Tata: ಟಾಟಾದ ಈ ಕಾರಿಗೆ ರೂ.60,000 ಡಿಸ್ಕೌಂಟ್.. 26 ಕಿ.ಮೀ ಮೈಲೇಜ್, 6 ಲಕ್ಷ ಬೆಲೆ

ಟಾಟಾ ಮೋಟಾರ್ಸ್ (Tata Motors) ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಟಿಯಾಗೊ (Tiago) ಮೇಲೆ ವರ್ಷಾಂತ್ಯದಲ್ಲಿ ಭರ್ಜರಿ ರಿಯಾಯಿತಿ ಪ್ರಯೋಜನವನ್ನು ಘೋಷಣೆ ಮಾಡಿದೆ. ರೂ.60,000 ವರೆಗೆ ಡಿಸ್ಕೌಂಟ್ ಆಫರ್ ಲಭಿಸಲಿದ್ದು, ಡಿಸೆಂಬರ್ 31 (December 31)ರವರೆಗೆ ರಿಯಾಯಿತಿ ಸೌಲಭ್ಯಗಳು ದೊರೆಯಲಿವೆ.

ಟಾಟಾ ಟಿಯಾಗೊ ಪೆಟ್ರೋಲ್ ರೂಪಾಂತರಗಳು ರೂ.40,000 ನಗದು ರಿಯಾಯಿತಿ (Cash discount), ರೂ.15,000 ಎಕ್ಸ್ಚೇಂಜ್ ಬೋನಸ್ (Exchange bonus) ಹಾಗೂ ರೂ.5,000 ಕಾರ್ಪೊರೇಟ್ ಡಿಸ್ಕೌಂಟ್ (Corporate discount) ಅನ್ನು ಹೊಂದಿವೆ. ಸಿಎನ್‌ಜಿ ರೂಪಾಂತರಗಳು ರೂ.30,000 ಕ್ಯಾಶ್ ಡಿಸ್ಕೌಂಟ್, ರೂ.15,000 ವಿನಿಮಯ ಬೋನಸ್, ರೂ.5,000 ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿವೆ.

Tata: ಟಾಟಾದ ಈ ಕಾರಿಗೆ ರೂ.60,000 ಡಿಸ್ಕೌಂಟ್.. 26 ಕಿ.ಮೀ ಮೈಲೇಜ್, 6 ಲಕ್ಷ ಬೆಲೆ

ರಾಜ್ಯದಿಂದ ರಾಜ್ಯಕ್ಕೆ ಡೀಲರ್‌ಶಿಪ್, ವೇರಿಯೆಂಟ್, ಕಲರ್ ಮತ್ತು ಸ್ಟಾಕ್‌ನ ಲಭ್ಯತೆ ಆಧಾರದ ಮೇಲೆ ರಿಯಾಯಿತಿ ಪ್ರಯೋಜನಗಳು ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಹತ್ತಿರದ ಶೋರೂಂಗೆ ಭೇಟಿ ನೀಡಿರಿ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೊ (Tata Tiago) ರೂ.6.30 ಲಕ್ಷದಿಂದ ರೂ.8.95 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ.

ಟಾಟಾ ಟಿಯಾಗೊ ಎಕ್ಸ್ಇ, ಎಕ್ಸ್ಎಂ ಸೇರಿದಂತೆ 4 ರೂಪಾಂತರಗಳು, ಮ್ಯಾಗ್ನೆಟಿಕ್ ರೆಡ್, ಅರಿಜೋನಾ ಬ್ಲೂ, ಓಪಲ್ ವೈಟ್, ಒಳಗೊಂಡಂತೆ 4 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ವಿನ್ಯಾಸದ ದೃಷ್ಟಿಯಿಂದಲ್ಲೂ ಅತ್ಯಾಧುನಿಕವಾಗಿದ್ದು, 419 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ (Boot Space) ಅನ್ನು ಪಡೆದಿದೆ.

Tata: ಟಾಟಾದ ಈ ಕಾರಿಗೆ ರೂ.60,000 ಡಿಸ್ಕೌಂಟ್.. 26 ಕಿ.ಮೀ ಮೈಲೇಜ್, 6 ಲಕ್ಷ ಬೆಲೆ

ಈ ಟಾಟಾ ಟಿಯಾಗೊ ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್ ಟ್ರೈನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 1.2 - ಪೆಟ್ರೋಲ್ ಎಂಜಿನ್, 86 PS ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5 - ಸ್ವೀಡ್ ಮ್ಯಾನುವಲ್, 5 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ.

ಸಿಎನ್‌ಜಿ ಚಾಲಿತ ಕಾರು ಇದೇ ಎಂಜಿನ್ ಆಯ್ಕೆಯನ್ನು ಹೊಂದಿದೆ. ಆದರೆ, 73.5 PS ಪವರ್, 95 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, ಕೇವಲ 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಪೆಟ್ರೋಲ್ ರೂಪಾಂತರಗಳು 19.28 kmpl - 19.60 kmpl, ಸಿಎನ್‌ಜಿ ರೂಪಾಂತರಗಳು 26.49km/kg ಮೈಲೇಜ್ ನೀಡುತ್ತವೆ.

Tata: ಟಾಟಾದ ಈ ಕಾರಿಗೆ ರೂ.60,000 ಡಿಸ್ಕೌಂಟ್.. 26 ಕಿ.ಮೀ ಮೈಲೇಜ್, 6 ಲಕ್ಷ ಬೆಲೆ

ಟಾಟಾ ಟಿಯಾಗೊ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಪುಶ್ - ಬಟನ್ ಸ್ಟಾರ್ಟ್/ಸ್ಟಾಪ್, ರೈನ್ - ಸೆನ್ಸಿಂಗ್ ವೈಪರ್‌, ಕೀಲೆಸ್ ಎಂಟ್ರಿ, ಆಟೋ ಎಸಿ, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ಫೀಚರ್ಸ್ ಇವೆ.

ಸುರಕ್ಷತೆಯ ವಿಚಾರದಲ್ಲೂ ಟಾಟಾ ಟಿಯಾಗೊ ಅತ್ಯಾಧುನಿಕವಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಹೊಂದಿದೆ. ಈ ಕಾರಿಗೆ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಡಿಜೈರ್, ಹ್ಯುಂಡೈ ಔರಾ ಮತ್ತು ಹೋಂಡಾ ಅಮೇಜ್ ಎದುರಾಳಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, December 18, 2023, 18:07 [IST]
English summary
Tata tiago december discount upto rs 60000 26 km mileage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+