Toyota Innova: ಜನಪ್ರಿಯ ಟೊಯೊಟಾ ಇನ್ನೋವಾ ಕಾರಿಗಾಗಿ ಶೋರೂಂ ಮುಂದೆ ಜನವೋ ಜನ..!
ಭಾರತದಲ್ಲಿ ಟೊಯೊಟಾ (Toyota) ಮಾರಾಟಗೊಳಿಸುವ ಇನ್ನೋವಾ (Innova) ಸರಣಿ ಎಂಪಿವಿಗಳಿಗೆ ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಫಿದಾ ಆಗಿದ್ದಾರೆ. ಅಷ್ಟರಮಟ್ಟಿಗೆ ಈ ಕಾರುಗಳು ಗ್ರಾಹಕರನ್ನು ಆಕರ್ಷಿಸಿವೆ. ಬಿಡುಗಡೆಯಾದ ದಿನದಿಂದಲೂ ಈ ಇನ್ನೋವಾಗೆ ಭಾರೀ ಬೇಡಿಕೆಯಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರು ಬುಕ್ಕಿಂಗ್ ಮಾಡುತ್ತಿರುವುದರಿಂದ ಕಾಯುವಿಕೆ ಅವಧಿ ದ್ವಿಗುಣಗೊಂಡಿದೆ.
ಟೊಯೊಟಾ ಇಂಡಿಯಾ ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ 1 ಡಿಸೆಂಬರ್ 2023ಕ್ಕೆ ಅನ್ವಯವಾಗುವಂತೆ ಕಂಪನಿಯ ವಿವಿಧ ಮಾದರಿಗಳ ಕಾಯುವ ಅವಧಿ (Waiting Period) ಕುರಿತ ವಿವರವನ್ನು ಪ್ರಕಟಿಸಿದೆ. ಮೊದಲಿಗೆ ಕೇವಲ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಸಿಗುವ ಟೊಯೊಟಾ ಇನ್ನೋವಾ ಕ್ರಿಸ್ಟಾ (Toyota Innova Crysta) ಎಂಪಿವಿ ಬಗ್ಗೆ ಮಾತನಾಡೋಣ. ಈ ಕಾರು, ಕಳೆದ ನವೆಂಬರ್ ತಿಂಗಳಂತೆ ಡಿಸೆಂಬರ್‌ನಲ್ಲಿಯೂ 7 ತಿಂಗಳ ಕಾಯುವಿಕೆ ಅವಧಿಯನ್ನು ಹೊಂದಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಬಗ್ಗೆ ಹೇಳುವುದಾದರೆ, ಪೆಟ್ರೋಲ್ ರೂಪಾಂತರಗಳನ್ನು ನೀವು ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆ ಪಡೆಯಲು 5 ರಿಂದ 6 ತಿಂಗಳು ಆಗುತ್ತದೆ. ಇನ್ನೋವಾ ಹೈಕ್ರಾಸ್ ಹೆಬ್ರಿಡ್ ವೇರಿಯೆಂಟ್ಸ್ 14 ರಿಂದ 15 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದೆ. ಆದರೆ, ಗ್ರಾಹಕರಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ ಝಡ್ಎಕ್ಸ್, ಝಡ್ಎಕ್ಸ್ (ಒ) ರೂಪಾಂತರಗಳ ಆರ್ಡರ್ ಪಡೆಯುವುದನ್ನು ಕಂಪನಿ ನಿಲ್ಲಿಸಿದೆ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ರೂ.18.82 ಲಕ್ಷದಿಂದ ರೂ.30.26 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಜೊತೆಗೆ ಜಿ, ಜಿಎಕ್ಸ್, ವಿಕ್ಸ್ ಸೇರಿದಂತೆ 5 ರೂಪಾಂತರ ಹಾಗೂ ಗ್ಲಾಸ್ ಫ್ಲೇಕ್, ಸೂಪರ್ ವೈಟ್, ಪ್ಲಾಟಿನಂ ವೈಟ್ ಪರ್ಲ್, ಸಿಲ್ವರ್ ಮೆಟಾಲಿಕ್ ಒಳಗೊಂಡಂತೆ 7 ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.

7, 8 ಆಸನ ಆಯ್ಕೆಯಲ್ಲಿ ದೊರೆಯುವ ಇನ್ನೋವಾ ಹೈಕ್ರಾಸ್ ಎಂಪಿವಿ, 2.0 - ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 2.0 - ಲೀಟರ್, 4 ಸಿಲಿಂಡರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹಾಗೂ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಹೈಬ್ರಿಡ್ ರೂಪಾಂತರ 21 kmpl ಮೈಲೇಜ್ ಕೊಡುತ್ತದೆ.
ಟೊಯೊಟಾ ಇನ್ನೋವಾ ಹೈಕ್ರಾಸ್ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್ ಅನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್) ಅನ್ನು ಒಳಗೊಂಡಿದೆ.

ಟೊಯೊಟಾ ಇನ್ನೋವಾ ಕ್ರಿಸ್ಟಾ (Toyota Innova Crysta) ಎಂಪಿವಿ ರೂ.19.99 ಲಕ್ಷದಿಂದ ರೂ.26.05 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಜಿಎಕ್ಸ್, ವಿಕ್ಸ್, ಝಡ್ಎಕ್ಸ್ ರೂಪಾಂತರ ಹಾಗೂ ವೈಟ್ ಪರ್ಲ್ ಕ್ರಿಸ್ಟಲ್ ಶೈನ್, ಸೂಪರ್ ವೈಟ್, ಸಿಲ್ವರ್, ಆಟಿಟ್ಯೂಡ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
ಈ ಇನ್ನೋವಾ ಕ್ರಿಸ್ಟಾ, 2.4 - ಲೀಟರ್ ಡಿಸೇಲ್ ಎಂಜಿನ್ ಹೊಂದಿದ್ದು, 150 PS ಗರಿಷ್ಠ ಪವರ್ ಹಾಗೂ 343 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಸಿಗಲಿದ್ದು, 300 ಲೀ.ನಷ್ಟು ಬೂಟ್ ಸ್ಪೇಸ್ ಪಡೆದಿದೆ.
ಟೊಯೊಟಾ ಇನ್ನೋವಾ ಕ್ರಿಸ್ಟಾ, 8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 8 - ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಆಂಬಿಯೆಂಟ್ ಲೈಟಿಂಗ್ ಅನ್ನು ಹೊಂದಿದೆ. ಸುರಕ್ಷತೆಯ ಸಲುವಾಗಿ 7 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್) ಅನ್ನು ಹೊಂದಿದೆ.


Click it and Unblock the Notifications