ಬಹುನಿರೀಕ್ಷಿತ ಟಾಟಾ ಟಿಯಾಗೊ ಇವಿ ಟೆಸ್ಟ್ ಡ್ರೈವ್ ಪ್ರಾರಂಭ
ಟಾಟಾ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಟಿಯಾಗೊ ಇವಿಯನ್ನು ಬಿಡುಗಡೆ ಮಾಡಿತ್ತು. ಅದರ ಬುಕಿಂಗ್ ಅಕ್ಟೋಬರ್ 10ರಂದು ರೂ.21,000 ಟೋಕನ್ ಮೊತ್ತಕ್ಕೆ ಪ್ರಾರಂಭವಾಗಿತ್ತು. ಮೂರು ತಿಂಗಳ ನಂತರ, ಕಂಪನಿಯು ಅಂತಿಮವಾಗಿ ಭಾರತದಾದ್ಯಂತ ತನ್ನ ಡೀಲರ್‌ಶಿಪ್‌ಗಳಲ್ಲಿ ಟೆಸ್ಟ್ ಡ್ರೈವ್‌ಗಳನ್ನು ನೀಡಲು ಪ್ರಾರಂಭಿಸಿದ್ದು, ಶೀಘ್ರದಲ್ಲೇ ವಿತರಣೆಗಳು ಪ್ರಾರಂಭವಾಗಲಿವೆ.
ಟಾಟಾ ಮೋಟಾರ್ಸ್ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರು ಟಿಯಾಗೊ ಇವಿಯನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಖರೀದಿಗೆ ನೀಡುತ್ತಿದೆ. ಅವುಗಳೆಂದರೆ, 19.2kWh ಮತ್ತು 24kWh ಬ್ಯಾಟರಿ. ಕ್ರಮವಾಗಿ 250 km ಮತ್ತು 315 km ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಚಿಕ್ಕ ಬ್ಯಾಟರಿ ಪ್ಯಾಕ್ ಪವರ್‌ಟ್ರೇನ್ 61 PS ಪವರ್, 110 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ದೊಡ್ಡ ಬ್ಯಾಟರಿ 75 PS ಪವರ್ ಮತ್ತು 114 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಈ ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಏಳು-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 4 - ಸ್ಪೀಕರ್ ಹರ್ಮನ್ ಸೌಂಡ್ ಸಿಸ್ಟಮ್, ಆಟೋ AC, ಫೋಲ್ಡಬಲ್ ORVMಗಳು, ರೈನ್-ಸೆನ್ಸಿಂಗ್ ವೈಪರ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು ರಿಜೆನೆರೇಟಿವ್ ಬ್ರೇಕಿಂಗ್ ಅನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ, ಟಾಟಾ ಮೋಟಾರ್ಸ್ ಈ ಟಿಯಾಗೊ ಇವಿಯಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ರಿಯರ್ ವ್ಯೂ ಕ್ಯಾಮೆರಾಗಳನ್ನು ನೀಡಿದೆ.
ಟಿಯಾಗೊ ಆರಂಭಿಕ ಬೆಲೆ ರೂ.8.49 ಲಕ್ಷ ಇದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.11.79 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇದೆ. ಈಗ ಯಾವುದೇ ದಿನ ಈ ದರ ಹೆಚ್ಚಾಗುವ ನಿರೀಕ್ಷೆಯಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಟಿಯೊಗೊ ಇವಿ, ಯಾವುದೇ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ. ಬಿಡುಗಡೆ ನಂತರ Citroen eC3, ಟಿಯಾಗೊ ಇವಿಗೆ ಪೈಪೋಟಿ ನೀಡಬಹುದು. ಟಿಯೊಗೊ ಐದು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಅವುಗಳೆಂದರೆ ಟೀಲ್ ಬ್ಲೂ, ಡೇಟೋನಾ ಗ್ರೇ, ಪ್ರಿಸ್ಟೈನ್ ವೈಟ್, ಮಿಡ್ನೈಟ್ ಪ್ಲಮ್ ಮತ್ತು ಟ್ರಾಪಿಕಲ್ ಮಿಸ್ಟ್.
ಈ ಕಾರು ಎರಡು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ. ಅವುಗಳೆಂದರೆ, ಸಿಟಿ ಮತ್ತು ಸ್ಪೋರ್ಟ್. ಜೊತೆಗೆ ನಾಲ್ಕು ಹಂತದ ರೀಜೆನ್ ಸೆಟ್ಟಿಂಗ್‌ಗಳನ್ನು ಹೊಂದಿದೆ. ಈ ಕಾರಿನ ಸ್ಟೀರಿಂಗ್ ಸಾಕಷ್ಟು ಹಗುರವಾಗಿದ್ದು, ನಿಧಾನವಾದ ವೇಗದಲ್ಲಿ ಮತ್ತು ನಗರ ಟ್ರಾಫಿಕ್‌ನಲ್ಲಿ ಚಾಲನೆ ಮಾಡಲು ಸುಲಭವಾಗಿದೆ ಎಂದು ಹೇಳಲಾಗಿದೆ. ಈ ಕಾರಿನ ಉತ್ತಮ ಪರ್ಫಾಮೆನ್ಸ್ ಚಾಲಕರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದರ ಬೆಲೆಯು ಅಗ್ಗವಾಗಿರುವುದರಿಂದ ಟಿಯಾಗೊ ಇವಿ ಗ್ರಾಹಕರಿಗೆ ಇಷ್ಟವಾಗುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಡಿಸೆಂಬರ್ 2022 ರಲ್ಲಿ ಟಾಟಾ ಮೋಟಾರ್ಸ್ 3,868 ಯುನಿಟ್ ಇವಿಗಳನ್ನು ಮಾರಾಟ ಮಾಡಿದ್ದು, ಶೇಕಡ 64.2 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ವೆಹಿಕಲ್ ಪೋರ್ಟ್‌ಫೋಲಿಯೋ ಪ್ರಸ್ತುತ ಟಿಯಾಗೊ ಇವಿ, ಟಿಗೋರ್ ಇವಿ,
ನೆಕ್ಸಾನ್ ಇವಿಯನ್ನು ಒಳಗೊಂಡಿದೆ. ನೆಕ್ಸಾನ್ ಇವಿ ಪ್ರೈಮ್ 30.2 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಪಡೆದರೆ, ನೆಕ್ಸಾನ್ ಇವಿ ಮ್ಯಾಕ್ಸ್ ದೊಡ್ಡ 40.5 kWh ಬ್ಯಾಟರಿಯನ್ನು ಹೊಂದಿದೆ. ಪ್ರತಿ ಚಾರ್ಜ್‌ಗೆ ಕ್ರಮವಾಗಿ 312 ಕಿಮೀ ಮತ್ತು 437 ಕಿಮೀ ಮೈಲೇಜ್ ನೀಡುತ್ತದೆ ಎಂದು ಹೇಳಬಹುದು.
ಟಾಟಾ ಟಿಯಾಗೊ ಇವಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು ಐದು ಆಸನಗಳ ಸಿಟ್ರೊಯೆನ್ eC3 ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ರೆಡಿಯಾಗಿದೆ. ಬೆಲೆ ರೂ.10 ಲಕ್ಷ ಮತ್ತು ರೂ.12.5 ಲಕ್ಷ (ಎಕ್ಸ್ ಶೋರೂಂ) ಇರಬಹುದು. ಸಿಟ್ರೊಯೆನ್ eC3 ಪ್ರಮಾಣಿತ ICE ಮಾದರಿಗೆ ಸಾಕಷ್ಟು ಹೋಲಿಕೆಗಳನ್ನು ಹೊಂದಿದ್ದು, ಮುಂಭಾಗದ ಫೆಂಡರ್‌ನಲ್ಲಿ ಚಾರ್ಜಿಂಗ್ ಪೋರ್ಟ್ ಅನ್ನು ಸೇರಿಸಲಾಗಿದ್ದು, ಮ್ಯಾನ್ಯುವಲ್ ಸ್ಟಿಕ್ ಶಿಫ್ಟರ್ ಬದಲಿಗೆ ಹೊಸ ಡ್ರೈವ್ ಕಂಟ್ರೋಲ್ ಸೇರಿಸುವುದನ್ನು ಹೊರತುಪಡಿಸಿ, ಒಳಾಂಗಣವು ಪೆಟ್ರೋಲ್ ಚಾಲಿತ C3ಗೆ ಹೋಲುತ್ತದೆ ಎಂದು ಹೇಳಬಹುದು.
eC3 ಕಾರು, 30.2 kWh ಬ್ಯಾಟರಿ ಅನ್ನು ಹೊಂದಿದ್ದು, ಇದು ಸುಮಾರು 84 bhp ಪವರ್ ಮತ್ತು 143 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು 3.3 kW ಆನ್‌ಬೋರ್ಡ್ AC ಚಾರ್ಜರ್ ಅನ್ನು ಪಡೆದಿದ್ದು, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ನಾಲ್ಕು-ಸ್ಪೀಕರ್ ಆಡಿಯೊ ಸಿಸ್ಟಮ್, ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಸ್ಟೀರಿಂಗ್ ವೀಲ್, ರಿಮೋಟ್ ಸೆಂಟ್ರಲ್ ಲಾಕಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರಬಹುದು.


Click it and Unblock the Notifications