Toyota Fortuner: ಈ ಅದ್ಭುತ ಫೀಚರ್ ಕಳೆದುಕೊಳ್ಳುತ್ತದೆ ಜನಪ್ರಿಯ ಟೊಯೊಟಾ ಫಾರ್ಚೂನರ್: ಬೆಲೆ ಬದಲಾವಣೆಯಿಲ್ಲ
ಫುಲ್ ಸೈಜ್ ಎಸ್‌ಯುವಿ ವಿಭಾಗದ ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ದೀರ್ಘಕಾಲದಿಂದ ಅಗ್ರಸ್ಥಾನದಲ್ಲಿದೆ. ಈ ವಿಭಾಗದಲ್ಲಿ ವಿಭಾಗದ ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ತನ್ನ ಪ್ರತಿಸ್ಪರ್ಧಿಗಳನ್ನು ಮತ್ತೊಮ್ಮೆ ಹಿಂದಿಕ್ಕಿ ಅಗ್ರಸ್ಥಾನದಲ್ಲಿ ಮುಂದುವರೆಸಿದೆ. ಆದರೆ ಈ ಜನಪ್ರಿಯ ಟೊಯೊಟಾ ಫಾರ್ಚುನರ್ ಅದ್ಭುತ ಫೀಚರ್ ಅನ್ನು ಕಳೆದುಕೊಳ್ಳುತ್ತದೆ
ಜನಪ್ರಿಯ ಟೊಯೊಟಾ ಫಾರ್ಚುನರ್ 4X4 ಮತ್ತು ಲೆಜೆಂಡರ್ 4X4 ಎಸ್‍ಯುವಿಗಳಲ್ಲಿ 11-ಸ್ಪೀಕರ್ JBL ಆಡಿಯೊ ಸಿಸ್ಟಮ್ ಅನ್ನು ತೆಗೆದುಹಾಕಿದೆ. ಎಸ್‍ಯುವಿಗಳಿಂದ ದೇಶದಲ್ಲಿ ಮುಂಬರುವ ಹೆಚ್ಚು ಕಟ್ಟುನಿಟ್ಟಾದ RDE ಮತ್ತು BS6 ಹಂತ 2 ಎಮಿಷನ್ ಮಾನದಂಡಗಳ ಅನುಷ್ಠಾನಕ್ಕೆ ಮುಂಚಿತವಾಗಿ ಈ ಫೀಚರ್ ಅನ್ನು ತೆಗೆದುಹಾಕಿದೆ. ಅದರ ಜೊತೆಗೆ, ಈ ಫೀಚರ್ ತೆಗೆದುಹಾಕಿದರೂ ಯಾವುದೇ ಬೆಲೆ ಕಡಿತಕ್ಕೆ ಕಾರಣವಾಗಿಲ್ಲ.

ಟೊಯೊಟಾ ಫಾರ್ಚುನರ್ 4X4 ಎಸ್‍ಯುವಿಯ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಅಳವಡಿಸಲಾಗಿರುವ ರೂಪಾಂತರದ ಬೆಲೆಯು ರೂ,38.93 ಲಕ್ಷವಾಗಿದೆ. ಮತ್ತೊಂದೆಡೆ, ಅದೇ ರೂಪಾಂತರ ಆಧರಿಸಿದ ಆಟೋಮ್ಯಾಟಿಕ್ ರೂಪಾಂತರದ ಬೆಲೆಯು ರೂ.41.22 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಮತ್ತೊಂದೆಡೆ, ಟೊಯೊಟಾ ಲೆಜೆಂಡರ್ 4X4 ಪ್ರತ್ಯೇಕವಾಗಿ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.
ಟೊಯೊಟಾ ಎಸ್‍ಯುವಿಯ ಈ ರೂಪಾಂತರದ ಬೆಲೆಯು ರೂ,46.54 ಲಕ್ಷವಾದರೆ, ಇನ್ನು ಇದರ 4X4 AT ರೂಪಾಂತರದ ಬೆಲೆಯು ರೂ.5.32 ಲಕ್ಷ ಹೆಚ್ಚು ದುಬಾರಿಯಾಗಿದೆ. ಜಪಾನಿನ ಕಾರು ತಯಾರಕರು ಟೊಯೊಟಾ ಫಾರ್ಚುನರ್ 4X4 ಮತ್ತು ಲೆಜೆಂಡರ್ 4X4 ಎಸ್‍ಯುವಿಗಳಿಂದ 11-ಸ್ಪೀಕರ್ JBL ಆಡಿಯೊ ಸಿಸ್ಟಮ್ ಅನ್ನು ಏಕೆ ತೆಗೆದುಹಾಕಿದ್ದಾರೆ ಎಂಬುದನ್ನು ಇನ್ನೂ ಖಚಿತಪಡಿಸಿಲ್ಲ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಈ ನಿರ್ಧಾರದ ಹಿಂದಿನ ಪ್ರಾಥಮಿಕ ಕಾರಣ ಎಂದು ನಾವು ಅನುಮಾನ ಪಡುತ್ತೇವೆ.

ಫಾರ್ಚೂನರ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯು ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ನವೀಕರಿಸಿದ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿವೆ. ಈ ಇನ್ನು ಫಾರ್ಚುನರ್ ಎಸ್‍ಯುವಿ ಕ್ರೋಮ್ ಸರೌಂಡ್‌ನೊಂದಿಗೆ ದೊಡ್ಡ ಫ್ರಂಟ್ ಗ್ರಿಲ್, ಫಾಗ್ ಲ್ಯಾಂಪ್‌ಗಳಿಗಾಗಿ ಹೊಸ ಹೌಸಿಂಗ್‌ಗಳೊಂದಿಗೆ ನವೀಕರಿಸಿದ ಫ್ರಂಟ್ ಬಂಪರ್ ಹೊಂದಿದೆ. ಇದರಲ್ಲಿ ಹೊಸ 18 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಹೊಂದಿವೆ.
ಈ ಟೊಯೊಟಾ ಫಾರ್ಚುನರ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಒಳಭಾಗದಲ್ಲಿ ಈಗ ಹೆಚ್ಚು ಪ್ರೀಮಿಯಂ ಆಗಿ ನವೀಕರಿಸಿದ್ದು, ಕೆಲವು ಹೊಸ ಫೀಚರ್ಸ್ ಅನ್ನು ಹೊಂದಿದೆ. ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗಳೊಂದಿಗಿನ ಹೊಸ 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಕನೆಕ್ಟಿವಿಟಿ ಕಾರು ತಂತ್ರಜ್ಞಾನವನ್ನು ಕೂಡ ಒಳಗೊಂಡಿದೆ.
ಇನ್ನು ಟೊಯೊಟಾ ತನ್ನ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ತಿಂಗಳುಗಳ ಹಿಂದೆ ಬಿಡುಗಡೆಗೊಳಿಸಿತ್ತು. ಈ ಜನಪ್ರಿಯ ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಟಾಪ್ ವೆರಿಯೆಂಟ್ ಲೆಜೆಂಡರ್ ಆಗಿದೆ. ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಡ್ಯುಯಲ್ ಟೋನ್ ಪರ್ಲ್ ವೈಟ್ ಜೊತೆಗೆ ಬ್ಲಾಕ್ ರೂಫ್ ಕಲರ್ ಸ್ಕೀಮ್ ನಲ್ಲಿ ನೀಡಲಾಗುತ್ತಿದೆ.

ಟೊಯೊಟಾ ಫಾರ್ಚುನರ್ ಲೆಜೆಂಡರ್ 4X2 ಮಾದರಿಗೆ ಹೋಲಿಸಿದರೆ 4X4 ವೆರಿಯೆಂಟ್ ಯಾವುದೇ ವಿಶೇಷ ಬಾಹ್ಯ ಬಿಟ್‌ಗಳನ್ನು ಪಡೆಯುವುದಿಲ್ಲ. ಫಾರ್ಚುನರ್ ಲೆಜೆಂಡರ್ ಎಸ್‍ಯುವಿಯು ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿಯರ್ ವಿನ್ಯಾಸವನ್ನು ಹೊಂದಿದೆ. ಟೊಯೊಟಾ ಲೆಜೆಂಡರ್ ಮರುವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿದೆ. ಡಿಆರ್‌ಎಲ್‌ಗಳು ಹೊಂದಿದೆ. ಇದನ್ನು ಟೊಯೊಟಾ ವಾಟರ್ ಫಾಲ್ ಡಿಆರ್‌ಎಲ್‌ಗಳು ಎಂದು ಕರೆಯಲಾಗುತ್ತದೆ.ಈ ಎಸ್‍ಯುವಿ ಹೆಡ್‌ಲ್ಯಾಂಪ್‌ಗಳ ಕೆಳಗೆ ಫಾಗ್ ಲ್ಯಾಂಪ್ ಗಳಿವೆ.


Click it and Unblock the Notifications