ಮಹಿಳೆಯರ ನೆಚ್ಚಿನ ಕಾರಾದ ಟಾಟಾ ಟಿಯಾಗೋ ಇವಿ: ಶಿವಮೊಗ್ಗದಂತಹ ನಗರಗಳಲ್ಲಿ ಅಧಿಕ ಸೇಲ್‌

ಎಲೆಕ್ಟ್ರಿಕ್‌ ವಾಹನಗಳ ತಯಾರಿಕೆಯಲ್ಲಿ ಟಾಟಾ ಮೋಟಾರ್ಸ್‌ ಈಗಿರುವ ಮಟ್ಟಕ್ಕೆ ಬಂದು ತಲುಪುತ್ತಾರೆ ಎಂದು ಯಾರೂ ಸಹ ಊಹಿಸಿರಲಿಕ್ಕಿಲ್ಲ. ಕಳೆದ ಕೆಲವೊಂದಷ್ಟು ವರ್ಷಗಳಿಂದ ಭಾರತದ ಎಲೆಕ್ಟ್ರಿಕ್‌ ವಾಹನಗಳ ಕ್ಷೇತ್ರದಲ್ಲಿ ಟಾಟಾ ಮೋಟಾರ್ಸ್‌ ಕೊಡುಗೆ ಅಪಾರ ಎಂದರೆ ತಪ್ಪಾಗಲಾರದು. ಇದರಲ್ಲಿ ನೆಕ್ಸಾನ್‌ ಮತ್ತು ಟಿಯಾಗೋ ಇವಿ (TATA Tiago EV) ಮುಂದಿನ ಪಂಕ್ತಿಯಲ್ಲಿ ನಿಲ್ಲುತ್ತದೆ.

ಇದೀಗ ಟಾಟಾ ಕಂಪನಿಯ ಟಿಯಾಗೋ ಇವಿ ಕಾರು ಹೆಂಗಳೆಯರ ಮನ ಗೆಲ್ಲುವಲ್ಲಿ ಸಫಲವಾಗಿದೆ ಎಂದು ಕಂಪನಿ ತಿಳಿಸಿದೆ. ಟಾಟಾ ಟಿಯಾಗೋ ಕಾರು ಭಾರತದ ಎಲೆಕ್ಟ್ರಿಕ್‌ ಕಾರಿನ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದೆ ಎಂದೇ ಹೇಳಬಹುದು. ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ಕಾರನ್ನು ಟಾಟಾ ಮೋಟಾರ್ಸ್‌ ಮಾರುಕಟ್ಟೆಗ ತಂದಿದ್ದರು.

TATA Tiago EV

ಟಾಟಾ ಟಿಯಾಗೋ ಎಲೆಕ್ಟ್ರಿಕ್‌ ಕಾರು ಇದೀಗ 15 ಸಾವಿರ ಯೂನಿಟ್‌ಗಳನ್ನು ಮಾರುವುದರ ಮೂಲಕ ಮೈಲುಗಲ್ಲು ಸೃಷ್ಟಿಸಿದೆ. ಇದರ ಇನ್ನೊಂದು ಕುತೂಹಲಕಾರಿಯಾದ ವಿಷಯವೇನೆಂದರೆ ಪೈಕಿ ಕಾರು ಕೊಂಡವರು ಬಹುತೇಕ ಮಹಿಳೆಯರು ಎಂಬುದು. ಹೌದು, ಟಾಟಾ ಟಿಯಾಗೋ ಎಲೆಕ್ಟ್ರಿಕ್‌ ಕಾರು ಇದೀಗ ಹೆಣ್ಣು ಮಕ್ಕಳ ನೆಚ್ಚಿನ ಕಾರಾಗಿ ಹೊರ ಹೊಮ್ಮಿದೆ.

ಇದೇ ಸೆಗ್ಮೆಂಟ್‌ನ ಇತರ ಕಾರುಗಳಿಗೆ ಹೋಲಿಸಿದರೆ ಟಾಟಾ ಟಿಯಾಗೋ ಇವಿ ಯನ್ನು ಖರೀದಿಸುವವರ ಸಂಖ್ಯೆ ಹೆಚ್ಚಿದೆ. ಇದಕ್ಕೆ ಪ್ರಮುಖ ಕಾರಣಗಳೇನೆಂದು ನೋಡುತ್ತಾ ಹೋದರೆ ನಮ್ಮ ಮುಂದೆ ಹಲವಾರಿದೆ. ಇದರಲ್ಲಿ ಮೊದಲನೆಯದು, ಟಾಟಾ ಟಿಯಾಗೋ ಇವಿಯನ್ನು ಕೊಳ್ಳುವ 4 ಜನರಲ್ಲಿ ಒಬ್ಬರು ಮಹಿಳೆಯರು. ಇದರ ಬೆಲೆ, ಸೌಲಭ್ಯ, ವಿನ್ಯಾಸ ಮಹಿಳಾ ಗ್ರಾಹಕರನ್ನು ಆಕರ್ಷಿಸುತ್ತಿರುವುದು.

ಟಾಟಾ ಟಿಯಾಗೋ ಇವಿಯು ತನ್ನ ಮಾರಾಟದ ಶೇಖಡಾ 35 ರಷ್ಟು ಭಾರತದ ಟಾಪ್‌ 10 ನಗರಗಳಲ್ಲಿ ಗಳಿಸಿದ್ದರೆ, ಸುಮಾರು 49 ಶೇಖಡಾ ತನ್ನ ಮಾರಾಟವನ್ನು ದೇಶದ ಇತರ ಕಡೆ ಗಳಿಸಿದೆ. ಅದರಲ್ಲೂ ಭಾರತದ ಸಣ್ಣ ಸಣ್ಣ ನಗರಗಳಲ್ಲಿ ಟಾಟಾ ಟಿಯಾಗೋ ಇವಿ ಯು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಿದೆ ಎಂದು ವರದಿಗಳು ತಿಳಿಸಿವೆ.

ಅದರಲ್ಲೂ ಸತಾರ, ಬಿಲಾಸ್‌ಪುರ್‌, ನಮ್ಮ ಕರ್ನಾಟಕದ ಶಿವಮೊಗ್ಗ, ಕೇರಳದ ಕೆಲವು ಸಣ್ಣ ನಗರಗಳಲ್ಲಿ ಟಾಟಾ ಟಿಯಾಗೋ ಇವಿಯು ಉತ್ತಮ ಸಂಖ್ಯೆಯಲ್ಲಿ ಮಾರಾಟವನ್ನು ಕಂಡಿರುವುದು ಗಮನಾರ್ಹ ಸಂಗತಿ. ಇನ್ನೊಂದು ಮಾಹಿತಿಯೆಂದರೆ ಎಲ್ಲಾ ನಗರಗಳಲ್ಲೂ ಟಾಟಾದ ಮತ್ತೊಂದು ಕಾರಾದ ನೆಕ್ಸಾನ್‌ ಇವಿಯನ್ನು ಹಿಂದಿಕ್ಕಿರುವುದು.

ಟಾಟಾ ಟಿಯಾಗೋ ಇವಿಯು ಸುಮಾರು 8.69 ಲಕ್ಷದಿಂದ 12.04 ಲಕ್ಷ ಎಕ್ಸ್‌ ಶೋ ರೂಮ್‌ ಬೆಲೆಬಾಳುತ್ತದೆ. ಟಾಟಾ ಪ್ರಕಾರ ಸುಮಾರು 25% ನಷ್ಟು ಗ್ರಾಹಕರು ಮಹಿಳೆಯರೇ ಆಗಿದ್ದು ಸಂತಸ ತಂದಿದೆ. ಇದು ಸಾಧಾರಣವಾಗಿ ಮಾರುಕಟ್ಟೆಯಲ್ಲಿ ದುಪ್ಪಟ್ಟು ಮಹಿಳೆಯರ ಸಂಖ್ಯೆಗೆ ಸಮವಾಗಿದೆ ಎಂದು ತಿಳಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, June 16, 2023, 12:11 [IST]
English summary
Tata tiago ev is becoming women favourite car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+