Toyota ಇನ್ನೋವಾ ಕ್ರಿಸ್ಟಾ ಡೀಸೆಲ್‌ Vs ಇನ್ನೋವಾ ಹೈಕ್ರಾಸ್‌: ಇಲ್ಲಿದೆ ಹೋಲಿಕೆ

ಟೊಯೊಟಾದ ಇನ್ನೋವಾ ಎಂಪಿವಿಗಳು ಭಾರತದಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿವೆ. ಇತ್ತೀಚೆಗೆ 2023ರ ಇನ್ನೋವಾ ಕ್ರಿಸ್ಟಾ ಡೀಸೆಲ್‌ನ ಕೆಲವು ರೂಪಾಂತರಗಳ ಬೆಲೆಯನ್ನು ಕಂಪನಿ ಬಹಿರಂಗಪಡಿಸಿದೆ. ಹೊಸ ಟೊಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಇನ್ನೋವಾ ಹೈಕ್ರಾಸ್‌ ಎಂಪಿವಿಗಳ ವಿನ್ಯಾಸ, ಪವರ್‌ಟ್ರೇನ್ ಹಾಗೂ ಬೆಲೆಯ ಹೋಲಿಕೆ ಇಲ್ಲಿದೆ.

ಡಿಸೈನ್: ಟೊಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಇನ್ನೋವಾ ಹೈಕ್ರಾಸ್‌ ಎಂಪಿವಿಗಳನ್ನು ನೋಡಿದಾಗ ಇವೆರೆಡು ಬೇರೆ-ಬೇರೆ ಎಂದು ಸುಲಭವಾಗಿ ತಿಳಿಯುತ್ತದೆ. ಕ್ರಿಸ್ಟಾದ ನೋಸ್ ಸೆಕ್ಷನ್ ಫ್ಲಾಟ್ ಆಗಿದ್ದು, ಕೊಂಚ ಉದ್ದವಾದ ಬಾನೆಟ್, ಫೇರ್ಡ್ & ಸ್ಕ್ವೇರ್-ಆಫ್ ವೀಲ್ ಆರ್ಚ್‌ನ್ನು ಪಡೆದಿದೆ. ಇನ್ನೋವಾ ಹೈಕ್ರಾಸ್‌ ರಗಡ್ ಲುಕ್ ಹೊಂದಿದ್ದು, ಕ್ರಿಸ್ಟಾ ಸಿಂಪಲ್ ಆಗಿದೆ. ಇವರೆಡು LED ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್, LED DRLs, ORVM ಮೌಂಟೆಡ್ ಟರ್ನ್ ಇಂಡಿಕೇಟರ್ಸ್ ಅನ್ನು ಹೊಂದಿವೆ.

Toyota ಇನ್ನೋವಾ ಕ್ರಿಸ್ಟಾ ಡೀಸೆಲ್‌ Vs ಇನ್ನೋವಾ ಹೈಕ್ರಾಸ್‌: ಇಲ್ಲಿದೆ ಹೋಲಿಕೆ

ಸೈಜ್: ಟೊಯೋಟಾ ಇನ್ನೋವಾ ಕ್ರಿಸ್ಟಾ, 4,735 ಎಂಎಂ ಉದ್ದ, 1,850 ಎಂಎಂ ಅಗಲ ಹಾಗೂ 1,795 ಎಂಎಂ ಎತ್ತರವನ್ನು ಹೊಂದಿರುವುದರಿಂದ ದೊಡ್ಡ ಎಂವಿಪಿ ಎಂದು ಸುಲಭವಾಗಿ ತಿಳಿಯುತ್ತದೆ. ಜೊತೆಗೆ ಇದು 2,750 ಎಂಎಂ ಉದ್ದದ ವೀಲ್‌ಬೇಸ್‌ ಪಡೆದಿದೆ. ಕ್ರಿಸ್ಟಾ ಎಂಪಿವಿಗಿಂತ ಟೊಯೊಟಾ ಇನ್ನೋವಾ ಹೈಕ್ರಾಸ್, 20 ಎಂಎಂ ಉದ್ದ, 20 ಎಂಎಂ ಅಗಲವಿದೆ. ಇದನ್ನು ಗಮನಿಸಿದಾಗ ಹೈಕ್ರಾಸ್ ಮುಂದೆ ಕ್ರಿಸ್ಟಾ ಕೊಂಚ ಚಿಕ್ಕದಾಗಿರುವಂತೆ ಕಾಣುತ್ತದೆ.

ಪವರ್‌ಟ್ರೇನ್: ಟೊಯೋಟಾ ಇನ್ನೋವಾ ಕ್ರಿಸ್ಟಾದ ಎಂಜಿನ್ ಆಯ್ಕೆ ಬಗ್ಗೆ ಮಾತನಾಡುವುದರೆ, ಇದು BS6 ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿದ 2.4-ಲೀಟರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ ಹೊಂದಿದ್ದು, 145 bhp ಗರಿಷ್ಠ ಪವರ್ ಹಾಗೂ 343 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

Toyota ಇನ್ನೋವಾ ಕ್ರಿಸ್ಟಾ ಡೀಸೆಲ್‌ Vs ಇನ್ನೋವಾ ಹೈಕ್ರಾಸ್‌: ಇಲ್ಲಿದೆ ಹೋಲಿಕೆ

ಟೊಯೊಟಾ ಇನ್ನೋವಾ ಹೈಕ್ರಾಸ್‌ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ. 2.0-ಲೀಟರ್ 4-ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್,172 bhp ಗರಿಷ್ಠ ಪವರ್ ಹಾಗೂ 205 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. CVT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಇನ್ನೋವಾ ಹೈಕ್ರಾಸ್‌ ಎಂಪಿವಿ ಪಡೆದಿರುವ ಮತ್ತೊಂದು 2.0-ಲೀಟರ್, 4-ಸಿಲಿಂಡರ್, ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ (ಹೈಬ್ರಿಡ್) ಎಂಜಿನ್, 184.8 bhp ಗರಿಷ್ಠ ಪವರ್ ಹಾಗೂ 206 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸುಧಾರಿತ eCVT ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಇದನ್ನು ನೋಡಿದಾಗ ಇವೆರೆಡು ಪವರ್ ಫುಲ್ ಎಂಜಿನ್ ಆಯ್ಕೆಯನ್ನು ಪಡೆದಿವೆ.

Toyota ಇನ್ನೋವಾ ಕ್ರಿಸ್ಟಾ ಡೀಸೆಲ್‌ Vs ಇನ್ನೋವಾ ಹೈಕ್ರಾಸ್‌: ಇಲ್ಲಿದೆ ಹೋಲಿಕೆ

ವೈಶಿಷ್ಟ್ಯ: ಟೊಯೊಟಾ ಇನ್ನೋವಾ ಹೈಕ್ರಾಸ್‌ ಹಾಗೂ ಇನ್ನೋವಾ ಕ್ರಿಸ್ಟಾ ಬಹುತೇಕ ಒಂದೇ ರೀತಿಯ ಫೀಚರ್ಸ್ ಹೊಂದಿವೆ. VX ರೂಪಾಂತರದಲ್ಲಿ ಕ್ರಿಸ್ಟಾಗೆ ಹೋಲಿಕೆ ಮಾಡಿದರೆ, ಹೈಕ್ರಾಸ್‌ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅವುಗಳೆಂದರೆ, ಫುಲ್ LED ಟೈಲ್-ಲ್ಯಾಂಪ್ಸ್, 360-ಡಿಗ್ರಿ ಕ್ಯಾಮೆರಾ, ರೇರ್ ಸನ್‌ಶೇಡ್ ಹಾಗೂ 17-ಇಂಚಿನ ಅಲಾಯ್ ವೀಲ್ಸ್ ಹೊಂದಿದೆ.ಆದರೆ, ಕ್ರಿಸ್ಟಾದಲ್ಲಿ ಇವುಗಳಿಲ್ಲ.

ಬೆಲೆ: ಟೊಯೊಟಾ ಇನ್ನೋವಾ ಕ್ರಿಸ್ಟಾದ 'GX' ರೂಪಾಂತರವು ರೂ.19.99 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಪಡೆದಿದೆ. ಅಲ್ಲದೆ, ಸೋರಿಕೆಯಾದ ಮಾಹಿತಿ ಪ್ರಕಾರ, ಎಂಟ್ರಿ ಲೇವಲ್ 'G' ರೂಪಾಂತರ ಬೆಲೆ ರೂ.19.13 ಲಕ್ಷ ಹೊಂದಿದೆ. ಇನ್ನೋವಾ ಹೈಕ್ರಾಸ್‌, ರೂ.18.55 ಲಕ್ಷ ಆರಂಭಿಕ ಬೆಲೆಯನ್ನು ಪಡೆದಿದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.28.81 ಲಕ್ಷದವರೆಗೆ ಇದೆ.

Article Published On: Thursday, March 23, 2023, 16:40 [IST]
English summary
Toyota innova crysta diesel toyota innova hycross comparison details kannada
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+