಡ್ ಘೋಷಣೆ

ಭಾರತದಲ್ಲಿ ಟಾಟಾ (Tata) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಜನಮನ್ನಣೆ ಗಳಿಸಿದ್ದು, ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಇತರೆ ಕಂಪನಿಗಳಿಗೆ ಹೋಲಿಸಿದರೆ ಹಲವು ತಿಂಗಳಿಂದ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಇದೀಗ, ಎಲೆಕ್ಟ್ರಿಕ್ ವಾಹನ (ಇವಿ) ಮಾರಾಟಕ್ಕಾಗಿ ಟಾಟಾ ಪ್ರತ್ಯೇಕ ಬ್ರ್ಯಾಂಡ್ ಸ್ಟಾಪಿಸಿದೆ.

ಇನ್ಮುಂದೆ ಕಂಪನಿಯ ಪ್ರತಿಯೊಂದು ಎಲೆಕ್ಟ್ರಿಕ್ ವಾಹನಗಳು, 'ಟಾಟಾ ಇವಿ' (Tata.ev) ಬ್ರ್ಯಾಂಡ್ ಅಡಿಯಲ್ಲಿ ಮಾರಾಟವಾಗಲಿವೆ. ಈ ಸಂಬಂಧ ಟಾಟಾ ಬಿಡುಗಡೆಗೊಳಿಸಿರುವ ಹೊಸ ಲೋಗೋ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಅದರಲ್ಲಿ ಮೂವ್ ವಿಥ್ ಮೀನಿಂಗ್ (move with meaning) ಎಂಬ ಅಡಿ ಬರಹ (ಟ್ಯಾಗ್ ಲೈನ್)ವನ್ನು ಬರೆಯಲಾಗಿದೆ.

Tata.ev: ಎಲೆಕ್ಟ್ರಿಕ್ ವಾಹನ ಮಾರಾಟ ಕ್ರಾಂತಿಗೆ ಮುಂದಾದ ಟಾಟಾ, ಹೊಸ ಇವಿ ಬ್ರ್ಯಾಂಡ್ ಘೋಷಣೆ

ಈ ಬಗ್ಗೆ ಮಾತನಾಡಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮಾರ್ಕೆಟಿಂಗ್ & ಸೇಲ್ಸ್ ವಿಭಾಗದ ಮುಖ್ಯಸ್ಥ ವಿವೇಕ್ ಶ್ರೀವತ್ಸ, ಅವರು, 'ನಾವು ಟಾಟಾ ಇವಿ ಬ್ರ್ಯಾಂಡ್ ನೊಂದಿಗೆ ನವ ಯುಗವನ್ನು ಪ್ರವೇಶಿಸುತ್ತಿದ್ದೇವೆ. ಮಾಲಿನ್ಯ ರಹಿತ ಶುದ್ಧ ಪರಿಸರ ನಿರ್ಮಾಣಕ್ಕೆ ಎಲೆಕ್ಟ್ರಿಕ್ ವಾಹನಗಳ ಪೂರೈಕೆಯನ್ನು ನಮ್ಮ ಹೊಸ ಬ್ರ್ಯಾಂಡ್, ಮತ್ತಷ್ಟು ವೇಗಗೊಳಿಸುತ್ತದೆ. ಇಲ್ಲಿ ನಮ್ಮ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ಉದ್ದೇಶಿಸಲಾಗಿದೆ' ಎಂದು ಹೇಳಿದ್ದಾರೆ.

ಟಾಟಾ ಮೋಟಾರ್ಸ್, ಬಲವಾದ ಇವಿ ಲೈನ್ಅಪ್ ಹೊಂದಿದ್ದು, ದೇಶೀಯ ಮಾರುಕಟ್ಟೆಯಲ್ಲಿ ನೆಕ್ಸಾನ್‌ ಇವಿ, ಟಿಯಾಗೊ ಇವಿ ಹಾಗೂ ಟಿಗೂರ್ ಇವಿಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಇತ್ತೀಚೆಗೆ ಭಾರತದಲ್ಲಿ ಬರೋಬ್ಬರಿ ಒಂದು ಲಕ್ಷ ಇವಿ ಮಾರಾಟ ಮೈಲಿಗಲ್ಲನ್ನು ಕಂಪನಿ ಸಾಧಿಸಿತ್ತು. ಇದನ್ನು ಗಮನಿಸಿದಾಗ ಕಂಪನಿಯ ಇವಿಗಳು ಎಷ್ಟರಮಟ್ಟಿಗೆ ಜನಪ್ರಿಯತೆ ಹೊಂದಿವೆ ಎಂಬುದು ಸುಲಭವಾಗಿ ತಿಳಿಯುತ್ತದೆ.

Tata.ev: ಎಲೆಕ್ಟ್ರಿಕ್ ವಾಹನ ಮಾರಾಟ ಕ್ರಾಂತಿಗೆ ಮುಂದಾದ ಟಾಟಾ, ಹೊಸ ಇವಿ ಬ್ರ್ಯಾಂಡ್ ಘೋಷಣೆ

ಕಳೆದ ಜುಲೈ ತಿಂಗಳಲ್ಲಿಯೂ ಟಾಟಾ, 6,329 ಯುನಿಟ್ ಎಲೆಕ್ಟ್ರಿಕ್ ವಾಹನ (ಇವಿ) ಸೇಲ್ ಮಾಡಿ, ಹಿಂದಿನ ವರ್ಷಕ್ಕೆ (4,151 ಯುನಿಟ್‌) ಹೋಲಿಕೆ ಮಾಡಿದರೆ, ಶೇಕಡ 53% ಪ್ರಗತಿ ಸಾಧಿಸಿತ್ತು. ಪ್ರಮುಖವಾಗಿ, ಕಂಪನಿಯ ಎಲೆಕ್ಟ್ರಿಕ್ ಕಾರು ಬಳಕೆಯಿಂದ ದೇಶದಲ್ಲಿ 2,19,432 ಟನ್ ಇಂಗಾಲದ (CO2) ಪ್ರಮಾಣ ವಾತಾವರಣಕ್ಕೆ ಸೇರಿವುದನ್ನು ತಡೆಗಟ್ಟಲಾಗಿದ್ದು, ಗ್ರಾಹಕರು ಇಂಧನಕ್ಕಾಗಿ ವ್ಯಯಿಸಬೇಕಾಗಿದ್ದ ರೂ.7 ಬಿಲಿಯನ್ ಹಣ ಉಳಿತಾಯ ಮಾಡಿದ್ದಾರೆ.

ಟಾಟಾ, ಮತ್ತಷ್ಟು ಎಲೆಕ್ಟ್ರಿಕ್ ಕಾರುಗಳನ್ನು ಲಾಂಚ್ ಮಾಡಲು ಸಿದ್ಧತೆ ನಡೆಸುತ್ತಿದೆ. ಅದರಲ್ಲಿ ಹ್ಯಾರಿಯರ್ ಇವಿ, ಸಿಯೆರಾ ಇವಿ ಮತ್ತು ಪಂಚ್ ಇವಿ ಮತ್ತು ಆಲ್ಟ್ರೋಜ್‌ ಇವಿ ಸೇರಿವೆ. ಈಗಾಗಲೇ, ಪಂಚ್ ಇವಿ ದೇಶದ ರಸ್ತೆಗಳಲ್ಲಿ ಹಲವು ಬಾರಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದೆ. ಈ ಕಾರು, ರೂ.12 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಬಹುದು. 350 km ರೇಂಜ್ ನೀಡಬಹುದು ಅಂದಾಜಿಸಲಾಗಿದೆ.

Tata.ev: ಎಲೆಕ್ಟ್ರಿಕ್ ವಾಹನ ಮಾರಾಟ ಕ್ರಾಂತಿಗೆ ಮುಂದಾದ ಟಾಟಾ, ಹೊಸ ಇವಿ ಬ್ರ್ಯಾಂಡ್ ಘೋಷಣೆ

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ನೆಕ್ಸಾನ್‌ ಇವಿ ಪ್ರೈಮ್ ಹಾಗೂ ಮ್ಯಾಕ್ಸ್ ಎಂಬ ಎರಡು ರೂಪಾಂತರದ ಆಯ್ಕೆಯಲ್ಲಿ ಸಿಗುತ್ತದೆ. ಪ್ರೈಮ್ ವೇರಿಯೆಂಟ್ ರೂ.14.49 - 17.19 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಮ್ಯಾಕ್ಸ್ ವೇರಿಯೆಂಟ್ ರೂ.16.49 ಲಕ್ಷದಿಂದ ರೂ.19.54 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ರೂಪಾಂತರಗಳಿಗೆ ಅನುಗುಣವಾಗಿ, ಸಂಪೂರ್ಣ ಚಾರ್ಜಿನಲ್ಲಿ 312 km ರಿಂದ 453 km ರೇಂಜ್ ನೀಡುತ್ತವೆ.

ಟಾಟಾದ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರೆಂದು ಟಿಯೊಗೊ ಇವಿ ಖ್ಯಾತಿಗಳಿಸಿದ್ದು, ರೂ.8.69 ಲಕ್ಷದಿಂದ ರೂ.12.04 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಇದು, 19.2 kWh ಹಾಗೂ 24 kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, 250 km ರಿಂದ 315 km ರೇಂಜ್ ಕೊಡುತ್ತದೆ. ಟಿಗೂರ್ ಇವಿ ವಾಣಿಜ್ಯ ಬಳಕೆಗೆ ರೂ.12.49 ಲಕ್ಷ ಆರಂಭಿಕ ಬೆಲೆಯಲ್ಲಿ ಸಿಗಲಿದ್ದು, ಫುಲ್ ಚಾರ್ಜಿನಲ್ಲಿ 315 km ರೇಂಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, August 30, 2023, 8:35 [IST]
English summary
Tata reveals new brand identity electric vehicles sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+