ಕೈಗೆಟುಕುವ ಬೆಲೆಯ ಆಕರ್ಷಕ ನಿಸ್ಸಾನ್ ಮ್ಯಾಗ್ನೈಟ್ ಕುರೋ ಎಡಿಷನ್ ವಿಶೇಷತೆಗಳು

ನಿಸ್ಸಾನ್ (Nissan) ಕಂಪನಿಯ ಜನಪ್ರಿಯ ಎಸ್‌ಯುವಿಗಳಲ್ಲಿ ಮ್ಯಾಗ್ನೈಟ್ (Magnite) ಪ್ರಮುಖವಾಗಿದೆ. ಇದು, ಗೇಮ್ ಚೇಂಜರ್ ಕಾರೆಂದು ಖ್ಯಾತಿಗಳಿಸಿದೆ. ಇತ್ತೀಚೆಗೆ, ಭಾರತದ ಗ್ರಾಹಕರಿಗಾಗಿ ಕಂಪನಿಯು ಕೈಗೆಟುಕುವ ಬೆಲೆಯಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಕುರೋ ಎಡಿಷನ್ (Nissan Magnite Kuro Edition) ಬಿಡುಗಡೆಗೊಳಿಸಲಾಗಿದೆ. ಆ ಹೊಸ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಬೆಲೆ: ನಿಸ್ಸಾನ್ ಮ್ಯಾಗ್ನೈಟ್ ಕುರೋ ಎಡಿಷನ್ ಕಾರು ದೇಶೀಯ ಮಾರುಕಟ್ಟೆಯಲ್ಲಿರೂ.8.27 - ರೂ.10.46 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ನಿಸ್ಸಾನ್ ಮ್ಯಾಗ್ನೈಟ್ ಕುರೋ ಎಡಿಷನ್ ವಿಶೇಷತೆಯೆಂದರೆ ಹೊರ ಹಾಗೂ ಒಳಭಾಗವು ಸಂಪೂರ್ಣ ಕಪ್ಪು ಬಣ್ಣದಿಂದ ಕೂಡಿದ್ದು, ಎಕ್ಸ್‌ವಿ (XV) ರೂಪಾಂತರಕ್ಕೆ ಹೋಲಿಕೆಯಾಗುತ್ತದೆ. ಈ ಮಾದರಿಯನ್ನು ಸಾಮಾನ್ಯ ನಿಸ್ಸಾನ್ ಮ್ಯಾಗ್ನೈಟ್ ಕಾರಿಗೆ ಹೋಲಿಸಿದರೆ ಮತ್ತಷ್ಟು ಆಕರ್ಷಕವಾಗಿದೆ.

Nissan Magnite Kuro Edition

ವಿನ್ಯಾಸ: ನಿಸ್ಸಾನ್ ಮ್ಯಾಗ್ನೈಟ್ ಕುರೋ ಎಡಿಷನ್ ಗ್ರಿಲ್, ಮುಂಭಾಗ, ಹಿಂಭಾಗದ ಬಂಪರ್, ಡೋರ್ ಹ್ಯಾಂಡಲ್, ರೂಫ್ ರೈಲ್ಸ್, ಸ್ಕಿಡ್ ಪ್ಲೇಟ್‌, ಹೆಡ್‌ಲೈಟ್ ಅಚ್ಛೇನ್ಟ್ಸ್ ಎಲ್ಲವು ಕಪ್ಪು (black) ಬಣ್ಣವನ್ನು ಹೊಂದಿವೆ. ಇದರೊಟ್ಟಿಗೆ ಅಲಾಯ್ ವೀಲ್ಸ್ ಸಹ ಕಪ್ಪು ಬಣ್ಣವನ್ನು ಪಡೆದಿದೆ. ಇದು ಈ ಕಾರಿಗೆ ಲುಕ್ ಅನ್ನು ಮತ್ತಷ್ಟು ಆರ್ಷಕವಾಗಿದೆ.

ಫೀಚರ್ಸ್: ಸ್ಸಾನ್ ಮ್ಯಾಗ್ನೈಟ್ ಕುರೋ ಎಡಿಷನ್ ಒಳಭಾಗದ ಕ್ಯಾಬಿನ್ ಥೀಮ್‌ ಕಪ್ಪು ಬಣ್ಣದಲ್ಲಿಯೇ ಇದ್ದು, ಸನ್ ವೈಸರ್‌, ಫ್ಲೋರ್ ಮ್ಯಾಟ್ಸ್, ಸ್ಟೀರಿಂಗ್ ವೀಲ್ ಮತ್ತು ಎಸಿ ವೆಂಟ್‌ ಕೂಡ ಕಪ್ಪು ಬಣ್ಣವನ್ನು ಒಳಗೊಂಡಿವೆ. ಈ ಕಾರು, ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ. ಮುಖ್ಯವಾಗಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಅನ್ನು ಪಡೆದಿದೆ.

Nissan Magnite Kuro Edition

ಎಂಜಿನ್: ನಿಸ್ಸಾನ್ ಮ್ಯಾಗ್ನೈಟ್ ಕುರೋ ಎಡಿಷನ್ ಕೂಡ ಎರಡು ಎಂಜಿನ್ ಆಯ್ಕೆಯಲ್ಲಿ ಸಿಗುತ್ತದೆ. ಅವುಗಳೆಂದರೆ, 1.0-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1.0- ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್. ಇವುಗಳು ಕ್ರಮವಾಗಿ 71 bhp ಪವರ್, 96 Nm ಪೀಕ್ ಟಾರ್ಕ್ ಮತ್ತು 99 bhp ಪವರ್, 152 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿವೆ.

ಈ ಕಾರು, ಮ್ಯಾನುವಲ್ ಅಥವಾ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಪ್ರಸ್ತುತ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿ, ರೂಪಾಂತರಗಳಿಗೆ ಅನುಗುಣವಾಗಿ ರೂ.6 ಲಕ್ಷದಿಂದ ರೂ.11.02 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಪೆಟ್ರೋಲ್ ಎಂಜಿನ್ ಹಾಗೂ 5 - ಸ್ವೀಡ್ ಮ್ಯಾನುವಲ್, 5 - ಸ್ವೀಡ್ ಆಟೋಮೆಟಿಕ್, ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಸಿಗುತ್ತದೆ. ಜೊತೆಗೆ 20.0 kmpl ಮೈಲೇಜ್ ನೀಡುತ್ತದೆ.

ಈ ಕಾರು, 8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌, 360 - ಡಿಗ್ರಿ ಕ್ಯಾಮೆರಾ, ಹಿಲ್-ಸ್ಟಾರ್ಟ್ ಅಸಿಸ್ಟ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಒಳಗೊಂಡಂತೆ ವಿವಿಧ ಫೀಚರ್ಸ್ ಪಡೆದಿದೆ.

ನಿಸ್ಸಾನ್ ಮ್ಯಾಗ್ನೈಟ್ ಕುರೋ ಎಡಿಷನ್ ಬಿಡುಗಡೆ ಬಗ್ಗೆ ಮಾತನಾಡಿರುವ ನಿಸ್ಸಾನ್ ಮೋಟಾರ್ ಇಂಡಿಯಾದ ಎಂಡಿ ರಾಕೇಶ್ ಶ್ರೀವಾಸ್ತವ ಅವರು, ಕುರೋ ಎಡಿಷನ್ ಅತ್ಯುತ್ತಮವಾಗಿದ್ದು, ಅದರ ನೋಟವೂ ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ ಎಂದು ನಂಬಿದ್ದೇವೆ. ಇದರಿಂದ ನಮ್ಮ ಗ್ರಾಹಕರ ಆದ್ಯತೆಗಳನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ' ಎಂದು ಹೇಳಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 10, 2023, 11:46 [IST]
English summary
Top things about the new nissan magnite kuro edition details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+