ಟೊಯೊಟಾ ಇನ್ನೋವಾ ಭಾರತೀಯರ ನೆಚ್ಚಿನ ಕಾರಾಗಲು ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ
ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ಕಾರು ಕಂಪನಿಗಳಲ್ಲಿ ಟೊಯೋಟಾವು ಒಂದು. ತನ್ನದೇ ಟೆಕ್ನಾಲಜಿಗಳನ್ನು ಬಳಸಿಕೊಂಡು ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಟೊಯೋಟಾ ಭಾರತದಲ್ಲಿಯೂ ಪ್ರತಿ ವರ್ಷಕ್ಕೆ ಸಾಕಷ್ಟು ಕಾರುಗಳನ್ನು ಮಾರಾಟ ಮಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಟೊಯೋಟಾ ಕಂಪನಿ ಇಲ್ಲಿಯ ತನಕ ಭಾರತದ ಮಾರುಕಟ್ಟೆಯಲ್ಲಿ ಮಾಡಿರುವ ಮೋಡಿ.
ಇಂಟೀರಿಯರ್ಸ್:ಭಾರತೀಯ ಮಾರುಕಟ್ಟೆಯಲ್ಲಿ ಟೊಯೋಟಾ ಇನ್ನೋವಾ (Toyota Innova) ಗ್ರಾಹಕರಿಗೆ ಇಷ್ಟೊಂದು ಇಷ್ಟವಾಗಲು ಕಾರಣವೇನು ಎಂದು ನೋಡಿದರೆ ಮೊದಲಿಗೆ ಕಾಣುವುದು ಟೊಯೋಟಾ ಇನ್ನೋವಾ ಇಂಟೀರಿಯರ್ಸ್ ಎಂದರೆ ತಪ್ಪಾಗಲಾರದು. ಟೊಯೋಟಾ ಕಾರುಗಳು ಇತರ ಕಾರುಗಳಿಗಿಂತ ಕೊಂಚ ದುಬಾರಿಯಾಗಿದ್ದರೂ ಇದರ ಒಳಾಂಗಣ ಉತ್ತಮ ಗುಣಮಟ್ಟದಲ್ಲಿ ನಿರ್ಮಾಣವಾಗಿರುತ್ತದೆ. ಇದರಿಂದಲೇ ಗ್ರಾಹಕರೂ ಈ ಕಾರುಗಳನ್ನು ನೆಚ್ಚಿಕೊಳ್ಳುತ್ತಿದ್ದಾರೆ.

ಎಂಜಿನ್: ಟೊಯೋಟಾ ಕಂಪನಿಯು ತನ್ನ ಕಾರುಗಳಲ್ಲಿ ಎಂಜಿನ್‌ಗೆ ಹೆಚ್ಚಿನ ಪ್ರಾಮುಖ್ಯತೆ ನಿಡುತ್ತದೆ. ಟೊಯೋಟಾ ಇನ್ನೋವಾ ಕಾರು ಕೊಂಡವರ ಅಭಿಪ್ರಾಯವು ಸಹ ಇದೇ ಆಗಿದೆ. ಈ ಕಾರುಗಳಲ್ಲಿ ಟೊಯೋಟಾವು D-4D ಎಂಜಿನ್ ಅನ್ನು ಬಳಸುತ್ತಿರುವುದರಿಂದ ಕಾರುಗಳು ಸುಮಾರು 4 ಲಕ್ಷ ಕಿಲೋ ಮೀಟರ್ ವರೆಗೆ ಯಾವುದೇ ತೊಂದರೆ ಇಲ್ಲದೆ ಚಲಿಸುತ್ತದೆ. ಇನ್ನು ಟೊಯೋಟಾ ಇನ್ನೋವಾ ಕಾರುಗಳಲ್ಲಿ ಹೈಬ್ರಿಡ್ ಟೆಕ್ನಾಲಜಿಯಿರುವ ಎಂಜಿನ್ ಲಭಿಸುವುದು ಇದರ ಖ್ಯಾತಿಗೆ ಹೆಚ್ಚಿನ ಅಂಕಗಳನ್ನು ನೀಡುತ್ತದೆ.
ಕಡಿಮೆ ವೆಚ್ಚದ ನಿರ್ವಹಣೆ: ಟೊಯೊಟಾ ಇನ್ನೋವಾ ಕಾರುಗಳಲ್ಲಿನ ಗುಣಮಟ್ಟ ಹೆಚ್ಚಾಗಿರುವುದರಿಂದ ಇದರ ನಿರ್ವಾಹಣಾ ವೆಚ್ಚವೂ ಕಡಿಮೆ ಇರುತ್ತದೆ. ಇದೇ ಕಾರಣಕ್ಕೆ ಇತರ ಕಾರುಗಳಿಗಿಂತ ಮೊತ್ತ ಕೊಂಚ ಅಧಿಕವಾದರೂ ಪರ್ವಾಗಿಲ್ಲ, ಒಮ್ಮೆ ಕಾರು ಕೊಂಡ ಬಳಿಕ ಅದನ್ನು ನಿರ್ವಹಣೆ ಮಾಡುವುದು ಸಹ ಸುಲಭವಾಗಿರಬೇಕು ಎಂದು ಟೊಯೋಟಾ ಇನ್ನೋವಾಗೆ ಮೊರೆ ಹೋಗುತ್ತದೆ.

ಬದಲಿ ಇಲ್ಲದಿರುವುದು: ಇನ್ಯಾವುದೇ ಕಂಪನಿಯ ಕಾರುಗಳು ಎಷ್ಟೇ ಒಳ್ಳೆಯ ಕಾರುಗಳನ್ನು ಹೊರತಂದರೂ ಟೊಯೋಟಾ ಇನ್ನೋವಾ ಕಾರುಗಳಿಗೆ ಬದಲಿಯಾಗಲಾರದು. ಟೊಯೋಟಾ ಇನ್ನೋವಾ ಎಂಬುವುದು ಒಂದು ಬೇರೆಯದೇ ರೀತಿಯ ಕಾರು. ಈ ಕಾರುಗಳ ಕಂಫರ್ಟ್, ಫೀಚರ್, ಖ್ಯಾತಿ ಇನ್ಯಾವುದೇ ಕಾರುಗಳಿಗೂ ಹೋಲಿಸಲಾಗದು. ಅದರಲ್ಲೂ ಇದರ ಎಂಜಿನ್ ಅಂತೂ ಗ್ರಾಹಕರ ನೆಚ್ಚಿನ ಆಯ್ಕೆ ಎಂದರೆ ತಪ್ಪಾಗಲಾರದು.
ಮೈಲೇಜ್:ಟೊಯೋಟಾ ಇನ್ನೋವಾ ಕಾರಿನಲ್ಲಿ ಏನೇ ಟೆಕ್ನಾಲಜಿಯನ್ನು ತಂದರೂ ಇದರ ಮೈಲೇಜ್‌ನಲ್ಲಿ ಮಾತ್ರ ರಾಜಿ ಮಾಡಿಕೊಳ್ಳುವುದಿಲ್ಲ. ಕಂಪನಿಯ ಈ ಗುಣವೇ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿರುವುದು. ಇದು ಟೊಯೋಟಾ ಕಂಪನಿಯ ಹೈಬ್ರಿಡ್ ಟೆಕ್ನಾಲಜಿಯ ವಿಶೇಷತೆ. ಕಳೆದ ವರ್ಷವಷ್ಟೇ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟ ಟೊಯೋಟಾ ಇನ್ನೋವಾ ಹೈಕ್ರಾಸ್ ಇದಕ್ಕೆ ಒಂದು ಉತ್ತಮ ಉದಾಹರಣೆ.

ಎಂಜಿನ್ ಆಯ್ಕೆಗಳು: ಟೊಯೋಟಾ ಇನ್ನೋವಾ ಕಾರಿನ ಮತ್ತೊಂದು ಪ್ರಮುಖ ವಿಶೇಷತೆ ಎಂದರೆ ಅದು ಈ ಕಾರಿನ ಎಂಜಿನ್ ಆಯ್ಕೆಗಳು. ಹೌದು ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಟೊಯೋಟಾ ಇನ್ನೋವಾ 2.0 ಲೀಟರ್‌ನ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಆಯ್ಕೆಯಲ್ಲಿ ಲಬ್ಯವಿದ್ದು, ಗ್ರಾಹಕರು ಇದರ ಕುರಿತಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಬಹು ಬೇಡಿಕೆಯ ಮೇರೆಗೆ ಟೊಯೋಟಾ ಡೀಸೆಲ್ ಎಂಜಿನ್ ಆಪ್ಷನ್ ಅನ್ನು ಸಹ ಇತ್ತೀಚೆಗೆ ಹೊರತಂದಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications