ನೀವು ಊಹಿಸಿದ್ದಕ್ಕಿಂತ ಅತಿಹೆಚ್ಚು ಮೈಲೇಜ್‌ನೊಂದಿಗೆ ಪವರ್ ಫುಲ್ 'ಟೊಯೊಟಾ ಪ್ರಿಯಸ್ PHEV' ಬಿಡುಗಡೆ
ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಟೊಯೊಟಾ ಮೋಟಾರ್ ಕಾರ್ಪೊರೇಷನ್, ಗರಿಷ್ಠ ಮೈಲೇಜ್ ನೀಡುವ ಪ್ರಿಯಸ್ PHEV ಕಾರನ್ನು ಜಪಾನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. JPY 4,600,000 (27.88 ಲಕ್ಷ ಭಾರತೀಯ ರೂಪಾಯಿ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕಮರ್ಷಿಯಲ್ ಸೇಲ್ ಮಾರ್ಚ್ 15ರಿಂದ ಆರಂಭವಾಗಲಿದೆ.
PHEV ಅಂದರೆ, ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ಎಂಬರ್ಥವನ್ನು ನೀಡುತ್ತದೆ. ಇಂತಹ ವಾಹನಗಳಲ್ಲಿ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ, ಉತ್ತಮ ಪವರ್ ಉತ್ಪಾದಿಸುವ ಮೋಟಾರ್ ಹಾಗೂ ಅಧಿಕ ಇಂಧನ ದಕ್ಷತೆಯನ್ನು ಹೊಂದಿರುವ ಪೆಟ್ರೋಲ್ ಎಂಜಿನ್ ಒಟ್ಟಿಗೆ ಇರುತ್ತದೆ. ಹೊಸ ಟೊಯೊಟಾ ಪ್ರಿಯಸ್ ಸೆಡಾನ್, ಗರಿಷ್ಠ 223 PS ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಹೆಚ್ಚು ಪವರ್ ಫುಲ್ ಆಗಿದೆ ಎಂದು ಹೇಳಬಹುದು.

ಗ್ರಾಹಕರಿಗೆ 'Z' ರೂಪಾಂತರದಲ್ಲಿ ಮಾತ್ರ, ಈ ಸೆಡಾನ್ ಖರೀದಿ ಲಭ್ಯವಿದೆ. 19 ಇಂಚಿನ ಟೈರ್ ಪಡೆದಿರುವ ಕಾರು 26 kmpl ಹಾಗೂ 17-ಇಂಚಿನ ಟೈರ್ ಹೊಂದಿರುವ ಕಾರು 30.1 kmpl ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ. ಅಲ್ಲದೆ, ಎಲೆಕ್ಟ್ರಿಕ್ ಮೋಡ್ ನಲ್ಲಿ ಚಲಿಸುವಾಗ 19-ಇಂಚಿನ ಟೈರ್ ಹೊಂದಿರುವ ಕಾರು, 87 ಕಿಮೀ, 17 ಇಂಚಿನ ಟೈರ್ ಪಡೆದಿರುವ ಕಾರು, 105 ಕಿಮೀ ರೇಂಜ್ ನೀಡುತ್ತದೆ. ಹಳೆಯ ಮಾದರಿಗೆ ಹೋಲಿಸಿದರೆ, 75% ಮಿತವ್ಯಯಕಾರಿಯಾಗಿದೆ.
ಟೊಯೊಟಾ ಪ್ರಿಯಸ್ PHEV ಸೆಡಾನ್ 5ನೇ ಜನರೇಷನ್ ನ 2.0-ಲೀಟರ್ ಪ್ಲಗ್-ಇನ್ ಹೈಬ್ರಿಡ್ ಸಿಸ್ಟಮ್ ಹೊಂದಿದ್ದು, ಕೇವಲ 6.7 ಸೆಕೆಂಡುಗಳಲ್ಲಿ 0 - 100 ಕಿಮೀ ವೇಗವನ್ನು ಪಡೆಯುವ ಸಾಮರ್ಥ್ಯ ಪಡೆದಿದೆ. ಜೊತೆಗೆ ಕಾರ್ಯಕ್ಷಮತೆಯು ಅತ್ಯುತ್ತಮವಾಗಿದ್ದು, ಆಫ್-ರೋಡ್ ಚಲನೆಗೂ ಸೂಕ್ತವಾಗುವಂತೆ ಈ ಕಾರಿನ ಬ್ರೇಕಿಂಗ್ ವ್ಯವಸ್ಥೆ ಇದ್ದು, ಪ್ರತಿಯೊಬ್ಬ ಗ್ರಾಹಕರು ಇಷ್ಟಪಡುವ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು.

ಸದ್ಯ, ಅತಿಹೆಚ್ಚು ಮೈಲೇಜ್‌ನೊಂದಿಗೆ ಪವರ್ ಫುಲ್ 'ಟೊಯೊಟಾ ಪ್ರಿಯಸ್ PHEV' ಜಪಾನ್ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಈ ಕಾರು, ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತದೆಯೇ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಂದೊಮ್ಮೆ ದೇಶಕ್ಕೆ ಬಂದರೆ, ಇದು ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವುದರಿಂದ ಗ್ರಾಹಕರು ಲೈಕ್ ಮಾಡಬಹುದು. ಇನ್ನು, ಭಾರತದಲ್ಲಿ ಟೊಯೊಟಾದ ಬಹುನೀರಿಕ್ಷಿತ ಇನ್ನೋವಾ ಸರಣಿಯ ಕಾರುಗಳನ್ನು ಹೆಚ್ಚಿನ ಮಂದಿ ಖರೀದಿಸುತ್ತಾರೆ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆ ಪಡೆದುಕೊಂಡಿರುವ ಇನ್ನೋವಾ ಹೈಕ್ರಾಸ್ ಬಗ್ಗೆ ಹೇಳುವುದಾದರೆ, ಇದು 2.0 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 174 PS ಗರಿಷ್ಠ ಪವರ್, 205 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ 186 PS ಪವರ್ ಹಾಗೂ 206 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, 21 kmpl ಮೈಲೇಜ್ ನೀಡಲಿದೆ.

ಕಳೆದ ಕೆಲವು ದಿನಗಳ ಹಿಂದೆ ಬೆಲೆ ಏರಿಕೆಯನ್ನು ಪಡೆದುಕೊಂಡಿದ್ದ ಈ ಎಂಪಿವಿ, 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಆಕರ್ಷಕ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್) ಒಳಗೊಂಡಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ.
ಇನ್ನು, ಹೆಚ್ಚು ಕಾರ್ಯಕ್ಷಮತೆ ಹೊಂದಿರುವ ಹೈಬ್ರಿಡ್ ಎಂಜಿನ್ ಆಧಾರಿತ ಕಾರುಗಳನ್ನು ವಿವಿಧ ಕಂಪನಿಗಳು ತಯಾರಿಸುತ್ತವೆ. ಅದರಲ್ಲಿ ಟೊಯೊಟಾ ಮುಂದಿದ್ದು, ಅಧಿಕ ಮೈಲೇಜ್‌ನೊಂದಿಗೆ ಪವರ್ ಫುಲ್ ಟೊಯೊಟಾ ಪ್ರಿಯಸ್ ಸೆಡಾನ್ ಬಿಡುಗಡೆ ಮಾಡಿದೆ. ಬೆಲೆಯು ಕೊಂಚ ಹೆಚ್ಚಿದರೂ ಅದಕ್ಕೆ ತಕ್ಕಂತೆಯೇ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಮುಂಬರುವ ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿ ಎಂಬುದು ಗ್ರಾಹಕರ ಬಯಕೆಯಾಗಿದೆ.


Click it and Unblock the Notifications