ಭಾರತದಲ್ಲಿ ಟೊಯೊಟಾ ಫಾರ್ಚುನರ್ ಭಾರೀ ಡಿಮ್ಯಾಂಡ್: ಇದಕ್ಕೆ ಮತ್ತಷ್ಟು ಕಾಯಬೇಕು
ಫುಲ್ ಸೈಜ್ ಎಸ್‌ಯುವಿ (Full Size Suv) ವಿಭಾಗದಲ್ಲಿ ಟೊಯೊಟಾ ಫಾರ್ಚೂನರ್ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಪ್ರತಿ ತಿಂಗಳ ಪೂರ್ಣ ಗಾತ್ರದ ಎಸ್‌ಯುವಿ ವಿಭಾಗದ ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿ ಮುಂದುವರೆಯುತ್ತಿದೆ. ಈ ನಡುವೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ತನ್ನ ಟೊಯೊಟಾ ಫಾರ್ಚೂನರ್ (Toyota Fortuner) ಎಸ್‍ಯುವಿಯ ಕಾಯುವಿಕೆಯ ಅವಧಿ ಬಹಿರಂಗವಾಗಿದೆ.
ಟೊಯೊಟಾ ಫಾರ್ಚುನರ್ ಖರೀದಿಸುವ ಗ್ರಾಹಕರು ಬುಕಿಂಗ್ ದಿನಾಂಕದಿಂದ 13 ವಾರಗಳವರೆಗೆ ಕಾಯಬೇಕಾಗುತ್ತದೆ. ಸ್ಟ್ಯಾಂಡರ್ಡ್ ಮತ್ತು ಲೆಜೆಂಡರ್ ಆವೃತ್ತಿಗಳಿಗೆ ಮಾನ್ಯವಾಗಿರುವ ಈ ಟೈಮ್‌ಲೈನ್ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಅನ್ವಯಿಸುತ್ತದೆ. ಕಳೆದ ತಿಂಗಳಿಗೆ ಹೋಲಿಸಿದರೆ ಕಾಯುವ ಅವಧಿಯು ಬದಲಾಗದೆ ಉಳಿದಿದೆ ಎಂದು ಗಮನಿಸಬೇಕು. ಪೂರ್ಣ ಗಾತ್ರದ ಎಸ್‌ಯುವಿ ವಿಭಾಗದ ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ದೀರ್ಘಕಾಲದಿಂದ ಅಗ್ರಸ್ಥಾನದಲ್ಲಿದೆ.

ಏಳು-ಸೀಟುಗಳ ಪ್ರಸ್ತುತ ಜನರೇಷನ್ ಫಾರ್ಚೂನರ್ ಅನ್ನು 2016 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಫಾರ್ಚೂನರ್ ಜಿಆರ್ ಸ್ಪೋರ್ಟ್ ರೂಪಾಂತರವನ್ನು ಶ್ರೇಣಿಗೆ ಸೇರಿಸಲಾಯಿತು. ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಲೆಜೆಂಡರ್ ಆವೃತ್ತಿಯು ಮಾರಾಟದಲ್ಲಿದೆ ಮತ್ತು ಇದು 4X4 ಆಯ್ಕೆಯೊಂದಿಗೆ ಸಹ ಲಭ್ಯವಿದೆ. ಟೊಯೊಟಾ ಲೆಜೆಂಡರ್‌ನ 4×4 ರೂಪಾಂತರವನ್ನು ಫಾರ್ಚುನರ್‌ನ ಶ್ರೇಣಿಗೆ ಸೇರಿಸಿತು ಮತ್ತು ಇದು ಕ್ಲಾಸ್-ಲೀಡಿಂಗ್ 7-ಸೀಟರ್ ಎಸ್‍ಯುವಿಯ ಬೆಲೆಯನ್ನು ಮತ್ತಷ್ಟು ಹೆಚ್ಚಿಸಿತು.
ಈ ಫಾರ್ಚುನರ್‌ನ ಜಿಆರ್-ಸ್ಪೋರ್ಟ್ ರೂಪಾಂತರವನ್ನು ಕೂಡ ಬಿಡುಗಡೆಗೊಳಿಸಿತ್ತು. ಈ ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಬೆಲೆಗಳಲ್ಲಿನ ಹೆಚ್ಚಳವನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಫಾರ್ಚೂನರ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯು ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ನವೀಕರಿಸಿದ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿವೆ.

ಈ ಫಾರ್ಚುನರ್ ಎಸ್‍ಯುವಿ ಕ್ರೋಮ್ ಸರೌಂಡ್‌ನೊಂದಿಗೆ ದೊಡ್ಡ ಫ್ರಂಟ್ ಗ್ರಿಲ್, ಫಾಗ್ ಲ್ಯಾಂಪ್‌ಗಳಿಗಾಗಿ ಹೊಸ ಹೌಸಿಂಗ್‌ಗಳೊಂದಿಗೆ ನವೀಕರಿಸಿದ ಫ್ರಂಟ್ ಬಂಪರ್ ಹೊಂದಿದೆ. ಇದರಲ್ಲಿ ಹೊಸ 18 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಹೊಂದಿವೆ. ಟೊಯೊಟಾ ಫಾರ್ಚುನರ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಒಳಭಾಗದಲ್ಲಿ ಈಗ ಹೆಚ್ಚು ಪ್ರೀಮಿಯಂ ಆಗಿ ನವೀಕರಿಸಿದ್ದು, ಕೆಲವು ಹೊಸ ಫೀಚರ್ಸ್ ಅನ್ನು ಹೊಂದಿದೆ.
ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗಳೊಂದಿಗಿನ ಹೊಸ 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಕನೆಕ್ಟಿವಿಟಿ ಕಾರು ತಂತ್ರಜ್ಞಾನವನ್ನು ಕೂಡ ಹೊಂದಿದೆ. ಈ ಎಸ್‍ಯುವಿಯ ವೆಂಟಿಲೇಟಡ್ ಮುಂಭಾಗದ ಸೀಟುಗಳು, ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 11-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಂ, ಆಂಬಿಯೆಂಟ್ ಲೈಟಿಂಗ್ ಮತ್ತು ಇತರ ಫೀಚರ್ ಗಳನ್ನು ಹೊಂದಿವೆ.

ಟೊಯೊಟಾ ತನ್ನ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ತಿಂಗಳುಗಳ ಹಿಂದೆ ಬಿಡುಗಡೆಗೊಳಿಸಿತ್ತು. ಈ ಜನಪ್ರಿಯ ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಟಾಪ್ ವೆರಿಯೆಂಟ್ ಲೆಜೆಂಡರ್ ಆಗಿದೆ. ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಡ್ಯುಯಲ್ ಟೋನ್ ಪರ್ಲ್ ವೈಟ್ ಜೊತೆಗೆ ಬ್ಲಾಕ್ ರೂಫ್ ಕಲರ್ ಸ್ಕೀಮ್ ನಲ್ಲಿ ನೀಡಲಾಗುತ್ತಿದೆ.
ಫಾರ್ಚುನರ್ ಲೆಜೆಂಡರ್ 4X2 ಮಾದರಿಗೆ ಹೋಲಿಸಿದರೆ 4X4 ವೆರಿಯೆಂಟ್ ಯಾವುದೇ ವಿಶೇಷ ಬಾಹ್ಯ ಬಿಟ್‌ಗಳನ್ನು ಪಡೆಯುವುದಿಲ್ಲ. ಫಾರ್ಚುನರ್ ಲೆಜೆಂಡರ್ ಎಸ್‍ಯುವಿಯು ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿಯರ್ ವಿನ್ಯಾಸವನ್ನು ಹೊಂದಿದೆ. ಟೊಯೊಟಾ ಲೆಜೆಂಡರ್ ಮರುವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿದೆ. ಡಿಆರ್‌ಎಲ್‌ಗಳು ಹೊಂದಿದೆ. ಇದನ್ನು ಟೊಯೊಟಾ ವಾಟರ್ ಫಾಲ್ ಡಿಆರ್‌ಎಲ್‌ಗಳು ಎಂದು ಕರೆಯಲಾಗುತ್ತದೆ.
ಈ ಎಸ್‍ಯುವಿ ಹೆಡ್‌ಲ್ಯಾಂಪ್‌ಗಳ ಕೆಳಗೆ ಫಾಗ್ ಲ್ಯಾಂಪ್ ಗಳಿವೆ. ಇನ್ನು ಡೈನಾಮಿಕ್ ಟರ್ನ್ ಸಿಗ್ನಲ್ ಇಂಡೀಕೆಟರ್ ಗಳಿವೆ. ಫಾರ್ಚೂನರ್ ಲೆಜೆಂಡರ್ ಸುತ್ತಲೂ ಎಲ್ಇಡಿ ಲೈಟಿಂಗ್ ಹೊಂದಿದೆ. ಇನ್ನು ಇದರ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ, ಇದರಲ್ಲಿ 18 ಇಂಚಿನ ಮೆಷಿನ್-ಕಟ್ ಅಲಾಯ್ ವ್ಹೀಲ್‌ಗಳನ್ನು ಅಳವಡಿಸಲಾಗಿದೆ. ಇನ್ನು ಡೋರಿನ ಹ್ಯಾಂಡಲ್‌ಗಳಲ್ಲಿ ಕೆಲವು ಕ್ರೋಮ್ ಇದೆ ಮತ್ತು ಉದ್ದಕ್ಕೂ ಸ್ಟ್ರಿಪ್ ಅನ್ನು ಸಹ ಕ್ರೋಮ್‌ನಿಂದ ಮಾಡಲಾಗಿದೆ.


Click it and Unblock the Notifications