Toyota: ಟೊಯೊಟಾದ ಈ 'ಬಾಹುಬಲಿ' ಕಾರು ಕೆಲವೇ ದಿನಗಳಲ್ಲಿ ನಿಮ್ಮ ಮನೆ ಸೇರುತ್ತದೆ.. ಎಲ್ಲರೂ ಪಿಧಾ!
ಭಾರತದಲ್ಲಿ ಟೊಯೊಟಾ (Toyota) ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಆಕರ್ಷಕ ವೈಶಿಷ್ಟ್ಯ, ವಿನ್ಯಾಸವನ್ನು ಹೊಂದಿರುವುದರಿಂದ ಕಂಪನಿಯ ಎಸ್‌ಯುವಿ ಹಾಗೂ ಎಂಪಿವಿಗಳನ್ನು ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಟೊಯೊಟಾ ಇನ್ನೋವಾದಂತೆ ಫಾರ್ಚೂನರ್ (Fortuner) ಕಾರು ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಟೊಯೊಟಾ ಇಂಡಿಯಾ (Toyota India) ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ 1 ಡಿಸೆಂಬರ್ 2023ಕ್ಕೆ ಅನ್ವಯವಾಗುವಂತೆ ಕಂಪನಿಯ ವಿವಿಧ ಮಾದರಿಗಳ ಕಾಯುವ ಅವಧಿ ಕುರಿತ ವಿವರವನ್ನು ಪ್ರಕಟಿಸಿದೆ. ಟೊಯೊಟಾ ಫಾರ್ಚೂನರ್ (Toyota Fortuner) ಎಸ್‌ಯುವಿ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರನ್ನು ಸೆಳೆದಿದೆ. ನೀವು ಈ ಕಾರನ್ನು ಇವತ್ತು ಬುಕ್ಕಿಂಗ್ ಮಾಡಿದರೂ ಸುಮಾರು 1 - 2 ತಿಂಗಳ ನಂತರ ವಿತರಣೆಯಾಗಲಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟೊಯೊಟಾ ಫಾರ್ಚೂನರ್ ರೂ.33.43 ಲಕ್ಷದಿಂದ ರೂ.51.44 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಸ್ಟ್ಯಾಂಡರ್ಡ್, ಜಿಆರ್-ಎಸ್, ಲೆಜೆಂಡರ್ ರೂಪಾಂತರ ಹಾಗೂ ಪ್ಲಾಟಿನಂ ವೈಟ್ ಪರ್ಲ್, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಕ್ರಿಸ್ಟಲಿನ್ ಶೈನ್, ಫ್ಯಾಂಟಮ್ ಬ್ರೌನ್ ಸೇರಿದಂತೆ 7 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
ಟೊಯೊಟಾ ಫಾರ್ಚೂನರ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, 2.7 - ಲೀಟರ್ ಪೆಟ್ರೋಲ್ ಎಂಜಿನ್ 166 PS ಪವರ್, 245 Nm ಪೀಕ್ ಟಾರ್ಕ್, 2.8 - ಲೀಟರ್ ಟರ್ಬೊ ಡಿಸೇಲ್ ಎಂಜಿನ್ 204 PS ಗರಿಷ್ಠ ಪವರ್ ಹಾಗೂ 500 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

ಈ ಫಾರ್ಚೂನರ್ ಕಾರು ರೂಪಾಂತರಗಳಿಗೆ ಅನುಗುಣವಾಗಿ 5 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೊಂದಿಗೆ ಲಭ್ಯವಿದೆ. 2WD (ಟೂ ವೀಲ್ ಡ್ರೈವ್) ಹಾಗೂ 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದ್ದು, 10.0 kmpl ಮೈಲೇಜ್ ನೀಡಲಿದೆ. ಇದರಲ್ಲಿ 7 ಜನರು ಆರಾಮದಾಯವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.
ಟೊಯೊಟಾ ಫಾರ್ಚೂನರ್ ಎಸ್‌ಯುವಿ, 8 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 6 - ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ಕನೆಕ್ಟ್ದ್ ಕಾರ್ ಟೆಕ್, ಕಿಕ್ - ಟು - ಓಪನ್ ಪವರ್ಡ್ ಟೈಲ್‌ಗೇಟ್, ಡ್ಯುಯಲ್ - ಜೋನ್ ಎಸಿ, ಕ್ರೂಸ್ ಕಂಟ್ರೋಲ್ ಸೇರಿದಂತೆ ವೈಶಿಷ್ಟ್ಯಗಳನ್ನು ಹೊಂದಿದೆ.

ಸುರಕ್ಷತೆಯ ದೃಷ್ಟಿಯಿಂದ ಟೊಯೊಟಾ ಫಾರ್ಚೂನರ್ ಎಸ್‌ಯುವಿ ಅತ್ಯುತ್ತಮವಾಗಿದ್ದು, 7 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಒಳಗೊಂಡಂತೆ ವಿವಿಧ ಸೇಫ್ಟಿ ಫೀಚರ್ಸ್ ಇವೆ. ಈ ಕಾರಿಗೆ ಎಂಜಿ ಗ್ಲೋಸ್ಟರ್, ಜೀಪ್ ಮೆರಿಡಿಯನ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications