Toyota: ಕರ್ನಾಟಕದಲ್ಲಿ ತಯಾರಾಗುವ 'ಟೊಯೊಟಾ ಇನ್ನೋವಾ ಹೈಕ್ರಾಸ್'ಗೆ ನೀರಿಕ್ಷೆಗೂ ಮೀರಿದ ಡಿಮ್ಯಾಂಡ್

ದೇಶೀಯ ಮಾರುಕಟ್ಟೆಯಲ್ಲಿ ಪ್ರಮುಖ ಜಪಾನ್ ವಾಹನ ತಯಾರಕ ಕಂಪನಿ ಟೊಯೊಟಾ (Toyota)ದ ಇನ್ನೋವಾ ಸರಣಿ ಎಂಪಿವಿಗಳು ಭಾರೀ ಜನಪ್ರಿಯತೆಯನ್ನು ಗಳಿಸಿವೆ. ಅವುಗಳ ಆಕರ್ಷಕ, ವಿನ್ಯಾಸ ಹಾಗೂ ವೈಶಿಷ್ಟ್ಯ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತದೆ. ಅದರಲ್ಲೂ ಕರ್ನಾಟಕದ ಬಿಡದಿಯಲ್ಲಿ ತಯಾರಾಗುವ ಇನ್ನೋವಾ ಹೈಕ್ರಾಸ್ ಭಾರೀ ಬೇಡಿಕೆ ಹೊಂದಿದೆ.

2022ರ ಡಿಸೆಂಬರ್ ತಿಂಗಳಲ್ಲಿ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ಭಾರತದಲ್ಲಿ ಬಿಡುಗಡೆಗೊಂಡಿತು. ಅಂದಿನಿಂದಲೇ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿಯಾಗಿತ್ತು. ಕಂಪನಿ 2023ರ ಮಾರ್ಚ್ ನಲ್ಲಿ ಬರೋಬ್ಬರಿ 5,700 ಯುನಿಟ್‌ ಸೇಲ್ ಮಾಡಿ, ದಾಖಲೆ ನಿರ್ಮಿಸಿತ್ತು. ಈ ಮೂಲಕ ಮಹೀಂದ್ರಾ XUV700, ಟಾಟಾ ಹ್ಯಾರಿಯರ್, ಸಫಾರಿ ಹಾಗೂ ಎಂಜಿ ಹೆಕ್ಟರ್ ಕಾರುಗಳನ್ನೇ ಮಾರಾಟದಲ್ಲಿ ಹಿಂದಿಕ್ಕಿತ್ತು.

Toyota: ಕರ್ನಾಟಕದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ನೀರಿಕ್ಷೆಗೂ ಮೀರಿದ ಡಿಮ್ಯಾಂಡ್

ಟೊಯೊಟಾ ಇನ್ನೋವಾ ಹೈಕ್ರಾಸ್ ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದುಕೊಂಡಿರುವುದರಿಂದ ವಿತರಣೆಯಾಗಲು ಗರಿಷ್ಠ ಸಮಯ ಹಿಡಿಯುತ್ತಿದೆ. ಈ ಎಂಪಿವಿಯ ಸ್ಟ್ರಾಂಗ್ ಹೈಬ್ರಿಡ್ ಮಾದರಿಗಳನ್ನು ಇವತ್ತು ಆರ್ಡರ್ ಮಾಡಿದರೂ ವಿತರಣೆ ಪಡೆಯಲು 100 ವಾರ (1 ವರ್ಷ 9 ತಿಂಗಳು) ಕಾಯಬೇಕು. ಉಳಿದಂತೆ ಇತರೆ ಪೆಟ್ರೋಲ್ ರೂಪಾಂತರಗಳು 30 ವಾರಗಳ ಕಾಯುವಿಕೆ ಅವಧಿಯನ್ನು ಹೊಂದಿವೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ, TNGA-C ಪ್ಲಾಟ್‌ಫಾರ್ಮ್ ಆಧರಿಸಿದ್ದು, ಐದು ರೂಪಾಂತರಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ. ಅವುಗಳೆಂದರೆ G, GX, VX, ZX ಮತ್ತು ZXX (O). ಬೆಲೆ ವಿಚಾರಕ್ಕೆ ಬರುವುದಾದರೆ, ವೇರಿಯೆಂಟ್ ಗೆ ಅನುಗುಣವಾಗಿ ರೂ.18.55 ಲಕ್ಷದಿಂದ ರೂ.29.99 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ದೇಶೀಯ ಖರೀದಿದಾರರಿಗೆ ಎರಡು ವಿಧದ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 172 bhp ಪವರ್ ಮತ್ತು 205 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಜೊತೆಗೆ CVT ಗೇರ್ ಬಾಕ್ಸ್ ಅನ್ನು ಪಡೆದಿದೆ.

ಇನ್ನೊಂದು ಹೈಬ್ರಿಡ್ ಪವರ್‌ಟ್ರೇನ್, 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ Atkinson ಸೈಕಲ್ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಇದು, 184.8 bhp ಪವರ್ ಹಾಗೂ 206 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 21 kmpl ಮೈಲೇಜ್ ನೀಡುತ್ತದೆ. ಏಳರಿಂದ ಎಂಟು ಆಸನ ವ್ಯವಸ್ಥೆಯನ್ನು ಹೊಂದಿರುವ ಈ ಎಂಪಿವಿ, ಹೊರಭಾಗದಿಂದಲೂ ಆಕರ್ಷಕ ಲುಕ್ ಹೊಂದಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ವೈಶಿಷ್ಟ್ಯದ ಬಗ್ಗೆ ಮಾತನಾಡುವುದಾದರೆ, ಇದು 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್-ಪ್ರೆಶರ್ ಮಾನಿಟರಿಂಗ್ ಸಿಸ್ಟಮ್)ಯನ್ನು ಪಡೆದಿದೆ.

ಒಟ್ಟಾರೆ, ಕರ್ನಾಟಕದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ ಈ ಪರಿಪ್ರಮಾಣದಲ್ಲಿ ಬೇಡಿಕೆ ಹೊಂದಿರುತ್ತದೆ ಎಂದು ಕಂಪನಿ ಅಂದಾಜಿಸಿರಲಿಲ್ಲ ಅನ್ನಿಸುತ್ತದೆ. ಸದ್ಯ, ಇನ್ನೋವಾ ಹೈಕ್ರಾಸ್ ವಿತರಣೆಗೆ ಏನಿಲ್ಲ ಅಂದರೂ ಎರಡು ವರ್ಷ ಹಿಡಿಯಲಿದೆ. ಮಾಹಿತಿ ಪ್ರಕಾರ, ಕೆಲವೇ ದಿನಗಳಲ್ಲಿ ಇನ್ನೋವಾ ಹೈಕ್ರಾಸ್‌ ಆಧಾರಿತ ಮಾರುತಿ ಸುಜುಕಿ ಇನ್ವಿಕ್ಟೊ ಎಂಪಿವಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Article Published On: Friday, June 16, 2023, 15:43 [IST]
English summary
Toyota innova hycross mpv waiting period around two years details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+