Toyota Innova Crysta: ಅಬ್ಬಾ.. ಎಂತಹ ಭರ್ಜರಿ ಫೀಚರ್ಸ್ ಹೊಂದಿವೆ ಇನ್ನೋವಾ ಕ್ರಿಸ್ಟಾದ ರೂಪಾಂತರಗಳು
ಟೊಯೊಟಾ ವಿಶ್ವದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಜನಪ್ರಿಯತೆ ಗಳಿಸಿದೆ. ಅದರ ಬಹುನಿರೀಕ್ಷಿತ 'ಇನ್ನೋವಾ ಕ್ರಿಸ್ಟಾ' ಎಂಪಿವಿಯನ್ನು ಭಾರತದ ಮಾರುಕಟ್ಟೆಯಲ್ಲಿ ಡಿಸೇಲ್ ಪವರ್‌ಟ್ರೇನ್ ಆಯ್ಕೆಯಲ್ಲಿ ಮತ್ತೆ ಪರಿಚಯಿಸಿದೆ. ಇಲ್ಲಿ ಕ್ರಿಸ್ಟಾದ ವಿವಿಧ ರೂಪಾಂತರಗಳು ಹೊಂದಿರುವ ಭರ್ಜರಿ ಫೀಚರ್ಸ್ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಿದ್ದೇವೆ.
ಅದಕ್ಕೂ ಮೊದಲು ಟೊಯೊಟಾ ಇನ್ನೋವಾ ಕ್ರಿಸ್ಟಾದ ಪವರ್‌ಟ್ರೇನ್ ಹಾಗೂ ಬೆಲೆಯ ಬಗ್ಗೆ ತಿಳಿಯೋಣ. ಇದು, ರೂ.19.13 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ ಎಂದು ವರದಿಯಾಗಿದೆ. ಕ್ರಿಸ್ಟಾ ಎಂಪಿವಿ 2.4-ಲೀಟರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದಿದ್ದು, 145 bhp ಪವರ್ ಹಾಗೂ 343 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು , 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಟೊಯೊಟಾ ಇನ್ನೋವಾ ಕ್ರಿಸ್ಟಾದ ಎಂಟ್ರಿ ಲೆವೆಲ್ 'G' ರೂಪಾಂತರವು ಹ್ಯಾಲೊಜೆನ್ ಹೆಡ್‌ಲ್ಯಾಂಪ್ಸ್, ಬ್ಲ್ಯಾಕ್ ಗ್ರಿಲ್, 16-ಇಂಚಿನ ಸ್ಟೀಲ್ ವೀಲ್ಸ್, ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮ್ಯಾನುಯಲ್ ಏರ್ ಕಂಡೀಷನಿಂಗ್, ಟಿಲ್ಟ್ & ಟೆಲಿಸ್ಕೋಪಿಕ್ ಸ್ಟೀರಿಂಗ್, ಕೂಲ್ಡ್ ಗ್ಲೋವ್‌ಬಾಕ್ಸ್ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ಯುಯಲ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), 4 ಪವರ್ ವಿಂಡೋಸ್ ಹಾಗೂ ರೂಫ್-ಮೌಂಟೆಡ್ ಎಸಿ ವೆಂಟ್ಸ್ ಹೊಂದಿದೆ.
ಇನ್ನೋವಾ ಕ್ರಿಸ್ಟಾದ 'GX' ರೂಪಾಂತರವು ಹೆಚ್ಚುಕಮ್ಮಿ 'G' ರೂಪಾಂತರದಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇದರೊಟ್ಟಿಗೆ ಕ್ರೋಮ್ ಸರೌಂಡೆಡ್ ಹ್ಯಾಲೊಜೆನ್ ಹೆಡ್‌ಲ್ಯಾಂಪ್, 16 ಇಂಚಿನ ಅಲಾಯ್ ವೀಲ್ಸ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 4-ಸ್ಪೀಕರ್ ಸಿಸ್ಟಮ್, ಆಡಿಯೋ & ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಸ್ವೀಡ್, ಸೆನ್ಸಿಟಿವ್ ಡೋರ್ ಲಾಕ್ ಅನ್ನು ಹೊಂದಿದೆ.
'VX' ರೂಪಾಂತರವು ಮತ್ತಷ್ಟು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯುವ ಮೂಲಕ ಹೆಚ್ಚು ಆಕರ್ಷಕವಾಗಿದೆ. ಪ್ರಮುಖವಾಗಿ ಆಟೋ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, LED ಫಾಗ್ ಲ್ಯಾಂಪ್ಸ್, ಆಂಬಿಯೆಂಟ್ ಲೈಟಿಂಗ್, 6 ಸ್ಪೀಕರ್ ಆಡಿಯೊ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ, ಪುಶ್ ಬಟನ್ ಸಾರ್ಟ್, ಕ್ರೂಸ್ ಕಂಟ್ರೋಲ್, ಫ್ರಂಟ್ ಪಾರ್ಕಿಂಗ್ ಸೇನಾರ್ಸ್ ಹಾಗೂ ISOFIX ಚೈಲ್ಡ್ ಸೀಟ್ ಮೌಂಟ್ಸ್ ಅನ್ನು ಪಡೆದಿದೆ.
ಟೊಯೊಟಾ ಇನ್ನೋವಾ ಕ್ರಿಸ್ಟಾದ ಟಾಪ್ ಎಂಡ್ 'ZX' ರೂಪಾಂತರವು ಮೇಲೆ ವಿವರಿಸಲಾದ ಎಲ್ಲ ರೂಪಾಂತರಗಳು ಹೊಂದಿರುವ ವೈಶಿಷ್ಟ್ಯಗಳೊಂದಿಗೆ ಹೆಚ್ಚಿವರಿಯಾಗಿ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ವಿತ್ ಕಲರ್ MID ಡಿಸ್ಪ್ಲೇ, ರೇರ್ ಫೋಲ್ಡೆಬಲ್ ಟ್ರೇ, ಕರ್ಟನ್ & ಸೈಡ್ ಏರ್ ಬಾಗ್ಸ್ ಅನ್ನು ಪಡೆದಿವೆ. ಈ ಇನ್ನೋವಾ ಕ್ರಿಸ್ಟಾ 7 - 8 ಸೀಟ್ ಆಯ್ಕೆಯನ್ನು ಹೊಂದಿದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಇನ್ನೋವಾ ಹೈಕ್ರಾಸ್ ಎಂಪಿವಿ ಕೂಡ ಖರೀದಿಗೆ ಲಭ್ಯವಿದ್ದು, ರೂ.18.55 ಲಕ್ಷ ಆರಂಭಿಕ ಬೆಲೆಯನ್ನು ಪಡೆದಿದ್ದು, ಟಾಪ್ ಎಂಡ್ ಮಾದರಿ ದರ ರೂ.28.81 ಲಕ್ಷ ಇದೆ. ಇದು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, 2.0-ಲೀಟರ್ 4-ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹಾಗೂ 2.0-ಲೀಟರ್, 4-ಸಿಲಿಂಡರ್, ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ (ಹೈಬ್ರಿಡ್) ಎಂಜಿನ್.
ಒಟ್ಟಾರೆ, ಇನ್ನೋವಾ ಕ್ರಿಸ್ಟಾದ ನಾಲ್ಕು ರೂಪಾಂತರಗಳಾದ G, GX, VX ಹಾಗೂ ZX ಅತ್ಯಾಕರ್ಷಕ ವೈಶಿಷ್ಟ್ಯವನ್ನು ಪಡೆಯುವ ಮೂಲಕ ಭರ್ಜರಿಯಾಗಿವೆ. ಭಾರತದಾದ್ಯಂತ ಬಹುತೇಕರು ಉತ್ತಮ ಕಾರ್ಯಕ್ಷಮತೆ ಹೊಂದಿರುವ ಇನ್ನೋವಾ ಕಾರುಗಳನ್ನು ಲೈಕ್ ಮಾಡುತ್ತಾರೆ. ಅದರಂತೆ ಕಂಪನಿಯು ಈ ಎಂಪಿವಿಯಲ್ಲಿ ಹಲವು ವೈಶಿಷ್ಟ್ಯಗಳನ್ನು ನೀಡಿದ್ದು, ಇದು ಮಾರಾಟ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ನೆರವಾಗಲಿದೆ.


Click it and Unblock the Notifications