Toyota: ಯಾರು ಲೆಕ್ಕ ಹಾಕಿರಲಿಲ್ಲ.. ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಕ್ರಿಸ್ಟಾಗೆ ಭಾರೀ ಬೇಡಿಕೆ!
ಟೊಯೊಟಾ (Toyota) ಇನ್ನೋವಾ ಸರಣಿ ಎಂಪಿವಿಗಳು ದಶಕಗಳಿಂದ ದೇಶದಲ್ಲಿ ಖ್ಯಾತಿಗಳಿಸಿವೆ. ಪ್ರಸ್ತುತ ಇನ್ನೋವಾ ಹೈಕ್ರಾಸ್ (Innova Hycross) ಭಾರೀ ಬೇಡಿಕೆ ಹೊಂದಿದೆ. ಅದೇ ರೀತಿಯಲ್ಲಿ ಇನ್ನೋವಾ ಕ್ರಿಸ್ಟಾ (Innova Crysta)ವನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದು, ದೊಡ್ಡಮಟ್ಟದಲ್ಲಿ ಡಿಮ್ಯಾಂಡ್ ಪಡೆದಿದೆ.
ನೀವು, ಟೊಯೊಟಾ ಇನ್ನೋವಾ ಕ್ರಿಸ್ಟಾ ಎಂಪಿವಿಯನ್ನು ಖರೀದಿಸಲು ಬಯಸಿ, ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆಗೆ ಕನಿಷ್ಠವೆಂದರೂ ಆರು ತಿಂಗಳವರೆಗೆ ಕಾಯಲೇಬೇಕು. ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ GX, VX ಮತ್ತು ZX ರೂಪಾಂತರಗಳ ಆಯ್ಕೆಯಲ್ಲಿ ಇನ್ನೋವಾ ಕ್ರಿಸ್ಟಾವನ್ನು ಮಾರಾಟ ಮಾಡುತ್ತಿದ್ದು, ರೂ.19.99 ಲಕ್ಷದಿಂದ ರೂ.24.44 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಈ ಟೊಯೊಟಾ ಇನ್ನೋವಾ ಕ್ರಿಸ್ಟಾ ಎಂಪಿವಿಯ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದರಲ್ಲಿ 2.4 ಲೀಟರ್ ಡೀಸೆಲ್ ಎಂಜಿನ್ ಮಾತ್ರ (ಪೆಟ್ರೋಲ್ ಎಂಜಿನ್ ಹೊಂದಿಲ್ಲ) ಬಳಕೆ ಮಾಡಲಾಗಿದೆ. 150 PS ಗರಿಷ್ಠ ಪವರ್ ಹಾಗೂ 343 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರು ಕೊಂಡುಕೊಳ್ಳಬಹುದು.
ವೈಶಿಷ್ಟ್ಯ ವಿಷಯವಾಗಿ ಹೇಳುವುದಾದರೆ, ಟೊಯೊಟಾ ಇನ್ನೋವಾ ಕ್ರಿಸ್ಟಾ ಎಂಪಿವಿ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. ಮುಖ್ಯವಾಗಿ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8 ವೇ ಪವರ್ ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್, ರೇರ್ ಎಸಿ ವೆಂಟ್ಸ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಒಳಗೊಂಡಿದೆ. ಜೊತೆಗೆ ವೈಟ್ ಪರ್ಲ್ ಕ್ರಿಸ್ಟಲ್ ಶೈನ್, ಸೂಪರ್ ವೈಟ್, ಸಿಲ್ವರ್ ಸೇರಿದಂತೆ 5 ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.
ಟೊಯೊಟಾ ಇನ್ನೋವಾ ಕ್ರಿಸ್ಟಾ ಸುರಕ್ಷತೆ ವಿಚಾರದಲ್ಲಿಯೂ ಅತ್ಯಾಧುನಿಕವಾಗಿದ್ದು, 7 ಏರ್‌ಬ್ಯಾಗ್ಸ್, ABS (ಆಂಟಿಲಾಕಿಂಗ್ ಬ್ರೇಕಿಂಗ್ ಸಿಸ್ಟಮ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ರೇರ್ ಪಾರ್ಕಿಂಗ್ ಸೆನ್ಸರ್ಸ್ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿದೆ. ಇವೆಲ್ಲ ಒಂದೆಡೆ ಆದ್ರೆ, ಕಂಪನಿಯು ಈ ತಿಂಗಳ ಆರಂಭದಲ್ಲಿ ಇನ್ನೋವಾ ಕ್ರಿಸ್ಟಾ ಎಂಪಿವಿ ಬೆಲೆಯನ್ನು ಹೆಚ್ಚಿಸಿ, ಅದರ ಅಭಿಮಾನಿಗಳಿಗೆ ಶಾಕ್ ನೀಡಿತ್ತು.
ವಿವಿಧ ರೂಪಾಂತರಗಳ ಬೆಲೆಯನ್ನು ರೂ.37,000 ವರೆಗೆ ಹೆಚ್ಚಳ ಮಾಡಿತ್ತು. ಇದರಿಂದ ZX ವೇರಿಯೆಂಟ್ ಎಕ್ಸ್ ಶೋರೂಂ ಬೆಲೆ ರೂ.26.05 ಲಕ್ಷ ಆಗಿದೆ. 7 - 8 ಆಸನ ಆಯ್ಕೆ ವ್ಯವಸ್ಥೆಯೊಂದಿರುವ VX ರೂಪಾಂತರದ ದರ ರೂ.35,000 ಏರಿದ್ದು, ರೂ.24.44 ಲಕ್ಷ ಆಸುಪಾಸಿನಲ್ಲಿದೆ. ಎಂಟ್ರಿ ಲೆವೆಲ್ GX ವೇರಿಯೆಂಟ್ ಬೆಲೆ ಹೆಚ್ಚಳಗೊಂಡಿಲ್ಲ.
ಕರ್ನಾಟಕದ ಬಿಡದಿಯ ಉತ್ಪಾದನಾ ಘಟಕದಲ್ಲಿ ತಯಾರಾಗುವ ಈ ಎಂಪಿವಿ ಬೇಡಿಕೆಯನ್ನು ಮನಗಂಡಿರುವ ಟೊಯೊಟಾ ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸಿದೆ. ಇನ್ನೋವಾ ಕ್ರಿಸ್ಟಾಗಿಂತ ಹೆಚ್ಚಿನ ಬೇಡಿಕೆಯೊಂದಿರುವ ಇನ್ನೋವಾ ಹೈಕ್ರಾಸ್ ಎಂಪಿವಿ ಬಗ್ಗೆ ಮಾತನಾಡುವುದಾದರೆ, ಇದು, ರೂ.18.82 ಲಕ್ಷದಿಂದ ರೂ.30.26 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಇದು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ.
ಇದರ 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 172 bhp ಪವರ್, 205 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. CVT ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಇನ್ನೊಂದು, 2.0 ಲೀಟರ್, 4 ಸಿಲಿಂಡರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್, 184.8 bhp ಗರಿಷ್ಠ ಪವರ್ ಹಾಗೂ 206 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದ್ದು, 21 kmpl ಮೈಲೇಜ್ ನೀಡುತ್ತದೆ.
ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ಪಡೆಡಿರುವ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು, 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ. ಇನ್ನು, ಇನ್ನೋವಾ ಕ್ರಿಸ್ಟಾ ಎಂಪಿವಿ ಕಾಯುವಿಕೆ ಅವಧಿ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರಲಿದ್ದು, ಹೆಚ್ಚಿನ ಮಾಹಿತಿಗೆ ಡೀಲರ್ ಶಿಪ್ ಸಂಪರ್ಕಿಸಿರಿ.


Click it and Unblock the Notifications