Tata Tiago-Truck ಭೀಕರ ಅಪಘಾತ... ಪ್ರಯಾಣಿಕರೊಂದಿಗೆ ಕಾರಿನಲ್ಲಿದ್ದ ನಾಯಿ ಕೂಡ ಸೇಫ್

ಮೊದಲಿನಿಂದಲೂ ಟಾಟಾ ಕಾರುಗಳು ಎಂದಾಕ್ಷಣ ಎಲ್ಲರಿಗೂ ಮೊದಲು ನೆನಪಾಗುವುದು ಅವುಗಳ ನಿರ್ಮಾಣ ಗುಣಮಟ್ಟ. ಟಾಟಾ ಕಾರುಗಳು ತುಸು ದುಬಾರಿಯಾದ್ರೂ ಗುಣಮಟ್ಟದಲ್ಲಿ ರಾಜಿಯಾಗದೇ ಪ್ರಯಾಣಿಕರ ಜೀವಕ್ಕೆ ಗ್ಯಾರೆಂಟಿ ನೀಡುತ್ತವೆ. ಈಗಲೂ ಹೊಸದೇನಿಲ್ಲ, ಭೀಕರ ಅಪಘಾತದಲ್ಲಿ ಪ್ರಯಾಣಿಕರು ಸೇಫ್ ಆಗಿದ್ದಾರೆ.

ಅಸ್ಸಾಂನಲ್ಲಿ ಈ ಅಪಘಾತ ನಡೆದಿದ್ದು, ಟಾಟಾ ಟಿಯಾಗೊ ಕಾರು ಕಸದ ಲಾರಿಗೆ ಡಿಕ್ಕಿ ಹೊಡೆದರೂ ಕಾರಿನಲ್ಲಿದ್ದ ನಾಯಿ ಸೇರಿದಂತೆ ಇಬ್ಬರು ಯುವಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಈ ಕುರಿತ ವಿಡಿಯೋವನ್ನು ಯ್ಯೂಟ್ಯೂಬರ್ ಒಬ್ಬರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕಾರಿನ ರೂಫ್, ಹಿಂಭಾಗದ ವಿಂಡ್‌ ಸ್ಕ್ರೀನ್ ಸೇರಿದಂತೆ ಬಹುತೇಕ ಹಾನಿಯಾಗಿರುವುದನ್ನು ಕಾಣಬಹುದು.

Tata Tiago-Truck

ಇದು Tata Tiago XZ ರೂಪಾಂತರವಾಗಿದ್ದು ಕಾರಿನ ಮಾಲೀಕ ಮತ್ತು ಆತನ ಸ್ನೇಹಿತ ತನ್ನ ಸ್ನೇಹಿತನ ನಾಯಿಯನ್ನು ಲಸಿಕೆ ಹಾಕಲು ಕರೆದುಕೊಂಡು ಹೋಗುತ್ತಿದ್ದರು. ಸ್ವಲ್ಪ ದುಡುಕಿನಿಂದಲೇ ಕಾರನ್ನು ಓಡಿಸುತ್ತಿದ್ದೆ ಎಂದು ಚಾಲಕ ಒಪ್ಪಿಕೊಂಡಿದ್ದಾನೆ. ಜೊತೆಗೆ ರಸ್ತೆ ಸಾಕಷ್ಟು ಕಿರಿದಾಗಿತ್ತು. ಇದ್ದಕ್ಕಿದ್ದಂತೆ ಎದುರಿನಿಂದ ಬಂದ ಲಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದು ಕಾರು ಚಾಲಕ ಹೇಳಿದ್ದಾನೆ.

ಕಾರು ಅತಿವೇಗದಲ್ಲಿ ಚಲಿಸುತ್ತಿದ್ದರಿಂದ ಚಾಲಕನಿಗೆ ಕಾರನ್ನು ನಿಯಂತ್ರಿಸಲಾಗಿಲ್ಲ, ಆದರೂ ಟ್ರಕ್‌ಗೆ ದಾರಿ ಮಾಡಿಕೊಡಲು ಪ್ರಯತ್ನಿಸಿದ್ದು ಕಿರಿದಾದ ರಸ್ತೆಯಿಂದಾಗಿ ಅಪಘಾತ ಸಂಭವಿಸಿದೆ. ಮೊದಲು ಲಾರಿಗೆ ಡಿಕ್ಕಿಯಾಗದಂತೆ ಕಾರನ್ನು ರಕ್ಷಿಸಲು, ಚಾಲಕ ಬ್ರೇಕ್ ಹಾಕಿದಾಗ ಕಾರು ಪಕ್ಕದ ಗೋಡೆಗೆ ಡಿಕ್ಕಿ ಹೊಡೆದಿದೆ. ಅತಿ ವೇಗದಿಂದಾಗಿ ಕಾರಿನ ಮೇಲ್ಛಾವಣಿ, ಪಿಲ್ಲರ್, ವಿಂಡ್‌ಸ್ಕ್ರೀನ್‌ಗೆ ಹಾನಿಯಾಗಿದೆ.

ಇದು ದೊಡ್ಡ ಅಪಘಾತ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗುತ್ತದೆ. ಅಚ್ಚರಿ ಎಂದರೆ ನಾಯಿ ಸೇರಿದಂತೆ ಕಾರಿನೊಳಗಿದ್ದವರೆಲ್ಲರೂ ಸುರಕ್ಷಿತವಾಗಿದ್ದಾರೆ. ಕಾರು ಚಾಲಕನ ಕಿವಿಯ ಹಿಂಭಾಗದಲ್ಲಿ ಸಣ್ಣ ಗಾಯ ಬಿಟ್ಟರೇ ಎಲ್ಲರೂ ಸೇಫ್ ಆಗಿದ್ದಾರೆ. ಚಾಲಕ ಒಪ್ಪಿಕೊಂಡಂತೆ ಈ ಅಪಘಾತಕ್ಕೆ ನಿಜವಾದ ಕಾರಣ ದುಡುಕಿನ ಚಾಲನೆಯಾಗಿರುವ ಕಾರಣ ಯಾರ ಮೇಲೂ ಆರೋಪಗಳನ್ನು ಹೊರಿಸಲಾಗಿಲ್ಲ.

ಟಾಟಾ ಮೋಟಾರ್ಸ್‌ನ ಈ ಪ್ರವೇಶ ಮಟ್ಟದ ಟಿಯಾಗೊ ಕಾರು ತನ್ನ ವಿಭಾಗದಲ್ಲಿ ಸುರಕ್ಷಿತ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ. ಈ ಮಾದರಿಯು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 4-ಸ್ಟಾರ್ ರೇಟಿಂಗ್ ಗಳಿಸಿದೆ. ಒಂದು ವೇಳೆ ಲಾರಿಯೇ ಕಾರಿಗೆ ಡಿಕ್ಕಿ ಹೊಡೆದಿದ್ದರೆ ಕಾರಿನಲ್ಲಿದ್ದವರು ಗಂಭೀರವಾಗಿ ಗಾಯಗೊಳ್ಳುವ ಸಾಧ್ಯತೆ ಇರುತ್ತಿತ್ತು.

ಕಿರಿದಾದ ರಸ್ತೆಗಳಲ್ಲಿ ಅದರಲ್ಲೂ ಒನ್ ವೇ ಅಲ್ಲದ ರಸ್ತೆಗಳಲ್ಲಿ ತುಂಬಾ ಜಾಗರೂಕರಾಗಿ ವಾಹನಗಳನ್ನು ಚಾಲನೆ ಮಾಡಬೆಕು ಇಲ್ಲದಿದ್ದರೇ ಇಂತಹ ಅವಘಡಗಳಿಗೆ ಕಾರಣವಾಗುತ್ತದೆ. ಏನೇ ಆಗಲಿ ಇಂತಹ ಭೀಕರ ಅಪಘಾತದಲ್ಲೂ ಎಲ್ಲರೂ ಸೇಫ್ ಆಗಿರುವುದು ಟಾಟಾ ಕಾರಿನ ನಿರ್ಮಾಣ ಗುಣಮಟ್ಟಕ್ಕೆ ಒಂದೊಳ್ಳೆ ಪ್ರಶಂಸೆಯಾಗಿದೆ. ಈ ಅಪಘಾತ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ.

Article Published On: Thursday, June 15, 2023, 16:46 [IST]
English summary
Tata tiago truck terrible accident all are safe
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+