ಯಾರು ಊಹಿಸಿರಲಿಲ್ಲ, ಕರ್ನಾಟಕದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಕ್ರಿಸ್ಟಾಗೆ ಭಾರೀ ಡಿಮ್ಯಾಂಡ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ಭಾರತೀಯ ಮಾರುಕಟ್ಟೆಯಲ್ಲಿ 2023ರ ಇನೋವಾ ಕ್ರಿಸ್ಟಾ ಎಂಪಿವಿಯು ಭರ್ಜರಿ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಈ ನಡುವೆ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ತನ್ನ ಈ ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರಿನ ಕಾಯುವ ಅವಧಿಯನ್ನು ಬಹಿರಂಗಪಡಿಸಿದೆ.

ಟೊಯೊಟಾ ಇನ್ನೋವಾ ಕ್ರಿಸ್ಟಾ ಪ್ರಾರಂಬಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.19.99 ಲಕ್ಷವಾಗಿದೆ. ಈ ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರು ಜಿಎಕ್ಸ್, ವಿಎಕ್ಸ್ ಮತ್ತು ಝಡ್ಎಕ್ಸ್ ಎಂಬ ಮೂರು ರೂಪಾಂತರಗಳ ಆಯ್ಕೆಗಳಲ್ಲಿ ಲಭ್ಯವಿದೆ. ಡೆಲಿವರಿ ಟೈಮ್‌ಲೈನ್‌ಗೆ ಸಂಬಂಧಿಸಿದಂತೆ, ಎಲ್ಲಾ ರೂಪಾಂತರಗಳು ಬುಕಿಂಗ್ ಮಾಡಿದ ದಿನದಿಂದ ಆರರಿಂದ ಏಳು ತಿಂಗಳ ಸ್ಟ್ಯಾಂಡರ್ಡ್ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ. ಇದು ಸ್ಥಳ, ರೂಪಾಂತರ, ಡೀಲರ್‌ಶಿಪ್ ಮತ್ತು ಸ್ಟಾಕ್ ಲಭ್ಯತೆಯನ್ನು ಅವಲಂಬಿಸಿ ಬದಲಾಗಬಹುದು.

Toyota Innova Crysta

ನಿಮ್ಮ ನಗರದಲ್ಲಿ ಟೊಯೊಟಾ ಇನ್ನೋವಾ ಕ್ರಿಸ್ಟಾ (Toyota Innova Crysta) ಮಾದರಿಯ ವೈಟಿಂಗ್ ಪಿರೇಡ್ ತಿಳಿಯಲು ನಿಮ್ಮ ಹತ್ತಿರದ ಟೊಯೊಟಾ ಅಧಿಕೃತ ಡೀಲರ್‌ಶಿಪ್ ಅನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. 2005ರಲ್ಲಿ ಹೆಚ್ಚು ಜನಪ್ರಿಯವಾದ ಕ್ವಾಲಿಸ್ ಅನ್ನು ಬದಲಾಯಿಸಿ ಪ್ರೀಮಿಯಂ ಎಂಪಿವಿಯಾಗಿ ಟೊಯೊಟಾ ಇನೋವಾ ಕಾರನ್ನು ಪರಿಚಯಿಸಿದರು. ಅಂದಿನಿಂದ ಇಂದಿನವರೆಗೂ ಈ ಕಾರಿಗೆ ಭಾರೀ ಬೇಡಿಕೆಯನ್ನು ಹೊಂದಿದೆ.

ಇದೇ ಕಾರಣದಿಂದ ಟೊಯೊಟಾ ಕಂಪನಿಯು ಡೀಸೆಲ್ ಎಂಜಿನ್ ನೊಂದಿಗೆ ಇನ್ನೋವಾ ಕ್ರಿಸ್ಟಾ ಕಾರನ್ನು ಮರಳಿ ತಂದಿದೆ. 2023ರ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ ಲುಕ್ ಹೆಚ್ಚಾಗಿ ಬದಲಾಗದೆ ಉಳಿದಿದೆ, ಈ ಹೊಸ ಎಂಪಿವಿಯು ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್, ಅವಂತ್-ಗಾರ್ಡ್ ಕಂಚು, ಸಿಲ್ವರ್ ಮತ್ತು ವೈಟ್ ಪರ್ಲ್ ಕ್ರಿಸ್ಟಲ್ ಶೈನ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

Toyota Innova Crysta

ಹೊಸ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ 2.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು ಆರ್‌ಡಿಇ ಹೊರಸೂಸುವಿಕೆ ಮಾನದಂಡಗಳನ್ನು ಪೂರೈಸುತ್ತದೆ ಎಂದು ಕಾರು ತಯಾರಕರು ಖಚಿತಪಡಿಸಿದ್ದಾರೆ. ಈ ಎಂಜಿನ್ 147.9 ಬಿಹೆಚ್‍ಪಿ ಪವರ್ ಮತ್ತು 343 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಈ ಇನೋವಾ ಕ್ರಿಸ್ಟಾ ಕಾರು ಇಕೋ ಮತ್ತು ಪವರ್ ಎಂಬ ಎರಡು ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಈ ಹೊಸ 2023 ಟೊಯೊಟಾ ಇನೋವಾ ಕ್ರಿಸ್ಟಾ ಕಾರು 7 ಮತ್ತು 8 ಸೀಟುಗಳ ಕಾನ್ಫಿಗರೇಶನ್‌ಗಳಲ್ಲಿ ಬರಲಿದೆ. ಇನ್ನು ಈ ಕ್ರಿಸ್ಟಾ ಕಾರು G, GX, VX ಮತ್ತು ZX ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ.

Toyota Innova Crysta

ಇನೋವಾ ಈ ಎಂಪಿವಿಯ G ಎಂಬ ಮೂಲ ರೂಪಾಂತರವು 7 ಮತ್ತು 8-ಸೀಟುಗಳ ವಿನ್ಯಾಸದಲ್ಲಿ ಮುಂಭಾಗದ ಪ್ರತ್ಯೇಕ ಸೀಟುಗಳು ಮತ್ತು ಸ್ಲೈಡ್ ಮತ್ತು ರಿಕ್ಲೈನ್ ​​ಕಾರ್ಯದೊಂದಿಗೆ ಬರುತ್ತದೆ. ಇದು ಬ್ಲ್ಯಾಕ್ ಲೈನ್ ನೊಂದಿಗೆ ಇನ್‌ಸ್ಟ್ರುಮೆಂಟ್ ಪೇನ್, ಡ್ರೈವರ್ ಮಾಹಿತಿಯೊಂದಿಗೆ ಡಾಟ್ ಟೈಪ್ MID, ಜ್ಯಾಕ್-ನೈಫ್ ಕೀಯೊಂದಿಗೆ ವೈರ್‌ಲೆಸ್ ಡೋರ್ ಲಾಕ್, 4 ಸ್ಪೀಕರ್‌ಗಳು, Apple CarPlay ಜೊತೆಗೆ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿದೆ.

ಇನ್ನು ಇನೋವಾ ಕ್ರಿಸ್ಟಾ ಕಾರಿನ VX ರೂಪಾಂತರದಲ್ಲಿ ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಸ್ಟೀರಿಂಗ್ ವೀಲ್, 6-ಸ್ಪೀಕರ್‌ಗಳು, ಸೀಟ್ ಬ್ಯಾಕ್ ಟೇಬಲ್, ಕ್ರೂಸ್ ಕಂಟ್ರೋಲ್, ಸ್ಪೀಡ್ & ಇಂಪ್ಯಾಕ್ಟ್ ಸೆನ್ಸಿಂಗ್ ಡೋರ್ ಅನ್‌ಲಾಕ್, 1 USB ಫಾಸ್ಟ್ ಚಾರ್ಜಿಂಗ್ ಪವರ್, MID ಮುಂಭಾಗದ ಕ್ಲಿಯರೆನ್ಸ್ ಸೋನಾರ್, Isofix X2 ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

ಇನ್ನು ಟೆಥರ್ ಆಂಕರ್, ಸೈರನ್‌ನೊಂದಿಗೆ ಆಂಟಿ-ಥೆಫ್ಟ್ ಸಿಸ್ಟಮ್ ಇಮೊಬಿಲೈಸರ್, ಅಲ್ಟ್ರಾಸಾನಿಕ್ ಮತ್ತು ಗ್ಲಾಸ್ ಬ್ರೇಕ್ ಸೆನ್ಸಾರ್, ಡ್ರೈವರ್;ಗೆ ಮಾಹಿತಿ ನೀಡುವ TFT MID ಯುನಿಟ್ ಅನ್ನು ಹೊಂದಿದೆ. ಇದರೊಂದಿಗೆ ಸಿಲ್ವರ್ ಮತ್ತು ವುಡ್ ಫಿನಿಶ್‌ನೊಂದಿಗೆ ಯುರೆಥೇನ್‌ನೊಂದಿಗೆ ಸ್ಟೀರಿಂಗ್, ಆಟೋಮ್ಯಾಟಿಕ್ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಎಲ್ಇಡಿ ಕ್ಲಿಯರೆನ್ಸ್ ಲ್ಯಾಂಪ್ ಮತ್ತು ಬ್ಲ್ಯಾಕ್ ಮತ್ತು ಕ್ರೋಮ್ ಗ್ರಿಲ್ನೊಂದಿಗೆ ಬರುತ್ತದೆ.

ಈ ಹೊಸ ಇನೋವಾ ಕ್ರಿಸ್ಟಾ ಕಾರಿನ ZX ರೂಪಾಂತರದಲ್ಲಿ 7-ಸೀಟುಗಳ ಲೇಔಟ್‌ನಲ್ಲಿ 8-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಹೀಟ್ ರಿಜೆಕ್ಟಿಂಗ್ ಫ್ರಂಟ್ ಮತ್ತು ಸೈಡ್ ಗ್ಲಾಸ್, 2 ಎನ್‌ಡಿ ರೋ ಆರ್ಮ್‌ರೆಸ್ಟ್, 'ಕ್ರಿಸ್ಟಾ' ಚಿಹ್ನೆಯೊಂದಿಗೆ ಸಜ್ಜುಗೊಳಿಸಲಾದ ಬ್ಲ್ಯಾಕ್ ಅಥವಾ ಕ್ಯಾಮೆಲ್ ಟ್ಯಾನ್ ಲೆದರ್ ಸೀಟ್‌ಗಳಂತಹ ಫೀಚರ್ಸ್ ಗಳೊಂದಿಗೆ ಬರುತ್ತದೆ.

Article Published On: Friday, October 13, 2023, 11:53 [IST]
English summary
Toyota innova crysta mpv waiting period in october details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+