Tata: ಟಾಟಾದ ಕಡಿಮೆ ಬೆಲೆಯ ಈ ಎಲೆಕ್ಟ್ರಿಕ್ ಕಾರುಗಳಿಗೆ 1.10 ಲಕ್ಷ ರೂಪಾಯಿ ರಿಯಾಯಿತಿ ಘೋಷಣೆ

ಟಾಟಾ ಮೋಟಾರ್ಸ್ (Tata Motors) ಕೆಲವೇ ದಿನಗಳ ಹಿಂದೆ, ಭಾರತದಲ್ಲಿ ಮಾರಾಟವಾಗುವ ತನ್ನ ವಿವಿಧ ಕಾರು ಮಾದರಿಗಳ ದರ ಹೆಚ್ಚಿಸುವುದಾಗಿ ಘೋಷಿಸಿದೆ. ಉತ್ಪಾದನಾ ವೆಚ್ಚ ಸೇರಿದಂತೆ ವಿವಿಧ ಕಾರಣಗಳಿಗೆ ಬೆಲೆ ಏರಿಸಲು ತೀರ್ಮಾನಿಸಿದ್ದು, ನೂತನ ದರಗಳು ಜನವರಿಯಿಂದ (2024) ಜಾರಿಯಾಗಲಿವೆ.

ಅದಕ್ಕೂ ಮೊದಲು, ಟಾಟಾ ತನ್ನ ಎಲೆಕ್ಟ್ರಿಕ್ ಕಾರುಗಳಾದ ಟಿಯಾಗೊ ಇವಿ (Tiago EV) ಹಾಗೂ ಟಿಗೂರ್ ಇವಿ (Tigor EV)ಗಳಿಗೆ ದೊಡ್ಡಮಟ್ಟದ ರಿಯಾಯಿತಿಯನ್ನು ನೀಡಿದ್ದು, ರೂ.1.10 ಲಕ್ಷವರೆಗೆ ಡಿಸ್ಕೌಂಟ್ ದೊರೆಯಲಿದೆ. ಡಿಸೆಂಬರ್ 31ರೊಳಗೆ (2023) ಈ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಸ್ಟಾಕ್ ಮುಗಿಯುವರೆಗೂ ಈ ರಿಯಾಯಿತಿ ಸೌಲಭ್ಯಗಳು ಲಭ್ಯವಾಗಲಿದೆ ಎಂದು ವರದಿಯಾಗಿದೆ. ಆದರೆ, ರಾಜ್ಯದಿಂದ ರಾಜ್ಯಕ್ಕೆ ಡೀಲರ್‌ಶಿಪ್ ಅನ್ವಯ ಡಿಸ್ಕೌಂಟ್ ಆಫರ್ ಬೇರೆಯಿರಲಿದೆ.

Tata: ಟಾಟಾದ ಕಡಿಮೆ ಬೆಲೆಯ ಈ ಎಲೆಕ್ಟ್ರಿಕ್ ಕಾರುಗಳಿಗೆ 1.10 ಲಕ್ಷ ರೂಪಾಯಿ ರಿಯಾಯಿತಿ ಘೋಷಣೆ

ಮೊದಲಿಗೆ ಟಾಟಾ ಟಿಗೂರ್ ಇವಿ (Tata Tigor EV) ಹೊಂದಿರುವ ರಿಯಾಯಿತಿ ಸೌಲಭ್ಯಗಳ ಬಗ್ಗೆ ಮಾತನಾಡೋಣ. ಈ ಕಾರು, ರೂ.1.10 ಲಕ್ಷವರೆಗೆ ರಿಯಾಯಿತಿಯನ್ನು ಒಳಗೊಂಡಿದೆ. ಅದರಲ್ಲಿ ರೂ.50,000 ಫ್ಲಾಟ್ ಕ್ಯಾಶ್ ಡಿಸ್ಕೌಂಟ್, ರೂ.50,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.10,000 ವರೆಗೆ ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಒಳಗೊಂಡಿದೆ.

ಟಾಟಾ ಟಿಗೂರ್ ಇವಿ ವಾಣಿಜ್ಯ ಬಳಕೆಗೆ ಮಾತ್ರ ಖರೀದಿಗೆ ಲಭ್ಯವಿದ್ದು, ರೂ.12.49 ಲಕ್ಷದಿಂದ ರೂ.13.75 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ಸಿಗುವ ಈ ಕಾರು, 26 kWh ಬ್ಯಾಟರಿ ಪ್ಯಾಕ್ ಪಡೆದಿದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 75 PS ಗರಿಷ್ಠ ಪವರ್ ಹಾಗೂ 170 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Tata: ಟಾಟಾದ ಕಡಿಮೆ ಬೆಲೆಯ ಈ ಎಲೆಕ್ಟ್ರಿಕ್ ಕಾರುಗಳಿಗೆ 1.10 ಲಕ್ಷ ರೂಪಾಯಿ ರಿಯಾಯಿತಿ ಘೋಷಣೆ

ಈ ಟಿಗೂರ್ ಇವಿ, ಸಂಪೂರ್ಣ ಚಾರ್ಜ್ ನಲ್ಲಿ 315 ಕಿಲೋಮೀಟರ್ (ARAI) ರೇಂಜ್ ನೀಡುತ್ತದೆ. 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆಟೋ ಎಸಿ, ಕನೆಕ್ಟ್ದ್ ಕಾರ್ ಟೆಕ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ.

ಟಾಟಾ ಟಿಯಾಗೊ ಇವಿ (Tata Tiago EV) ಹ್ಯಾಚ್‌ಬ್ಯಾಕ್, ಈ ಡಿಸೆಂಬರ್‌ನಲ್ಲಿ ಒಟ್ಟು ರೂ.77,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಆದರೆ, ಟಿಗೂರ್ ಇವಿಯಂತೆ ಕ್ಯಾಶ್ ಡಿಸ್ಕೌಂಟ್ ಪಡೆದಿಲ್ಲ. ಬದಲಾಗಿ, ರೂ. 55,000 ಗ್ರೀನ್ ಬೋನಸ್ (Green Bonus) ಅನ್ನು ಹೊಂದಿದೆ. ಗ್ರೀನ್ ಬೋನಸ್ ಅಂದರೆ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವಂತೆ ಗ್ರಾಹಕರನ್ನು ಉತ್ತೇಜಿಸುವ ಯೋಜನೆಯಾಗಿದೆ.

ಇದರೊಂದಿಗೆ ಟಿಯಾಗೊ ಇವಿ ರೂ.15,000 ಎಕ್ಸ್ಚೇಂಜ್ ಬೋನಸ್, ರೂ.7,000 ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಪಡೆದಿದೆ. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಟಿಯಾಗೊ ಇವಿ, ರೂ.8.69 ಲಕ್ಷದಿಂದ ರೂ.12.04 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಇದು ಎಕ್ಸ್ಇ, ಎಕ್ಸ್‌ಟಿ ಸೇರಿದಂತೆ 4 ರೂಪಾಂತರ ಹಾಗೂ ಸಿಗ್ನೇಚರ್ ಟೀಲ್ ಬ್ಲೂ, ಡೇಟೋನಾ ಗ್ರೇ, ಟ್ರಾಪಿಕಲ್ ಮಿಸ್ಟ್ ಒಳಗೊಂಡಂತೆ 5 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಈ ಟಾಟಾ ಟಿಯಾಗೊ ಇವಿ (Tata Tiago EV) 2 ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ, 19.2 kWh ಮತ್ತು 24 kWh ಬ್ಯಾಟರಿ ಪ್ಯಾಕ್. ಚಿಕ್ಕ ಬ್ಯಾಟರಿ ಹೊಂದಿರುವ ಕಾರಿನ ಎಲೆಕ್ಟ್ರಿಕ್ ಮೋಟಾರ್ 61 PS ಪವರ್, 110 Nm ಪೀಕ್ ಟಾರ್ಕ್, ದೊಡ್ಡ ಬ್ಯಾಟರಿ ಪಡೆದಿರುವ ಕಾರಿನ ಎಲೆಕ್ಟ್ರಿಕ್ ಮೋಟಾರ್ 75 PS ಪವರ್, 114 Nm ಪೀಕ್ ಟಾರ್ಕ್ ಹೊರಹಾಕುತ್ತದೆ.

ಈ ಎಲೆಕ್ಟ್ರಿಕ್ ಕಾರು, ಬ್ಯಾಟರಿ ಪ್ಯಾಕ್ ಅನ್ವಯ ಸಂಪೂರ್ಣ ಚಾರ್ಜ್ ನಲ್ಲಿ 250 km ರಿಂದ 315 km ರೇಂಜ್ ನೀಡುತ್ತದೆ. ವೈಶಿಷ್ಟ್ಯ ವಿಚಾರವಾಗಿ ಹೇಳುವುದಾದರೆ, ಈ ಕಾರು 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, 4 - ಸ್ಪೀಕರ್ ಹರ್ಮನ್ ಸೌಂಡ್ ಅನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿದೆ.

More from DriveSpark

Article Published On: Friday, December 15, 2023, 17:12 [IST]
English summary
Tata tigor ev tiago ev have rs 1 10 lakh big discount good news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+