ಗುಣಮಟ್ಟದಲ್ಲಿ ಟಾಟಾಗಿಲ್ಲ ಸಾಟಿ... ಟ್ರಕ್‌ನೊಂದಿಗೆ ಭೀಕರ ಅಪಘಾತವಾದ್ರು ಬದುಕುಳಿದ ಸಫಾರಿ ಮಾಲೀಕ
ಭಾರತದ ಜನಪ್ರಿಯ ಹಾಗೂ ಸ್ವದೇಶಿ ನಿರ್ಮಿತ ಕಂಪನಿಯೆಂದು ಹೆಸರು ಮಾಡಿರುವ ಟಾಟಾ ಮೋಟಾರ್ಸ್ ತನ್ನ ಕಾರುಗಳ ನಿರ್ಮಾಣ ಗುಣಮಟ್ಟದಲ್ಲಿ ಅಗ್ರಸ್ಥಾನದಲ್ಲಿದೆ. ಹಾಗಾಗಿಯೇ ಟಾಟಾ ಕಾರುಗಳ ಅಪಘಾತ ವರದಿಗಳು ಕೂಡಲೇ ಸಖತ್ ವೈರಲ್ ಆಗುತ್ತವೆ. ಎಷ್ಟೇ ಭೀಕರ ಅಪಘಾತವಾದರೂ ಪ್ರಯಾಣಿಕರು ಸುರಕ್ಷಿತವಾಗಿರುತ್ತಾರೆ ಎಂಬ ನಂಬಿಕೆ ಇದೀಗ ಮತ್ತೊಮೆ ಸಾಭೀತಾಗಿದೆ.
ಟಾಟಾ ಸಫಾರಿ ಮತ್ತು ಹ್ಯಾರಿಯರ್ ಇನ್ನೂ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೆ ಒಳಪಟ್ಟಿಲ್ಲ. ಆದರೂ ಈ ಹಿಂದೆ ಅನೇಕ ಅಪಘಾತಗಳಲ್ಲಿ ಈ ಮಾದರಿಗಳು ನಿರ್ಮಾಣ ಗುಣಮಟ್ಟವನ್ನು ಪ್ರದರ್ಶಿಸಿವೆ. ಈಗಲೂ ಅಂತಹದೇ ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇತ್ತಿಚೆಗೆ ಟಾಟಾ ಸಫಾರಿ ಮಾಲೀಕರೊಬ್ಬರು ಇಟ್ಟಿಗೆ ತುಂಬಿದ ಟ್ರಕ್‌ನೊಂದಿಗೆ ನಡೆದ ಭಾರಿ ಅಪಘಾತದಲ್ಲಿ ಬದುಕುಳಿದಿದ್ದಾರೆ. ಈ ಕುರಿತ ವಿಡಿಯೋವನ್ನು ಜರ್ನಿ ವಿಥ್ ಕಾರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಈ ವಿಡಿಯೋವನ್ನು ಒಂದು ತಿಂಗಳ ಹಿಂದೆ ಅಪ್‌ಲೋಡ್ ಮಾಡಲಾಗಿದೆ. ವಿಡಿಯೋ ಪ್ರಕಾರ, ಇಟ್ಟಿಗೆ ತುಂಬಿದ್ದ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದಂತಿದೆ, ಅಪಘಾತ ಸಂಭವಿಸಿದ ಸ್ಥಳವನ್ನು ವಿಡಿಯೋದಲ್ಲಿ ತೋರಿಸಿಲ್ಲ. ವಿಡಿಯೋ ಪ್ರಕಾರ ಕಾರಿನಲ್ಲಿದ್ದವರು ಸುರಕ್ಷಿತವಾಗಿದ್ದಾರೆ. ಕಾರಿನ ಹಿಂಬದಿ ಭಾಗ ಸಂಪೂರ್ಣ ಜಖಂಗೊಂಡಿದ್ದು, ಕಾರಿನ ಬೂಟ್ ಮತ್ತು ಮೂರನೇ ಸಾಲು ಛಿದ್ರಗೊಂಡಿದೆ. ಈ SUV ಅನ್ನು ಹಿಂಭಾಗದಿಂದ ಬಹುತೇಕ ಗುರುತಿಸಲಾಗುವುದಿಲ್ಲ.
ವಿಡಿಯೋವನ್ನು ರೆಕಾರ್ಡ್ ಮಾಡುವ ವ್ಯಕ್ತಿಯು ಪ್ರಯಾಣಿಕರ ಬಗ್ಗೆ ಕೇಳುವುದನ್ನು ನೋಡಬಹುದು, ಅದಕ್ಕೆ ಸ್ಥಳೀಯರೊಬ್ಬರು ಪ್ರತಿಕ್ರಿಯಿಸುವ ಮೂಲಕ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳುತ್ತಾರೆ. ಟ್ರಕ್ ನಿಯಂತ್ರಣ ತಪ್ಪಿ ಸಫಾರಿಗೆ ಡಿಕ್ಕಿ ಹೊಡೆದಿದೆಯೇ ಅಥವಾ ಸಫಾರಿ ಚಾಲಕ ಅತಿರೇಕದಿಂದ ಚಾಲನೆ ಮಾಡಿದ್ದರಿಂದ ಅಪಘಾತ ಸಂಭವಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಬೂಟ್‌ನಲ್ಲಿ ಸ್ವಲ್ಪ ಸಾಮಾನು ಇದ್ದಂತೆ ತೋರುತ್ತಿದ್ದು, ಅಪಘಾತದ ಪರಿಣಾಮವು ಎಸ್‌ಯುವಿಯ ಹಿಂಭಾಗವನ್ನು ನುಜ್ಜುಗುಜ್ಜುಗೊಳಿಸಿದೆ.
SUV ಯ ಮುಂಭಾಗದಲ್ಲಿ ಯಾವುದೇ ಹಾನಿಯಾಗಿಲ್ಲ, ಬೂಟ್ ಜೊತೆಗೆ ಹಿಂಭಾಗದ ಬಾಗಿಲು ಮತ್ತು ಪಿಲ್ಲರ್‌ಗಳು ಸಹ ಹಾನಿಗೊಳಗಾಗಿವೆ. ಕಾರಿನೊಳಗೆ ಇರುವವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತಕ್ಕೆ ಕಾರಣವಾದ ಟ್ರಕ್ ಈ ವಿಡಿಯೋದಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ. ಟ್ರಕ್ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದೆಯೇ ಎಂಬುದು ತಿಳಿದುಬಂದಿಲ್ಲ. ಇತ್ತೀಚೆಗೆ ನಡೆದ ಮತ್ತೊಂದು ಪ್ರಕರಣದಲ್ಲಿ ಟಾಟಾ ಸಫಾರಿ ಹೆದ್ದಾರಿಲ್ಲಿ 130 ಕಿ.ಮೀ ವೇಗದಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ಬಳಿಕ ಪ್ರಯಾಣಿಕರು ಗಾಯಗಳೊಂದಿಗೆ ಅಪಘಾತದಿಂದ ಪಾರಾಗಿದ್ದರು.
ಗಂಟೆಗೆ ಸುಮಾರು 130 ಕಿಮೀ ವೇಗದಲ್ಲಿ ನುಗ್ಗಿ ಬರುತ್ತಿದ್ದ ಟಾಟಾ ಸಫಾರಿ ತನ್ನ ಮುಂದೆ ಇದ್ದಂತಹ ಟ್ರಕ್‌ನ ಹಿಂಬಾಗಕ್ಕೆ ವೇಗವಾಗಿ ಡಿಕ್ಕಿ ಹೊಡೆದಿದೆ. ಈ ಅಪಘಾತದ ತಿವ್ರತೆ ಎಷ್ಟಿತ್ತೆಂದರೆ, ಟಾಟಾ ಸಫಾರಿ ಗುದ್ದಿದ ರಭಸಕ್ಕೆ ಆ ಟ್ರಕ್‌ನ ಹಿಂಭಾಗದ ಟೈರ್‌ಗಳು ಆಕ್ಸಿಲ್ ಸಮೇತ ಹೆದ್ದಾರಿಯಲ್ಲಿ ಕಳಚಿ ಬಿದ್ದಿದೆ. ಅಪಘಾತಕ್ಕೀಡಾದ ಕಾರು ನುಜ್ಜುಗುಜ್ಜಾಗಿದ್ದು, ಕಾರಿನ ಡ್ರೈವರ್ ಪಕ್ಕ ಕೂತಿದ್ದ ಸಹ ಚಾಲಕನಿಗೆ ಕೊಂಚ ಹೆಚ್ಚು ಗಾಯಗಳಾಗಿದ್ದರೂ, ಕಾರಿನಲ್ಲಿದ್ದ ಮೂರೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು.
ಹ್ಯಾರಿಯರ್ ಮತ್ತು ಸಫಾರಿ ಹೊರತುಪಡಿಸಿ ಟಾಟಾ ತಮ್ಮ ಎಲ್ಲಾ ವಾಹನಗಳನ್ನು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೆ ಕಳುಹಿಸಿದೆ. ಈ ಎರಡೂ SUV ಗಳು ಫಿಯೆಟ್-ಮೂಲದ ಕೆಲವು ಎಂಜಿನ್ ಭಾಗಗಳನ್ನು ಹೊಂದಿವೆ ಎಂದು ಸೂಚಿಸುವ ವರದಿಗಳಿವೆ. ಅವು SUV ಗಳ ಕ್ಯಾಬಿನ್‌ಗೆ ವಿಶೇಷವಾಗಿ ಚಾಲಕ ಬದಿಯಲ್ಲಿ ಒಳನುಗ್ಗಬಹುದು. ಇದು ಈ SUV ಗಳ ರೇಟಿಂಗ್ ಅನ್ನು ಕಡಿಮೆ ಮಾಡುವ ಸಾಧ್ಯತೆಯೂ ಇದೆ. ಈ ಬಗ್ಗೆ ಟಾಟಾ ಇನ್ನೂ ಏನನ್ನೂ ಹೇಳಿಲ್ಲ. ಇದರ ಹೊರತಾಗಿ, ಸಫಾರಿ ಮತ್ತು ಹ್ಯಾರಿಯರ್ ಎರಡರ ಒಟ್ಟಾರೆ ನಿರ್ಮಾಣ ಗುಣಮಟ್ಟವು ಅದ್ಭುತವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications