Maruti Suzuki Fronx: ಕೈಗೆಟುಕುವ ದರದ ಮಾರುತಿ ಸುಜುಕಿ ಫ್ರಾಂಕ್ಸ್ ಕುರಿತ ಆಸಕ್ತಿದಾಯಕ ವಿಚಾರಗಳು
ಭಾರತದಲ್ಲಿ 'ಮಾರುತಿ ಸುಜುಕಿ' ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಇದೀಗ, ಮಾರುಕಟ್ಟೆಯಲ್ಲಿ ಏಪ್ರಿಲ್ ತಿಂಗಳಲ್ಲಿ ತನ್ನ ಬಹುನೀರಿಕ್ಷಿತ ಫ್ರಾಂಕ್ಸ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆದಿದೆ. ಈ ಕಾರಿನ ಕಾರ್ಯಕ್ಷಮತೆ, ವೈಶಿಷ್ಟ್ಯ ಹಾಗೂ ಬೆಲೆ ಕುರಿತಂತೆ ಸಂಪೂರ್ಣ ವಿವರವನ್ನು ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.
ಮೊದಲಿಗೆ ಈ ಫ್ರಾಂಕ್ಸ್ ಎಸ್‌ಯುವಿಯ ಬೆಲೆ ವಿಚಾರದ ಬಗ್ಗೆ ಮಾತನಾಡುವುದಾದರೆ, ಇದು ಮಾರುತಿ ಸುಜುಕಿಯ ಬಲೆನೊ ಹಾಗೂ ಬ್ರೆಝಾ ಕಾರುಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ರೂ.7 ಲಕ್ಷ ಎಕ್ಸ್ ಶೋರೂಂ ಖರೀದಿಗೆ ಲಭ್ಯವಾಗಬಹುದು. ಫ್ರಾಂಕ್ಸ್ ಎಸ್‌ಯುವಿಯನ್ನು ಜನವರಿಯಲ್ಲಿ ಮುಕ್ತಾಯಗೊಂಡ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಿತ್ತು. ಆಗಿನಿಂದಲೇ ದೊಡ್ಡ ಮಟ್ಟದಲ್ಲಿ ನೀರಿಕ್ಷೆಯನ್ನು ಹುಟ್ಟುಹಾಕಿದ್ದು, ಈವರೆಗೆ 15,500ಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ, ಇದು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. 1.2 ಲೀಟರ್ ಮೈಲ್ಡ್-ಹೈಬ್ರಿಡ್ ಎಂಜಿನ್ ಪಡೆದಿರುವ ಕಾರು, 88.8 hp ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಅಥವಾ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಮತ್ತೊಂದು 1 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು, 98 hp ಗರಿಷ್ಠ ಪವರ್ ಮತ್ತು 148 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಹಾಗೂ 6-ಸ್ಪೀಡ್ ಟಾರ್ಕ್ ಕನ್ವರ್ಟರ್ AT ಗೇರ್ ಬಾಕ್ಸ್ ಅನ್ನು ಪಡೆದಿದೆ. ಜೊತೆಗೆ ಐಡಲ್ ಸ್ಟಾರ್ಟ್/ಸ್ಟಾಪ್ ವೈಶಿಷ್ಟ್ಯವನ್ನು ಪಡೆದಿರುವ ಕೈಗೆಟುಕುವ ಬೆಲೆಯ ಕಾರಾಗಿದೆ.
ಮಾರುತಿ ಸುಜುಕಿ, ಫ್ರಾಂಕ್ಸ್ ಎಸ್‌ಯುವಿಯನ್ನು ದೇಶಾದ್ಯಂತವಿರುವ 'ನೆಕ್ಸಾ' ಡೀಲರ್‌ಶಿಪ್‌ಗಳ ಮಾರಾಟ ಮಾಡಲಿದ್ದು, ಇದು ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 9.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆರ್ಕಮಿಸ್ ಸೌಂಡ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕನೆಕ್ಟ್ದ್ ಕಾರ್ ಟೆಕ್ನಾಲಜಿ, ಆಟೋ ಕ್ಲೈಮೇಟ್ ಕಂಟ್ರೋಲ್ ಹಾಗೂ ಟೈಪ್ ಸಿ ಚಾರ್ಜರ್‌ನ್ನು ಪಡೆದಿದೆ.
ಈ ಫ್ರಾಂಕ್ಸ್ ಎಸ್‌ಯುವಿಯ ಹೊರಭಾಗದ ಡಿಸೈನ್ ಬಗ್ಗೆ ಮಾತನಾಡುವುದಾದರೆ, ಇದು ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಗ್ರಾಂಡ್ ವಿಟಾರಾ ಮಾದರಿಗೆ ಬಹುತೇಕ ಹೋಲಿಕೆಯಾಗುತ್ತದೆ. ಫ್ರಂಟ್, ಆಕರ್ಷಕ ಗ್ರಿಲ್, ಸ್ಪ್ಲಿಟ್ ಹೆಡ್‌ಲ್ಯಾಂಪ್ಸ್, ಎಲ್ಇಡಿ DRLs, ಸೈಡ್ ಪ್ರೊಫೈಲ್ ಸ್ಕ್ವೇರ್ಡ್ ಆಫ್ ವೀಲ್ ಆರ್ಚ್‌ಸ್, 16-ಇಂಚಿನ ಅಲಾಯ್ ವೀಲ್ಸ್ ಸೇರಿದಂತೆ ಯುವ ಖರೀದಿದಾರರನ್ನು ತನ್ನತ್ತ ಸೆಳೆಯುವ ಆಕರ್ಷಕ ವಿನ್ಯಾಸ ಪಡೆದಿದೆ.
ನೂತನ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ, ಸುರಕ್ಷತೆಯ ದೃಷ್ಟಿಯಿಂದಲೂ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಡ್ಯೂಯಲ್ ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್). ಟಾಪ್ ಎಂಡ್ ರೂಪಾಂತರಗಳಲ್ಲಿ ಕರ್ಟನ್ ಮತ್ತು ಸೈಡ್ ಏರ್‌ಬ್ಯಾಗ್ಸ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಹೊಂದಿದೆ.
ಮಾರುತಿ ಸುಜುಕಿಯ ಫ್ರಾಂಕ್ಸ್ ಎಸ್‌ಯುವಿ, ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೇಲೆ ಟಾಟಾ ಪಂಚ್, ರೆನಾಲ್ಟ್ ಕಿಗರ್ ಹಾಗೂ ನಿಸ್ಸಾನ್ ಮ್ಯಾಗ್ನೈಟ್ ಕಾರಿಗಳಿಗೆ ದೊಡ್ಡ ಮಟ್ಟದ ಪ್ರತಿಸ್ಪರ್ಧಿಯಾಗಲಿದೆ ಎಂದು ನೀರಿಕ್ಷಿಸಲಾಗಿದೆ. ಜೊತೆಗೆ ಈ ಕಾರು, ಅಷ್ಟೇನೂ ಹೆಚ್ಚಿನ ದರ ಹೊಂದಿರದೇ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಬಹುದು. ಆಕರ್ಷಕ ವೈಶಿಷ್ಟ್ಯ ಹೊಂದಿರುವುದರಿಂದ ಹೆಚ್ಚಿನ ಜನರು ಇಷ್ಟಪಟ್ಟು ಕೊಂಡುಕೊಳ್ಳಬಹುದು.


Click it and Unblock the Notifications