ಭಾರತದಲ್ಲಿ ಮೊದಲ ಬಾರಿಗೆ ಟೊಯೊಟಾ ಇನ್ನೋವಾ ಹೈಕ್ರಾಸ್ ಬೆಲೆ ಏರಿಕೆ: ಇಲ್ಲಿದೆ ಮಾಹಿತಿ

ಬಹುನೀರಿಕ್ಷಿತ ಇನ್ನೋವಾ ಹೈಕ್ರಾಸ್ ಎಂಪಿವಿ ಬೆಲೆಯನ್ನು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಹೆಚ್ಚಿಸಿದೆ. ಕಳೆದ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಈ ಎಂಪಿವಿಯನ್ನು ಬಿಡುಗಡೆ ಮಾಡಲಾಯಿತು. ಇದೊಂದು ಪ್ರೀಮಿಯಂ ಗುಣಮಟ್ಟದ ಕಾರಾಗಿದ್ದು, ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿಸುತ್ತಾರೆ. ರೂ.18.30 ಲಕ್ಷದಿಂದ ರೂ.28.97 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿ ಲಭ್ಯವಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿಯ ಯಾವ ರೂಪಾಂತರಕ್ಕೆ ಎಷ್ಟು ದರ ಹೆಚ್ಚಳವಾಗಿದೆ ಎಂದು ನೋಡುವುದಾದರೆ, ಏಳು ಆಸನಗಳ G ಪೆಟ್ರೋಲ್ ಆವೃತ್ತಿ ಬೆಲೆ ರೂ.25,000 ಏರಿಕೆಯಾಗಿ ಎಕ್ಸ್ ಶೋರೂಂ ದರ ರೂ.18.55 ಲಕ್ಷಕ್ಕೆ ತಲುಪಿದೆ. ಅದೇ ರೀತಿಯಲ್ಲಿ ಎಂಟು ಆಸನಗಳ G, ಏಳು ಆಸನಗಳ GX ಹಾಗೂ ಎಂಟು ಆಸನ ಆಯ್ಕೆಯನ್ನು ಹೊಂದಿರುವ GX ದರಗಳು ಕ್ರಮವಾಗಿ ರೂ.18.60 ಲಕ್ಷ, ರೂ.19.40 ಲಕ್ಷ ಮತ್ತು ರೂ.19.45 ಲಕ್ಷವಾಗಿದೆ.

ಭಾರತದಲ್ಲಿ ಮೊದಲ ಬಾರಿಗೆ ಟೊಯೊಟಾ ಇನ್ನೋವಾ ಹೈಕ್ರಾಸ್ ಬೆಲೆ ಏರಿಕೆ: ಇಲ್ಲಿದೆ ಮಾಹಿತಿ

ಇದರಿಂದಾಗಿ ಪೆಟ್ರೋಲ್ ಆವೃತ್ತಿಗಳ ಬೆಲೆಯು ಶೇಕಡ 1.3% ಏರಿಕೆಯಾದಂತಾಗಿದೆ. ಅಲ್ಲದೆ, ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಆವೃತ್ತಿಗಳ ದರವನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಏಳು ಆಸನಗಳ VX ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ರೂಪಾಂತರದ ಬೆಲೆ ರೂ.75,000 ಏರಿಕೆಯಾಗುವ ಮೂಲಕ ಎಕ್ಸ್ ಶೋರೂಂ ಬೆಲೆ ರೂ.24.76 ಲಕ್ಷಕ್ಕೆ ತಲುಪಿದೆ. ಎಂಟು ಆಸನಗಳ VX ರೂಪಾಂತರದ ಬೆಲೆ ರೂ.5,000 ಜಾಸ್ತಿಯಾಗಿದೆ. ಇನ್ನು, ಟಾಪ್ ಎಂಡ್ ಮಾದರಿ ZX ಬೆಲೆಯು ರೂ.75,000 ಹೆಚ್ಚಳವಾಗಿ ರೂ.29.08 ಲಕ್ಷ ಆಗಿದೆ.

ಇನ್ನೋವಾ ಹೈಕ್ರಾಸ್ ಎಂಪಿವಿಗಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಟೊಯೊಟಾ ಮತ್ತೆರಡು ಹೈಬ್ರಿಡ್ ರೂಪಾಂತರಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಅವುಗಳೆಂದರೆ, ಏಳು ಆಸನಗಳ VX (O) ಹಾಗೂ ಎಂಟು ಆಸನಗಳ VX (O). ಕ್ರಮವಾಗಿ ರೂ.26.73 ಲಕ್ಷ ಹಾಗೂ ರೂ.26.78 ಲಕ್ಷ ದರವನ್ನು ಹೊಂದಿದ್ದು, ಕಳೆದ ತಿಂಗಳು, ಟೊಯೊಟಾ ಕಂಪನಿ ಅರ್ಬನ್ ಕ್ರೂಸರ್ ಹೈರೈಡರ್‌ ಸ್ಟ್ರಾಂಗ್ ಹೈಬ್ರಿಡ್ ರೂಪಾಂತರಗಳ ಬೆಲೆಗಳನ್ನು ರೂ.50,000 ವರೆಗೆ ಹೆಚ್ಚಿಸಿತ್ತು.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಇನ್ನೋವಾ ಹೈಕ್ರಾಸ್ ಎಂಪಿವಿ ಮೊನೊಕಾಕ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು ಫ್ರಂಟ್ ವೀಲ್ ಡ್ರೈವ್ ಆಯ್ಕೆಯನ್ನು ಪಡೆದಿದ್ದು, ಟೊಯೊಟಾ ಕಂಪನಿ ಇನ್ನೋವಾ ಹೈಕ್ರಾಸ್ ಎಂಪಿವಿ ಜೊತೆ ಇನ್ನೋವಾ ಕ್ರಿಸ್ಟಾ ಡೀಸೆಲ್ ಆವೃತ್ತಿಯನ್ನು ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿದೆ. ಕೆಲವೇ ದಿನಗಳಲ್ಲಿ ಬೆಲೆಯನ್ನು ಘೋಷಿಸಲಾಯಿದೆ. ಪ್ರಸ್ತುತ, ಹೈಬ್ರಿಡ್ ಪೆಟ್ರೋಲ್ ಹೈಕ್ರಾಸ್ ಅನ್ನು ಇವತ್ತು ಬುಕಿಂಗ್ ಮಾಡಿದರೂ ವಿತರಣೆ ಪಡೆಯಲು 15-18 ತಿಂಗಳು ಕಾಯಬೇಕು.

ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 2.0 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ (174 PS ಪವರ್, 205 Nm ಪೀಕ್ ಟಾರ್ಕ್) ಹಾಗೂ 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ (186 PS ಪವರ್, 206 Nm ಪೀಕ್ ಟಾರ್ಕ್) ಹೊಂದಿದೆ. 21 kmpl ಮೈಲೇಜ್ ನೀಡಲಿದ್ದು, e-CVT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಈ ಕಾರು, ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಇದು 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಆಕರ್ಷಕ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್-ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್) ಅನ್ನು ಹೊಂದಿದೆ.

ಒಟ್ಟಾರೆಯಾಗಿ ಟೊಯೊಟಾ ಕಂಪನಿ ಇನ್ನೋವಾ ಹೈಕ್ರಾಸ್ ಎಂಪಿವಿ ಬೆಲೆಯನ್ನು ದೇಶೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಇದು, ಗ್ರಾಹಕರಿಗೆ ಆಘಾತ ನೀಡಿದೆ. ಕಂಪನಿಯು ದರ ಏರಿಕೆಗೆ ಕಾರಣವೇನೆಂಬುದು ಈವರೆಗೆ ಬಹಿರಂಗಪಡಿಸಲ್ಲ. ಆದರೆ, ಉತ್ಪಾದನಾ ವೆಚ್ಚದ ಏರಿಕೆಯಿಂದ ಬೆಲೆ ಹೆಚ್ಚಳವಾಗಿರಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಮುಂಬರುವ ದಿನಗಳಲ್ಲಿ ಬೇರೆ ಕಂಪನಿಗಳು ದರ ಏರಿಸಬಹುದು.

Article Published On: Thursday, March 2, 2023, 13:14 [IST]
English summary
Toyota innova hycross prices hiked in india details kannada
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+