ಟೊಯೊಟಾ ಇನೋವಾ ಹೈಕ್ರಾಸ್ GX ಲಿಮಿಟೆಡ್ ಎಡಿಷನ್ ಮಾದರಿಯ ವಿಶೇಷತೆಗಳು
ಟೊಯೋಟಾ ಇತ್ತೀಚೆಗೆ ಭಾರತದಲ್ಲಿ ಇನ್ನೋವಾ ಹೈಕ್ರಾಸ್ ಜಿಎಕ್ಸ್ ಲಿಮಿಟೆಡ್ ಎಡಿಷನ್ MPV ಅನ್ನು ಬಿಡುಗಡೆ ಮಾಡಿದೆ. ಈ ಹೊಸ Innova Hycross ಸೀಮಿತ ಆವೃತ್ತಿಯ ರೂಪಾಂತರವು ಕೆಲವು ಕಾಸ್ಮೆಟಿಕ್ ವರ್ಧನೆಗಳೊಂದಿಗೆ ಬರುತ್ತದೆ. ಈ ಮಾದರಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ 5 ವಿಷಯಗಳು ಇಲ್ಲಿವೆ.
ಡಿಸೈನ್: ಟೊಯೊಟಾ ಇನ್ನೋವಾ ಹೈಕ್ರಾಸ್ ಜಿಎಕ್ಸ್ ಲಿಮಿಟೆಡ್ ಆವೃತ್ತಿಯ ಹೊರಾಂಗಣದಲ್ಲಿ ಮಾದರಿಯು ಈಗ ಸೆಂಟರ್ ಮೂಲಕ ಚಲಿಸುವ ಗ್ರಿಲ್‌ನಲ್ಲಿ ಹೊಸ ಕ್ರೋಮ್ ಅಲಂಕರಣವನ್ನು ಹೊಂದಿದೆ. ಅಲ್ಲದೆ, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು ಈಗ ಫಾಕ್ಸ್ ಸಿಲ್ವರ್ ಸ್ಕಿಡ್ ಪ್ಲೇಟ್‌ಗಳನ್ನು ಹೊಂದುವ ಮೂಲಕ ಸಾಮಾನ್ಯ ಮಾದರಿಗಿಂತ ಆಕರ್ಷಕವಾಗಿ ಕಾಣುತ್ತವೆ.

ಜೊತೆಗೆ ಇನ್ನೋವಾ ಹೈಕ್ರಾಸ್‌ನ ಹೆಚ್ಚಿನ ಟ್ರಿಮ್ ಮಟ್ಟಗಳಿಗಿಂತ ಭಿನ್ನವಾಗಿ, GX ಟ್ರಿಮ್ ಬಂಪರ್ ಗಾರ್ನಿಶ್‌ಗಳು ಮತ್ತು ದೊಡ್ಡ ಅಲಾಯ್ ವೀಲ್‌ಗಳನ್ನು ಹೊಂದಿದೆ. ಟೊಯೊಟಾ ಇನ್ನೋವಾ ಹೈಕ್ರಾಸ್ ಜಿಎಕ್ಸ್ ಲಿಮಿಟೆಡ್ ಎಡಿಷನ್‌ನಲ್ಲಿರುವ ಪ್ಲಾಟಿನಂ ವೈಟ್ ಎಕ್ಸ್‌ಟೀರಿಯರ್ ಪೇಂಟ್‌ಗೆ ಹೆಚ್ಚುವರಿ 9,500 ರೂ. ಖರ್ಚು ಮಾಡಬೇಕಾಗುತ್ತದೆ.
ಇಂಟೀರಿಯರ್: ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ GX ಸೀಮಿತ ಆವೃತ್ತಿಯು ಈಗ ಡ್ಯಾಶ್‌ಬೋರ್ಡ್‌ನಲ್ಲಿ ಸಾಫ್ಟ-ಟಚ್ ಚೆಸ್ಟ್‌ನಟ್ ಬ್ರೌನ್ ಫಿನಿಶ್‌ನೊಂದಿಗೆ ಬರುತ್ತದೆ ( ಇದು ಇನೋವಾ ಹೈಕ್ರಾಸ್‌ನ VX ಟ್ರಿಮ್‌ನಲ್ಲಿ ಪ್ರಮಾಣಿತವಾಗಿದೆ). ಹೆಚ್ಚುವರಿಯಾಗಿ, ಮಾದರಿಯು ಪವರ್ ವಿಂಡೋ ನಿಯಂತ್ರಣಗಳ ಸುತ್ತಲೂ ಫಾಕ್ಸ್ ವುಡ್ ಟ್ರಿಮ್ ಅನ್ನು ಸಹ ಹೊಂದಿದೆ. ಫ್ಯಾಬ್ರಿಕ್ ಸೀಟ್ ಈಗ ಡ್ಯುಯಲ್-ಟೋನ್ ಫಿನಿಶ್ (ಬ್ಲಾಕ್ ಮತ್ತು ಗ್ರೇ) ಪಡೆಯುತ್ತದೆ.

ಇದಕ್ಕೆ ಹೋಲಿಸಿದೆ ಸಾಮಾನ್ಯ ಟೊಯೊಟಾ ಇನ್ನೋವಾ ಹೈಕ್ರಾಸ್ MPV ಯ ಸ್ಟ್ಯಾಂಡರ್ಡ್ GX ಟ್ರಿಮ್ ಡ್ಯಾಶ್‌ಬೋರ್ಡ್‌ನಲ್ಲಿ ಸಾಫ್ಟ್ - ಟಚ್ ಚೆಸ್ಟ್‌ನಟ್ ಬ್ರೌನ್ ಫಿನಿಶ್ ಅನ್ನು ಹೊಂದಿಲ್ಲ. ಡೋರ್ ಟ್ರಿಮ್ ಗಳನ್ನು ಫಾಕ್ಸ್ ವುಡ್ ಟ್ರಿಮ್ ಬದಲಿಗೆ ಬ್ಲಾಕ್ ಪ್ಲಾಸ್ಟಿಕ್‌ನಲ್ಲಿ ಪೂರ್ಣಗೊಳಿಸಲಾಗಿದೆ.
ಬೆಲೆ: ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ ಜಿಎಕ್ಸ್ ಲಿಮಿಟೆಡ್ ಆವೃತ್ತಿಯ ಬೆಲೆಗಳು ರೂ. 20.07 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್ ಶೋ ರೂಂ). ಇದರರ್ಥ ಸೀಮಿತ ಆವೃತ್ತಿಯ ಮಾದರಿಯು ಪ್ರಮಾಣಿತ GX ಟ್ರಿಮ್‌ಗಿಂತ 40,000 ರೂ. ಹೆಚ್ಚಾಗಿದೆ. ಆದ್ರೂ ಆಕರ್ಷಕ ವರ್ಧನೆಗಳು ಬೆಲೆಗೆ ತಕ್ಕ ಮೌಲ್ಯವನ್ನು ನೀಡುತ್ತವೆ ಎಂದು ಹೇಳಬಹುದು.

ವೇರಿಯೆಂಟ್‌ಗಳು: ಹೊಸದಾಗಿ ಬಿಡುಗಡೆಯಾದ ಟೊಯೊಟಾ ಇನ್ನೋವಾ ಹೈಕ್ರಾಸ್ ಜಿಎಕ್ಸ್ ಲಿಮಿಟೆಡ್ ಆವೃತ್ತಿಯು ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ರೂಪಾಂತರಗಳಲ್ಲಿ ಟೊಯೋಟಾ ಇನ್ನೋವಾ ಹೈಕ್ರಾಸ್ ಜಿಎಕ್ಸ್ ಲಿಮಿಟೆಡ್ ಎಡಿಷನ್ 7-ಸೀಟರ್ ಮತ್ತು ಟೊಯೋಟಾ ಇನ್ನೋವಾ ಹೈಕ್ರಾಸ್ ಜಿಎಕ್ಸ್ ಲಿಮಿಟೆಡ್ ಎಡಿಷನ್ 8-ಸೀಟರ್ ಸೇರಿವೆ.
ಎಂಜಿನ್ ಮತ್ತು ಗೇರ್ ಬಾಕ್ಸ್: ಪವರ್‌ಟ್ರೇನ್ ವಿಷಯಕ್ಕೆ ಬಂದರೆ, ಟೊಯೊಟಾ ಇನ್ನೋವಾ ಹೈಕ್ರಾಸ್ ಜಿಎಕ್ಸ್ ಲಿಮಿಟೆಡ್ ಎಡಿಷನ್ MPV 2.0-ಲೀಟರ್, ನ್ಯಾಚುರಲ್ಲಿ-ಆಸ್ಪಿರೇಟೆಡ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ ಅನ್ನು 172bhp ಮತ್ತು 205Nm ಟಾರ್ಕ್ ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ. ಇದಲ್ಲದೆ, ಪವರ್‌ಟ್ರೇನ್ ಅನ್ನು ಸಿವಿಟಿ ಘಟಕಕ್ಕೆ ಪ್ರತ್ಯೇಕವಾಗಿ ಜೋಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications