ಆಟೋ ಎಕ್ಸ್‌ಪೋದಲ್ಲಿ ಟಾಟಾದ 3 ಎಲೆಕ್ಟ್ರಿಕ್ ಕಾರು ಅನಾವರಣ: 500 ಕಿ.ಮೀ ಮೈಲೇಜ್ ನೀಡುತ್ತೆ ಈ ಇವಿ?

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ (EV) ಭಾರೀ ಬೇಡಿಕೆ ಹೆಚ್ಚಾಗಿದೆ. ಇದೀಗ ಈ ರೀತಿಯ ಕಾರು, ದ್ವಿಚಕ್ರ ವಾಹನ ತಯಾರಿಕೆಗೆ ಹಲವು ವಾಹನ ತಯಾರಿಕ ಕಂಪನಿಗಳು ಮುಂದಾಗಿವೆ. ಸದ್ಯ ದೇಶದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಪ್ರಾಬಲ್ಯ ಸಾಧಿಸಿದ್ದು, ಅತ್ಯಧಿಕ ಪಾಲನ್ನು ಹೊಂದಿದೆ.

ಟಾಟಾ ಮೋಟಾರ್ಸ್ ಇತ್ತೀಚೆಗೆ ಭಾರತೀಯ ಮಾರುಕಟ್ಟೆಗೆ ಬಹು ನಿರೀಕ್ಷಿತ ಟಿಯಾಗೊ ಇವಿಯನ್ನು ಬಿಡುಗಡೆ ಮಾಡಿದೆ. ಕಂಪನಿಯು ದೇಶದಲ್ಲಿ ತನ್ನ ಇವಿ ಪೋರ್ಟ್‌ಫೋಲಿಯೊವನ್ನು ಬಲಪಡಿಸುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಟಿಗೋರ್ ಇವಿ, ಟಾಟಾ ನಿಕ್ಸಾನ್ ಇವಿ ಪ್ರೈಮ್ ಮತ್ತು ನಿಕ್ಸಾನ್ ಇವಿ ಮ್ಯಾಕ್ಸ್ ಅನ್ನು ಮಾರಾಟ ಮಾಡುತ್ತಿದೆ. ಇಲ್ಲಿ ಮುಂದಿನ ವಾರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗುವ ಟಾಪ್ 3 ಟಾಟಾ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಸಿಕೊಡಲಾಗಿದೆ.

ಆಟೋ ಎಕ್ಸ್‌ಪೋದಲ್ಲಿ ಟಾಟಾದ 3 ಎಲೆಕ್ಟ್ರಿಕ್ ಕಾರು ಅನಾವರಣ

ಟಾಟಾ ಪಂಚ್ ಇವಿ:
ಭಾರತೀಯ ಮಾರುಕಟ್ಟೆಯಲ್ಲಿ ಪಂಚ್ ಇವಿಯನ್ನು ಬಿಡುಗಡೆಗೊಳಿಸಲು ಟಾಟಾ ರೆಡಿಯಾಗುತ್ತಿದೆ. ಇದು ಆಲ್ಫಾ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಸದ್ಯ ಆಲ್ಟ್ರೊಜ್ ಹ್ಯಾಚ್‌ಬ್ಯಾಕ್‌ಗೂ ಇದನ್ನೇ ಬಳಕೆ ಮಾಡಲಾಗುತ್ತಿದೆ. ಪಂಚ್ ಇವಿಯು ಜಿಪ್ಟ್ರಾನ್ ಎಲೆಕ್ಟ್ರಿಕ್ ಪವರ್‌ಟ್ರೇನ್‌ನಿಂದ ಪವರ್ ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಅದೇ ಪವರ್‌ಟ್ರೇನ್‌ನೊಂದಿಗೆ ಮಾರುಕಟ್ಟೆಯಲ್ಲಿ ಟಿಯಾಗೊ ಮತ್ತು ಟಿಗೊರ್ ಇವಿ ಖರೀದಿಗೆ ಲಭ್ಯವಿವೆ. ಜಿಪ್ಟ್ರಾನ್ ಪವರ್‌ಟ್ರೇನ್‌ ಪಂಚ್ ಇವಿಗಾಗಿ ಮತ್ತಷ್ಟು ಹೆಚ್ಚಿನ ಪವರ್ ಉತ್ಪಾದಿಸಲಿದೆ.

ಈ ಪಂಚ್ ಇವಿ ಬ್ಯಾಟರಿ ಬಗ್ಗೆ ಹೇಳುವುದಾದರೆ, ಟಾಟಾ ಪಂಚ್ ಇವಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿರಲಿದೆ. ಅವುಗಳೆಂದರೆ, ಮೀಡಿಯಂ ರೇಂಜ್ ಮತ್ತು ಲಾಂಗ್ ರೇಂಜ್. ICE ರೂಪಾಂತರದಂತೆ ಕಾಣದಿರಲು ಈ ಕಾರಿನ ಬಾಹ್ಯ ಮತ್ತು ಆಂತರಿಕ ಬಿಟ್‌ಗಳಿಗೆ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಪಂಚ್ ಇವಿಯು ಇತರೆ ಟಾಟಾ ಇವಿಗಳಲ್ಲಿ ಕಂಡುಬರುವಂತೆ ಇನ್ಸ್ಟ್ರುಮೆಂಟ್ ಪ್ಯಾನೆಲ್, AC ವೆಂಟ್‌ಗಳು ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಟಾಟಾ ಕರ್ವಿವ್ ಇವಿ:
ಟಾಟಾ ಕರ್ವಿವ್ ಇವಿ ಪರಿಕಲ್ಪನೆಯನ್ನು ಏಪ್ರಿಲ್‌ 2022 ರಲ್ಲಿ ಬಹಿರಂಗಪಡಿಸಲಾಯಿತು. ಇದು ಸಂಪೂರ್ಣವಾಗಿ ಹೊಸ ಇವಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ದೆಹಲಿಯಲ್ಲಿ ಆಟೋ ಎಕ್ಸ್‌ಪೋದಲ್ಲಿ ನೋಡಲು ಸಿಗಬಹುದು. ಕೂಪ್-ಶೈಲಿಯ ಈ ಪರಿಕಲ್ಪನೆಯು ಟಾಟಾದ 'ಲೆಸ್ ಈಸ್ ಮೋರ್' ಎಂಬ ಹೊಸ ವಿನ್ಯಾಸ ಫಿಲಾಸಫಿಯನ್ನು ಹೊಂದಿದೆ. ಇದು ಮುಂಬರುವ ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ತನಗಾಗಿ ಸ್ಥಾನವನ್ನು ನಿರ್ಮಾಣ ಮಾಡಿಕೊಳ್ಳಬಹುದು. ಜೊತೆಗೆ ಹೆಚ್ಚಿನ ಜನರು ಈ ಇವಿ ಖರೀದಿಗೆ ಆಸಕ್ತಿ ತೋರಬಹುದು.

ಕರ್ವಿವ್ ಪರಿಕಲ್ಪನೆಯಡಿ ಟಾಟಾ ಮೊದಲಿಗೆ ಸಂಪೂರ್ಣ-ಎಲೆಕ್ಟ್ರಿಕ್ ವಾಹನವನ್ನು ಖರೀದಿಗೆ ನೀಡಲಿದ್ದು, ನಂತರ, ICE ಆವೃತ್ತಿಯನ್ನು ಪರಿಚಯಿಸುವ ಸಾಧ್ಯತೆ ಇದೆ. ಈ ಇವಿ ಸಂಪೂರ್ಣ ಚಾರ್ಜಿನಲ್ಲಿ ಸುಮಾರು 400 - 500 ಕಿ.ಮೀ ರೇಂಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಆದರೆ, ಆ ಕುರಿತು ಇನ್ನೂ ಯಾವುದೇ ಖಚಿತ ಮಾಹಿತಿ ಇಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ, ಟಾಟಾ ಕರ್ವಿವ್ ಮತ್ತೊಂದು ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

ಟಾಟಾ ಅವಿನ್ಯಾ ಇವಿ:
ಟಾಟಾ ಅವಿನ್ಯಾ ಪರಿಕಲ್ಪನೆಯ ಇವಿಯನ್ನು 2022ರಲ್ಲಿ ಬಹಿರಂಗಪಡಿಸಲಾಯಿತು. ಅವಿನ್ಯಾ ಇವಿ ಟಾಟಾದ ಹೆಚ್ಚು ಸುಧಾರಿತ ಜನರೇಷನ್ 3 ಆರ್ಕಿಟೆಕ್ಚರ್ ಅನ್ನು ಆಧರಿಸಿದೆ. ಈ ಆರ್ಕಿಟೆಕ್ಚರ್ ಕನಿಷ್ಠ 500 ಕಿ.ಮೀ ರೇಂಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇದು ಎಂಪಿವಿ, ಹ್ಯಾಚ್‌ಬ್ಯಾಕ್ ಮತ್ತು ಕ್ರಾಸ್‌ಒವರ್‌ನ ಮಿಶ್ರಣದಂತೆ ಇರಲಿದೆ. ಇವಿ ಮುಂಭಾಗದಲ್ಲಿ 'T' ಆಕಾರದಲ್ಲಿ LED ಸ್ಟ್ರಿಪ್ ಅನ್ನು ಪಡೆಯಲಿದ್ದು, ಆಕರ್ಷಕವಾಗಿ ಕಾಣಲಿದೆ. ಇದು ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್‌ ಅಥವಾ ಕ್ವಾಡ್ ಮೋಟಾರ್ ಸೆಟ್‌ನೊಂದಿಗೆ ಬರುವ ನೀರಿಕ್ಷೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Friday, January 6, 2023, 18:59 [IST]
English summary
Tata unveils 3 electric cars at auto expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+