TOYOTA bZ4X ಎಲೆಕ್ಟ್ರಿಕ್ ಎಸ್‌ಯುವಿ ಶೀಘ್ರದಲ್ಲೇ ಬಿಡುಗಡೆ... ಬ್ರಾಂಡ್‌ನ ಮೊದಲ ಇವಿ ವಿಶೇಷತೆಗಳಿವು!

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಈ ಹಿಂದಿಗಿಂತ ಮಾರಾಟವು ವೇಗಗೊಂಡಿದೆ. ದೇಶದಲ್ಲಿ ಹಲವು ಬ್ರಾಂಡ್‌ಗಳು ತನ್ನದೇ ಆದ ಪ್ರತ್ಯೇಕ ಇವಿಗಳನ್ನು ಇಳಿಸಿದ್ದರೇ, ಇನ್ನೂ ಕೆಲ ಬ್ರಾಂಡ್‌ಗಳು ತಮ್ಮ ಮೊದಲ ಎಲೆಕ್ಟ್ರಿಕ್ ಕಾರಿನ ಬಿಡುಗಡೆಗೆ ಯೋಜನೆ ರೂಪಿಸಿಕೊಂಡಿವೆ. ಟೊಯೋಟಾ ಕೂಡ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಶೀಘ್ರದಲ್ಲೇ ಪರಿಚಯಿಸಲಿದೆ.

ಟೊಯೋಟಾ bZ4X ಇವಿ SUV:
ಬಹುನಿರೀಕ್ಷಿತ ಟೊಯೋಟಾ bZ4X ಇವಿ SUV ಅನ್ನು ಇದೇ ವರ್ಷ ಜನವರಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿತ್ತು. ಆ ವೇಳೆ ಟೊಯೊಟಾ ಸ್ಟಾಲ್‌ನಲ್ಲಿ ತನ್ನ ಇತರ ಕಾರುಗಳಿಗಿಂತ bZ4X ಇವಿ SUV ಪ್ರತ್ಯೇಕ ಆಕರ್ಷಣೆಯಾಗಿ ನಿಂತಿತ್ತು. ನಮಗಿರುವ ಮಾಹಿತಿಯ ಪ್ರಕಾರ ಎಲ್ಲವೂ ಸರಿಯಾಗಿ ನಡೆದರೆ, ಟೊಯೋಟಾ ತನ್ನ ಪ್ರೀಮಿಯಂ ಎಲೆಕ್ಟ್ರಿಕ್ SUV bZ4X ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬಹುದು.

TOYOTA bZ4X ಎಲೆಕ್ಟ್ರಿಕ್ ಎಸ್‌ಯುವಿ ಶೀಘ್ರದಲ್ಲೇ ಬಿಡುಗಡೆ... ಬ್ರಾಂಡ್‌ನ ಮೊದಲ ಇವಿ ವಿಶೇಷತೆಗಳಿವು!

ಟೊಯೋಟಾ bZ4X ಎಲೆಕ್ಟ್ರಿಕ್ SUV ಹ್ಯುಂಡೈ, ಕಿಯಾ, ಆಡಿ, ಮಿನಿ ಮತ್ತು ವೋಲ್ವೋ ಕಂಪನಿಗಳ ಎಲೆಕ್ಟ್ರಿಕ್ ಕಾರುಗಳೊಂದಿಗೆ ಸ್ಪರ್ಧಿಸಲಿದೆ. ಟೊಯೋಟಾ bZ4X ಇವಿ SUV ತನ್ನ ಸೆಗ್ಮೆಂಟ್‌ನಲ್ಲಿ ಬಲವಾದ ಪೈಪೋಟಿ ನೀಡಲು ಕಂಪನಿಯು ಶಕ್ತಿಯುತ ಮೋಟಾರ್, ಆಧುನಿಕ ಡಿಸೈನ್, ಅತ್ಯಾಧುನಿಕ ಫೀಚರ್‌ಗಳನ್ನು ನೀಡುತ್ತಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಕಂಪನಿಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ಏನೆಲ್ಲಾ ವಿಶೇಷತೆಗಳನ್ನು ನೋಡಬಹುದು ಎಂಬುದನ್ನು ಇಲ್ಲಿ ತಿಳಿಯೋಣ.

ಟೊಯೋಟಾ bZ4X ಎಲೆಕ್ಟ್ರಿಕ್ SUV ಡಿಸೈನ್ ಮತ್ತು ಫೀಚರ್‌ಗಳ ಬಗ್ಗೆ ಮಾತನಾಡುವುದಾದರೆ, ಇದರ ವಿನ್ಯಾಸವು ತುಂಬಾ ಸ್ಪೋರ್ಟಿಯಾಗಿ ಕಾಣುತ್ತದೆ. ಹೊರಾಂಗಣದ ಎಲ್ಲಾ ಲೈಟಿಂಗ್ ಸೆಪ್‌ನಲ್ಲಿ ಎಲ್‌ಇಡಿ ಯುನಿಟ್‌ಗಳನ್ನು ಒಳಗೊಂಡು ಅದ್ಭುತವಾದ ಹೊರಭಾಗವನ್ನು ಹೊಂದಿದೆ. ಹಾಗಯೇ ಏರೋಡೈನಮಿಕ್ ಡಿಸೈನ್ ಹಾಗೂ ಮಸ್ಕುಲರ್ ಬಾನೆಟ್ ಈ ಎಸ್‌ಯುವಿ ಡಿಸೈನ್‌ಗೆ ಪ್ರಮುಖ ಆಕರ್ಷಣೆಯಾಗಿವೆ. ಹಿಂಭಾಗದಲ್ಲೂ ಸ್ಪೋರ್ಟಿ ಡಿಸೈನ್‌ನೊಂದಿಗೆ ಸಜ್ಜುಗೊಂಡಿದ್ದು, ಉದ್ದದ ಟೈಲ್‌ಲೈಟ್ ಬಾರ್ ಹೈಲೆಟ್ ಆಗಿ ಕಾಣುತ್ತದೆ.

TOYOTA bZ4X ಎಲೆಕ್ಟ್ರಿಕ್ ಎಸ್‌ಯುವಿ ಶೀಘ್ರದಲ್ಲೇ ಬಿಡುಗಡೆ... ಬ್ರಾಂಡ್‌ನ ಮೊದಲ ಇವಿ ವಿಶೇಷತೆಗಳಿವು!

ಇದರ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ದೊಡ್ಡ ಸ್ಕ್ರೀನ್, ಆರಾಮದಾಯಕ ಆಸನಗಳು, ವಿಷಾಲವಾದ ಕ್ಯಾಬಿನ್ ಮತ್ತು ಎಲ್ಲಾ ಅಗತ್ಯ ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹಾಗೆಯೇ ಸುಧಾರಿತ ಡ್ಯಾಶ್‌ಬೋರ್ಡ್ ಪ್ರೀಮಿಯಂ ಹಾಗೂ ಆಧುನಿಕ ಡಿಸೈನ್‌ನೊಂದಿಗೆ ಕೆಲವೇ ಭೌತಿಕ ಬಟನ್‌ಗಳನ್ನು ಹೊಂದಿದೆ. ಮುಂಭಾಗ ಹಾಗೂ ಹಿಂಭಾಗದಲ್ಲಿ ಪ್ಯಾಸಿಂಜರ್ ಕಂಫರ್ಟ್ ಸೀಟ್‌ಗಳು ಉತ್ತಮ ಕುಷನಿಂಗ್ ನೀಡುತ್ತವೆ. ಹಿಂಬದಿ ಪ್ರಯಾಣಿಕರಿಗೆ ಸಾಕಷ್ಟು ಲೆಗ್ ಹಾಗೂ ನೀ ರೂಂ ನೀಡಲಾಗಿದೆ.

ಟೊಯೊಟಾ bZ4X ನ ಪವರ್‌ಟ್ರೇನ್ ಕುರಿತು ಮಾತನಾಡುವುದಾದರೆ, ಇದು 71.4kWh ಬ್ಯಾಟರಿ ಪ್ಯಾಕ್‌ನೊಂದಿಗೆ ಸಜ್ಜುಗೊಂಡಿದೆ, ಒಂದೇ ಚಾರ್ಜ್‌ನಲ್ಲಿ 500km ವರೆಗಿನ ಬ್ಯಾಟರಿ ಶ್ರೇಣಿಯನ್ನು ಹೊಂದಿರುತ್ತದೆ. ಈ ಕಾರನ್ನು ಫ್ರಂಟ್ ಮತ್ತು ಆಲ್ ವೀಲ್ ಡ್ರೈವ್ ಆಯ್ಕೆಗಳೊಂದಿಗೆ ನೀಡಲಾಗುವುದು. ಇದರ ಎಲೆಕ್ಟ್ರಿಕ್ ಮೋಟಾರ್ 204hp ಪವರ್ ಮತ್ತು 265 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಪರ್ಫಾಮೆನ್ಸ್‌ನಲ್ಲಿ ತನ್ನ ಪ್ರತಿಸ್ಪರ್ಧಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

TOYOTA bZ4X ಎಲೆಕ್ಟ್ರಿಕ್ ಎಸ್‌ಯುವಿ ಶೀಘ್ರದಲ್ಲೇ ಬಿಡುಗಡೆ... ಬ್ರಾಂಡ್‌ನ ಮೊದಲ ಇವಿ ವಿಶೇಷತೆಗಳಿವು!

ಪವರ್ ಬೂಸ್ಟ್ ಮೋಡ್‌ನಲ್ಲಿ, ಇದು 218hp ಪವರ್ ಮತ್ತು 336Nm ಪಿಕಪ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವರದಿಗಳ ಪ್ರಕಾರ, ಟೊಯೊಟಾದ ಎಲೆಕ್ಟ್ರಿಕ್ SUV ಕೇವಲ 7.7 ಸೆಕೆಂಡುಗಳಲ್ಲಿ 0-100kmph ವೇಗವನ್ನು ಪಡೆಯುತ್ತದೆ. ಅದೇ ಸಮಯದಲ್ಲಿ, ಇದನ್ನು ಕೇವಲ 30 ನಿಮಿಷಗಳಲ್ಲಿ ಶೇ 80 ರಷ್ಟು ಚಾರ್ಜ್ ಮಾಡಬಹುದು. ಟೊಯೊಟಾದ ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ 40-50 ಲಕ್ಷ ರೂಪಾಯಿಗಳ ಬೆಲೆಯಲ್ಲಿ ಪರಿಚಯಿಸುವ ನಿರೀಕ್ಷೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Friday, April 7, 2023, 9:36 [IST]
English summary
Toyota bz4x electric suv launching soon
Read more on ಟೊಯೋಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+