ಅತಿ ವೇತಗದ ಓವರ್‌ಟೇಕ್... ಎರಡು ಟ್ರಕ್‌ಗಳ ನಡುವೆ ಸಿಲುಕಿದ ಹ್ಯುಂಡೈ ಗ್ರಾಂಡ್ ಐ10

ಅತಿ ವೇಗ ಮತ್ತು ಟ್ರಾಫಿಕ್ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುವಂತಹ ಅಭ್ಯಾಸಗಳಿಂದಾಗಿ ಭಾರತದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಇದರ ಜೊತೆಗೆ ರಸ್ತೆ ಅಪಘಾತಗಳಿಗೆ ಅತಿ ಪ್ರಮುಖ ಕಾರಣವೆಂದರೆ ತಪ್ಪಾಗಿ ಓವರ್‌ಟೇಕ್ ಮಾಡುವುದಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಟ್ರಕ್‌ವೊಂದನ್ನು ಓವರ್‌ ಟೇಕ್ ಮಾಡಲು ಹೋಗಿ ಕಾರು ಅಪಘಾತಕ್ಕೆ ಸಿಲುಕಿದೆ.

ಅಜ್ಜು 0008 ಎಂಬಾತ ಅಪ್‌ಲೋಡ್ ಮಾಡಿದ ಯೂಟ್ಯೂಬ್ ವೀಡಿಯೊದಲ್ಲಿ, ಹ್ಯುಂಡೈ ಗ್ರ್ಯಾಂಡ್ ಐ10 ಹೆದ್ದಾರಿಯಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆಯುವುದನ್ನು ನಾವು ನೋಡಬಹುದು. ಯೂಟ್ಯೂಬರ್ ಪ್ರಕಾರ, ಇಡೀ ಅಪಘಾತವು ಅವರ ಲ್ಯಾಂಡ್ ರೋವರ್ ಡಿಫೆಂಡರ್‌ನ ಹಿಂಬದಿಯ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ವೀಡಿಯೊದಲ್ಲಿ, ಹ್ಯುಂಡೈ ಗ್ರಾಂಡ್ ಐ10 ಮತ್ತೊಂದು ಲೇನ್‌ನಲ್ಲಿ ಟ್ರಕ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿರುವಾಗ, ತನ್ನ ಲೇನ್‌ನಲ್ಲಿ ಮತ್ತೊಂದು ಟ್ರಕ್ ಅನ್ನು ಹಿಂಬಾಲಿಸುತ್ತಿದ್ದುದನ್ನು ನಾವು ನೋಡಬಹುದು.

ಅತಿ ವೇತಗದ ಓವರ್‌ಟೇಕ್... ಎರಡು ಟ್ರಕ್‌ಗಳ ನಡುವೆ ಸಿಲುಕಿದ ಹ್ಯುಂಡೈ ಗ್ರಾಂಡ್ ಐ10

ಗ್ರ್ಯಾಂಡ್ ಐ10 ಚಾಲಕ ಎರಡು ಟ್ರಕ್‌ಗಳ ನಡುವಿನ ಅಂತರವನ್ನು ತಪ್ಪಾಗಿ ಲೆಕ್ಕಾಚಾರ ಮಾಡಿದ್ದಾನೆ. ಮತ್ತೊಂದು ಲೇನ್‌ನಲ್ಲಿ ಟ್ರಕ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದಾಗ, ಟ್ರಕ್ ಗ್ರಾಂಡ್ ಐ10 ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಹೆಚ್ಚಿನ ವೇಗದ ಪರಿಣಾಮದಿಂದಾಗಿ, ಹ್ಯುಂಡೈ ಗ್ರಾಂಡ್ i10 ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಟ್ರಕ್ ಮತ್ತು ಗ್ರ್ಯಾಂಡ್ ಐ10 ಎರಡರ ವೇಗವೂ ಹೆಚ್ಚಾಗಿದ್ದರಿಂದ ಗ್ರ್ಯಾಂಡ್ ಐ10 ಮತ್ತೆ ಟ್ರಕ್‌ಗೆ ಡಿಕ್ಕಿ ಹೊಡೆದು ಮತ್ತೊಂದು ಲೇನ್‌ನಲ್ಲಿ ಪಲ್ಟಿಯಾಗಿದೆ.

ಈ ಸಂಪೂರ್ಣ ಅಪಘಾತ ಎರಡೂ ವಾಹನಗಳ ಮುಂದೆ ಚಲಿಸುತ್ತಿದ್ದ ಲ್ಯಾಂಡ್ ರೋವರ್ ಡಿಫೆಂಡರ್ ಹಿಂಬದಿಯ ಕ್ಯಾಮೆರಾದಲ್ಲಿ ದಾಖಲಾಗಿದೆ. ಹುಂಡೈ ಗ್ರಾಂಡ್ ಐ10 ಚಾಲಕನಿಗೆ ಗಾಯಗಳಾಗಿವೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಈ ಅಪಘಾತದಲ್ಲಿ ಗ್ರ್ಯಾಂಡ್ i10 ಚಾಲಕನು ಅಂತಹ ಹೆಚ್ಚಿನ ವೇಗದಲ್ಲಿ, ವಿಶೇಷವಾಗಿ ಎರಡು ಟ್ರಕ್‌ಗಳ ನಡುವೆ ಓವರ್‌ಟೇಕ್ ಮಾಡುವಾಗ ಸ್ವಲ್ಪ ಹೆಚ್ಚು ತಾಳ್ಮೆಯನ್ನು ಹೊಂದಿರಬೇಕಾಗಿತ್ತು ಎಂಬುದು ಈ ಅಪಘಾತ ಸ್ಪಷ್ಟಪಡಿಸಿದೆ.

ಭಾರತದಲ್ಲಿ ಹೆಚ್ಚಿನ ಟ್ರಕ್ ಚಾಲಕರು ಹೆದ್ದಾರಿಗಳಲ್ಲಿ ಅಜಾಗರೂಕತೆಯಿಂದ ಚಾಲನೆ ಮಾಡುತ್ತಾರೆ, ಆದ್ದರಿಂದ ಅನಗತ್ಯ ಘರ್ಷಣೆಯನ್ನು ತಪ್ಪಿಸಲು, ಇತರ ವಾಹನಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಉತ್ತಮ. ವಿಶೇಷವಾಗಿ ಟ್ರಕ್‌ಗಳು ಮತ್ತು ಬಸ್‌ಗಳಂತಹ ಭಾರೀ ಡ್ಯೂಟಿ ವಾಹನಗಳಿಂದ ದೂರವಿದ್ದರೆ ಒಳಿತು. ಏಕೆಂದರೆ ಬಸ್ ಚಾಲಕ ಎತ್ತರದಲ್ಲಿ ಕುಳಿತಿದ್ದರೂ ಸಹ, ಬಸ್ಸಿನಿಂದ ಗೋಚರತೆ ಸಾಕಷ್ಟು ಕಡಿಮೆಯಾಗಿರುತ್ತದೆ. ಅಲ್ಲದೇ ಭಾರೀ ವಾಹನಗಳಿಗೆ ಬ್ಲೈಂಡ್ ಸ್ಪಾಟ್‌ಗಳು ಇರುವುದರಿಂದ ನಾವೇ ಎಚ್ಚರಿಕೆ ವಹಿಸಬೇಕು.

ಕೆಲವು ಭಾರತೀಯ ಸಾರಿಗೆ ವಾಹನಗಳು ಉತ್ತಮ ಸ್ಥಿತಿಯಲ್ಲಿ ಇರುವುದಿಲ್ಲ. ಭಾರೀ ವಾಹನಗಳು ಸುತ್ತಲೂ ಇರುವಾಗ ರಸ್ತೆಯಲ್ಲಿ ಎಚ್ಚರವಾಗಿರುವುದು ಬಹಳ ಮುಖ್ಯ. ಬಸ್ಸುಗಳು ಸೇರಿದಂತೆ ಭಾರೀ ವಾಹನಗಳನ್ನು ಹಿಂದಿಕ್ಕುವಾಗ ನೀವು ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವುದನ್ನು ಯಾವಾಗಲೂ ಖಚಿತಪಡಿಸಿಕೊಳ್ಳಬೇಕು. ಹೆಚ್ಚಾಗಿ ಇಂತಹ ವಾಹನಗಳ ಬ್ರೇಕ್ ಲೈಟ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಹಾಗಾಗಿ ಓವರ್ ಟೇಕ್ ಮಾಡುವಾಗ ತುಸು ಯಾಮಾರಿದರೂ ಅಪಘಾತಕ್ಕೆ ಸಿಲುಕಿ ಆಸ್ಪತ್ರೆ ಪಾಲಾಗಬಹುದು.

ಇಂತಹ ಘಟನೆಗಳು ಇದೇ ಮೊದಲಲ್ಲ, ಈ ಹಿಂದೆಯೂ ಹೈದರಾಬಾದಿನಲ್ಲಿ ಇನ್ನೋವಾ ಕಾರೊಂದು ಬಸ್‌ ಅನ್ನು ಹಿಂದಿಕ್ಕಲು ಹೋಗಿ ಅಪಘಾತಕ್ಕೆ ಸಿಲುಕಿ ನಾಲ್ವರು ಸಾವನ್ನಪ್ಪಿದ್ದರು. ದೇಶಾದ್ಯಂತ ಇಂತಹ ಪ್ರಕರಣಗಳು ಲೆಕ್ಕಸಿಗದಷ್ಟಿವೆ, ಆದರೂ ಇಂತಹ ಅಪಘಾತಗಳು ಆಗುತ್ತಿರುವುದು ವಿಪರ್ಯಾಸ. ನಿಯಮ ಪಾಲಿಸಿ ಬೃಹತ್ ವಾಹನಗಳನ್ನು ಓವರ್‌ಟೇಕ್ ಮಾಡುವಾಗ ಆಯ ವಾಹನಗಳಿಗೆ ಬ್ಲೈಂಡ್ ಸ್ಪಾಟ್ ಅಂತರದಿಂದ ದೂರವಿರಬೇಕು. ಜೊತೆಗೆ ಅತಿ ವೇಗದ ಓವರ್‌ಟೇಕ್ ಮಾಡದಿರುವುದರಿಂದ ಅಗಫಾತಗಳನ್ನು ತಪ್ಪಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
The fastest overtake Hyundai Grand i10 stuck between two trucks
Story first published: Saturday, February 4, 2023, 12:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X