ಆಟೋ ಎಕ್ಸ್‌ಪೋದಲ್ಲಿ ಬಹುನೀರಿಕ್ಷಿತ ಟಾಟಾ ಪಂಚ್ ಇವಿ ಅನಾವರಣ: ಬೆಲೆ ಎಷ್ಟಿರಬಹುದು?

ಎಲ್ಲರೂ ಕಾತರದಿಂದ ಎದುರು ನೋಡುತ್ತಿರುವ ದೆಹಲಿ ಆಟೋ ಎಕ್ಸ್‌ಪೋ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ವಿವಿಧ ವಾಹನ ತಯಾರಿಕ ಕಂಪನಿಗಳು, ಹೊಸ ಮಾದರಿಗಳು ಮತ್ತು ಫೇಸ್‌ಲಿಫ್ಟೆಡ್ ಆವೃತ್ತಿಗಳನ್ನು ಅನಾವರಗೊಳಿಸಲು ರೆಡಿಯಾಗುತ್ತಿವೆ. ಇದೇ ಜನವರಿ 13 ರಿಂದ 18 ರವರೆಗೆ ಆಟೋ ಎಕ್ಸ್‌ಪೋ ಅದ್ದೂರಿಯಾಗಿ ನಡೆಯಲಿದೆ.

ಟಾಟಾ ಮೋಟಾರ್ಸ್ ತನ್ನ ಬಹುನಿರೀಕ್ಷಿತ 'ಪಂಚ್' ಎಲೆಕ್ಟ್ರಿಕ್ ಆವೃತ್ತಿಯನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿದೆ. ಟಾಟಾ ಪಂಚ್ ಇವಿಯು ICE ರೂಪಾಂತರಕ್ಕಿಂತ ಬೇರೆಯಾಗಿ ಕಾಣಲು ಬಾಹ್ಯ ಮತ್ತು ಆಂತರಿಕ ವಿನ್ಯಾಸಗಳಲ್ಲಿ ಕೊಂಚ ಬದಲಾವಣೆಗಳನ್ನು ಪಡೆದುಕೊಂಡಿದೆ ಎಂದು ಹೇಳಬಹುದು. ಎಲೆಕ್ಟ್ರಿಕ್-ಥೀಮಿನ ಸ್ಟೈಲಿಂಗ್ ಟ್ರೋಪ್‌ಗಳು ಮತ್ತು ತ್ರಿ-ಆರೋ ಡಿಸೈನ್ ನೊಂದಿಗೆ ಎಲೆಕ್ಟ್ರಿಕ್-ಸ್ಪೀಸಿಫಿಕ್ ಟೀಲ್ ಬ್ಲೂ ಶೇಡ್ ನಂತಹ ವೈಶಿಷ್ಟ್ಯಗಳನ್ನು ಈ ಇವಿ ಹೊಂದಿರಲಿದೆ. ಜೊತೆಗೆ ಇತರೆ ಟಾಟಾ ಇವಿಗಳಂತೆ 'ಹ್ಯುಮಾನಿಟಿ' ಲೈನ್ ಗ್ರಿಲ್ ಅನ್ನು ಪಡೆದಿರಲಿದೆ.

ಆಟೋ ಎಕ್ಸ್‌ಪೋದಲ್ಲಿ ಬಹುನೀರಿಕ್ಷಿತ ಟಾಟಾ ಪಂಚ್ ಇವಿ ಅನಾವರಣ

ನೂತನ ಟಾಟಾ ಪಂಚ್ ಇವಿ ವಿನ್ಯಾಸ ಹಾಗೂ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ತನ್ನ ಹಿಂದಿನ ಪೆಟ್ರೋಲ್ ರೂಪಾಂತರದಂತೆಯೇ ಹೆಚ್ಚಿನ ಲುಕ್ ಅನ್ನು ಹೊಂದಿರಲಿದೆ. ಇದು ಡಾರ್ಕ್ ಟೋನ್ ಇಂಟೀರಿಯರ್ ಜೊತೆಗೆ ಇನ್ಸ್ಟ್ರುಮೆಂಟ್ ಪ್ಯಾನೆಲ್ ಸುತ್ತಲೂ ಎಲೆಕ್ಟ್ರಿಕ್ ಬ್ಲೂ ಅಚ್ಛೇನ್ಟ್ಸ್, AC ವೆಂಟ್‌ಗಳು ಹಾಗೂ ಸೀಟ್ ಫ್ಯಾಬ್ರಿಕ್ ಮೇಲೆ ಟ್ರೈ-ಆರೋ ಪ್ಯಾಟರ್ನ್‌ನೊಂದಿಗೆ ಈ ಕಾರು, ಚೆನ್ನಾಗಿ ಕಾಣುತ್ತದೆ. ಇದು ಹೊಸ ಖರೀದಿದಾರರನ್ನು ಪಂಚ್ ಇವಿಯತ್ತ ಸೆಳೆಯಲು ಟಾಟಾ ಕಂಪನಿಗೆ ನೆರವಾಗಬಹುದು.

ಟಾಟಾ ಪಂಚ್ ಇವಿ ಆಲ್ಫಾ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಆಲ್ಟ್ರೊಜ್ ಹ್ಯಾಚ್‌ಬ್ಯಾಕ್‌ ಕೂಡ ಇದನ್ನೇ ಹೊಂದಿದೆ. ಪಂಚ್ ಇವಿಯು ಜಿಪ್ಟ್ರಾನ್ ಎಲೆಕ್ಟ್ರಿಕ್ ಪವರ್‌ಟ್ರೇನ್‌ನಿಂದ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. ಸದ್ಯ ಟಿಯಾಗೊ ಮತ್ತು ಟಿಗೊರ್ ಇವಿಗಳು ಇದೇ ಪವರ್‌ಟ್ರೇನ್‌ನಿಂದ ಪವರ್ ಪಡೆಯುತ್ತಿವೆ. ಆದರೆ, ಸ್ವಲ್ಪ ವಿಭಿನ್ನ ಟ್ಯೂನಿಂಗ್ ಮತ್ತು ಹೆಚ್ಚಿನ ಪವರ್ ಔಟ್‌ಪುಟ್ ಹೊಸ ಪಂಚ್ ಇವಿಯಲ್ಲಿ ಇರಬಹದು. ಇದು 90-100 hp ಪವರ್ ಮತ್ತು 170-200 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ.

ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಿರುವ ಪಂಚ್ ಇವಿ ಬ್ಯಾಟರಿಯ ಬಗ್ಗೆ ಹೇಳುವುದಾದರೆ, ಟಾಟಾ ಪಂಚ್ ಇವಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅವುಗಳೆಂದರೇ ಮಿಡಲ್ - ರೇಂಜ್ ಮತ್ತು ಲಾಂಗ್ - ರೇಂಜ್. ಟಾಟಾ ಸೆಪ್ಟೆಂಬರ್ 2023ರಲ್ಲಿ ಪಂಚ್ ಇವಿಯನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು ಎಂದು ಅಂದಾಜಿಸಲಾಗಿದ್ದು, ಈ ಇವಿ 10 ಲಕ್ಷದಿಂದ 14 ಲಕ್ಷದವರೆಗೆ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿರಬಹುದು.

ಟಾಟಾ ಮೋಟಾರ್ಸ್, ಇತ್ತೀಚೆಗೆ ದೇಶೀಯ ಮಾರುಕಟ್ಟೆಯಲ್ಲಿ ಟಿಯಾಗೊ ಇವಿಯನ್ನು ಬಿಡುಗಡೆ ಮಾಡಿದೆ. ಕಂಪನಿಯು, ಪ್ರಸ್ತುತ ಭಾರತದಲ್ಲಿ ತನ್ನ ಇವಿ ವಿಭಾಗವನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ. ಆದರೂ, ಹೆಚ್ಚಿನ ಸಂಖ್ಯೆಯ ಇವಿ ಮಾರಾಟದೊಂದಿಗೆ ಭಾರತೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ ಎಂದು ಹೇಳಬಹುದು. ಸದ್ಯ ಮಾರುಕಟ್ಟೆಯಲ್ಲಿ ಟಿಯಾಗೊ ಇವಿ, ಟಿಗೂರ್ ಇವಿ, ಟಾಟಾ ನಿಕ್ಸಾನ್ ಇವಿ ಪ್ರೈಮ್ ಮತ್ತು ನಿಕ್ಸಾನ್ ಇವಿ ಮ್ಯಾಕ್ಸ್ ಅನ್ನು ಮಾರಾಟ ಮಾಡುತ್ತಿದೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಟಿಯಾಗೊ ಇವಿ ಅತ್ಯಂತ ಕೈಗೆಟುಕುವ ಬೆಲೆಯ ಕಾರಾಗಿದೆ. ಇದರ ಆರಂಭಿಕ ಬೆಲೆ ರೂ.8.49 ಲಕ್ಷ ಇದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.11.79 ಲಕ್ಷದವರೆಗೆ ಇದೆ. ಟಿಯಾಗೊ ಇವಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. 19.2kWh ಬ್ಯಾಟರಿ 250 km ರೇಂಜ್ ನೀಡಿದರೇ, 24kWh ಬ್ಯಾಟರಿ ಪ್ಯಾಕ್ 315 km ರೇಂಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಕಂಪನಿ ಇವಿ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, ಇತ್ತೀಚೆಗೆ ಲಾಂಚ್ ಆಗಿದ್ದ ಟಿಯಾಗೊ ಇವಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭರ್ಜರಿಯಾಗಿ ಬುಕಿಂಗ್ ಪಡೆದುಕೊಂಡಿದೆ. ಅದೇರೀತಿ ಪಂಚ್ ಇವಿಯು ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳ್ಳಲಿದ್ದು, ಅದರ ಮೇಲೆಯೂ ನಿರೀಕ್ಷೆಗಳು ಹೆಚ್ಚಾಗಿದೆ. ಇದು ಟಿಯೊಗೊ ಇವಿಗಿಂತ ಹೆಚ್ಚಿನ ಮೈಲೇಜ್ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದ್ದು, ಬೇರೆ ಕಂಪನಿ ಇವಿಗಳಿಗೆ ಭಾರೀ ಪೈಪೋಟಿ ನೀಡುವುದು ಖಂಡಿತ ಎಂದು ಹೇಳಬಹುದು.

More from DriveSpark

Article Published On: Monday, January 9, 2023, 10:37 [IST]
English summary
The much awaited tata punch ev unveiled at the auto expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+