Tata Sumo ಬಗ್ಗೆ ನೀವೆಂದೂ ಕೇಳಿರದ ವಿಷಯಗಳು... ಸುಮೋ ಹೆಸರು ಯಾರದು ಗೊತ್ತಾ?
ವಾಹನ ಜಗತ್ತಿನಲ್ಲಿ ನಾವು ಮರೆಯಲಾಗದ ಕೆಲವು ವಾಹನಗಳಿದ್ದರೇ ಅವುಗಳಲ್ಲಿ ಟಾಟಾ ಸುಮೋ ಕೂಡ ಒಂದು. ಸುಮೋ MUV ಟಾಟಾ ಮೋಟಾರ್ಸ್‌ನ ಪ್ರಮುಖ ಉತ್ಪನ್ನಗಳಲ್ಲಿ ಒಂದಾಗಿತ್ತು, ಬರೋಬ್ಬರಿ 25 ವರ್ಷಗಳ ಕಾಲ ಮಾರುಕಟ್ಟೆಯಲ್ಲಿ ತನ್ನ ಉಳಿವನ್ನು ಉಳಿಸಿಕೊಂಡಿತ್ತು. ಈ ವಾಹನ ಕುರಿತ ಟಾಪ್- 5 ಆಸಕ್ತಿದಾಯಕ ವಿಷಯಗಳನ್ನು ಇಲ್ಲಿ ನೋಡೋಣ.
ಟಾಟಾ ಮೋಟಾರ್ಸ್ ಸುಮೋವನ್ನು 1990 ರ ದಶಕದ ಮಧ್ಯಭಾಗದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಅಂದಿನ ಕಾಲಕ್ಕೆ ಕಾರು ತ್ವರಿತವಾಗಿ ಸಾಕಷ್ಟು ಜನಪ್ರಿಯತೆ ಗಳಿಸಿತು. ಯಾವ ಮಟ್ಟಿಗೆ ಅಂದ್ರೆ ಟಾಟಾ ಮೋಟಾರ್ಸ್ ಕೇವಲ 3 ವರ್ಷಗಳಲ್ಲಿ ಬರೋಬ್ಬರಿ 1 ಲಕ್ಷ ಯೂನಿಟ್ ಕಾರುಗಳನ್ನು ಮಾರಾಟ ಮಾಡಿದ್ದರು. ಬಳಿಕ 25 ವರ್ಷಗಳ ಸುಧೀರ್ಘ ಸೇವೆಯ ನಂತರ 2019ರಲ್ಲಿ ಸ್ಥಗಿತಗೊಂಡಿತು.

ಟಾಟಾ ಸುಮೋ ದೇಶದಲ್ಲಿ ಕಟ್ಟುನಿಟ್ಟಾದ ಕ್ರ್ಯಾಶ್ ಟೆಸ್ಟ್ ಮತ್ತು ಸುರಕ್ಷತಾ ಮಾನದಂಡಗಳನ್ನು ಪೂರೈಸಲು ವಿಫಲವಾದ ಕಾರಣ ಕಂಪನಿಯು ಅಂತಿಮವಾಗಿ ಅದರ ಉತ್ಪಾದನೆಯನ್ನು 2019 ರಲ್ಲಿ ನಿಲ್ಲಿಸಬೇಕಾಯಿತು. ಒಮ್ಮೆ ಊಹಿಸಿ ಒಂದು ಕಾರು ಮಾದರಿ ಬರೋಬ್ಬರಿ 25 ವರ್ಷಗಳು ಭಾರತೀಯರನ್ನು ಮೆಚ್ಚಿಸಿದೆ ಅಂದ್ರೆ ಅದರ ಬಗ್ಗೆ ಗ್ರಾಹಕರಿಗೆ ಎಷ್ಟು ಒಲಿವಿದೆ ಎಂದು, ಇಂತಹ ಕಾರಿನ ಯಾರಿಗೂ ತಿಳಿಯದ ಕೆಲ ವಿಷಯಗಳಿವೆ.
1. ಮೂಲ: ಟಾಟಾ ಸುಮೊವನ್ನು 1994 ರಲ್ಲಿ ಹತ್ತು ಆಸನಗಳ ಹಿಂಬದಿ-ಚಕ್ರ ಡ್ರೈವ್ MUV ಆಗಿ ಬಿಡುಗಡೆ ಮಾಡಲಾಯಿತು. ಸುಮೋ ಟಾಟಾ X2 ಬಾಡಿ-ಆನ್-ಫ್ರೇಮ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿತ್ತು. ರಿಯರ್-ವೀಲ್-ಡ್ರೈವ್ ಆವೃತ್ತಿಯು ನಾಗರಿಕರಿಗೆ ಮೀಸಲಾಗಿತ್ತು, ಜೊತೆಗೆ ಆಲ್-ವೀಲ್-ಡ್ರೈವ್ ರೂಪಾಂತರವು ಸಹ ಲಭ್ಯವಿತ್ತು. ಇದನ್ನು ಫ್ಲೀಟ್ ಮತ್ತು ಭಾರತೀಯ ಸೇನೆಗೆ ಮಾತ್ರ ನೀಡಲಾಗಿತ್ತು.

2. ಹೆಸರು: ಮೊದಲಿಗೆ ಸುಮೋ ಎಂಬ ಹೆಸರು ಹೇಗೆ ಬಂತು ಗೊತ್ತಾ? ಟಾಟಾ ಕಂಪನಿಯ ಮಾಜಿ ಮ್ಯಾನೇಜಿಂಗ್ ಡೈರೆಕ್ಟರ್ ಆದ ಶ್ರೀ ಸುಮಂತ್ ಮೂಲ್ಗಾವ್ಕರ್ ಅವರ ಹೆಸರಿನಿಂದ ಟಾಟಾ ಸುಮೋ ತನ್ನ ಹೆಸರನ್ನು ಪಡೆದುಕೊಂಡಿದೆ. 'ಸು'ಮಂತ್ 'ಮೂ'ಲ್ಗಾವ್ಕರ್ ಅವರ ಮೊದಲ ಮತ್ತು ಕೊನೆಯ ಹೆಸರಿನ ಮೊದಲ ಎರಡು ಉಚ್ಚಾರಾಂಶಗಳನ್ನು ಸಂಯೋಜಿಸಿ ಸುಮೋ ಎಂಬ ಹೆಸರು ನೀಡಲಾಗಿದೆ.
3. ಭಾರತೀಯ ಸೇನೆ: ಟಾಟಾ ಸಫಾರಿ ಸ್ಟ್ರೋಮ್‌ನಂತೆಯೇ, ಸುಮೋ ಸಹ ಅದರ ದೃಢವಾದ ದೇಹ, ಆಲ್-ವೀಲ್-ಡ್ರೈವ್ ಸಿಸ್ಟಮ್ ಮತ್ತು ಬಹು ಆಸನಗಳ ವಿನ್ಯಾಸದ ಕಾರಣದಿಂದಾಗಿ ನಿರ್ದಿಷ್ಟ ಸಮಯದವರೆಗೆ ಭಾರತೀಯ ಸೇನೆಗೆ ಸೇವೆ ಸಲ್ಲಿಸಿತು. ಭಾರತೀಯ ಸೇನೆಯಷ್ಟೇ ಅಲ್ಲ, ಟಾಟಾ ಸುಮೋ ದೇಶದಲ್ಲಿ ಆಂಬ್ಯುಲೆನ್ಸ್ ಆಗಿ ಸಾಕಷ್ಟು ಜನಪ್ರಿಯ ಆಯ್ಕೆಯಾಗಿತ್ತು.

4. ವರ್ಷಗಳಲ್ಲಿ ನವೀಕರಣ: ಟಾಟಾ ಸುಮೋ ಜೀವಿತಾವಧಿಯಲ್ಲಿ, ಅನೇಕ ಫೇಸ್‌ಲಿಫ್ಟ್‌ಗಳನ್ನು ಪಡೆದಿದೆ. ಎಲ್ಲಾ ಮಾದರಿಗಳು ತನ್ನ ಹಳೆಯ ಮಾದರಿಗಳಿಗಿಂತ ವಿಶಿಷ್ಟವಾದ ಜನಪ್ರಿಯತೆ ಪಡೆದುಕೊಂಡವು. ಮೊದಲ ಫೇಸ್‌ಲಿಫ್ಟ್ ಅನ್ನು 2000 ರಲ್ಲಿ ಪರಿಚಯಿಸಿದಾಗ ಸುಮೋ ಸ್ಪೇಸಿಯೊ ಎಂದು ಕರೆಯಲಾಯಿತು. ಎರಡನೇ ಅಪ್‌ಡೇಟ್‌ಗೆ ಸುಮೋ ವಿಕ್ಟಾ ಎಂದು ಹೆಸರಿಸಲಾಯಿತು.
ಇದೇ ಮಾದರಿ ಸುಮಾರು 2004 ರಿಂದ ಹಿಡಿದು 2011 ರವರೆಗೆ ಸೇವೆ ಸಲ್ಲಿಸಿತು. ಇದಾದ ಬಳಿಕ ಬಂದ ಹಾಗೂ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾದ ಕೊನೆಯ ಆವೃತ್ತಿಯೆಂದರೆ ಸುಮೋ ಗೋಲ್ಡ್, ಇದನ್ನು 2012 ರಲ್ಲಿ ಬಿಡುಗಡೆ ಮಾಡಲಾಯಿತು. ಇದು ಸುಧೀರ್ಘ ಕಾಲ ಮಾರಾಟದಲ್ಲಿದ್ದು ಕೊನೆಗೆ 2019 ರಲ್ಲಿ ನಿಲ್ಲಿಸಲಾಯಿತು.

5. ಸರಿಯಾದ ಉತ್ತರಾಧಿಕಾರಿ: ಸುಮೋವನ್ನು ನಿಯಮಿತವಾಗಿ ನವೀಕರಿಸಲಾಗಿದ್ದರೂ, ಇದು 2008 ರಲ್ಲಿ ಸರಿಯಾದ ಉತ್ತರಾಧಿಕಾರಿಯನ್ನು ಪಡೆಯಿತು, ಇದನ್ನು ಸಂಪೂರ್ಣವಾಗಿ ಹೊಸ ಬಾಡಿವರ್ಕ್ ಮತ್ತು ಹೊಸ 2.2-ಲೀಟರ್ ಡಿಕೋರ್ ಡೀಸೆಲ್ ಎಂಜಿನ್‌ನೊಂದಿಗೆ 'ಟಾಟಾ ಸುಮೋ ಗ್ರಾಂಡೆ' ಎಂದು ಬಿಡುಗಡೆ ಮಾಡಲಾಯಿತು.
ಇಂದು ಭಾರತದಲ್ಲಿ ಅನೇಕರು ಟಾಟಾ ಸುಮೋದೊಂದಿಗೆ ತಮ್ಮ ಬಾಲ್ಯದ ನೆನಪುಗಳನ್ನು ಹೊಂದಿದ್ದಾರೆ. ಆದ್ದರಿಂದ, ನಾವು ಟಾಟಾ ಸುಮೊದ ಬಗ್ಗೆ 5 ಆಸಕ್ತಿದಾಯಕ ಸಂಗತಿಗಳನ್ನು ನಿಮಗೆ ತಿಳಿಸಿಕೊಟ್ಟಿದ್ದೇವೆ. ಲೇಖನ ಓದಿದ ಎಷ್ಟು ಮಂದಿಯ ಬಳಿ ಟಾಟಾ ಸುಮೋ ಇತ್ತು ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ. ಇಲ್ಲದವರು ಸುಮೋದಲ್ಲಿ ಓಡಾಡಿದ ಸಿಹಿ ನೆನಪುಗಳನ್ನು ಹಳಚಿಕೊಳ್ಳಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications