ಎರಡೇ ನಿಮಿಷದಲ್ಲಿ ಫಾರ್ಚ್ಯೂನರ್ ಎಗರಿಸಿದ ಕಳ್ಳ: ಇಲ್ಲಿದೆ ನೋಡಿ ಅದರ ಟಾಪ್ ಸೀಕ್ರೇಟ್
ಇತ್ತೀಚಿನ ದಿನಗಳಲ್ಲಿ ಬರುವಂತಹ ಮಾಡರ್ನ್ ಕಾರುಗಳೆಲ್ಲವೂ ತುಂಬಾ ಸೇಫ್ಟಿ ಫೀಚರ್‌ಗಳೊಂದಿಗೆ ಬಂದರೂ ಕಳ್ಳರು ಮಾತ್ರ ಒಂದಲ್ಲಾ ಒಂದು ರೀತಿಯಲ್ಲಿ ಕಾರುಗಳನ್ನು ಕದ್ದುಕೊಂಡು ಹೋಗುತ್ತಾರೆ. ಎಷ್ಟೇ ಸೇಫ್ಟಿ ಫೀಚರ್‌ಗಳಿದ್ದರೂ ಕಳ್ಳರು ಮಾತ್ರ ಕೆಲವೇ ನಿಮಿಷಗಳಲ್ಲಿ ಅದನ್ನು ಮಂಗಮಾಯ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ.
ಇಲ್ಲೊಂದು ಕಡೆ ಟೊಯೋಟಾ ಕಂಪನಿಯ ಹೆಸರಾಂತ ಕಾರಾದಂತಹ ಟೊಯೊಟಾ ಫಾರ್ಚ್ಯೂನರ್ (Toyota Fortuner) ಅನ್ನು ಕಳ್ಳನೊಬ್ಬ ಎರಡೇ ನಿಮಿಷದಲ್ಲಿ ಕದ್ದು ಮಾಯಮಾಡಿದ ಘಟನೆಯೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಕಾಣುವಂತೆ ಸ್ಕೂಟರ್‌ನ ಹಿಂಬದಿಯ ಸವಾರನಾಗಿ ಬಂದ ಕಳ್ಳ ಯಾರೂ ತಿಳಿಯ ಹಾಗೆ ಮಿಂಚಿನ ವೇಗದಲ್ಲಿ ಕಾರನ್ನು ಕದ್ದಿದ್ದಾನೆ.

ಸ್ಕೂಟರ್‌ನಿಂದ ಇಳಿದ ಕಳ್ಳ ಕೆಲವೇ ಕ್ಷಣದಲ್ಲಿ ಕಾರಿನ ಡೋರನ್ನು ತೆರೆದಿದ್ದಾನೆ. ವಿಡಿಯೋದಲ್ಲಿ ಕಾಣುವಂತೆ ಕಳ್ಳ ಬಾಗಿಲು ತೆರೆಯುವಾಗ ಅಲಾರ್ಮ್ ಆನ್ ಆದಂತೆ ಕಾಣುತ್ತಿದೆ. ಯಾಕೆಂದರೆ ಕಾರಿನ ಹಝಾರ್ಡ್ ಲೈಟ್‌ಗಳು ಸಹ ಆನ್ ಆಗಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಯಾವುದೇ ಶಬ್ದ ಇಲ್ಲದಿರುವುದರಿಂದ ಅಲಾರ್ಮ್ ಶಬ್ದ ಆಗಿದೆಯೇ ಎಂದು ಹೇಳುವುದು ಕಷ್ಟ.
ಇನ್ನು ಕಾರಿನ ಒಳನುಗ್ಗಿದ ಕಳ್ಳ ಯಾವುದೇ ರೀತಿಯಲ್ಲೂ ಕಷ್ಟಪಡದೇ ಅದನ್ನು ಸ್ಟಾರ್ಟ್ ಮಾಡಿದ್ದಾನೆ. ಉತ್ತರ ಪ್ರದೇಶದ ಕಾನ್ಪುರ್‌ನಲ್ಲಿ ಘಟನೆ ಸಂಭವಿಸಿದ್ದು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಇನ್ನೂ ಸಹ ಕಳ್ಳ ಯಾರು ಎಂಬುದನ್ನು ಗುರುತಿಸಬೇಕಾಗಿದೆ ಎಂದು ವರದಿಗಳು ತಿಳಿಸಿವೆ.
ಇತ್ತೀಚೆಗೆ ಮಾರುಕಬಟ್ಟೆಗೆ ಲಗ್ಗೆ ಇಡುತ್ತಿರುವ ಬಹುತೇಕ ಎಲ್ಲಾ ಕಾರುಗಳು ಸಹ ಹಲವಾರು ಆ್ಯಂಟಿ ಥೆಪ್ಟ್ ಫೀಚರ್‌ಗಳೊಂದಿಗೆ ಬರುತ್ತಿದೆ. ಆದರೂ ಕಳ್ಳರು ತಮ್ಮ ಕೈಚಳಕವನ್ನು ತೋರುತ್ತಿದ್ದಾರೆ. ಇನ್ನೂ ಮಾಡರ್ನ್ ಕಾರುಗಳು ಕೀ ಲೆಸ್ ಫಾಬ್ಸ್ ಜೊತೆ ಬರುತ್ತಿರುವುದರಿಂದ ಕಳ್ಳರಿಗೆ ಇದು ತುಂಬಾ ಸಹಾಯಕವಾಗಿದೆ.
ಯಾಕೆಂದರೆ ಇಂತಹ ಕಾರುಗಳ ಡ್ಯೂಪ್ಲಿಕೆಟ್ ಕೀ ಯನ್ನು ತಯಾರಿಸಲು ಕಳ್ಳರಿಗೆ ಒರಿಜಿನಲ್ ಕೀಗಳು ಬೇಕೆಂದಿಲ್ಲ. ಕಳ್ಳರಿಗೆ ಡ್ಯೂಪ್ಲಿಕೆಟ್ ಕೀಗಳನ್ನು ತಯಾರಿಸಲು ಕಾರಿನ VIN ಅಥವಾ ವೆಹಿಕಲ್ ಐಡಿಯೆಂಟಿಫಿಕೇಷನ್ ನಂಬರ್ ಮತ್ತು ಕಾರನ್ನು ಸ್ವಂತಗೊಳಿಸಿದ ಬಳಿಕ ಡೀಲರ್‌ಗಳಿಂದ ಪಡೆಯುವ ಒಂದು ಸೆಕ್ಯುರಿಟಿ ಪಿನ್ ಇದ್ದರೆ ಸಾಕು.
ಈ ಮಾಹಿತಿಗಳನ್ನು ಬಳಸಿಕೊಂಡು ಯಾರು ಬೇಕಾದರೂ ಡ್ಯೂಪ್ಲಿಕೇಟ್ ಕೀಗಳನ್ನು ತಯಾರಿಸಬಹುದಾಗಿದೆ. ಈ ಡ್ಯೂಪ್ಲಿಕೇಟ್ ಕೀ ಗಳ ಸಹಾಯದಿಂದ ಒರಿಜಿನಲ್ ಕೀ ಯಂತೆ ಎಲ್ಲಾ ಫೀಚರ್‌ಗಳನ್ನು ಬಳಸಬಹುದಾಗಿದೆ. ಈ ಘಟನೆಗೆ ಸಂಭಂಧಿಸಿದಂತೆ ಕಳ್ಳ, ಈ ಕಾರಿನ VIN ನಂಬರನ್ನು ಫೊಟೊ ತೆಗೆದು ನಂತರ ಬಳಸಿಕೊಂಡಿದ್ದಾಗಿರಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications