ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) 2023ರ ಜನವರಿ ತಿಂಗಳ ಮಾರಾಟದ ಅಂಕಿಅಂಶಗಳ ವರದಿಯನ್ನು ಬಹಿರಂಗಪಡಿಸಿದೆ. ಜಪಾನಿನ ಕಾರು ತಯಾರಕರಾದ ಟೊಯೊಟಾ 2023ರ ಜನವರಿ ತಿಂಗಳಿನಲ್ಲಿ 12,835 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಕಳೆದ ತಿಂಗಳ ಮಾರಾಟದಲ್ಲಿ ಹೊಸ ಮಾದರಿಗಳು ಹೆಚ್ಚಿನ ಕೊಡುಗೆಯನ್ನು ನೀಡಿದೆ.

ಕಳೆದ ವರ್ಷದ ಜನವರಿ ತಿಂಗಳಿನಲ್ಲಿ ಟೊಯೊಟಾ ಕಂಪನಿಯು 7,328 ಯುನಿಟ್‌ಗಳನ್ನು ಮಾರಾಟ ಮಾಡಿದ್ದರು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ.175 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇನ್ನು ಟೊಯೊಟಾ ಕಂಪನಿಯು 2022ರ ಡಿಸೆಂಬರ್ ತಿಂಗಳಿನಲ್ಲಿ 10,421 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.23.16 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಈ ಮೂಲಕ ಟೊಯೊಟಾ ಕಂಪನಿಯು ಹೊಸ ವರ್ಷದಮ್ದು ಶುಭಾರಂಭ ಮಾಡಿದೆ.

ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ

ಮಾರಾಟದ ವರದಿಯ ಕುರಿತು, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ಸೇಲ್ಸ್ ಮತ್ತು ಕಾರ್ಯತಂತ್ರದ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷರಾದ ಅತುಲ್ ಸೂದ್ ಅವರು ಮಾತನಾಡಿ, ಕ್ಯಾಲೆಂಡರ್ ವರ್ಷ 2022 ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ಗೆ ಸಕಾರಾತ್ಮಕದೊಂದಿಗೆ ಕೊನೆಗೊಂಡಿತು. ಇನ್ನು ಕಂಪನಿಯು ಕಳೆದ ದಶಕದಲ್ಲಿ ಅತ್ಯಧಿಕ ಕಾರು ಮಾರಾಟ ಸಾಧಿಸುದರೊಂದಿಗೆ ಹೆಚ್ಚು ಉತ್ಸಾಹ ಮತ್ತು ಆಶಾವಾದದೊಂದಿಗೆ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಶೇ.175 ರಷ್ಟು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಬೆಳವಣಿಗೆಯೊಂದಿಗೆ, ಈ ವರ್ಷ ಮತ್ತಷ್ಟು ವೇಗ ಪಡೆಯುವ ನಿರೀಕ್ಷೆಯನ್ನು ಹೊಂದಿದೆ ಎಂದು ಹೇಳೀದರು.

ಕಳೆದ ತಿಂಗಳ ಮಾರಾಟದಲ್ಲಿ ಟೊಯೊಟಾ ಇನೋವಾ ಹೈಕ್ರಾಸ್ ಮತ್ತು ಅರ್ಬನ್ ಕ್ರೂಸರ್ ಹೈರೈಡರ್ ಹೆಚ್ಚಿನ ಕೊಡುಗೆಯನ್ನು ನೀಡಿದೆ. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ 2023ರ ಇನೋವಾ ಕ್ರಿಸ್ಟಾ ಎಂಪಿವಿಯನ್ನು ಮರುಪರಿಚಯಿಸಲು ಸಿದ್ಧವಾಗಿದೆ. ಈ ಹೊಸ ಟೊಯೊಟಾ ಇನೋವಾ ಕ್ರಿಸ್ಟಾ (Toyota Innova Crysta) ಎಂಪಿವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಕೂಡ ಪ್ರಾರಂಭಿಸಲಾಗಿದೆ. ಈ ಹೊಸ ಎಂಪಿವಿಯನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಇತ್ತೀಚೆಗೆ ಬಿಡುಗಡೆಗೊಂಡ ಇನೋವಾ ಹೈಕ್ರಾಸ್ ಜೊತೆಗೆ ಇನ್ನೋವಾ ಕ್ರಿಸ್ಟಾ ಕಾರನ್ನು ಮಾರಾಟ ಮಾಡುವುದನ್ನು ಮುಂದುವರಿಸುತ್ತಾರೆ. ನವೀಕರಿಸಿದ ಇನೋವಾ ಕ್ರಿಸ್ಟಾ ಬೆಲೆಯನ್ನು ಇದೇ ತಿಂಗಳಿನಲ್ಲಿ ಬಹಿರಂಗಪಡಿಸುವ ಸಾಧ್ಯತೆಗಳಿದೆ. ಇನ್ನು ಈ ಹೊಸ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ವಿತರಣೆಯು ಏಪ್ರಿಲ್ ತಿಂಗಳ ಅಂತ್ಯದಲ್ಲಿ ನಡೆಯಲಿದೆ. 2005ರಲ್ಲಿ ಹೆಚ್ಚು ಜನಪ್ರಿಯವಾದ ಕ್ವಾಲಿಸ್ ಅನ್ನು ಬದಲಾಯಿಸಿ ಪ್ರೀಮಿಯಂ ಎಂಪಿವಿಯಾಗಿ ಟೊಯೊಟಾ ಇನೋವಾವನ್ನು ಪರಿಚಯಿಸಿದರು. ಇದು ಈಗ ಸ್ವಲ್ಪ ಚಿಕ್ಕದಾದ ಮತ್ತು ಹೆಚ್ಚು ಪ್ರಮುಖವಾದ ಮುಂಭಾಗದ ಗ್ರಿಲ್‌ನೊಂದಿಗೆ ಬರುತ್ತದೆ,

ಇದೇ ರೀತಿ ಮುಂಭಾಗದಲ್ಲಿ ಕೆಲವು ನವೀಕರಣಗಳನ್ನು ಮಾಡಲಾಗಿದೆ. ಇನ್ನು ಫಾಂಗ್ ಲ್ಯಾಂಪ್ ಇರುವ ಕಡೆಗಳಲ್ಲಿ ಸಹ ಮರುವಿನ್ಯಾಸಗೊಳಿಸಲಾಗಿದೆ. ಸೈಡ್ ಪ್ರೊಫೈಲ್ ಮತ್ತು ಅಲಾಯ್ ವೀಲ್ ವಿನ್ಯಾಸ ಒಂದೇ ಆಗಿರುತ್ತದೆ. ಕಳೆದ ವರ್ಷ ಸ್ಥಗಿತಗೊಂಡ ಟೊಯೊಟಾ ಇನೋವಾ ಕ್ರಿಸ್ಟಾ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟವಾಗುತ್ತಿತ್ತು. ಆದರೆ 2023ರ ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಡೀಸೆಲ್ ಎಂಜಿನ್ ನೊಂದಿಗೆ ಮಾತ್ರ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಇನ್ನು ಕಳೆದ ತಿಂಗಳು ಮಾರಾಟದಲ್ಲಿ ಹೆಚ್ಚಿನ ಕೊಡುಗೆ ನೀಡಿದ ಹೊಸ ಇನೋವಾ ಹೈಕ್ರಾಸ್ ಕಾರಿನ ವಿತರಣೆಯನ್ನು ಪ್ರಾರಂಭಿಸಿದೆ. ಈ ಟೊಯೊಟಾ ಇನೋವಾ ಹೈಕ್ರಾಸ್‌ನ ಹೈಬ್ರಿಡ್ ರೂಪಾಂತರಕ್ಕೆ ಭಾರೀ ಬೇಡಿಕೆ ಹೊಂದಿರುವುದರಿಂದಸುಮಾರು 1 ವರ್ಷ ಕಾಯುವ ಅವಧಿಯನ್ನು ಹೊಂದಿದೆ. ಟೊಯೊಟಾ ಇನೋವಾ ಹೈಕ್ರಾಸ್ ಕಾರಿಗೆ ದಾಖಲೆ ಮಟ್ಟದ ಬುಕ್ಕಿಂಗ್ ಅನ್ನು ಪಡೆದುಕೊಂಡಿದೆ. ಈ ಹೊಸ ಟೊಯೊಟಾ ಇನೋವಾ ಹೈಕ್ರಾಸ್ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ರೂ 50,000 ಟೋಕನ್ ಮೊತ್ತ ನೀಡಿ ಬುಕ್ ಮಾಡಿಕೊಳ್ಳಬಹುದು.

ಇನ್ನು ಟೊಯೊಟಾ ಹೈರೈಡರ್ ಎಸ್‍ಯುವಿಯ ಮೈಲ್ಡ್ ಹೈಬ್ರಿಡ್ ರೂಪಾಂತರಕ್ಕೆ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಈ ಮಾದರಿಗೆ ಗರಿಷ್ಠ 15 ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಇನ್ನು ಮತ್ತೊಂದೆಡೆ ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಯು 6 ರಿಂದ 7 ತಿಂಗಳ ನಡುವೆ ಕಾಯುವ ಅವಧಿಯನ್ನು ಹೊಂದಿದೆ. ಈ ಟೊಯೊಟಾ ಹೈರೈಡರ್ ಎಸ್‍ಯುವಿಯು E, S, G ಮತ್ತು V ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಇನ್ನು ಜಿ ಮ್ಯಾನುವಲ್ ರೂಪಾಂತರಕ್ಕೆ ಬರೊಬ್ಬರಿ 15 ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ.

Most Read Articles

Kannada
Read more on ಟೊಯೊಟಾ toyota
English summary
Toyota kirloskar motor sells 12835 units in january 2023 details in kannada
Story first published: Wednesday, February 1, 2023, 20:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X