Tata: ಟಾಟಾ ಸಫಾರಿ ಫೇಸ್‌ಲಿಫ್ಟ್ ಸ್ಮಾರ್ಟ್ (ಒ) ರೂಪಾಂತರ ಡೀಲರ್‌ಶಿಪ್‌ಗೆ ಬಂತು.. ಈ ವೈಶಿಷ್ಟ್ಯವಿಲ್ಲ

ಟಾಟಾ ಮೋಟಾರ್ಸ್ (Tata Motors) ಅಕ್ಟೋಬರ್ ತಿಂಗಳು ನವೀಕರಿಸಿದ ಸಫಾರಿ (Safari facelift) ಎಸ್‌ಯುವಿಯನ್ನು ದೇಶೀಯ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಹೊರ ಹಾಗೂ ಒಳಭಾಗದಲ್ಲಿ ಬದಲಾವಣೆಯನ್ನು ಹೊಂದಿರುವ ಈ ಕಾರು, ರೂ.16.19 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ.

ಇದೀಗ, ನವೀಕರಿಸಿದ ಸಫಾರಿಯ ಮೂರು ಸಾಲಿನ ಸ್ಮಾರ್ಟ್ (ಒ) ರೂಪಾಂತರವು ದೇಶಾದ್ಯಂತ ಡೀಲರ್‌ಶಿಪ್‌ಗಳಿಗೆ ಬರಲು ಶುರುವಾಗಿದೆ. ನೂತನ ಟಾಟಾ ಸಫಾರಿ, ಪ್ಯೂರ್ (ಒ), ಅಡ್ವೆಂಚರ್, ಅಡ್ವೆಂಚರ್ ಪ್ಲಸ್, ಅಡ್ವೆಂಚರ್ ಪ್ಲಸ್ ಡಾರ್ಕ್, ಅಕಾಂಪ್ಲಿಶ್ಡ್ ಸೇರಿದಂತೆ 10 ರೂಪಾಂತರ ಹಾಗೂ 7 ಬಣ್ಣದ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

Tata: ಟಾಟಾ ಸಫಾರಿ ಫೇಸ್‌ಲಿಫ್ಟ್ ಸ್ಮಾರ್ಟ್ (ಒ) ರೂಪಾಂತರ ಡೀಲರ್‌ಶಿಪ್‌ಗೆ ಬಂತು.. ಈ ವೈಶಿಷ್ಟ್ಯವಿಲ್ಲ

ಶೋರೂಂಗಳಿಗೆ ತಲುಪಲು ಆರಂಭಿಸಿರುವ ಟಾಟಾ ಸಫಾರಿ ಸ್ಮಾರ್ಟ್ (ಒ) ವೇರಿಯೆಂಟ್ ರೂ.16.69 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ವೈಶಿಷ್ಟ್ಯದ ವಿಚಾರವಾಗಿ ಹೇಳುವುದಾದರೆ, ಈ ಕಾರು, 6 ಏರ್‌ಬ್ಯಾಗ್‌, ಟಿಲ್ಟ್ & ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಹೈಟ್ ಅಡ್ಜಸ್ಟ್ಏಬಲ್ ಡ್ರೈವರ್ & ಕೋ ಪ್ಯಾಸೆಂಜರ್ ಸೀಟ್, 4 ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

ಇದರೊಟ್ಟಿಗೆ, ,ಸೆಂಟ್ರಲ್ ಲಾಕಿಂಗ್, ಪವರ್ ವಿಂಡೋ, ಕನೆಕ್ಟ್ದ್ ಎಲ್ಇಡಿ DRL ಮತ್ತು ಟೈಲ್‌ಲೈಟ್‌, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಲೆಕ್ಟ್ರಿಕಲಿ ಅಡ್ಜಸ್ಟ್ಏಬಲ್ ORVMs, ಮೂರನೇ ಸಾಲಿನಲ್ಲೂ ಎಸಿ ವೆಂಟ್ಸ್, ಬಾಸ್ ಮೋಡ್ ವೈಶಿಷ್ಟ್ಯವನ್ನು ಪಡೆದಿದೆ. ಆದರೆ, ಈ ಕಾರು ಎಲ್ಲರ ನೆಚ್ಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ (Infotainment System) ಅನ್ನು ಕಳೆದುಕೊಂಡಿದೆ.

Tata: ಟಾಟಾ ಸಫಾರಿ ಫೇಸ್‌ಲಿಫ್ಟ್ ಸ್ಮಾರ್ಟ್ (ಒ) ರೂಪಾಂತರ ಡೀಲರ್‌ಶಿಪ್‌ಗೆ ಬಂತು.. ಈ ವೈಶಿಷ್ಟ್ಯವಿಲ್ಲ

ಸಫಾರಿ ಫೇಸ್‌ಲಿಫ್ಟ್ ಸ್ಮಾರ್ಟ್ (ಒ) ರೂಪಾಂತರದ ಎಂಜಿನ್ ಯಾವುದೇ ರೀತಿಯಲ್ಲಿ ಬದಲಾಗಿಲ್ಲ. ಇದು 2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 170 PS ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 - ಸ್ವೀಡ್ ಮ್ಯಾನುವಲ್/ 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಗ್ರಾಹಕರಿಗೆ ಸಿಗಲಿದ್ದು, 16.30 ಕಿ.ಮೀ ಮೈಲೇಜ್ ಕೊಡಲಿದೆ.

ಸಫಾರಿ ಫೇಸ್‌ಲಿಫ್ಟ್ ಜೊತೆಯಲ್ಲಿ ಬಿಡುಗಡೆಯಾದ ನವೀಕರಿಸಿದ ಹ್ಯಾರಿಯರ್ (Harrier facelift) ಎಸ್‌ಯುವಿ ಬಗ್ಗೆ ಮಾತನಾಡುವುದಾದರೆ, ಇದು, ರೂ.15.49 ಲಕ್ಷದಿಂದ ರೂ.24.49 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಲೂನಾರ್ ವೈಟ್, ಪೆಬಲ್ ಗ್ರೇ, ಸನ್ಲೈಟ್ ಯೆಲ್ಲೋ ಮತ್ತು ಕೊರಲ್ ರೆಡ್ ಸೇರಿದಂತೆ 6 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.

Tata: ಟಾಟಾ ಸಫಾರಿ ಫೇಸ್‌ಲಿಫ್ಟ್ ಸ್ಮಾರ್ಟ್ (ಒ) ರೂಪಾಂತರ ಡೀಲರ್‌ಶಿಪ್‌ಗೆ ಬಂತು.. ಈ ವೈಶಿಷ್ಟ್ಯವಿಲ್ಲ

ನವೀಕರಿಸಿದ ಹ್ಯಾರಿಯರ್ 2.0 - ಲೀಟರ್ ಡೀಸೆಲ್ ಎಂಜಿನ್ ಒಳಗೊಂಡಿದ್ದು, 170 hp ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 6 - ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.

ಹ್ಯಾರಿಯರ್ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, 10.25 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೊಸದಾದ 4- ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ - ಝೋನ್ ಕ್ಲೈಮೇಟ್ ಕಂಟ್ರೋಲ್, 10 - ಸ್ಪೀಕರ್ ಜೆಬಿಎಲ್ - ಟ್ಯೂನ್ಡ್ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 5 - ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದ್ದು, 7 ಏರ್‌ಬ್ಯಾಗ್‌ ಒಳಗೊಂಡಂತೆ ಹತ್ತಾರು ಸೇಫ್ಟಿ ಫೀಚರ್ಸ್ ಇವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, December 7, 2023, 18:32 [IST]
English summary
Tata safari facelift smart o variant arrives dealershi this feature misses out
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+