ಖಂಡಿತ ಇದು ಜೀಪ್ ವ್ರಾಂಗ್ಲರ್ ಅಲ್ಲ ಭಾರತದ ಜನಪ್ರಿಯ ಕಂಪನಿಯ ಪರಿಚಿತ ಎಸ್‌ಯುವಿ
ಭಾರತದಲ್ಲಿ ಆಟೋಮೊಬೈಲ್ ಉತ್ಸಾಹಿಗಳು ಹಳೆಯ ಕಾರುಗಳನ್ನು ಮಾಡಿಫೈಗೊಳಿಸಿ ಇತರರಿಗಿಂತ ಭಿನ್ನವಾಗಿ ಕಾಣಲು ಆಸಕ್ತಿ ತೋರುತ್ತಾರೆ. ಅಂತಯೇ ತಮ್ಮ ದೇಶಿಯ ಕಾರುಗಳನ್ನು ಅಂತರಾಷ್ಟ್ರೀಯ ಮಾದರಿಗಳಂತೆ ಮಾಡಿಫೈಗೊಳಿಸುತ್ತಿದ್ದಾರೆ. ಪ್ರಸ್ತುತ ಅಂತಹದ್ದೇ ವಿಡಿಯೋ ವೈರಲ್ ಆಗಿದ್ದು, ಮಹೀಂದ್ರಾದ ಎಸ್‌ಯುವಿವೊಂದನ್ನು ಜೀಪ್ ವ್ರಾಂಗ್ಲರ್ ರೂಬಿಕಾನ್‌ನಂತೆ ಮಾರ್ಪಡಿಸಲಾಗಿದೆ.
ಮಹೀಂದ್ರ ಥಾರ್ ಪ್ರಸ್ತುತ ಭಾರತದಲ್ಲಿ ಅತ್ಯಂತ ಕೈಗೆಟುಕುವ 4×4 SUV ಗಳಲ್ಲಿ ಒಂದಾಗಿದೆ. ಈ ಎಸ್‌ಯುವಿಯು ಅಮೇರಿಕನ್ 4×4 ಎಸ್‌ಯುವಿ ಜೀಪ್ ರಾಂಗ್ಲರ್‌ನಂತೆ ಕಾಣುತ್ತದೆ ಎಂಬ ವಿಷಯ ನಮಗೆಲ್ಲರಿಗೂ ತಿಳಿದಿದೆ. ಹಾಗೆಯೇ ಜನರು ಅದನ್ನು ಜೀಪ್ ವ್ರಾಂಗ್ಲರ್‌ನಂತೆ ಮಾರ್ಪಾಡು ಮಾಡುತ್ತಿರುವುದು ಕೂಡ ಎಲ್ಲರಿಗೂ ಗೊತ್ತು, ಆದರೆ ಜೀಪ್ ರಾಂಗ್ಲರ್‌ನಂತೆ ಮಾಡಿಫೈಗೊಳಿಸಲು ಇತರ ಮಹೀಂದ್ರಾ SUV ಗಳು ಕೂಡ ಇವೆ ಎಂಬುದು ಎಷ್ಟು ಮಂದಿಗೆ ಗೊತ್ತು.

ಹೌದು ಮಹೀಂದ್ರಾ ಬೊಲೆರೊ ಅವುಗಳಲ್ಲಿ ಒಂದಾಗಿದೆ. ಮಹೀಂದ್ರಾ ಬೊಲೆರೊವನ್ನು ಇದೀಗ ಬಹುತೇಕ ಜೀಪ್ ವ್ರಾಂಗ್ಲರ್ ರೂನಿಕಾನ್‌ನಂತೆ ಪರಿವರ್ತಿಸಲಾಗಿದೆ. ಈ ಕುರಿತ ವಿಡಿಯೋವನ್ನು ದಯಾಕರನ್ ವ್ಲಾಗ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ವೀಡಿಯೊದಲ್ಲಿ, ಬೊಲೆರೋವನ್ನು ಜೀಪ್ ವ್ರಾಂಗ್ಲರ್ ರೂಬಿಕಾನ್‌ನಂತೆ ಮಾಡಲಾದ ಎಲ್ಲಾ ಮಾರ್ಪಾಡುಗಳನ್ನು vlogger ತೋರಿಸಿದ್ದಾರೆ. ಮುಖ್ಯವಾಗಿ ಈ ಎಸ್‌ಯುವಿಗೆ ಪ್ರಮುಖ ಆಕರ್ಷಣೆ ಅದರ ಮುಭಾಗವಾಗಿದ್ದು, ಥೇಟ್ ವ್ರಾಂಗ್ಲರ್ ಡಿಸೈನ್ ನೀಡಲಾಗಿದೆ.
ಕಾರಿನ ಮುಂಭಾಗವು ಜೀಪ್‌ನಂತಹ ಲಂಬವಾದ ಸ್ಲ್ಯಾಟ್‌ಗಳೊಂದಿಗೆ ಕಸ್ಟಮ್ ಮಾಡಿದ ಮೆಟಲ್ ಗ್ರಿಲ್ ಅನ್ನು ಅಳವಡಿಸಲಾಗಿದೆ. ಜೀಪ್ ಎಂಬ ಅಕ್ಷರಗಳು ಕೂಡ ಮಾಡಿಫೈಗೊಂಡ ಬೊಲೆರೋ ಮುಂಭಾಗದಲ್ಲಿ ಕಾಣಸಿಗುತ್ತವೆ. ಹಾಗೆಯೇ ಈ ಕಾರಿಗೆ ರಿಂಗ್ ಮಾದರಿಯ LED DRL ಗಳೊಂದಿಗೆ ರೌಂಡ್ ಆಫ್ಟರ್ ಮಾರ್ಕೆಟ್ LED ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಟರ್ನ್ ಇಂಡಿಕೇಟರ್‌ಗಳನ್ನು ಗ್ರಿಲ್‌ನ ಕೆಳಗಿನ ಭಾಗದಲ್ಲಿ ಇರಿಸಲಾಗಿದ್ದು, ವ್ರಾಂಗ್ಲರ್ ವಿನ್ಯಾಸವನ್ನು ನೀಡುವುದರ ಜೊತೆಗೆ ಸ್ಪೋರ್ಟಿಯಾಗಿ ಕಾಣುವಂತೆ ಮಾಡಿದ್ದಾರೆ.

ಈ SUV ಯಲ್ಲಿನ ORVM ಗಳು ರಾಂಗ್ಲರ್‌ನಲ್ಲಿ ಕಂಡುಬರುವಂತೆಯೇ ಕಾಣುವ ಆಫ್ಟರ್ ಮಾರ್ಕೆಟ್ ಘಟಕಗಳಾಗಿವೆ. ಸೈಡ್ ಪ್ರೊಫೈಲ್‌ನಲ್ಲಿ ಒಬ್ಬರು ಗಮನಿಸಬೇಕಾದ ಈ SUV ಯ ಮೊದಲ ವಿಷಯವೆಂದರೆ ವೀಲ್‌ಗಳು. ಇದು ಕಡಿಮೆ ಪ್ರೊಫೈಲ್ ಟೈರ್‌ಗಳಲಾಗಿದ್ದು, 22 ಇಂಚಿನ ಆಫ್ಟರ್‌ಮಾರ್ಕೆಟ್ ಅಲಾಯ್ ವೀಲ್‌ಗಳನ್ನು ಫಿಟ್ ಮಾಡಲಾಗಿದೆ. ಇನ್ನು ಬಂಪರ್ ಬಗ್ಗೆ ಹೇಳುವುದಾದರೆ ಸಂಪೂರ್ಣವಾಗಿ ಮೆಟಲ್‌ನಿಂದ ಮಾಡಲ್ಪಟ್ಟಿದ್ದು, ಇದು ಕೂಡ ಕಸ್ಟಮ್ ಘಟಕವಾಗಿದೆ.
ಬಂಪರ್‌ನಲ್ಲಿ ಫಾಗ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದ್ದು, ಅದರ ಮೇಲೆ ಎಲ್ ಇಡಿ ಲೈಟ್ ಬಾರ್ ಕೂಡ ಇದೆ. ಈ ಬೊಲೆರೊದಲ್ಲಿನ ಹೆಚ್ಚಿನ ಪ್ಯಾನೆಲ್‌ಗಳನ್ನು ಕಸ್ಟಮ್ ಮಾಡಲಾಗಿದೆ. ಹಾಗೆಯೇ ಫೆಂಡರ್ ಅನ್ನು ಕೂಡ ಮೆಟಲ್‌ನಿಂದ ತಯಾರಿಸಲಾಗಿದೆ. ಅದರ ಮೇಲೆ ಬಾನೆಟ್ ಮೇಲೆ ರೂಬಿಕಾನ್ ಸ್ಟಿಕ್ಕರ್ ಹಾಕಲಾಗಿದೆ. ಇದರ ಜೊತೆಗೆ ಬಾನೆಟ್ ಲಾಕಿಂಗ್ ಕ್ಲಿಪ್‌ಗಳನ್ನು ಸಹ ಸ್ಥಾಪಿಸಲಾಗಿದೆ. ಈ ಮೂಲಕ ಮಾಡಿಫೈಗೊಳಿಸಿದ ವ್ಯಕ್ತಿಯು ಪ್ರತಿ ಸಣ್ಣ ವಿಭಾಗವನ್ನು ಸೂಕ್ಷ್ಮವಾಗಿ ಇಲ್ಲಿ ಅಳವಡಿಸಿರುವುದು ತಿಳಿಯುತ್ತದೆ.
ಒಟ್ಟಾರೆ ಮಾಡಿಫೈಗೊಂಡ ಬೊಲೆರೊ ಸ್ಟಾಕ್ ಆವೃತ್ತಿಗಿಂತ ಈಗ ಎತ್ತರದಲ್ಲಿದೆ, ಏಕೆಂದರೆ ಇದು 10 ಇಂಚಿನ ಲಿಫ್ಟ್ ಕಿಟ್‌ನೊಂದಿಗೆ ಬಂದಿರುವುದರಿಂದ ಮೆಟಲ್ ರಾಕ್ ಸ್ಲೈಡರ್ ಅಳವಡಿಸಿದ್ದು, ಈ SUV ಯಲ್ಲಿ ಹಿಂಭಾಗದ ಫೆಂಡರ್ ಸಹ ಮೇಲಕ್ಕೆ ಇರುತ್ತದೆ. ಇದು ಇನ್ನು ಮುಂದೆ ಮಹೀಂದ್ರಾ ಬೊಲೆರೊದಂತೆ ಕಾಣುವುದೇ ಇಲ್ಲ. ಹಿಂಭಾಗದಲ್ಲಿ, ಮೆಟಲ್ ಬಂಪರ್, 22 ಇಂಚಿನ ಸ್ಪೇರ್ ವೀಲ್, LED ಟೈಲ್ ಲ್ಯಾಂಪ್‌ಗಳು ಮತ್ತು ಮರುವಿನ್ಯಾಸಗೊಳಿಸಲಾದ ಟೈಲ್‌ಗೇಟ್ ಅದ್ಬುತವಾಗಿ ಕಾಣುತ್ತವೆ.
ಚಲಿಸುವಾಗ SUV ಸಂಪೂರ್ಣವಾಗಿ ವಿಭಿನ್ನವಾಗಿ ಕಾಣುವ ಕ್ಯಾಬಿನ್ ಅನ್ನು ಪಡೆಯುತ್ತದೆ. ಹಿಂದಿನ ತಲೆಮಾರಿನ ಮಹೀಂದ್ರಾ ಥಾರ್‌ನಿಂದ ಡ್ಯಾಶ್‌ಬೋರ್ಡ್ ಅನ್ನು ಎರವಲು ಪಡೆಯಲಾಗಿದೆ. ಡ್ಯಾಶ್‌ಬೋರ್ಡ್ ಮತ್ತು ರೂಫ್ ಅನ್ನು ಕೆಂಪು ಬಣ್ಣದ ಡೈಮೆಂಡ್ ಹೊಲಿಗೆಯೊಂದಿಗೆ ಬ್ಲಾಕ್ ಲೆಥೆರೆಟ್ ವಸ್ತುಗಳಿಂದ ಡಿಸೈನ್ ಮಾಡಲಾಗಿದೆ. ಸೀಟ್‌ಗಳು ಸಹ ಇದೇ ರೀತಿಯಲ್ಲಿ ಇರುತ್ತವೆ. ಮಹೀಂದ್ರಾ ಥಾರ್‌ಗಿಂತ ಭಿನ್ನವಾಗಿ ಬೊಲೆರೊ 5-ಬಾಗಿಲಿನ SUV ಆಗಿದ್ದು, ಪ್ರಯಾಣಿಕರು ಹಿಂಬದಿಯ ಸೀಟ್‌ಗಳಲಿಗೆ ಪ್ರವೇಶಿಸಬಹುದು.


Click it and Unblock the Notifications








