ಫೀಚರ್ಸ್‌ನಿಂದ ತುಂಬಿ ತುಳುಕಲಿದೆ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್: ಎಲ್ಲರೂ ಬಯಸುವ ಟಾಪ್‌ 5 ಫೀಚರ್ಸ್‌

ಕಿಯಾ ತನ್ನ ಹೊಸ ಫೇಸ್‌ಲಿಫ್ಟ್‌ ಸೆಲ್ಟೋಸ್ ಕಾರನ್ನು ಬಿಡುಗಡೆ ಮಾಡಲು ಭರದಿಂದ ಸಿದ್ದತೆಗಳನ್ನು ನಡೆಸುತ್ತಿದೆ. ಈಗಾಗಲೇ ಈ ಕಿಯಾ ಸೆಲ್ಟೋಸ್‌ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದ್ದು, ಇದರ ಫೇಸ್‌ಲಿಫ್ಟ್‌ ಆವೃತ್ತಿಯಲ್ಲಿ ಹಲವಾರು ಹೊಸ ಫೀಚರ್‌ಗಳು ಬರಲಿವೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇಲ್ಲಿದೆ ಇದರ ಟಾಪ್‌ ಫೈವ್‌ ಫೀಚರ್ಸ್‌.

೧. ಪಾನೋರಾಮಿಕ್‌ ಸನ್‌ರೂಫ್‌: ಭಾರತೀಯ ಕಾರು ಪ್ರೇಮಿಗಳಿಗೆ ತುಂಬಾ ಅಚ್ಚುಮೆಚ್ಚಿನ ಫೀಚರ್‌ ಎಂದರೆ ಅದು ಪಾನೋರಾಮಿಕ್‌ ಸನ್‌ರೂಫ್‌. ಇಲ್ಲಿಯ ತನಕ ಕಿಯಾ ಸೆಲ್ಟೋಸ್‌ನಲ್ಲಿ ಈ ಫೀಚರ್‌ ಲಭ್ಯವಿರಲಿಲ್ಲ. ಕಿಯಾ ಮಾಲೀಕರು ಈ ಫೀಚರ್‌ ಅನ್ನು ಮಿಸ್‌ ಮಾಡಿಕೊಂಡಿದ್ದರು. ಆದರೆ ಈ ಬಾರಿಯ ಕಿಯಾ ಸೆಲ್ಟೋಸ್‌ ಫೇಸ್‌ಲಿಫ್ಟ್‌ನಲ್ಲಿ ಇದು ಸಿಗಲಿದೆ.

Kia Seltos Facelift

೨. ಟ್ವಿನ್‌ ಸ್ಕ್ರೀನ್‌ ಕರ್ವ್‌ ಡಿಸ್ಪ್ಲೇ: 2023 ರ ಕಿಯಾ ಸೆಲ್ಟೋಸ್‌ (Kia Seltos) ಫೇಸ್‌ಲಿಫ್ಟ್‌ನಲ್ಲಿ ಹೊಸ ಟ್ವಿನ್‌ ಸ್ಕ್ರೀನ್‌ ಕರ್ವ್‌ ಡಿಸ್ಪ್ಲೇಗಳು ಸಿಗಲಿದೆ. ಆರಂಭದಲ್ಲಿ ಮರ್ಸಿಡಿಸ್‌ ಬೆಂಝ್ ಪರಿಚಯಿಸಿದ್ದ ಈ ಫೀಚರ್‌, ಬರು ಬರುತ್ತಾ ಮಹೀಂದ್ರಾ ಎಕ್ಸ್‌ಯುವಿ 700 ಮತ್ತು ಹ್ಯುಂಡೈ ವರ್ನಾ ಕಾರುಗಳಲ್ಲಿ ನಾವು ಈ ಫೀಚರ್‌ ಕಂಡು ಬಂದಿತ್ತು.

೩. ಅಡಾಸ್(ADAS)‌: ಇನ್ನು ಈ ಸೆಗ್ಮೆಂಟ್‌ನಲ್ಲಿ ಅಡಾಸ್(ADAS)‌ ಫೀಚರ್ ಬಂದಿರುವುದು ಇದೇ ಮೊದಲೇನಲ್ಲ. ಈ ಫೆಸ್‌ಲಿಫ್ಟ್‌ ಕಿಯಾ ಸೆಲ್ಟೋಸ್‌ನಲ್ಲಿ ಅಡಾಸ್(ADAS)‌ ಫೀಚರ್‌ ಬರಲಿದ್ದು, ಇದರಿಂದ ಪ್ರಯಾಣ ಇನ್ನೂ ಆರಾಮದಾಯಕವಾಗಲಿದೆ ಎಂಬುದರಲ್ಲಿ ನಿಸ್ಸಂಶಯವಿಲ್ಲ. ಭಾರತದಲ್ಲಿ ಈ ಫೀಚರ್‌ ಅಷ್ಟೊಂದು ಉಪಯೋಗಕ್ಕೆ ಬರದೇ ಇದ್ದರು, ಹೆದ್ದಾರಿಗಳಲ್ಲಿ ಉಪಯೋಗವಾಗಲಿದೆ.

Kia Seltos Facelift

೪. ಡ್ಯುಯಲ್‌ ಜೋನ್‌ ಕ್ಲೈಮೇಟ್‌ ಕಂಟ್ರೋಲ್‌: ಮಿಡ್‌ಸೈಝ್‌ ಎಸ್‌ಯುವಿ ಸೆಗ್ಮೆಂಟ್‌ಗಳಲ್ಲೇ ಈ ಡ್ಯುಯಲ್‌ ಜೋನ್‌ ಕ್ಲೈಮೇಟ್‌ ಕಂಟ್ರೋಲ್ ಪರಿಚಯಿಸುತ್ತಿರುವ ಮೊದಲ ಎಸ್‌ಯುವಿ ಈ ಕಿಯಾ ಸೆಲ್ಟೋಸ್‌ ಫೇಸ್‌ಲಿಫ್ಟ್‌ ಆಗಿರಲಿದೆ. ಇನ್ನೊಂದು ಕುತೂಹಲಕಾರಿ ವಿಷಯವೇನೆಂದರೆ ಇದರ ಕೆಳಸೆಗ್ಮೆಂಟ್‌ ನ ಮಹೀಂದ್ರಾ ಎಕ್ಸ್‌ಯುವಿ 300 ನಲ್ಲಿ ಈ ಫೀಚರ್‌ ಅನ್ನು ಪರಿಚಯಿಸಲಾಗಿದೆ.

೫. ವೈರ್‌ಲೆಸ್‌ ಆಪಲ್‌ ಕಾರ್‌ಪ್ಲೇ / ಆ್ಯಂಡ್ರಾಯ್ಡ್‌ ಆಟೋ: ತುಂಬಾ ಉಪಯೋಗವ ಫೀಚರ್‌ಗಳಲ್ಲಿ ಈ ವೈರ್‌ಲೆಸ್‌ ಆಪಲ್‌ ಕಾರ್‌ಪ್ಲೇ / ಆ್ಯಂಡ್ರಾಯ್ಡ್‌ ಆಟೋ ಸಹ ಒಂದು. ಇದರ ಸಹಾಯದಿಂದ ಇನ್ಫೋಟೈನ್‌ಮೆಂಟ್‌ ಸಿಸ್ಟಂ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ ಆಗಿ ಬದಲಾಯಿಸಿಕೊಳ್ಳಬಹುದಾಗಿದೆ. ಇದರ ಮೂಲಕ ಕಿಯಾ ಸೆಲ್ಟೋಸ್‌ ಕ್ಯಾಬಿನ್‌ ಸಂಪೂರ್ಣ ವಯರ್‌ಲೆಸ್‌ ಆಗಲಿದೆ.

ಇವೆಲ್ಲಾ ಫೀಚರ್‌ಗಳ ಆಗಮನದಿಂದ ಕಿಯಾ ಸೆಲ್ಟೋಸ್‌ ಫೇಸ್‌ಲಿಫ್ಟ್‌ ಮತ್ತಷ್ಟು ಐಷಾರಾಮಿಯಾಗಲಿದೆ. ಇನ್ನು ಈ ಹೊಸ ಕಾರಿನ ಬೆಲೆ ಎಷ್ಟೆಂದು ಕೆಲವೇ ದಿನಗಳಲ್ಲಿ ಹೊರಬರಲಿದ್ದು, ಇದು ಈ ಕಾರಿನ ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ನಿಮಗೆ ಈ ಕಾರಿನ ಯಾವ ಫೀಚರ್‌ ಫೇವರೀಟ್‌ ಎನ್ನುವುದು ಕಮೆಂಟ್‌ ಮೂಲಕ ನಮಗೆ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, July 1, 2023, 15:15 [IST]
English summary
Top five features of upcoming kia seltos facelift
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+