ಟೊಯೊಟಾ ಹಿಲಕ್ಸ್ ಬೆಲೆ ದಿಢೀರನೇ 3.6 ಲಕ್ಷ ರೂಪಾಯಿ ಇಳಿಕೆ
ಟೊಯೊಟಾ ಕಂಪನಿಯ ಬಹುನೀರಿಕ್ಷಿತ ಪಿಕಪ್ ಟ್ರಕ್ ಹಿಲಕ್ಸ್ (Hilux) ಬೆಲೆಯನ್ನು ಪರಿಷ್ಕರಿಸಿದೆ. ರೂಪಾಂತರಗಳಿಗೆ ಅನುಗುಣವಾಗಿ ಬೆಲೆಯನ್ನು ದೊಡ್ಡ ಮಟ್ಟದಲ್ಲಿ ಕಡಿತಗೊಳಿಸಿದೆ. ಜೊತೆಗೆ ಏರಿಕೆಯನ್ನು ಮಾಡಿದೆ. ಅಂದಹಾಗೆ ಈ ಹಿಲಕ್ಸ್ ಅಗ್ಗದ ದರದಲ್ಲೇನೂ ಖರೀದಿಗೆ ದೊರೆಯುವುದಿಲ್ಲ ಕೊಂಚ ದುಬಾರಿಯೇ ಆಗಿದೆ. ಹೆಚ್ಚಿನ ವಿವರ ಇಲ್ಲಿದೆ.
ನೂತನ ಟೊಯೊಟಾ ಹಿಲಕ್ಸ್ ಎರಡು ರೂಪಾಂತರಗಳಲ್ಲಿ ಭಾರತದ ಗ್ರಾಹಕರಿಗೆ ಸಿಗಲಿದೆ. ಅವುಗಳೆಂದರೆ, ಸ್ಟ್ಯಾಂಡರ್ಡ್ (Standard), ಹೈ (High). ಇದರಲ್ಲಿ ಸ್ಟ್ಯಾಂಡರ್ಡ್ ರೂಪಾಂತರದ ಬೆಲೆ ರೂ.3.59 ಲಕ್ಷ ಇಳಿಕೆಯಾಗಿದ್ದು, ರೂ.30.40 ಲಕ್ಷ ದರದಲ್ಲಿ (ಎಕ್ಸ್ ಶೋರೂಂ) ಖರೀದಿಗೆ ಲಭ್ಯವಾಗಲಿದೆ. ಮತ್ತೊಂದೆಡೆ ಹೈ ಎಂಟಿ ಹಾಗೂ ಹೈ ಎಟಿ ರೂಪಾಂತರಗಳ ಬೆಲೆ ಕ್ರಮವಾಗಿ ರೂ.1.35 ಲಕ್ಷ ಹಾಗೂ ರೂ.1.10 ಏರಿಕೆಯಾಗಿದ್ದು, ರೂ. 37.90 ಲಕ್ಷ ಬೆಲೆಯನ್ನು ಪಡೆದಿದೆ.

ಈ ವರ್ಷದ ಆರಂಭದಲ್ಲಿ ಟೊಯೊಟಾ ಯಾವುದೇ ರೀತಿಯಲ್ಲಿ ಬೆಲೆ ಪರಿಷ್ಕರಣೆಗಳಿಲ್ಲದೆ 'ಹಿಲಕ್ಸ್' ಮಾದರಿಗಳ 2ನೇ ಬ್ಯಾಚ್‌ನ ಬುಕಿಂಗ್ ಅನ್ನು ಆರಂಭಿಸಿತ್ತು. ಇದೀಗ ನೂತನ ದರಗಳನ್ನು ಪ್ರಕಟಿಸಿದೆ. ಈ ಪಿಕಪ್ ಟ್ರಕ್ ಸುತ್ತಳತೆಯನ್ನು ಗಮನಿಸುವುದಾದರೆ, ಇದು 5,325 ಎಂಎಂ ಉದ್ದ, 1,855 ಎಂಎಂ ಅಗಲ, 1,815 ಎಂಎಂ ಎತ್ತರ, 3,085 ಎಂಎಂ ಅಳತೆಯು ವ್ಹೀಲ್ ಬೇಸ್ ಹೊಂದಿದೆ.
ಟೊಯೊಟಾ ಹಿಲಕ್ಸ್, ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 'ಫಾರ್ಚೂನರ್' ಹೊಂದಿರುವ ಎಂಜಿನ್ ಅನ್ನೇ ಪಡೆದುಕೊಂಡಿದೆ. ಇದರ 2.8 ಲೀಟರ್ ಡೀಸೆಲ್ ಎಂಜಿನ್, 204 hp ಪವರ್ 420 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಆದರೆ, ಆಟೋಮೆಟಿಕ್ ಗೇರ್‌ಬಾಕ್ಸ್ ಹೊಂದಿರುವ ಪಿಕಪ್ ಟ್ರಕ್ 500 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಟೊಯೊಟಾ ಹಿಲಕ್ಸ್ ಒಳಭಾಗದ ವಿನ್ಯಾಸ ಹಾಗೂ ವೈಶಿಷ್ಟ್ಯಗಳ ನೋಡುವುದಾದರೆ, ಫಾರ್ಚೂನರ್ ನಂತೆಯೇ ಸ್ವಿಚ್‌ಗೇರ್‌ನ್ನು ಪಡೆದಿದೆ. ಡ್ಯಾಶ್‌ಬೋರ್ಡ್ ವಿನ್ಯಾಸ ಮಾತ್ರ ಸ್ವಲ್ಪ ಬೇರೆ ರೀತಿಯಲ್ಲಿದೆ. ಆದರೆ, ಇವೆರೆಡು ಒಂದೇ ತರಹ ಕಾಣುವ ಟಚ್‌ಸ್ಕ್ರೀನ್, ಕ್ಲೈಮೇಟ್ ಕಂಟ್ರೋಲ್ ಪ್ಯಾನಲ್, ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್ ವೀಲ್ ಹಾಗೂ ಫ್ರಂಟ್ ಸೀಟ್‌ಗಳನ್ನು ಹೊಂದಿರುವುದು ವಿಶೇಷವಾಗಿದೆ.
ಇದಿಷ್ಟೇ ಅಲ್ಲದೆ, ಹಿಲಕ್ಸ್ ಪಿಕಪ್ ಟ್ರಕ್ 8.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಚರ್ಮದ ಹೊದಿಕೆ ಹೊಂದಿರುವ ಸೀಟುಗಳು (leather upholstery seats) 7 ಏರ್ ಬ್ಯಾಗ್ಸ್, ಫ್ರಂಟ್, ರೇರ್ ಪಾರ್ಕಿಂಗ್ ಸೆನ್ಸರ್ಸ್, ಟೈರ್ ಆಂಗಲ್ ಮಾನಿಟರ್, ಆಕ್ಟಿವ್ ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ದೊಡ್ಡ ಗ್ರಾತ್ರದ ಪಿಕಪ್ ವಾಹನವಾಗಿರುವ 'ಹಿಲಕ್ಸ್' ನೋಡಲು ಅತ್ಯಾಕರ್ಷಕವಾಗಿದೆ. ಡಬಲ್-ಕ್ಯಾಬ್ ಬಾಡಿ ಸ್ಟೈಲ್, ಮುಂಭಾಗದಲ್ಲಿ ಹೆಕ್ಸಾಗೋನಾಲ್ ಕ್ರೋಮ್, ಸ್ವೆಪ್ಟ್-ಬ್ಯಾಕ್ LED ಹೆಡ್‌ಲ್ಯಾಂಪ್ಸ್, ಆಫ್-ರೋಡ್ ವಾಹನದಂತೆ ಲುಕ್ ಪಡೆಯಲು ವೀಲ್ಸ್ ಅರ್ಚೆಸ್ ಮೇಲೆ ಬ್ಲ್ಯಾಕ್ ಪ್ಲಾಸಿಕ್ ಕ್ಲಾಡಿಂಗ್ ಅನ್ನು ಹೊಂದಿದೆ. ಹಿಂಭಾಗವು ಉತ್ತಮವಾದ ವಿನ್ಯಾಸವನ್ನು ಪಡೆದಿದ್ದು, ಇದು ಬಹುತೇಕರಿಗೆ ಇಷ್ಟವಾಗುತ್ತದೆ.
ವಾಹನ ಮಾರುಕಟ್ಟೆಯಲ್ಲಿ ಪಿಕಪ್ ಟ್ರಕ್‌ಗಳು ತಮ್ಮದೇ ಆದ ಖರೀದಿದಾರರನ್ನು ಹೊಂದಿವೆ. ಟೊಯೊಟಾ ಹಿಲಕ್ಸ್ ಗೆ ದೊಡ್ಡ ಪ್ರತಿಸ್ಪರ್ಧಿ ಎಂದರೆ ಇಸುಜು ಡಿ ಮ್ಯಾಕ್ಸ್ ವಿ ಕ್ರಾಸ್ (Isuzu D-Max V-Cross) ಇದು ರೂ.23 ಲಕ್ಷದಿಂದ ರೂ. 27 ಲಕ್ಷ ಬೆಲೆಯಲ್ಲಿ ಸಿಗಲಿದೆ. ಇದೀಗ ಟೊಯೊಟಾ ಹಿಲಕ್ಸ್ ಬೆಲೆಯನ್ನು ದೊಡ್ಡ ಮಟ್ಟದಲ್ಲಿ ಇಳಿಕೆ ಮಾಡಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಈ ವಾಹನವನ್ನು ಖರೀದಿಸಬಹುದು.


Click it and Unblock the Notifications