TATA: ಜೀವ ಉಳಿಸಿದ್ದಕ್ಕೆ ಥ್ಯಾಂಕ್ಸ್ ಟಾಟಾ... ಗುಣಮಟ್ಟಕ್ಕೆ ಮೆಚ್ಚಿ ಮತ್ತದೇ ಕಾರು ಖರೀದಿಸಿದ ಮಾಲೀಕ

ನಿರ್ಮಾಣ ಗುಣಮಟ್ಟದಲ್ಲಿ ಟಾಟಾ ಕಾರುಗಳು ದೇಶದಲ್ಲಿ ಮೊದಲಿನಿಂದಲೂ ಅಗ್ರಸ್ಥಾನದಲ್ಲಿವೆ. ಟಾಟಾ ಕಾರುಗಳ ಹಲವು ಅಪಘಾತಗಳಾದರೂ ಪ್ರಯಾಣಿಕರು ಪ್ರಾಣಪಾಯದಿಂದ ಹೊರಬಿದ್ದಿದ್ದಾರೆ. ಇತ್ತೀಚೆಗೆ ವ್ಯಕ್ತಿಯೊಬ್ಬರ ಟಾಟಾ ಟಿಯಾಗೋ ಅಪಘಾತಕ್ಕೆ ಒಳಗಾಗಿ ಕಾರು ನುಜ್ಜುಗುಜ್ಜಾದರು ಮಾಲೀಕ ಪಾರಾಗಿದ್ದು, ನಿರ್ಮಾಣ ಗುಣಮಟ್ಟಕ್ಕೆ ಮೆಚ್ಚಿ ಮತ್ತೆ ಅಂಥಹದ್ದೇ ಮಾಡಲ್ ಅನ್ನು ಖರೀದಿಸಿದ್ದಾರೆ.

ಈ ಹಿಂದೆಯು ಟಾಟಾ ಕಾರುಗಳ ಅಪಘಾತಗಳ ಕುರಿತು ಡ್ರೈವ್‌ಸ್ಪಾರ್ಕ್‌ನಲ್ಲಿ ಹಲವು ಸುದ್ದಿಗಳನ್ನು ಬಿತ್ತರಿಸಲಾಗಿದೆ. ಆದರೆ ಆ ಎಲ್ಲಾ ಅಪಘಾತಗಳಲ್ಲೂ ಪ್ರಯಾಣಿಕರು ಸೇಫ್ ಆಗಿರುವುದು ವಿಶೇಷ, ಇದೀಗ ಅಂತಹದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಟಾಟಾ ಟಿಯಾಗೋ ಕಾರು ಮಾಲೀಕರಾದ ಸತ್ಯಪ್ರಕಾಶ್ ರೆಡ್ಡಿ ತಮಗಾದ ಕಾರು ಅಪಘಾತದ ಅನುಭವವನ್ನು ಹಂಚಿಕೊಂಡಿದ್ದಾರೆ. 2020 ರ ಅಕ್ಟೋಬರ್‌ನಲ್ಲಿ ಟಾಟಾ ಟಿಯಾಗೊವನ್ನು ಖರೀದಿಸಿದ್ದ ಅವರು, ಅಪಘಾತದ ಬಳಿಕ ಅದೇ ಬಣ್ಣದಲ್ಲಿ ಮತ್ತದೇ ಕಾರು ಖರೀದಿಸಿದ್ದಾರೆ.

TATA: ಜೀವ ಉಳಿಸಿದ್ದಕ್ಕೆ ಥ್ಯಾಂಕ್ಸ್ ಟಾಟಾ... ಗುಣಮಟ್ಟಕ್ಕೆ ಮೆಚ್ಚಿ ಮತ್ತದೇ ಕಾರು ಖರೀದಿಸಿದ ಮಾಲೀಕ

ಇನ್ನು ವಿಷಯಕ್ಕೆ ಬಂದರೆ, ಇತ್ತೀಚೆಗೆ ಕಾರಿನಲ್ಲಿ ತಮ್ಮ ಸ್ನೇಹಿತರೊಂದಿಗೆ ಅಹಮದಾಬಾದ್‌ನಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದಾಗ ದಾರಿಯಲ್ಲಿ ಗುಂಡಿ ಕಾಣದೆ ನಿಯಂತ್ರಣ ಕಳೆದೊಂಡಿದ್ದಾರೆ. ಬಳಿಕ ಸ್ಟೀರಿಂಗ್ ವೀಲ್ ಅನ್ನು ಇದ್ದಕ್ಕಿದ್ದಂತೆ ತಿರುಗಿಸಿದ ಕಾರಣ ಕಾರು ಅಪಘಾತಕ್ಕೆ ಒಳಗಾಗಿ ನಾಲ್ಕೈದು ಬಾರಿ ಪಲ್ಟಿ ಹೊಡೆದಿದೆ. ಟಾಟಾ ಟಿಯಾಗೋ ಕಾರಿಗೆ ಅಪಾರ ಹಾನಿಯಾಗಿ ಮೇಲ್ಛಾವಣಿ ನುಜ್ಜುಗುಜ್ಜಾಗಿತ್ತು. ಅಪಘಾತದ ನಂತರ ಸತ್ಯ ಪ್ರಜ್ಞೆ ತಪ್ಪಿ ಬಿದ್ದಿದ್ದು, ಸ್ಥಳೀಯರು ಆತನನ್ನು ರಕ್ಷಿಸಿದ್ದಾರೆ.

ಅದೃಷ್ಟವಶಾತ್ ಅವರಿಗೆ ಹೆಚ್ಚಿನ ಗಾಯಗಳಾಗಿರಲಿಲ್ಲ. ಇಬ್ಬರು ಸ್ನೇಹಿತರು ಸಣ್ಣ ಪುಟ್ಟ ಗಾಯಗೊಳೊಂದಿಗೆ ಪ್ರಾಣಾಪಾಯದಿಂದ ಹೊರಬಿದ್ದಿದ್ದಾರೆ. ಈ ಘಟನೆಯ ಬಳಿಕ ಕಾರು ಮಾಲೀಕ ಸತ್ಯ ಮಾತನಾಡಿ, ಚಾಲನೆ ವೇಳೆ ರಸ್ತೆಯ ಮೇಲೆ ನಾನು ಗಮನ ಹರಿಸಿರಲಿಲ್ಲ, ಇದ್ದಕ್ಕಿದ್ದಂತೆ ಗುಂಡಿಯನ್ನು ಕಂಡಾಗ ಸ್ಟೀರಿಂಗ್ ತಿರುಗಿಸಿದೆ, ಈ ವೇಳೆ ಕಾರು 100 ಕಿ.ಮೀ ವೇಗದಲ್ಲಿತ್ತು. ಟಾಟಾ ಕಾರಿನ ಬದಲು ಅಪಘಾತದಲ್ಲಿ ಮತ್ಯಾವುದೇ ಕಾರಿದ್ದಿದ್ದರೂ ನಾವು ಬದುಕುಳಿಯುತ್ತಿರಲಿಲ್ಲ ಎಂದು ಸತ್ಯ ಹೇಳಿದ್ದಾರೆ.

TATA: ಜೀವ ಉಳಿಸಿದ್ದಕ್ಕೆ ಥ್ಯಾಂಕ್ಸ್ ಟಾಟಾ... ಗುಣಮಟ್ಟಕ್ಕೆ ಮೆಚ್ಚಿ ಮತ್ತದೇ ಕಾರು ಖರೀದಿಸಿದ ಮಾಲೀಕ

ಟಾಟಾ ಟಿಯಾಗೊ ಗ್ಲೋಬಲ್ ಎನ್‌ಸಿಎಪಿಯಿಂದ ಹೆಚ್ಚಿನ ಸುರಕ್ಷತಾ ರೇಟಿಂಗ್‌ಗಳನ್ನು ಪಡೆದುಕೊಂಡಿದೆ. ಅನೇಕ ಟಾಟಾ ಟಿಯಾಗೊ ಮಾಲೀಕರು ತಮ್ಮ ಕಾರು ಜೀವರಕ್ಷಕ ಎಂದು ಹೇಳಿದ್ದಾರೆ. ಇದೀಗ ಸತ್ಯ ಅವರು ಕೂಡ ನಿರ್ಮಾಣ ಗುಣಮಟ್ಟದಿಂದ ಪ್ರಭಾವಿತರಾಗಿದ್ದಾರೆ. ಅಪಘಾತದ ಕೆಲವೇ ವಾರಗಳ ನಂತರ ಅವರು ಮತ್ತೊಂದು ಟಾಟಾ ಟಿಯಾಗೊವನ್ನು ಖರೀದಿಸಿದ್ದಾರೆ. ಗ್ಲೋಬಲ್ ಎನ್‌ಸಿಎಪಿ ಪ್ರಕಾರ ಟಾಟಾ ಟಿಯಾಗೊ ಆಲ್ಟ್ರೊಜ್ ನಂತರ ಭಾರತದಲ್ಲಿ ಎರಡನೇ ಸುರಕ್ಷಿತ ಹ್ಯಾಚ್‌ಬ್ಯಾಕ್ ಇದಾಗಿದೆ.

ಟಿಯಾಗೋ ಟಾಟಾದ ಪ್ರವೇಶ ಮಟ್ಟದ ಮಾದರಿಯಾಗಿದೆ. ಹ್ಯಾಚ್ ಬ್ಯಾಕ್ ಅನ್ನು ಒಮ್ಮೆ ಡೀಸೆಲ್ ಎಂಜಿನ್‌ ನೊಂದಿಗೆ ನೀಡಲಾಯಿತು, ಆದರೆ ಕಟ್ಟುನಿಟ್ಟಾದ ಹೊರಸೂಸುವಿಕೆಯ ಮಾನದಂಡಗಳ ಕಾರಣ, ಇದನ್ನು ನಿಲ್ಲಿಸಲಾಯಿತು. ಸಣ್ಣ ಫ್ಯಾಮಿಲಿ ಹ್ಯಾಚ್ ಬ್ಯಾಕ್ ಅನ್ನು ಪ್ರಸ್ತುತ 1.2 ಲೀಟರ್, 3-ಸಿಲಿಂಡರ್, ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ. ಈ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್ ಬಾಕ್ಸ್ ಎರಡರಲ್ಲೂ ಲಭ್ಯವಿದೆ. ಇದು ಡ್ಯುಯಲ್ ಏರ್‌ಬ್ಯಾಗ್‌ಗಳು, ಎಬಿಎಸ್ ಮತ್ತು ಇತರ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

TATA: ಜೀವ ಉಳಿಸಿದ್ದಕ್ಕೆ ಥ್ಯಾಂಕ್ಸ್ ಟಾಟಾ... ಗುಣಮಟ್ಟಕ್ಕೆ ಮೆಚ್ಚಿ ಮತ್ತದೇ ಕಾರು ಖರೀದಿಸಿದ ಮಾಲೀಕ

ಇನ್ನು ಟಾಟಾ ಮೋಟಾರ್ಸ್ ಟಿಯಾಗೊ EV ಅನ್ನು ಸಹ ಬಿಡುಗಡೆ ಮಾಡಿದೆ. ಗ್ರಾಹಕರಿಗೆ ಆಯ್ಕೆ ಮಾಡಲು ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ಆವೃತ್ತಿಯೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಮಾದರಿಯನ್ನು ಇಷ್ಟು ವಿಭಾಗಗಳಲ್ಲಿ ತರಲು ಪ್ರಮುಖ ಕಾರಣ ಅದರ ನಿರ್ಮಾಣ ಗುಣಮಟ್ಟದಿಂದ ಹೆಚ್ಚಾಗಿರುವ ಗ್ರಾಹಕರ ಬೇಡಿಕೆಯಾಗಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಇತರ ಟಾಟಾ ಟಿಯಾಗೊ ಮಾಲೀಕರು ಕೂಡ ಕಾರಿನ ನಿರ್ಮಾಣ ಗುಣಮಟ್ಟವು ತಮ್ಮ ಜೀವಗಳನ್ನು ಹೇಗೆ ಉಳಿಸಿದೆ ಎಂಬುದರ ಕುರಿತು ಇದೇ ರೀತಿಯ ಕಥೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೂರಾರು ಸಂಖ್ಯೆಯಲ್ಲಿ ನೋಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Saturday, April 1, 2023, 15:14 [IST]
English summary
Tata tiago accident owner buy same car again
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+