ಟಿಯಾಗೋ ಪಲ್ಟಿಯಾದರೂ ಒಂದೂ ಗಾಯಗಳಿಲ್ಲ ಇದು ಟಾಟಾ ತಾಕತ್ತು: ಶೋ ರೂಮ್‌ ತೆರಳಿ ಮಾಲೀಕ ಮಾಡಿದ್ದೇನು?

ಪ್ರತಿಯೊಬ್ಬರಿಗೂ ಸಹ ಒಂದಿಲ್ಲೊಂದು ವಿಷಯದಲ್ಲಿ ಅವರದ್ದೇ ಆದ ಬ್ರಾಂಡ್‌ ಆಯ್ಕೆಗಳಿರುತ್ತದೆ. ಅದರಲ್ಲೂ ವಾಹನ ಪ್ರೀಯರಿಗೆ ಅದು ಕೊಂಚ ಜಾಸ್ತಿಯೇ ಎಂದು ಹೇಳಬಹುದು. ಕೆಲವರಂತೂ ಪ್ರತಿಯೊಂದು ಬಾರಿಯೂ ಹೊಸ ಅಪ್‌ಡೇಟ್‌ ಬಂದ ಕೂಡಲೇ ತಮ್ಮ ವಾಹನವನ್ನು ಬದಲಿಸುತ್ತಾ ಇರುತ್ತಾರೆ. ಇಲ್ಲೊಂದು ಅದೇ ರೀತಿಯ ಘಟನೆ ನಡೆದಿದೆ.

ತಾವು ಓಡಿಸುತ್ತಿದ್ದ ವಾಹನ ಅಪಘಾತವಾಗಿ ಪಲ್ಟಿಯಾದ ಮೇಲೂ ಅದೇ ಕಂಪನೊಯ ಇನ್ನೊಂದು ವಾಹನವನ್ನು ಕೊಂಡ ಘಟನೆಯೊಂದು ವರದಿಯಾಗಿದೆ. ವ್ಯಕ್ತಿಯೊಬ್ಬ ತಾನು ಓಡಿಸುತ್ತಿದ್ದ ಟಾಟಾ ಟಿಯಾಗೋ ಪಲ್ಟಿಯಾಗಿ ಅಪಘಾತವಾದ ನಂತರ ಆ ವ್ಯಕ್ತಿ ನೇರವಾಗಿ ಟಾಟಾ ಮೋಟೋರ್ಸ್‌ ಶೋ ರೂಮ್‌ಗೆ ತೆರಳಿ ಟಾಟಾ ನೆಕ್ಸಾನ್‌ (TATA Nexon) ಕಾರನ್ನು ಖರೀದಿ ಮಾಡಿದ್ದಾನೆ.

Tiago Owner Books TATA Nexon

ಹೌದು, ವರದಿಗಳ ಪ್ರಕಾರ ಒಡಿಸ್ಸಾದ ವ್ಯಕ್ತಿಯೊಬ್ಬ ಟಾಟಾ ಟಿಯಾಗೋವನ್ನು ಖರೀದಿಸಿ ಅದನ್ನು ಉಪಯೋಗಿಸುತ್ತಿದ್ದ. ಇತ್ತೀಚೆಗೆ ಆತನ ತನ್ನ ಟಿಯಾಗೋದಲ್ಲಿ ಪ್ರಯಾಣಿಸುತ್ತಿದ್ದಾಗ ಬ್ಲೈಂಡ್‌ ತಿರುವಿನಲ್ಲಿ ಕಾರನ್ನು ಓಡಿಸುತ್ತಿದ್ದಾಗ ಅಪಘಾತಕ್ಕೆ ಒಳಗಾಗಿದ್ದಾನೆ. ತಿರುವಿನಲ್ಲಿದ್ದ ಮೋಟಾರ್‌ ಸೈಕಲ್‌ ಚಾಲಕನಿಗೆ ಗುದ್ದುವುದನ್ನು ತಪ್ಪಿಸಲು ಹೋಗಿ ಅಪಘಾತ ಮಾಡಿಕೊಂಡಿದ್ದಾನೆ.

ಬ್ಲೈಂಡ್‌ ಟರ್ನ್‌ನಲ್ಲಿ ಯಾವಾಗಲೂ ಎಚ್ಚರಿಕೆಯಿಂದ ವಾಹನ ಚಲಾವನೆ ಮಾಡಬೇಕು. ಎದರುಗಡೆ ಇದ್ದ ಬೈಕ್‌ ಸವಾರ ಒಮ್ಮೆಲೆ ಕಂಡಾಗ ಈ ಟಿಯಾಗೋ ಮಾಲೀಕನಿಗೆ ಏನು ಮಾಡಬೇಕೆಂದು ತೋಚದೆ ಕಾರನ್ನು ಒಮ್ಮೆಲೇ ತಿರುಗಿಸಿದ್ದಾನೆ. ಇದರ ಪರಿಣಾಮವಾಗಿ ಕಾರು ಪಲ್ಟಿಯಾಗಿ ಅಪಘಾತವಾಗಿದೆ ಎಂದು ತಿಳಿದು ಬಂದಿದೆ.

Tiago Owner Books TATA Nexon

ಇನ್ನು ಅಪಘಾತದಲ್ಲಿ ವಾಹನ ನುಜ್ಜುಗುಜ್ಜಾದರೂ ಕಾರಿನ ಮಾಲೀಕ ಮಾತ್ರ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾನೆ. ಇದರಿಂದ ಬದುಕಿದೆಯಾ ಬಡ ಜೀವವೇ ಎಂದು ಕಾರಿನ ಮಾಲೀಕ ಟಾಟಾ ಮೋಟೋರ್ಸ್‌ಗೆ ತೆರಳಿ ಟಾಟಾ ನೆಕ್ಸಾನ್ ಕಾರನ್ನು ಬುಕ್‌ ಮಾಡಿ ಅದನ್ನು ಖರೀದಿ ಮಾಡಿದ್ದಾನೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಆ ಅಪಘಾತವಾಗಿ ಕಾರು ಹಲವಾರು ಪಲ್ಟಿಯಾಗಿದ್ದರೂ ಮಾಲೀಕನ ಪ್ರಕಾರ ಒಂದೇ ಒಂದು ಗಾಯಗಳಿಲ್ಲದೇ ತಾನೇ ಹೊರಗೆ ಬಂದಿದ್ದಾನೆ ಎಂದು ಹೇಳಿದ್ದಾನೆ. ಕಾರು ಪಲ್ಟಿಯಾದರೂ ಕಾರಿನ ಡೋರ್‌ ತೆಗೆಯುವುದರಲ್ಲಿ ಯಾವುದೇ ತೊಂದರೆಯಾಗಿಲ್ಲ ಎಂದು ಮಾಲೀಕ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ. ಅಪಘಾತದ ವೇಳೆ ಏರ್ ಬ್ಯಾಗ್ ಕಾರ್ಯ ನಿರ್ವಹಿಸಿದೆಯೇ ಎಂದು ತಿಳಿದು ಬಂದಿಲ್ಲ.

ಟಾಟಾ ದ ನೆಕ್ಸಾನ್‌ ಅನ್ನು ಖರೀದಿಸಿದ ಆತ ಟಾಟಾ ಕಂಪನಿ ಕಾರ್‌ ತನ್ನ ಪ್ರಾಣ ಉಳಿಸಿದ್ದರ ಉಪಕಾರ ಸ್ಮರಣೆಯಾಗಿ ತಾನು ನೆಕ್ಸಾನ್‌ ಅನ್ನು ಖರೀದಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಟಾಟಾ ಮೋಟೋರ್ಸ್‌ನ ಬಹುತೇಕ ಕಾರುಗಳು ಗ್ಲೋಬಲ್‌ ಎನ್‌ಕ್ಯಾಪ್‌ ಕ್ರ್ಯಾಷ್‌ ಟೆಸ್ಟ್‌ನಲ್ಲಿ ೫ ಸ್ಟಾರ್‌ ರೇಟಿಂಗ್‌ ಪಡೆದಿದ್ದು, ಅಪಘಾತದ ಸಂಧರ್ಭದಲ್ಲಿ ಮಾಲೀಕರ ಪ್ರಾಣ ಉಳಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, July 4, 2023, 11:59 [IST]
English summary
Tiago owner books tata nexon after big crash on tiago
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+