Toyota Zenix: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಟೊಯೊಟಾ ಇನ್ನೋವಾ ಹೈಕ್ರಾಸ್

ಟೊಯೊಟಾ ಕಂಪನಿಯು ತನ್ನ ಇನ್ನೋವಾ ಹೈಕ್ರಾಸ್ ಆಧಾರಿತ MPV ಅನ್ನು ಮಲೇಷ್ಯಾದಲ್ಲಿ ಬಿಡುಗಡೆ ಮಾಡಿದೆ. ಈ ಪ್ರೀಮಿಯಂ MPV ಇನ್ನೋವಾ ಹೈಕ್ರಾಸ್ ಬದಲಿಗೆ 'ಇನೋವಾ ಝೆನಿಕ್ಸ್' ಎಂಬ ಹೆಸರಿನಲ್ಲಿ ಮಲೇಷ್ಯಾದಲ್ಲಿ ಬಿಡುಗಡೆಯಾಗಿದೆ. ಎರಡು ಟ್ರಿಮ್‌ಗಳು ಮತ್ತು ಪವರ್‌ಟ್ರೇನ್ ಆಯ್ಕೆಗಳಲ್ಲಿ ನೀಡಲಾಗುತ್ತದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ ಈ ಇನೋವಾ ಝೆನಿಕ್ಸ್ MPV ಇಂಡೋನೇಷ್ಯಾದಲ್ಲಿ ತಯಾರಾಗಿ CKD ರೂಪದಲ್ಲಿ ಮಲೇಷ್ಯಾಕ್ಕೆ ರವಾನೆಯಾಗುತ್ತದೆ ಎಂದು ತಿಳಿದುಬಂದಿದೆ. ಭಾರತದಲ್ಲಿ ನೀಡುವ ಆರು ಟ್ರಿಮ್ ಹಂತಗಳಾದ G, GX, VX, VX (O), ZX, ಮತ್ತು ZX (O) ಗಿಂತ ಭಿನ್ನವಾಗಿ, ಕೇವಲ 2.0 V ಮತ್ತು 2.0 HEV ಎಂಬ ಎರಡು ಟ್ರಿಮ್‌ಗಳಲ್ಲಿ Toyota Zenix ಅನ್ನು ಮಾರಾಟ ಮಾಡಲಾಗುವುದು.

toyota-innova-zenix-launched-malaysia-market

ಇನ್ನೋವಾ ಝೆನಿಕ್ಸ್‌ ಡಿಸೈನ್: ಹೈಕ್ರಾಸ್‌ನಂತೆ ಅದೇ ಫ್ರಂಟ್ ಗ್ರಿಲ್, ಕೆಳಗಿನ ಬಂಪರ್‌ನಲ್ಲಿ LED DRL ಗಳು, LED ಹೆಡ್‌ಲೈಟ್‌ಗಳು, ಸ್ಲೀಕರ್ ಏರ್ ಡ್ಯಾಮ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳೊಂದಿಗೆ ಇದು ಭಾರತೀಯ ಹೈಕ್ರಾಸ್‌ಗೆ ಹೋಲುತ್ತದೆ. 18-ಇಂಚಿನ ಅಲಾಯ್ ವೀಲ್‌ಗಳು, ಡ್ಯುಯಲ್-ಟೋನ್ ORVM, LED ಟೈಲ್‌ಲ್ಯಾಂಪ್‌ಗಳನ್ನು ಹೊಂದಿದೆ.

ಇನ್ನೋವಾ ಝೆನಿಕ್ಸ್‌ ಬೆಲೆ: 2.0 V ಟ್ರಿಮ್ 165,000 RM (ರೂ. 29.2 ಲಕ್ಷ) ಮತ್ತು 2.0 HEV ಟ್ರಿಮ್ 202,000 RM (ರೂ. 35.85 ಲಕ್ಷ) ಬೆಲೆಗಳಿಂದ ಪ್ರಾರಂಭವಾಗುತ್ತವೆ. ಈ ಎರಡೂ ಬೆಲೆಗಳು ಮಲೇಷ್ಯಾದ ಆನ್-ರೋಡ್ ಬೆಲೆಗಳಾಗಿವೆ. ಭಾರತದಲ್ಲಿ ಇನ್ನೋವಾ ಹೈಕ್ರಾಸ್ ಬೆಲೆಗಳನ್ನು ನೋಡಿಕೊಂಡರೆ 18.55 ಲಕ್ಷ ಮತ್ತು 27.05 ಲಕ್ಷದವರೆಗೆ ಹೋಗುತ್ತದೆ. (ಎಕ್ಸ್‌ ಶೋರೂಂ ಬೆಲೆಗಳು)

toyota-innova-zenix-launched-malaysia-market

ಮಲೇಷಿಯಾದ ಇನ್ನೋವಾ ಝೆನಿಕ್ಸ್ ಮತ್ತು ಇಂಡಿಯನ್ ಇನ್ನೋವಾ ಹೈಕ್ರಾಸ್ ನಡುವೆ ಹೆಚ್ಚು ವ್ಯತ್ಯಾಸವೇನಿಲ್ಲ. ಟೊಯೋಟಾ ತನ್ನ ಹೊಸ ಪ್ರೀಮಿಯಂ MPV ಯೊಂದಿಗೆ SUV ತರಹದ ವಿನ್ಯಾಸವನ್ನು ಹಾಗೆಯೇ ಉಳಿಸಿದೆ. ಗ್ರೇ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್ ಮೈಕಾ, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಸಿಲ್ವರ್ ಮೆಟಾಲಿಕ್, ಅವಂತ್-ಗ್ರೇಡ್ ಬ್ರಾಂಜ್ ಮೆಟಾಲಿಕ್ ಸೇರಿ ಐದು ಬಣ್ಣಗಳಲ್ಲಿ ನೀಡಲಾಗುತ್ತಿದೆ.

ಇನ್ನೋವಾ ಝೆನಿಕ್ಸ್‌ ವೈಶಿಷ್ಟ್ಯಗಳು: ದೊಡ್ಡದಾದ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್ ಜೊತೆಗೆ Android Auto ಮತ್ತು Apple CarPlay, ಬ್ಲಾಕ್ ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿ, ಪವರ್ಡ್ ಡ್ರೈವರ್ ಸೀಟ್, ಆಂಬಿಯೆಂಟ್ ಲೈಟಿಂಗ್, ಏಳು-ಇಂಚಿನ TFT ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್‌ನೊಂದಿಗೆ ಬರುತ್ತದೆ.

toyota-innova-zenix-launched-malaysia-market

ಇವಿಷ್ಟೇ ಅಲ್ಲದೇ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಪವರ್ಡ್ ಟೈಲ್‌ಗೇಟ್, ಟೊಯೊಟಾ ಸೇಫ್ಟಿ ಸೆನ್ಸ್ 3.0 ಅಡಾಸ್ ಟೆಕ್, ಕ್ರೂಸ್ ಕಂಟ್ರೋಲ್, ಪನಾರಮಿಕ್ ಸನ್‌ರೂಫ್, ಆರು ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಸರೌಂಡ್ ಕ್ಯಾಮೆರಾದಂತಹ ವೈಶಿಷ್ಟ್ಯಗಳು ಆಫರ್‌ನಲ್ಲಿವೆ.

ಇನ್ನೋವಾ ಜೆನಿಕ್ಸ್ ಭಾರತದ ಹೈಕ್ರಾಸ್‌ನಂತೆಯೇ ಅದೇ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿದೆ. 2.0-ಲೀಟರ್ ಹೈಬ್ರಿಡ್ ಪೆಟ್ರೋಲ್ ಮೋಟಾರ್ 184bhp ಪವರ್ ಮತ್ತು 188Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸ್ಟ್ಯಾಂಡರ್ಡ್ 2.0-ಲೀಟರ್ ಪೆಟ್ರೋಲ್ ಎಂಜಿನ್ 173bhp ಪವರ್ ಮತ್ತು 209Nm ಟಾರ್ಕ್ ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ.

Article Published On: Friday, June 23, 2023, 16:19 [IST]
English summary
Toyota hycros launched malaysia market name of toyota zenix
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+