ಹೊಸ Toyota EV ಎಂಟ್ರಿಗೆ ಎಲ್ಲಾ ಬ್ರಾಂಡ್‌ಗಳು ಕಳೆದೋಗಲಿವೆ! ಅಗ್ಗದ ಬೆಲೆ, 1,000 ಕಿ.ಮೀ ರೇಂಜ್

ಇವಿಗಳನ್ನು ಹೆಚ್ಚು ಕೈಗೆಟುಕುವ, ಸುರಕ್ಷಿತ ಮತ್ತು ಪರಿಸರ ಸ್ನೇಹಿಯನ್ನಾಗಿಸುವ ಪ್ರಗತಿಯ ಬ್ಯಾಟರಿ ತಂತ್ರಜ್ಞಾನಗಳಲ್ಲಿ ಟೊಯೊಟಾ ಕಾರ್ಯನಿರ್ವಹಿಸುತ್ತಿದೆ. ಮೂಲಗಳ ಪ್ರಕಾರ ಟೊಯೋಟಾ ತನ್ನ ಮುಂಬರುವ ಎಲೆಕ್ಟ್ರಿಕ್ ಕಾರನ್ನು 2026 ರಲ್ಲಿ ಪರಿಚಯಿಸಲು ಯೋಜಿಸಿರುವುದಾಗಿ ತಿಳಿದುಬಂದಿದೆ. ಕಂಪನಿಯ ಪ್ರಕಾರ ಇವು ಸುಧಾರಿತ ಬ್ಯಾಟರಿ, ಹೆಚ್ಚಿನ ರೇಂಜ್ ಶೇ40 ರಷ್ಟು ವೆಚ್ಚ ಉಳಿತಾಯವಾಗಿಸಲಿವೆ.

ಟೊಯೋಟಾದ ಮುಂದಿನ ಜನ್ ಇವಿಗಳಲ್ಲಿ ಮೊದಲನೆಯದನ್ನು 2026 ರಲ್ಲಿ ಬಿಡುಗಡೆ ಮಾಡಲಾಗುವುದು. ಹೊಸ ಬ್ಯಾಟರಿ ಆಯ್ಕೆಗಳೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ 800 ಕಿ.ಮೀ ರೇಂಜ್ ನೀಡಲಿದ್ದು, ಈ ಇವಿ ಟೊಯೊಟಾ bZ4X ಗೆ ಹೋಲಿಸಿದರೆ ಬೆಲೆಯಲ್ಲಿ ಅಗ್ಗವಾಗಿರಲಿದೆಯಂತೆ. ಹೇಗೆ ನೋಡಿಕೊಂಡರೂ ಗ್ರಾಹಕರಿಗೆ ಶೇ40 ರಷ್ಟು ವೆಚ್ಚ ಉಳಿತಾಯವಾಗಲಿದೆ ಎಂದು ಹೇಳಲಾಗುತ್ತಿದೆ.

toyota-next-gen-evs-cheap-price-1-000-km-range

ಸಾಮನ್ಯವಾಗಿ ಎಲೆಕ್ಟ್ರಿಕ್ ಕಾರುಗಳ ವೆಚ್ಚದಲ್ಲಿ ಶೇ60 ರಷ್ಟು ಪಾಲನ್ನು ಬ್ಯಾಟರಿಗಳು ಹೊಂದಿರುತ್ತವೆ. ಹಾಗಾಗಿ ಬ್ಯಾಟರಿಗಳನ್ನು ಅಗ್ಗವಾಗಿ ತಯಾರಿಸಿದರೆ ಒಟ್ಟಾರೆ ಬೆಲೆಯು ಕಡಿಮೆಯಾಗುತ್ತದೆ ಎಂಬುದನ್ನು ಟೊಯೊಟಾ ನಂಬಿದೆ. ಇದಕ್ಕಾಗಿ ಟೊಯೋಟಾ ಎರಡು ದೊಡ್ಡ ಬ್ಯಾಟರಿ ಪ್ಯಾಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ, ಹೆಚ್ಚಿನ ರೇಂಜ್ ನೀಡಲು ಲಿಥಿಯಂ-ಐಯಾನ್ ಕಾರ್ಯಕ್ಷಮತೆ ಮತ್ತು ಕೈಗೆಟುಕುವ ಬೆಲೆಗಾಗಿ ಲಿಥಿಯಂ-ಐರನ್-ಫಾಸ್ಫೇಟ್ ಬ್ಯಾಟರಿಗಳ ನಿರ್ಮಾಣದಲ್ಲಿ ತೊಡಗಿದೆ.

2027 ರಿಂದ 2028 ರ ಅವಧಿಯಲ್ಲಿ, ಟೊಯೋಟಾ ನವೀಕರಿಸಿದ ಲಿಥಿಯಂ-ಐಯಾನ್ ಹೈ ಪರ್ಫಾರ್ಮೆನ್ಸ್ ಪ್ಯಾಕ್ ಅನ್ನು ಪರಿಚಯಿಸಲಿದೆ, ಇದು 621 ಮೈಲುಗಳು (ಅಂದಾಜು. 999 ಕಿ.ಮೀ) ರೇಂಜ್ ಹೊಂದಿರುತ್ತದೆ. ಇದು ಪರ್ಫಾಮೆನ್ಸ್ ಬ್ಯಾಟರಿಗೆ ಬದಲಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಬ್ಯಾಟರಿಯ ಬೆಲೆ ಶೇ 10 ರಷ್ಟು ಅಗ್ಗವಾಗಿದೆ. ಎಂಜಿನ್‌ಗಳಂತೆಯೇ ಬ್ಯಾಟರಿ ಪ್ಯಾಕ್‌ಗಳಿಗೂ ಬಹು ಆಯ್ಕೆಗಳಿರಬೇಕು ಎಂದು ಟೊಯೋಟಾ ನಂಬುತ್ತಿದೆ.

toyota-next-gen-evs-cheap-price-1-000-km-range

ಟೊಯೋಟಾ ಘನ-ಸ್ಥಿತಿಯ ಬ್ಯಾಟರಿಗಳಲ್ಲಿ (solid-state batteries) ಪ್ರಗತಿ: ಟೊಯೋಟಾ ಘನ-ಸ್ಥಿತಿಯ ಬ್ಯಾಟರಿ ತಂತ್ರಜ್ಞಾನದಲ್ಲಿ ಗಮನಾರ್ಹ ಪ್ರಗತಿಯನ್ನು ಮಾಡಿದೆ. 2028 ರ ಹೊತ್ತಿಗೆ, ಕಂಪನಿಯು ಘನ-ಸ್ಥಿತಿಯ ಬ್ಯಾಟರಿಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು ಪ್ರಾರಂಭಿಸಬಹುದು. ದ್ರವ ವಿದ್ಯುದ್ವಿಚ್ಛೇದ್ಯವನ್ನು (Liquid electrolyte) ಹೊಂದಿರುವ ಅಸ್ತಿತ್ವದಲ್ಲಿರುವ ಲಿಥಿಯಂ-ಐಯಾನ್ ಬ್ಯಾಟರಿಗಳಿಗೆ ಹೋಲಿಸಿದರೆ, ಹೊಸ ಬ್ಯಾಟರಿಗಳು ಘನ ವಿದ್ಯುದ್ವಿಚ್ಛೇದ್ಯವನ್ನು Solid electrolyte ಹೊಂದಿರುತ್ತವೆ.

ಮೊದಲ ತಲೆಮಾರಿನ ಘನ-ಸ್ಥಿತಿಯ ಬ್ಯಾಟರಿಗಳು ಸುಮಾರು 750 ಮೈಲುಗಳ (1,200 ಕಿಮೀ) ವ್ಯಾಪ್ತಿಯನ್ನು ಹೊಂದಿರಬಹುದು. ಚಾರ್ಜಿಂಗ್ ಸಮಯವು ಕಡಿಮೆ ಇರುತ್ತದೆ, ಕೇವಲ 10 ನಿಮಿಷಗಳಲ್ಲಿ ಶೇ10 ರಿಂದ ಶೇ80 ರಷ್ಟು ಚಾರ್ಜ್‌ ಮಾಡಬಹುದು. ಇನ್ನು ಹೆಚ್ಚಿನ ಕಾರ್ಯಕ್ಷಮತೆಯ ಲಿಥಿಯಂ ಅಯಾನ್ ಪ್ಯಾಕ್ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

toyota-next-gen-evs-cheap-price-1-000-km-range

ಹೆಚ್ಚು ಸುಧಾರಿತ ಘನ-ಸ್ಥಿತಿಯ ಬ್ಯಾಟರಿ ಸಹ ಅಭಿವೃದ್ಧಿ ಹಂತದಲ್ಲಿದೆ. ಇದು 994 ಮೈಲಿಗಳಿಗಿಂತ (ಅಂದಾಜು. 1,600 ಕಿಮೀ) ಹೆಚ್ಚಿನ ರೇಂಜ್ ನೀಡುವ ಮೂಲಕ ಹೊಸ ಮಾನದಂಡಗಳನ್ನು ಹೊಂದಿಸುತ್ತದೆ. ಟೊಯೋಟಾವನ್ನು ಹೊರತುಪಡಿಸಿ, ಇತರ ಕಂಪನಿಗಳು ಕೂಡ ಘನ-ಸ್ಥಿತಿಯ ಬ್ಯಾಟರಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಉದಾಹರಣೆಗೆ, ನಿಸ್ಸಾನ್ ತನ್ನ ಘನ-ಸ್ಥಿತಿಯ ಬ್ಯಾಟರಿ ಚಾಲಿತ EVಗಳನ್ನು 2028 ರಲ್ಲಿ ಪ್ರಾರಂಭಿಸಲು ಯೋಜಿಸಿದೆ. BMW ಕೂಡ ಇದೇ ರೀತಿಯ ತಂತ್ರಜ್ಞಾನಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಹೆಚ್ಚು ವಾಯುಬಲವೈಜ್ಞಾನಿಕ (ಏರೋಡೈನಮಿಕ್): ಟೊಯೊಟಾದ ಹೊಸ ಇವಿಗಳು ಹೆಚ್ಚು ಏರೋಡೈನಮಿಕ್ ಮತ್ತು ಹಗುರವಾಗಿರಲಿವೆಯಂತೆ. ಇದಕ್ಕಾಗಿ ಟೊಯೋಟಾ ಬ್ಯಾಟರಿಗಳ ಎತ್ತರವನ್ನು ಕಡಿಮೆ ಮಾಡುವತ್ತ ಗಮನಹರಿಸುತ್ತಿದೆ. ಸದ್ಯಕ್ಕೆ, bZ4X 150 ಎಂಎಂ ಎತ್ತರದ ಬ್ಯಾಟರಿಯನ್ನು ಹೊಂದಿದೆ. ಟೊಯೋಟಾದ ಮುಂದಿನ-ಜೆನ್ ಇವಿಗಳೊಂದಿಗೆ ಇದನ್ನು 120 ಎಂಎಂಗೆ ಕಡಿಮೆಗೊಳಿಸಲಾಗುವುದು ಎಂದು ತಿಳಿದುಬಂದಿದೆ.

ಹೆಚ್ಚಿನ ಪರ್ಫಾಮೆನ್ಸ್ ಸ್ಪೋರ್ಟ್ಸ್ ಮಾದರಿಗಳಿಗೆ ಬಳಸಲಾಗುವ ಬ್ಯಾಟರಿಗಳು ಇನ್ನೂ ಚಿಕ್ಕದಾಗಿರುತ್ತವೆ, ಸುಮಾರು 100 ಮಿ.ಮೀ ಎತ್ತರದಲ್ಲಿರುತ್ತವೆ. 2030 ರ ಹೊತ್ತಿಗೆ, ಟೊಯೋಟಾ ತನ್ನ BEV ಮಾರಾಟವನ್ನು 3.5 ಮಿಲಿಯನ್ ಘಟಕಗಳಿಗೆ ಹೆಚ್ಚಿಸಲು ಯೋಜಿಸಿದೆ. ಇವುಗಳಲ್ಲಿ, ಸುಮಾರು 1.7 ಮಿಲಿಯನ್ ಯುನಿಟ್‌ಗಳು ಹೊಸ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಸಜ್ಜುಗೊಳ್ಳುತ್ತವೆ ಎಂದು ಮೂಲಗಳು ತಿಳಿಸಿವೆ

Article Published On: Monday, September 18, 2023, 12:42 [IST]
English summary
Toyota ev next gen cheap price 1 000 km range
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+