ಕೆಲವು ದೇಶಗಳಲ್ಲಿ ಈ ಟೊಯೊಟಾ ಎಸ್‍ಯುವಿಗೆ ವರ್ಷಗಟ್ಟಲೆ ಕಾಯಬೇಕು: ಭಾರತದಲ್ಲಿ ವಿತರಣೆ ಪ್ರಾರಂಭ

ಜಪಾನ್ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ (Toyota) ಗ್ರೇಟರ್ ನೋಯ್ಡಾದಲ್ಲಿ ನಡೆದ 2023ರ ಆಟೋ ಎಕ್ಸ್‌ಪೋದಲ್ಲಿ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯನ್ನು ಪ್ರದರ್ಶಿಸಲಾಯಿತು. ಭಾರತದಲ್ಲಿ ಈ ಹೊಸ ಲ್ಯಾಂಡ್ ಕ್ರೂಸರ್ 300 (Toyota Land Cruiser 300) ಗಾಗಿ ಅಧಿಕೃತ ಬುಕಿಂಗ್‌ಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ.

ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.17 ಕೋಟಿಯಾಗಿದೆ. ಈ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯನ್ನು ಭಾರತದ ಮೊದಲ ಗ್ರಾಹಕನಿಗೆ ವಿತರಿಸಲಾಗಿದೆ. ಕೊಲ್ಲಾಪುರದ ಪ್ರತೀಕ್ ಜಾಧವ್ ಅವರು ಈ ಹೊಸ ಐಷಾರಾಮಿ ಟೊಯೊಟಾ ಎಸ್‍ಯುವಿಯ ಭಾರತದ ಮೊದಲ ಗ್ರಾಹಕ. ಲ್ಯಾಂಡ್ ಕ್ರೂಸರ್ 300 ಭಾರತದಲ್ಲಿ ಮಾರಾಟವಾಗಲಿರುವ ಅತ್ಯಂತ ದುಬಾರಿ ಟೊಯೊಟಾ ಉತ್ಪನ್ನವಾಗಿದೆ. ಟೊಯೊಟಾ ಲ್ಯಾಂಡ್ ಕ್ರೂಸರ್ 300 ಜಪಾನಿನ ಮಾರ್ಕ್ಯೂನಿಂದ ಪ್ರಮುಖ ಎಸ್‍ಯುವಿಯಾಗಿದೆ.

ಕೆಲವು ದೇಶಗಳಲ್ಲಿ ಈ ಟೊಯೊಟಾ ಎಸ್‍ಯುವಿಗೆ ವರ್ಷಗಟ್ಟಲೆ ಕಾಯಬೇಕು

ಇನ್ನು ಟೊಯೊಟಾ(Toyota) ತನ್ನ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್(Land Cruiser) ಎಸ್‍ಯುವಿಯನ್ನು ಕಳೆದ ವರ್ಷ ಜಾಗತಿಕ ಮಟ್ಟದಲ್ಲಿ ಪರಿಚಯಿಸಿತು. ಈ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಹೊಸ ಸಂಚಲವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಈ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಗೆ ಬಿಡುಗಡೆ ಮಾಡಿದ ಪ್ರತಿಯೊಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಹೆಚ್ಚಿದೆ. ಈ ಬಹುಬೇಡಿಕೆಯ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಗೆ ವೈಟಿಂಗ್ ಪಿರೇಡ್ ಕೆಲವು ದೇಶಗಳಲ್ಲಿ 4 ವರ್ಷಗಳವರೆಗೆ ಇದೆ.

ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‌ಸಿ300 ಎಸ್‍ಯುವಿಯು ಮಾಡ್ಯುಲರ್ TNGA-F ಆರ್ಕಿಟೆಕ್ಚರ್‌ನಿಂದ ಆಧಾರವಾಗಿದೆ ಮತ್ತು ಅದರ ಒಟ್ಟಾರೆ ಕರ್ಬ್ ತೂಕವು ಸುಮಾರು 200 ಕಿಲೋಗ್ರಾಂಗಳಷ್ಟು ಕಡಿಮೆಯಾಗಿದೆ. ಹಳೆಯ ಮಾದರಿಗೆ ಹೋಲಿಸಿದರೆ, ಲ್ಯಾಂಡ್ ಕ್ರೂಸರ್ 300 ವಿನ್ಯಾಸಕ್ಕೆ ವಿಕಸನೀಯ ಪರಿಷ್ಕರಣೆಯೊಂದಿಗೆ ಬಂದಿದೆ. ಈ ಹೊಸ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ನೇರವಾದ ಬಾಡಿ ಪ್ಯಾನೆಲ್‌ಗಳು ಮತ್ತು ಎತ್ತರದ ಕಂಬಗಳನ್ನು ಸ್ಕ್ವೇರ್-ಆಫ್ ವೀಲ್ ಆರ್ಚ್‌ಗಳು ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ 20-ಇಂಚಿನ ಅಲಾಯ್ ವ್ಹೀಲ್ ಗಳನ್ನು ಉಳಿಸಿಕೊಂಡಿದೆ.

ಈ ಎಸ್‍ಯುವಿಯ ಕ್ಯಾಬಿನ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆ ಮತ್ತು ಸಂಪರ್ಕಿತ ವೈಶಿಷ್ಟ್ಯಗಳೊಂದಿಗೆ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುತ್ತದೆ. ಹೆಚ್ಚು ಜನಪ್ರಿಯವಾಗಿರುವ ಆಫ್-ರೋಡರ್‌ನ ಸಲಕರಣೆಗಳ ಪಟ್ಟಿಯು ಎಲ್ಲಾ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಹಲವಾರು ಸೌಕರ್ಯ, ಅನುಕೂಲತೆ, ಮನರಂಜನೆ, ಸಹಾಯಕ ಮತ್ತು ಸುರಕ್ಷತೆ ಆಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ. ಇನ್ನು ಬಹಿರಂಗವಾದ ಮಾಹಿತಿಗಳ ಪ್ರಕಾರ, ಮೂರು ಇಂಟಿರಿಯರ್ ಬಣ್ಣದ ಥೀಮ್‌ಗಳನ್ನು ಒಳಗೊಂಡಿದೆ.

ಇನ್ನು ಐದು ಬಾಹ್ಯ ಬಣ್ಣಗಳ ಆಯ್ಕೆಯು ಸಹ ಲಭ್ಯವಿರುತ್ತವೆ. ಅವುಗಳೆಂದರೆ ಪ್ರೆಶಿಯಸ್ ವೈಟ್ ಪರ್ಲ್, ಸೂಪರ್ ವೈಟ್, ಡಾರ್ಕ್ ರೆಡ್ ಮೈಕಾ ಮೆಟಾಲಿಕ್, ಆಟಿಟ್ಯೂಡ್ ಬ್ಲ್ಯಾಕ್ ಮತ್ತು ಡಾರ್ಕ್ ಬ್ಲೂ ಮೈಕಾ ಎಂಬ ಬಣ್ಣಗಳಾಗಿವೆ. ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದು 3.5 ಎಲ್ ವಿ6 ಟ್ವಿನ್-ಟರ್ಬೊ ಪೆಟ್ರೋಲ್ ಮತ್ತು 3.3 ಎಲ್ ವಿ6 ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಾಗಿವೆ.

ಇದರಲ್ಲಿ 3.3 ಎಲ್ ವಿ6 ಟರ್ಬೊ-ಡೀಸೆಲ್ ಎಂಜಿನ್‌ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ 304 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 10-ಸ್ಪೀಡ್ ಟ್ರಾನ್ಸ್‌ಮಿಷನ್ ಜೊತೆಗೆ ಜೋಡಿಸಲಾಗಿದೆ. ಇನ್ನು 3.5-ಲೀಟರ್ ವಿ6 ಟ್ವಿನ್-ಟರ್ಬೊ ಎಂಜಿನ್ ಅನ್ನು 409 ಬಿಹೆಚ್‍ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಉತ್ಪಾದಿಸತ್ತದೆ. ಲ್ಯಾಂಡ್ ಕ್ರೂಸರ್ ಹೊಸ ಟಿಎನ್‌ಜಿಎ (ಟೊಯೊಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್) ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಬ್ರ್ಯಾಂಡ್‌ನ ಮೊದಲ ಬಾಡಿ-ಆನ್-ಫ್ರೇಮ್ ವಾಹನ ಇದಾಗಿದೆ.

ಈ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಗೆ ಬಿಡುಗಡೆ ಮಾಡಿದ ಪ್ರತಿಯೊಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಹೆಚ್ಚಿದೆ. ಈ ಬಹುಬೇಡಿಕೆಯ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಗೆ ವೈಟಿಂಗ್ ಪಿರೇಡ್ ಕೆಲವು ದೇಶಗಳಲ್ಲಿ 4 ವರ್ಷಗಳವರೆಗೆ ಇದೆ. ಈ ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‌ಸಿ300 ಎಸ್‍ಯುವಿಯು ಮಾಡ್ಯುಲರ್ TNGA-F ಆರ್ಕಿಟೆಕ್ಚರ್‌ನಿಂದ ಆಧಾರವಾಗಿದೆ ಮತ್ತು ಅದರ ಒಟ್ಟಾರೆ ಕರ್ಬ್ ತೂಕವು ಸುಮಾರು 200 ಕಿಲೋಗ್ರಾಂಗಳಷ್ಟು ಕಡಿಮೆಯಾಗಿದೆ.

Image Courtesy: Pratik Jadhav

Article Published On: Saturday, January 21, 2023, 10:32 [IST]
English summary
Toyota land cruiser delivered to first indian customer details in kannada
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+