ಒಂದೇ ವೇಷ ನಾಮ ಹಲವು: ಟೋಯೊಟಾ ರುಮಿಯೋನ್ ಆಗಿ ಮಾರುಕಟ್ಟೆಗೆ ಬರಲಿದೆ ಮಾರುತಿಯ ಈ ಕಾರು
ಕೋವಿಡ್ ನಿಂದ ಈಚೆಗೆ ಭಾರತದಲ್ಲಿ ಎಂಪಿವಿ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಸಮಯದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಒಂದು ಸಂಪೂರ್ಣ ಕುಟುಂಬಕ್ಕೆ ಅವರ ಲಗೇಜುಗಳೊಂದಿಗೆ ಒಂದು ಪ್ರಯಾಣ ಮಾಡಲು ಹೊಂದುವಂತಹ ಕಾರುಗಳು ಹೆಚ್ಚು ಪ್ರವರ್ಧಮಾನಕ್ಕೆ ಬಂದಿದ್ದು. ಇದರಲ್ಲಿ ಟೊಯೊಟಾ, ಮಾರುತಿ, ಕಿಯಾ ಮುಂತಾದವುಗಳು ಪ್ರಮುಖವಾದವು.
ಇದೀಗ ಟೋಯೊಟಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಎಂಪಿವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೌದು, ಟೋಯೋಟಾ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಹೊರಡುತ್ತಿರುವ ಹೊಸ ಎಂಪಿವಿ ಕಾರಿನ ಹೆಸರು ರುಮಿಯೋನ್ ಎಂದು ತಿಳಿದು ಬಂದಿದೆ. ಆದರೆ ಇದರಲ್ಲಿ ಒಂದು ಟ್ವಿಸ್ಟ್ ಇದೆ. ಅದನ್ನು ತಿಳಿಯಲು ಸಂಪೂರ್ಣವಾಗಿ ಓದಿ.

ಈಗಾಗಲೇ ಟೋಯೊಟಾ ಕಂಪನಿಯು ಸೌತ್ ಆಫ್ರಿಕಾ ರೀತಿಯ ದೇಶದಲ್ಲಿ ಈ ರುಮಿಯೋನ್ (Toyota Rumion) ಕಾರನ್ನು ಮಾರುತ್ತಿದ್ದು, ಇದರ ಭಾರತೀಯ ಆವೃತ್ತಿಯನ್ನು ಮಾರುತಿಯು ವಿತರಿಸದ ನಂತರ ಬಿಡುಗಡೆ ಮಾಡಲಿದೆ ಎಂದು ತಿಳಿದು ಬಂದಿದೆ. ಅಂದರೆ ಈ ಟೋಯೊಟಾ ರುಮಿಯೋನ್ ಕಾರು ಭಾರತೀಯ ಮಾರುತಿ ಸುಜುಕಿ ಕಾರೊಂದನ್ನು ಆಧರಿಸಿ ಬರುತ್ತಿದೆ.
ಮಾರುತಿ ಸುಜುಕಿಯ ಯಶಸ್ವೀ ಎಂಪಿವಿ ಆಗಿರುವ ಮಾರುತಿ ಸುಜುಕಿ ಎರ್ಟಿಗಾ ಕಾರನ್ನು ಆಧರಿಸಿ ಟೊಯೊಟಾ ರುಮಿಯೋನ್ ಕಾರನ್ನು ನಿರ್ಮಿಸಲಿದೆ. ಮೂಲತಃ ಇದು ಈಗಾಗಲೇ ಜನಪ್ರಿಯ ಆಗಿರುವ ಮಾರುತಿ ಸುಜುಕಿ ಎರ್ಟಿಗಾ ದ ಟೋಯೊಟಾ ರೀಬ್ಯಾಡ್ಜಿಂಗ್ ವಾಹನವಾಗಿರಲಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

ಈಗಾಗಲೇ ಮಾರುತಿ ಸುಜುಕಿ ಮತ್ತು ಟೊಯೊಟಾ ಕಂಪನಿಯು ಈ ರೀತಿ ಸಹಯೋಗದಲ್ಲಿ ಹಲವಾರು ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆಗೊಳಿಸಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಟೋಯೊಟಾವು ಈ ಕಾರನ್ನು ಎರ್ಟಿಗಾ ಕಾರಿಗಿಂತ ಕೊಂಚ ಬೇರೆ ರೀತಿಯಲ್ಲಿ ಕಾಣಲು ಡಿಸೈನ್‌ನಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಲಿದೆ.
ಇನ್ನು ಈ ರುಮಿಯೋನ್ ಎಂಪಿವಿ ಕೇವಲ ಡಿಸೈನ್ ನಲ್ಲಿ ಮಾತ್ರವಲ್ಲದೇ ಇಂಜಿನ್ ಮತ್ತು ಪರ್ಫಾಮೆನ್ಸ್ ನಲ್ಲಿಯೂ ಸಹ ಎರ್ಟಿಗಾವನ್ನೇ ಹಿಂಬಾಲಿಸಲಿದೆ. ಇದರ ಪವರ್ ಬಗ್ಗೆ ಹೇಳುವುದಾದರೆ ಎರ್ಟಿಗಾ ರೀತಿ ಇದೂ ಸಹ 103 bhp ಮತ್ತು 137 ಎನ್‌ಎಮ್ ಟಾರ್ಕನ್ನು 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹಯಾದಿಂದ ಉತ್ಪಾದಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಟೋಯೋಟಾ ಮತ್ತು ಮಾರುತಿ ಸುಜುಕಿ ಪಾರ್ಟ್ನರ್‌ಶಿಪ್‌ನಲ್ಲಿ ಟೊಯೊಟಾವು ಈ ಹಿಂದೆ ಗ್ಲಾಂನ್ಸಾ, ಅರ್ಬನ್‌ಕ್ರುಸರ್ ಮತ್ತು ಹೈರೈಡರ್ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಲೇನೋ, ಬ್ರೇಸಾ ಮತ್ತು ಗ್ರ್ಯಾಂಡ್ ವಿಟಾರಾ ಕಾರುಗಳ ರೀ ಬ್ಯಾಡ್ಜಿಂಗ್ ಮಾಡಿ ಗ್ರಾಹಕರ ಮುಂದಿಟ್ಟಿದ್ದರು ಮತ್ತು ಗ್ರಾಹಕರು ಅದನ್ನು ಎರಡೂ ಕೈಯಿಂದ ಸ್ವೀಕರಿಸಿದ್ದರೂ ಸಹ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications