Tata Safari: ಏನ್ರೀ ಇದರ ಗುಣಮಟ್ಟ... ಏರ್‌ಬ್ಯಾಗ್ ತೆರದುಕೊಳ್ಳದಿದ್ರೂ ಗಾಯಗಳೊಂದಿಗೆ ಪಾರಾದ ಚಾಲಕ!
ಟಾಟಾ ಕಾರುಗಳು ಮೊದಲಿನಿಂದಲೂ ಅವುಗಳ ನಿರ್ಮಾಣ ಗುಣಮಟ್ಟಕ್ಕೆ ಜನಪ್ರಿಯವಾಗಿವೆ. ಇತ್ತೀಚೆಗೆ ನಡೆದ ಬಸ್ ಹಾಗೂ ಟಾಟಾ ಸಫಾರಿ ನಡುವಿನ ಭೀಕರ ಅಪಘಾತದಲ್ಲಿ ಸಫಾರಿ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಅಪಘಾತದಲ್ಲಿ ಏರ್‌ಬ್ಯಾಗ್‌ಗಳು ತೆರೆದುಕೊಳ್ಳದಿರಲು ಕಾರಣ ಕೂಡ ಇದೆ. ಆ ಕುರಿತು ವಿವಿರವಾಗಿ ಈ ಲೇಖನದಲ್ಲಿ ನೋಡೋಣ.
ಘಟನೆಯು ಜಮ್ಮು-ರಜೌರಿ-ಪೂಂಚ್ ಹೆದ್ದಾರಿಯ ಲಂಬೇರಿ ಪ್ರದೇಶದ ಬಳಿ ಸಂಭವಿಸಿದೆ. ಟಾಟಾ ಸಫಾರಿ ಮತ್ತು ಬಸ್ ನಡುವಿನ ಈ ಅಪಘಾತದಲ್ಲಿ ಎಸ್‌ಯುವಿಯ ಬದಿಗಳು ಛಿದ್ರಗೊಂಡಿವೆ. ಆದರೂ ಸಫಾರಿ ಚಾಲಕ ಗಾಯಗಳೊಂದಿಗೆ ಪಾರಾಗಿರುವುದು ಕಾರಿನ ನಿರ್ಮಾಣ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ವರದಿಗಳ ಪ್ರಕಾರ, ಬಸ್ ಚಾಲಕನ ಅತಿರೇಕದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಾಲಾಗಿದೆ.

ಆಗಿದ್ದೇನು?: ಅಪಘಾತವಾದ ರಸ್ತೆಯಲ್ಲಿ ವಾಹನಗಳ ಸುರಕ್ಷಿತ ಸಂಚಾರಕ್ಕಾಗಿ ಸ್ಥಳೀಯ ಅಧಿಕಾರಿಗಳು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಹಾಗಾಗಿ ಮಾರ್ಗದಲ್ಲಿ ಬಹುತೇಕ ರಸ್ತೆಯನ್ನು ಬ್ಯಾರಿಕೇಡ್‌ಗಳು ಆವರಿಸಿದ್ದವು. ಇಂತಹ ರಸ್ತೆಗಳಲ್ಲಿ ನಿಧಾನವಾಗಿ ಚಲಿಸಬೆಕಿದ್ದ ಬಸ್ ಚಾಲಕ ಅತಿವೇಗದಲ್ಲಿದ್ದ, ಕಾರಣ ಚಾಲಕನಿಗೆ ನಿಯಂತ್ರಿಸಲು ಸಾಧ್ಯವಾಗದೆ ನಿರ್ಮಾಣ ಹಂತದ ಮೇಲ್ಸೇತುವೆಯ ಪಿಲ್ಲರ್ ನಡುವೆ ಸಿಲುಕಿ ಟಾಟಾ ಸಫಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಈ ಭೀಕರ ಅಪಘಾತದಲ್ಲಿ ಗೋಡೆ ಹಾಗೂ ಬಸ್ ನಡುವೆ ಸಿಲುಕಿ ಟಾಟಾ ಸಫಾರಿ ಬದಿಗಳು ಛಿದ್ರಗೊಂಡಿವೆ. ಈ ಮಟ್ಟದ ಭೀಕರ ಅಪಘಾತದಲ್ಲೂ ಕಾರಿನಲ್ಲಿ ಏರ್‌ಬ್ಯಾಗ್‌ಗಳು ತೆರದುಕೊಂಡಿಲ್ಲ, ಆದ್ರೂ ಸಫಾರಿ ಚಾಲಕ ಕೆಲವು ಗಾಯಗಳಿಂದ ಪಾರಾಗಿದ್ದಾನೆ. ಇನ್ನು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಸಫಾರಿ ಚಾಲಕನನ್ನು ಮಾತ್ರ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಏರ್‌ಬ್ಯಾಗ್ ಏಕೆ ತೆರೆದುಕೊಂಡಿಲ್ಲ?: ಈ ಅಪಘಾತದಲ್ಲಿ ಡಿಕ್ಕಿಯ ಪರಿಣಾಮವು ಎಸ್‌ಯುವಿಯ ಮುಂಭಾಗದಲ್ಲಿ ಇಲ್ಲದ ಕಾರಣ ಏರ್ ಬ್ಯಾಗ್‌ಗಳು ತೆರೆದುಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ಜೊತೆಗೆ ಅಪಘಾತದಲ್ಲಿ ಸಿಲುಕಿರುವ ವೇರಿಯೆಂಟ್ ಸೈಡ್ ಏರ್ ಬ್ಯಾಗ್‌ಗಳನ್ನು ಪಡೆಯುವುದಿಲ್ಲ ಹಾಗಾಗಿ ಚಾಲಕನಿಗೆ ಗಾಯಗಳಾಗಿವೆ. ಆದರೂ ಈ ಮಟ್ಟದ ಭೀಕರ ಅಪಘಾತದಲ್ಲಿ ಚಾಲಕ ಬದುಕುಳಿದಿರುವುದು ಆತನ ಅದೃಷ್ಟವೆಂದೇ ಹೇಳಬಹುದು.
ಸಫಾರಿ ಮತ್ತು ಹ್ಯಾರಿಯರ್ ಪರೀಕ್ಷೆಗೆ ಒಳಗಾಗಬೇಕಿದೆ: ಟಾಟಾ ಮೋಟಾರ್ಸ್ ಸಫಾರಿ ಮತ್ತು ಹ್ಯಾರಿಯರ್ ಕಾರುಗಳನ್ನು ಕ್ರ್ಯಾಶ್ ಟೆಸ್ಟ್‌ಗೆ ಕಳುಹಿಸದಿರುವ ಕಾರಣವನ್ನು ಇನ್ನು ಬಹಿರಂಗಪಡಿಸಿಲ್ಲ. ಒಂದು ವೇಳೆ ಅಪಘಾತವಾದರೆ ಟಾಟಾ ಹ್ಯಾರಿಯರ್‌ನಲ್ಲಿರುವ ಮಲ್ಟಿಜೆಟ್ ಎಂಜಿನ್ ಬಲಗೈ ಡ್ರೈವ್ ವಾಹನಗಳ ಕ್ಯಾಬಿನ್‌ಗೆ ಸಂಭಾವ್ಯವಾಗಿ ಒಳನುಗ್ಗಿ ಚಾಲಕನಿಗೆ ಗಾಯವನ್ನು ಉಂಟುಮಾಡಬಹುದು ಎಂದು ತಜ್ಞರು ಹೇಳುತ್ತಾರೆ.
ಸಫಾರಿ ಮತ್ತು ಹ್ಯಾರಿಯರ್ ಎರಡನ್ನೂ ಒಳಗೊಂಡಂತೆ ಕ್ರ್ಯಾಶ್ ಟೆಸ್ಟ್‌ಗಾಗಿ ಒಮೆಗಾ-ಆರ್ಕ್ ಪ್ಲಾಟ್‌ಫಾರ್ಮ್ ಆಧಾರಿತ ವಾಹನಗಳನ್ನು ಟಾಟಾ ಮೋಟಾರ್ಸ್ ಇನ್ನೂ ಕಳುಹಿಸಿಲ್ಲ. ಮೇಲೆ ತಿಳಿಸಿರುವಂತೆ ತಜ್ಞರ ಅಭಿಪ್ರಾಯವು ಕೂಡ ಟಾಟಾ ಹ್ಯಾರಿಯರ್ ಅನ್ನು ಸುರಕ್ಷತಾ ಪರೀಕ್ಷೆಗೆ ಕಳುಹಿಸದಿರಲು ಪ್ರಮುಖ ಕಾರಣವಾಗಿರಬಹುದು. ಇದರ ಹೊರತಾಗಿಯೂ, ಟಾಟಾ ಹ್ಯಾರಿಯರ್ ಹಲವಾರು ಅಪಘಾತಗಳಲ್ಲಿ ಅದರ ಅತ್ಯುತ್ತಮ ನಿರ್ಮಾಣ ಗುಣಮಟ್ಟವನ್ನು ಪ್ರದರ್ಶಿಸಿದೆ.
ಹೆಚ್ಚಿನ ಅಪಘಾತಗಳಲ್ಲಿ, ಪ್ರಯಾಣಿಕರು ಅಪಘಾತದಿಂದ ಯಾವುದೇ ಹಾನಿಯಾಗದಂತೆ ಹೊರಬಿದ್ದಿದ್ದಾರೆ. ಹ್ಯಾರಿಯರ್ ಮತ್ತು ಸಫಾರಿ ಎರಡೂ ಫಿಯೆಟ್‌ನಿಂದ ಪಡೆದ ಅದೇ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಒಳಗೊಂಡಿವೆ. ಇದು ಭಾರತದಲ್ಲಿ ಜೀಪ್ ಕಂಪಾಸ್ ಮತ್ತು ಎಂಜಿ ಹೆಕ್ಟರ್‌ನಲ್ಲಿಯೂ ಲಭ್ಯವಿದೆ. ಈ ಸಫಾರಿ ಅಪಘಾತದ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications