ವಾಹನ ರಂಗದಲ್ಲಿ ಹೊಸ ಕ್ರಾಂತಿ... ಟೊಯೊಟಾ ಹೈಡ್ರೋಜನ್ ಕಾರು ಬಹಿರಂಗ! | Toyota Hilux Hydrogen car revealed!
ಟೊಯೊಟಾ ಕಂಪನಿಯು ಇಂಗ್ಲೆಂಡಿನಲ್ಲಿ ತನ್ನ ಹೊಸ ಹೈಡ್ರೋಜನ್ ಚಾಲಿತ ಹೈಲಕ್ಸ್ ಪಿಕಪ್ ಟ್ರಕ್ ಅನ್ನು ಬಹಿರಂಗಪಡಿಸಿದೆ. ಇದರಲ್ಲಿ ಟೊಯೊಟಾ ಮಿರಾಯ್‌ನಂತೆಯೇ ಪವರ್‌ಟ್ರೇನ್ ಬಳಸಲಾಗಿದೆ. ಈ ಟೊಯೊಟಾ ಮಿರಾಯ್ ಕೂಡ ಹೈಡ್ರೋಜನ್ ಚಾಲಿತ ಸೆಡಾನ್ ಕಾರಾಗಿದ್ದು, ಇದೇ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಆಟೋಎಕ್ಸ್‌ಪೋದಲ್ಲಿ ಇದನ್ನು ಪ್ರದರ್ಶಿಸಲಾಗಿತ್ತು.
ಇದೀಗ ಈ ಹೊಸ ಪಿಕಪ್ ಟ್ರಕ್ ಬಹಿರಂಗಗೊಳಿಸಿ ಹೈಡ್ರೋಜನ್ ಚಾಲಿತ ಕಾರುಗಳ ನಿರ್ಮಾಣದಲ್ಲಿ ಟೋಯೋಟಾ ಎಷ್ಟು ವೇಗವಾಗಿದೆ ಎಂಬುದನ್ನು ಸಾಭೀತುಪಡಿಸಿದೆ. ಈ ಹೊಸ ಹೈಡ್ರೋಜನ್ ಚಾಲಿತ ಹೈಲಕ್ಸ್ ಅಭಿವೃದ್ಧಿಗಾಗಿ ಕಂಪನಿಯ ತಯಾರಕರು ಒಂದು ವರ್ಷ ತೆಗೆದುಕೊಂಡಿದ್ದಾರೆ. ಹಾಗೆಯೇ ಇದರ ಅಭಿವೃದ್ಧಿಗೆ ಬೇಕಾದ ಹಣವನ್ನು ಅಡ್ವಾನ್ಸ್ಡ್ ಪ್ರೊಪಲ್ಷನ್ ಸೆಂಟರ್ ಮೂಲಕ ಬ್ರಿಟಿಷ್ ಸರ್ಕಾರದಿಂದ ಪಡೆಯಲಾಗಿದೆ.

ಡರ್ಬಿಯಲ್ಲಿರುವ ಟೊಯೊಟಾ ಮ್ಯಾನುಫ್ಯಾಕ್ಚರಿಂಗ್ ಯುಕೆ ಬರ್ನಾಸ್ಟನ್ ಕಾರ್ ಪ್ಲಾಂಟ್‌ನಲ್ಲಿ ಪಿಕ್-ಅಪ್ ಟ್ರಕ್ ಅನ್ನು ಬಹಿರಂಗಪಡಿಸಲಾಯಿತು. ಈ ಹೈಲಕ್ಸ್ ಕೇವಲ ಒಂದು ಮೂಲಮಾದರಿ (Prototype) ಎಂಬುದನ್ನು ಗಮನಿಸುವುದು ಮುಖ್ಯ. ಈ ವರ್ಷದ ಅಂತ್ಯದ ವೇಳೆಗೆ ಇನ್ನೂ ಒಂಬತ್ತು ಮಾದರಿಗಳನ್ನು ನಿರ್ಮಿಸುವುದಾಗಿ ಟೊಯೊಟಾ ಘೋಷಿಸಿದೆ.
ಮೊದಲೇ ಹೇಳಿದಂತೆ ಹೈಡ್ರೋಜನ್ ಚಾಲಿತ ಪಿಕ್ ಅಪ್ ಟ್ರಕ್ ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನವನ್ನು ಬಳಸುವ ಎಲೆಕ್ಟ್ರಿಕ್ ಸೆಡಾನ್ ಟೊಯೋಟಾ ಮಿರೈ ಜೊತೆಗೆ ತನ್ನ ಪವರ್‌ಟ್ರೇನ್ ಅನ್ನು ಹಂಚಿಕೊಂಡಿದೆ. ಈ ಪವರ್ ಟ್ರೇನ್ ಸುಮಾರು 10 ವರ್ಷಗಳಿಂದ ಬಳಕೆಯಲ್ಲಿದೆ ಎಂಬುದು ಗಮನಿಸಬೇಕಾದ ಸಂಗತಿ.

Hilux ಮೂರು ಅಧಿಕ-ಒತ್ತಡದ ಇಂಧನ ಟ್ಯಾಂಕ್‌ಗಳನ್ನು ಒಳಗೊಂಡಿದ್ದು, ಫುಲ್‌ಟ್ಯಾಂಕ್ ಸಾಮರ್ಥ್ಯದಲ್ಲಿ ಪಿಕ್-ಅಪ್ ಟ್ರಕ್ ಬರೋಬ್ಬರಿ 587 ಕಿ.ಮೀವರೆಗಿನ ಮೈಲೇಜ್ ನೀಡುತ್ತದೆ ಎಂದು ಟೊಯೋಟಾ ಹೇಳಿಕೊಂಡಿದೆ. ಇಂಧನ ಕೋಶದಿಂದ ಬೋರ್ಡ್‌ನಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಸಂಗ್ರಹಿಸುವ ಬ್ಯಾಟರಿಯನ್ನು ಹಿಂದಿನ ಲೋಡ್ ಡೆಕ್‌ನಲ್ಲಿ ಇರಿಸಲ್ಪಟ್ಟಿರುವ ಕಾರಣ ಕ್ಯಾಬಿನ್ ಜಾಗಕ್ಕೆ ಯಾವುದೇ ನಷ್ಟವಾಗಿಲ್ಲ ಎಂದು ಕಂಪನಿ ತಿಳಿಸಿದೆ.
ಇಂಧನ ಚಾಲಿತ ಟೊಯೊಟಾ ಹೈಲಕ್ಸ್: ಸದ್ಯ ಭಾರತದಲ್ಲಿ ಮಾರಾಟದಲ್ಲಿರುವ ಟೊಯೊಟಾ ಹೈಲಕ್ಸ್ ಅನ್ನು 2.8-ಲೀ. ನಾಲ್ಕು-ಸಿಲಿಂಡರ್ ಡೀಸೆಲ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ. ಇದು ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಗರಿಷ್ಠ 204 PS ಪವರ್ ಮತ್ತು 420 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಪಿಕಪ್ ಟ್ರಕ್‌ನ ಎಲ್ಲಾ ರೂಪಾಂತರಗಳು 4×4 ಸಿಸ್ಟಂನೊಂದಿಗೆ ಪ್ರಮಾಣಿತವಾಗಿ ಲಭ್ಯವಿದೆ.

ಜಾಗತಿಕವಾಗಿ ಪ್ರಸಿದ್ಧವಾದ ಪಿಕ್-ಅಪ್ ಟ್ರಕ್ ಆಗಿರುವುದರಿಂದ, ಇದು ಅತ್ಯಂತ ಕಠಿಣವಾದ ಭೂಪ್ರದೇಶಗಳನ್ನು ಸಹ ನಿಭಾಯಿಸಲು ತಯಾರಿಸಲಾಗಿದೆ. ಇದು ಅತ್ಯಂತ ಸಮರ್ಥ ಆಫ್-ರೋಡರ್ ಆಗಿದ್ದು, ಇತ್ತೀಚೆಗೆ ಭಾರತೀಯ ಸೇನೆ ಕೂಡ ಟೊಯೋಟಾ ಹಿಲಕ್ಸ್ 4×4 ಐಷಾರಾಮಿ ಪಿಕಪ್ ಟ್ರಕ್ ಅನ್ನು ತಮ್ಮ ಫ್ಲೀಟ್‌ಗೆ ಸೇರಿಸುವುದಾಗಿ ಘೋಷಿಸಿತ್ತು.
ಟೊಯೊಟಾ ಹಿಲಕ್ಸ್ ಸದ್ಯದ ಬೆಲೆಯು 30.41 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಇದು 700 ಎಂಎಂ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಟೊಯೋಟಾ ಎಲ್‌ಎಸ್‌ಡಿ, ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್, ಹಿಂಭಾಗದ ಡಿಫ್ ಲಾಕ್‌ಗಳು ಅನ್ನು ಸಹ ಹೊಂದಿದೆ. ಸದ್ಯ ಇಂಧನ ಚಾಲಿತ ಟೊಯೊಟಾ ಹೈಲಕ್ಸ್ ಜಾಗದಲ್ಲಿ ಹೈಡ್ರೋಜ್ ಬರುತ್ತಿರುವುದರ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications